
ನಟಿ ಹೇಮಾ ಚೌಧರಿ ಕನ್ನಡ ಚಿತ್ರಂಗ ಕಂಡ ಅದ್ಭುತ ಕಲಾವಿದೆ. ಹೇಮಾರ ನಾರ್ಮಲ್‌ಗಿಂತ ಹೆಚ್ಚಿನ ಹೈಟ್-ವ್ಹೇಟ್ ಹಾಗು ಗಂಭೀರ ವ್ಯಕ್ತಿತ್ವವೇ ಅವರ ಬಣ್ಣದ ಬದುಕಿಗೆ ಪ್ಲಸ್ ಪಾಯಿಂಟ್ ಆಯಿತು ಎನ್ನಬಹುದು. 10 ಡಿಸೆಂಬರ್ 1955 ರಲ್ಲಿ ಆಂಧ್ರಪ್ರದೇಶದ ಹೈದ್ರಾಬಾದ್‌ನಲ್ಲಿ ಜನಿಸಿರುವ ಹೇಮಾ ಚೌಧರಿಯ (Hema Chaudhary)ಮೊದಲ ಹೆಸರು ದುರ್ಗ ಪ್ರಭಾ. ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಬಂದು ಹೇಮಾ ಚೌಧರಿ ಹೆಸರಿನಿಂದ ತೆಲುಗು, ಕನ್ನಡ ಹಾಗೂ ತಮಿಳು ಚಿತ್ರರಂಗಗಳಲ್ಲಿ ಮಿಂಚಿದವರು ನಟಿ ಹೇಮಾ ಚೌಧರಿ.
ಅದೆಂಥ ಪಾತ್ರವೇ ಇರಲಿ, ಹೇಮಾ ಚೌಧರಿ ನಟಿಸಿದರೆ ಅದಕ್ಕೊಂದು ತೂಕ ಬಂದು ಬಿಡುತ್ತದೆ. ದೇವತೆ, ಗಯ್ಯಾಳಿ, ಕಾಮಿಡಿ, ಬಜಾರಿ, ತಾಯಿ, ಅಕ್ಕ, ತಂಗಿ ಅಥವಾ ಹುಚ್ಚಿಯ ಪಾತ್ರವೇ ಇರಲಿ, ಅಗತ್ಯವಿರುವ ತಲ್ಲೀನತೆಯಿಂದ ಅಮೋಘವಾಗಿ ನಟಿಸುವ ನಟಿ ಹೇಮಾ. ಕನ್ನಡದಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿರುವ ಹೇಮಾ ಅವರಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಒಂದು ಕಾಲದಲ್ಲಿ, ಅವರಿಗಾಗಿಯೇ ಪಾತ್ರ ಸೃಷ್ಟಿಸುವ ನಿರ್ದೇಶಕರು-ನಿರ್ಮಾಪಕರು ಇದ್ದರು, ಹಾಗೇ, ಅವರಿಗಾಗಿಯೇ ಸಿನಿಮಾ ನೋಡುವ ಪ್ರೇಕ್ಷಕ ವರ್ಗವೂ ಇತ್ತು ಎನ್ನಲಾಗಿದೆ.
1975ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಹೇಮಾ ಚೌಧರಿ ಅವರಿಗೆ ಈಗ 69 ವರ್ಷ. ಆದರೆ, ಸಿನಿಮಾ ಸೀರಿಯಲ್‌ಗಳಲ್ಲಿ ಸ್ವಲ್ಪ ಕಾಲದ ಹಿಂದಿನವರೆಗೂ ಪಾತ್ರ ಮಾಡುತ್ತಲೇ ಇದ್ದರು. ಆದರೆ, ಕಳೆದ ತಿಂಗಳು ಬ್ರೇನ್ ಹ್ಯಾಮರೇಜ್‌ಗೆ (Brain Hamrage)ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ಹೇಮಾ ಚೌಧರಿ ಗುಣಮುಖರಾಗುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಅನಾರೋಗ್ಯದಿಂದ ಸ್ವಲ್ಪಸ್ವಲ್ಪವೇ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಕಪ್ಪು ಮೈ ಬಣ್ಣ, ಗೂನು ಬೆನ್ನಿನ ನಟಿ, 'ಮಿನುಗು ತಾರೆ' ಕಲ್ಪನಾ ದುರಂತ ಕಥೆಗೆ 'ಕಾರಣಕರ್ತ' ಯಾರು..!?
ನಟಿಯಾಗಿ ಸಾಕಷ್ಟು ಸಾಧನೆ ಮಾಡಿರುವ ನಟಿ ಹೇಮಾ ಚೌಧರಿಗೆ ಮೂರು ತಲೆಮಾರಿಗೆ ಸಾಕಾಗುವಷ್ಟು ಆಸ್ತಿಯಿದೆ. ಆದರೆ, ಹೇಳಿಕೊಳ್ಳುವಂಥ ಹತ್ತಿರದ ಸಂಬಂಧಿಗಳು ಬಳಿಯಲ್ಲಿ ಯಾರೂ ಇಲ್ಲ. ಸ್ವಂತ ಮಗ ಕೂಡ ಸದ್ಯ ಐರ್ಲೆಂಡ್‌ನಲ್ಲಿದ್ದು ತಾಯಿ ಐಸಿಯುಗೆ ಅಡ್ಮಿಟ್ ಆದಾಗ ನೋಡಲು ಬಂದಿದ್ದಾರೆ ಎನ್ನಲಾಗಿದೆ. ಮಗನಿಗೆ ಭಾಗಶಃ ಕಣ್ಣು ಕಾಣುತ್ತಿದ್ದು, ಅದರಲ್ಲೇ ತಾಯಿಯನ್ನು ನೋಡಿದ್ದಾರಂತೆ. ಅದರೆ, ಗಂಡನಿಲ್ಲದೇ ಒಬ್ಬಂಟಿಯಾಗಿರುವ ಹೇಮಾ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಅಂದು ಫ್ಯಾಮಿಲಿಗಾಗಿ ಹೋರಾಡಿ ಒಬ್ಬಂಟಿಯಾದ್ರು, ಮಿಲ್ಲಾ ದತ್ತು ಪಡೆದು ಸದ್ಯ ಜಂಟಿಯಾದ್ರು ನಟಿ ಶಕೀಲಾ!
ಮದುವೆಯಾಗಿ ಸ್ವಲ್ಪ ದಿನಕ್ಕೇ ಹೇಮಾ ಚೌಧರಿಯವರನ್ನು ಬಿಟ್ಟು ಹೋಗಿರುವ ಅವರ ಗಂಡ ಯಾರು, ಎಲ್ಲಿದ್ದಾರೆ ಎಂಬ ಮಾಹಿತಿ ಚಿತ್ರರಂಗ ಸೇರಿದಂತೆ ಯಾರಿಗೂ ಅಷ್ಟಾಗಿ ಇಲ್ಲ. ಆದರೆ, ಒಬ್ಬಂಟಿಯಾಗಿ ಮಗನನ್ನು ಸಾಕಿ ಅವನಿಗೆ ಶಿಕ್ಷಣ ಕೊಡಿಸಿ ಬದುಕಿನ ಇಳಿಸಂಜೆಯಲ್ಲಿ ಯಾರೂ ದಿಕ್ಕಿಲ್ಲದೇ ಒಬ್ಬಂಟಿಯಾಗಿ ಅನಾರೋಗ್ಯದಿಂದ ಬಳಲುತ್ತಿರುವ ನಟಿ ಹೇಮಾ ಚೌಧರಿಯವರ ಬದುಕು ನಿಜವಾಗಿಯೂ ರೋಚಕ ಸಾಧನೆಯೇ ಸೈ!
ಸದ್ಗುರುಗಳಿಂದ ದೀಕ್ಷೆ ಪಡೆದ ನಟಿ ತಮನ್ನಾ ಭಾಟಿಯಾ ಈಗೇನ್ ಮಾಡ್ತಿದಾರೆ, ಅವ್ರೇ ಹೇಳ್ತಾರೆ ಕೇಳಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.