777 ಟ್ಯಾಟು ಹಾಕಿಸಿಕೊಂಡ ಪವಿತ್ರಾ ಗೌಡ, ಹುಟ್ಟಿದ ಡೇಟು, ಬೆಳೆದಿದ್‌ ಹೈಟು, ಇದೇ ದರ್ಶನ್‌ ಲಿಂಕು!

Published : Mar 14, 2024, 04:27 PM ISTUpdated : Jun 11, 2024, 04:02 PM IST
777 ಟ್ಯಾಟು ಹಾಕಿಸಿಕೊಂಡ ಪವಿತ್ರಾ ಗೌಡ, ಹುಟ್ಟಿದ ಡೇಟು, ಬೆಳೆದಿದ್‌ ಹೈಟು, ಇದೇ ದರ್ಶನ್‌ ಲಿಂಕು!

ಸಾರಾಂಶ

Darshan and Pavithra Gowda Arrest ನಟಿ ಪವಿತ್ರಾಗೌಡ ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಹಾಗಂತ ಇದು ಯಾವುದೇ ಚಿತ್ರವಲ್ಲ, ತಮ್ಮ ಬಲಗೈ ಮೇಲೆ ಅವರು 777 ಎನ್ನುವ ನಂಬರ್‌ ಅನ್ನು ಟ್ಯಾಟು ಹಾಕಿಸಿದ್ದಾರೆ. ಇದರ ಬೆನ್ನಲ್ಲಿಯೇ ದರ್ಶನ್‌ ಅಭಿಮಾನಿಗಳು ಈ ನಂಬರ್‌ಅನ್ನು ಡಿಕೋಡ್‌ ಮಾಡಿದ್ದಾರೆ.

ಬೆಂಗಳೂರು (ಮಾ.14): ನಟಿ ಪವಿತ್ರಾ ಗೌಡ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಸೋಶಿಯಲ್‌ ಮೀಡಿಯಾ ರಂಪಾಟದ ಕಾರಣದಿಂದ ಸುದ್ದಿಯಲ್ಲಿದ್ದ ಪವಿತ್ರಾ ಗೌಡ ಈಗ ಹೊಸ ಟ್ಯಾಟು ಹಾಕಿಸಿಕೊಂಡು ಗಮನಸೆಳೆದಿದ್ದಾರೆ. ಹಾಗಂತ ಇದು ಯಾವುದೇ ಚಿತ್ರದ ಟ್ಯಾಟೂ ಅಲ್ಲ. 777 ಎನ್ನುವ ನಂಬರ್‌ಅನ್ನು ಅವರು ಟ್ಯಾಟು ಹಾಕಿಸಿಕೊಂಡಿದ್ದಾರೆ. ಅವರ 777 ನಂಬರ್‌ ಟ್ಯಾಟು ಈಗ ದರ್ಶನ್‌ ಅಭಿಮಾನಿಗಳ ಗಮನಸೆಳೆದಿದೆ. ಅಷ್ಟಕ್ಕೂ ಅವರು ಹಾಕಿಸಿಕೊಂಡಿರುವ 777 ನಂಬರ್‌ ಟ್ಯಾಟೂಗೂ ದರ್ಶನ್‌ಗೂ ಏನು ಲಿಂಕ್‌ ಎನ್ನುವ ವಿಚಾರ ಇಲ್ಲಿದೆ. ಬಿಗ್‌ಬಾಸ್‌ ಮೂಲಕ ಗಮನಳೆದಿರುವ ನಿತು ವನಜಾಕ್ಷಿ ಗೊತ್ತಿರಬೇಕಲ್ಲ. ದೊಡ್ಮನೆಯಲ್ಲಿ ಏಳು ವಾರ ಕಳೆದಿದ್ದ ನೀತು ಅವರದ್ದೇ ಆದ ಟ್ಯಾಟು ಸ್ಟುಡಿಯೋವನ್ನು ಬೆಂಗಳೂರಿನಲ್ಲಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಈ ಸ್ಟುಡಿಯೋಗೆ ತಮ್ಮ ಸ್ನೇಹಿತೆಯೊಂದಿಗೆ ಭೇಟಿ ನೀಡಿದ್ದ ಪವಿತ್ರಾ ಗೌಡ 777 ನಂಬರ್‌ ಟ್ಯಾಟು ಹಾಕಿಸಿಕೊಂಡಿದ್ದಾರೆ. ಇದನ್ನು ನೀತು ತಮ್ಮ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಬೆಸ್ಟ್‌ ಫ್ರೆಂಡ್‌ಗೆ ಟ್ಯಾಟು ಹಾಕಿದ್ದೇನೆ ಎಂದು ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಬರೆದಿದ್ದಾರೆ.

ಇನ್ನು ಪವಿತ್ರಾ ಗೌಡ ಅವರ ಕೈಯಲ್ಲಿ 777 ಟ್ಯಾಟು ಕಂಡ ದರ್ಶನ್‌ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಈ ನಂಬರ್‌ಗೂ ದರ್ಶನ್‌ಗೂ ಏನಾದರೂ ಲಿಂಕ್‌ ಇರಲೇಬೇಕು ಎಂದು ಹುಡುಕಾಟವನ್ನೂ ಮಾಡಿದ್ದಾರೆ. ದರ್ಶನ್‌ ಹಾಗೂ ಪವಿತ್ರಾ ಗೌಡ ನಡುವೆ ಇರುವ ಆತ್ಮೀಯ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದೇ ಕಾರಣಕ್ಕಾಗಿ ದರ್ಶನ್‌ಗೆ ಏನಾದರೂ ಲಿಂಕ್‌ ಇರುವ ಕಾರಣಕ್ಕೆ 777 ನಂಬರ್‌ ಹಾಕಿಸಿಕೊಂಡಿರಬೇಕು ಎಂದು ಆಲೋಚನೆ ಮಾಡಿದ್ದಾರೆ. 777 ನಂಬರ್‌ನೊಂದಿಗೆ ಲವ್‌ ಮಾರ್ಕ್‌ ಕೂಡ ಇದ್ದ ಕಾರಣಕ್ಕೆ ಇದು ದರ್ಶನ್‌ಗೆ ಸಂಬಂಧಿಸಿದ್ದೇ ನಂಬರ್‌ ಎನ್ನುವುದು ಖಚಿತವಾಗಿದೆ. ಕೊನೆಗೂ ಸಾಕಷ್ಟು ಹುಡುಕಾಟದ ಬಳಿಕ ಈ ನಂಬರ್‌ನ ಹಿಂದಿರುವ ವಿಚಾರವನ್ನು ಅಭಿಮಾನಿಗಳು ಡಿಕೋಡ್‌ ಮಾಡಿದ್ದಾರೆ.

ದರ್ಶನ್‌ ಅಭಿಮಾನಿಗಳ ಪೈಕಿ ಒಬ್ಬೊಬ್ಬರದು ಒಂದೊಂದು ರೀತಿಯ ವಾದವನ್ನು ತಿಳಿಸಿದ್ದಾರೆ. ದರ್ಶನ್‌ ಹುಟ್ಟಿದ್ದು 1977ರ ಫೆಬ್ರವರಿ 16 ರಂದು. ಇನ್ನು ಪವಿತ್ರಾ ಅವರ ಮಗಳು ಖುಷಿ ಹುಟ್ಟಿದ್ದು ನವೆಂಬರ್‌ 7 ರಂದು. ಇದೇ ಕಾರಣಕ್ಕಾಗಿ 777 ಎನ್ನುವ ನಂಬರ್‌ ಟ್ಯಾಟು ಹಾಕಿಸಿಕೊಂಡಿದ್ದಾರೆ ಎಂದಿದ್ದರೆ, ಇನ್ನೂ ಕೆಲವರು ದರ್ಶನ್‌ ಬರ್ತ್‌ಡೇಟ್‌ 16ಅನ್ನು ಕೂಡಿಸಿದರೆ 7 ಆಗುತ್ತದೆ. ಇನ್ನು ಅವರ ಹೈಟ್‌ ಕೂಡ 6.1 ಇದು ಕೂಡಿಸಿದರೂ 7 ಆಗುತ್ತದೆ. ಅದರೊಂದಿಗೆ ಮಗಳ ಜನ್ಮದಿನಾಂಕವನ್ನು ಕೂಡಿಸಿ ಪವಿತ್ರಾ ಗೌಡ 777 ಟ್ಯಾಟು ಹಾಕಿಸಿಕೊಂಡಿದ್ದಾರೆ ಎಂದು ಡಿಕೋಡ್‌ ಮಾಡಿದ್ದಾರೆ.

ಇನ್ನೂ ಕೆಲವರು ಇದು ದರ್ಶನ್‌ನ ಕಾರ್‌ ನಂಬರ್‌ಗಳಾಗಿರುವ ಸಾಧ್ಯತೆ ಇದೆ ಎಂದಿದ್ದಾರೆ. ಇದರ ನಡುವೆ ಫ್ಯಾಶನ್‌ ಡಿಸೈನರ್‌ ಆಗಿರುವ ಪವಿತ್ರಾ ಗೌಡ ಅವರು ನಡೆಸುತ್ತಿರುವ ಕಂಪನಿಯ ಹೆಸರು ಕಾರ್ಪೆಟ್‌ ಸ್ಟುಡಿಯೋ 777. ಕಂಪನಿಯ ಹೆಸರನ್ನು ಅವರು ಟ್ಯಾಟೂ ಮಾಡಿಸಿಕೊಂಡಿದ್ದಾರೆ ಎಂದಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮೀ ಜೊತೆ ವಿವಾದ..! ಸೋಶಿಯಲ್ ಮೀಡಿಯಾ ಟ್ರೆಂಡ್ ಆದ ಪವಿತ್ರಾ ಗೌಡ..!

ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಹಾಗೂ ಪವಿತ್ರಾ ಗೌಡ ನಡುವೆ ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ವಾರ್‌ ಕೂಡ ನಡೆದಿತ್ತು. ತೆರೆಮರೆಯಲ್ಲಿ ಇಷ್ಟು ದಿನಗಳ ನಡುವ ನಡೆಯುತ್ತಿದ್ದ ಕಲಹ ಇದೇ ಮೊದಲ ಬಾರಿಗೆ ಸೋಶಿಯಲ್‌ ಮೀಡಿಯಾದಲ್ಲಿ ನಡೆಯಿತು. ಇನ್ನೊಂದೆಡೆ ಕಾಟೇರ ವೇದಿಕೆಯಲ್ಲಿ ದರ್ಶನ್‌, ನಿರ್ಮಾಪಕ ಉಮಾಪತಿ ಕುರಿತಾಗಿ ಮಾತನಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

ವಿಜಯಲಕ್ಷ್ಮೀ ದರ್ಶನ್‌ಗೆ ಪವಿತ್ರಾ ಗೌಡ ವಾರ್ನಿಂಗ್! “ಲವ್, ಕೇರ್ ಜೊತೆ ದರ್ಶನ್ ಜೊತೆಗಿದ್ದೇನೆ” ಎಂದ ಪವಿತ್ರಾ..!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!
ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ ವಂದೇ ಮಾತರಂ ಬಳಸಲಾಗ್ತಿದೆ: ನಟ ಕಿಶೋರ್‌ ಆಕ್ರೋಶ!