ಪುನೀತ್ ರಾಜ್‌ಕುಮಾರ್ 'ಜಾಕಿ' ಫೈಟ್‌ ಬಗ್ಗೆ ವಿವಾದ; ರವಿ ವರ್ಮ ವಿರುದ್ಧ ಪೊಲೀಸ್ ಕಂಪ್ಲೇಂಟ್

By Shriram Bhat  |  First Published Mar 14, 2024, 1:10 PM IST

ಫೈಟ್​ ಮಾಸ್ಟರ್ ರವಿವರ್ಮ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಆ್ಯಕ್ಷನ್ ಡೈರೆಕ್ಟರ್ ಡಿಫೆರೆಂಟ್​ ಡ್ಯಾನಿ ದೂರು ದಾಖಲಿಸಿದ್ದಾರೆ. ಜತೆಗೆ, ಜೀವ ಬೆದರಿಕೆ ಆರೋಪ, ಕೊಲೆ ಆರೋಪದಡಿ ಕೂಡ ದೂರು ದಾಖಲಿಸಲಾಗಿದೆ. 


ಇಬ್ಬರು ಫೈಟ್ ಮಾಸ್ಟರ್ಸ್ ಮಧ್ಯೆ ಹುಟ್ಟಿಕೊಂಡಿದೆ ಹೊಸ ವಿವಾದ. ಜಾಕಿ ಚಿತ್ರದ ಫೈಯರ್ ಫೈಟ್​ ಕ್ರಿಯೇಟ್ ಮಾಡಿದ್ದರ ಬಗ್ಗೆ ವಿವಾದ ಭುಗಿಲೆದ್ದಿದೆ. ಪುನೀತ್ ರಾಜ್‌ಕುಮಾರ್ ನಟನೆಯ ಜಾಕಿ ಸಿನಿಮಾದಲ್ಲಿ ಫೈಯರ್ ಫೈಟ್ ಮಾಡಿಸಿದ್ದು ತಾವು ಎಂದು ಡಿಫರೆಂಟ್ ಡ್ಯಾನಿ ಹೇಳಿದ್ದಾರೆ. ಆದರೆ ಅದರ ಕ್ರೆಡಿಟ್‌ಅನ್ನು ರವಿವರ್ಮ ತೆಗೆದುಕೊಂಡಿದ್ದಾರೆ ಎಂದು ಡಿಫರೆಂಟ್ ಡ್ಯಾನಿ ಪೊಲೀಸ್‌ ದೂರು ದಾಖಲಿಸಿದ್ದಾರೆ. ಜತೆಗೆ ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನುವ ಆರೋಪವನ್ನು ಸಹ ಮಾಡಿದ್ದಾರೆ ಡಿಫರೆಂಟ್​ ಡ್ಯಾನಿ. 

ಸಿಟಿಯಿಂದ ಹೊರಗೆ ಹೋಗಿ ಪಾನೀಪುರಿ ಮಾರುತ್ತೇನೆ ಅಂದ್ರು ರಶ್ಮಿಕಾ; ಫುಲ್ ಶಾಕ್ ಆಗಿದಾರೆ ಫ್ಯಾನ್ಸ್!

Tap to resize

Latest Videos

ಫೈಟ್​ ಮಾಸ್ಟರ್ ರವಿವರ್ಮ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಆ್ಯಕ್ಷನ್ ಡೈರೆಕ್ಟರ್ ಡಿಫೆರೆಂಟ್​ ಡ್ಯಾನಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಜತೆಗೆ, ಜೀವ ಬೆದರಿಕೆ ಆರೋಪ, ಕೊಲೆ ಆರೋಪದಡಿ ಕೂಡ ದೂರು ದಾಖಲಿಸಲಾಗಿದೆ. ಜಾಕಿ ಸಿನಿಮಾದ ಬೆಂಕಿ ಫೈಟ್ ವಿಚಾರವಾಗಿ ಹುಟ್ಟಿಕೊಂಡ ವಿವಾದ, ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಜಾಕಿ ಚಿತ್ರದಲ್ಲಿ ಬೆಂಕಿ ಫೈಟ್ ನಿರ್ದೇಶನ ಮಾಡಿದ್ದು ಡಿಫರೆಂಟ್​ ಡ್ಯಾನಿ, ಆದರೆ ಈ ಕ್ರೆಡಿಟ್​ ತಗೊಂಡಿದ್ದು ರವಿವರ್ಮ ಎನ್ನುವ ಆರೋಪ ಮಾಡಲಾಗಿದೆ. 

ಏರ್‌ಪೋರ್ಟಲ್ಲಿ ವೃದ್ಧರ ನೋಡಿದ್ರೆ ಶಂಕರ್‌ ಬ್ಯಾಗ್ ಕಿತ್ಕೊತಿದ್ದ: ಅರುಂಧತಿ ನಾಗ್

ಪೈಟ್ ಮಾಸ್ಟರ್ ಡಿಫರೆಂಟ್ ಡ್ಯಾನಿ ಅವರು ರವಿವರ್ಮ ವಿರುದ್ಧ 'ಬೆಂಕಿ ಫೈಟ್​ ಮಾಡಿದ್ದು ನಾನು ಅಂತ ಹೇಳಿಕೊಂಡು ಬಾಲಿವುಡ್​ ಅವಕಾಶ ಪಡೆದುಕೊಂಡ್ರು' ಎಂದೂ ಸಹ ಆರೋಪ ಮಾಡಿದ್ದಾರೆ. ಜಾಕಿ ಸಿನಿಮಾದ ಫೈಟ್​ ವಿಷ್ಯದಲ್ಲಿ ರವಿವರ್ಮ ಸುಳ್ಳು ಹೇಳಿದ್ದಾರೆ ಎಂದು ದೂರಿದ ಡಿಫರೆಂಟ್​ ಡ್ಯಾನಿ,  ಈ ಹೇಳಿಕೆ ಬಳಿಕ ರವಿವರ್ಮ ಅವರು ಡಿಫರೆಂಟ್​ ಡ್ಯಾನಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ.  ಡಿಫರೆಂಟ್​ ಡ್ಯಾನಿ ಆಪ್ತನಿಗೆ ಫೋನ್ ಮಾಡಿ ಬೆದರಿಕೆ ಹಾಕಿರುವ ಆರೋಪವನ್ನು ಈಗ ಫೈಟ್ ಮಾಸ್ಟರ್ ರವಿವರ್ಮ ಎದುರಿಸುತ್ತಿದ್ದಾರೆ. 

ಅಷ್ಟು ಚೆನ್ನಾಗಿ ಹಾಡುವ ಡಾ ರಾಜ್‌ ಇಷ್ಟು ದಿನ ಆ ಅವಕಾಶವನ್ನು ನಂಗೆ ಬಿಟ್ಟಿದ್ದರಲ್ಲಾ; ಪಿಬಿ ಶ್ರೀನಿವಾಸ್!

click me!