ನಿಜ ಜೀವನದಲ್ಲಿ ಸೂಕ್ಷ್ಮ ವ್ಯಕ್ತಿತ್ವ ಹಾಗು ಭಾವುಕ ಜೀವಿಯಾಗಿದ್ದ ಕಲ್ಪನಾ, ವೈವಾಹಿಕ ಜೀವನದಲ್ಲಿ ಅವರಿಗೆ ಸರಿಯಾದ ಸಂಗಾತಿ ಸಿಗದೇ ಹತಾಶರಾಗಿದ್ದರು ಎನ್ನಲಾಗಿದೆ. 35 ವರ್ಷಕ್ಕೇ ಸಾವು ಕಂಡ ನಟಿ ಕಲ್ಪನಾ, ಅದಕ್ಕೂ ಮೊದಲೇ ಇಬ್ಬರು ಗಂಡಂದಿರು ಕಲ್ಪನಾರ ಬದುಕಿನಲ್ಲಿ ಬಂದಿದ್ದರು.
ಕನ್ನಡ ಚಿತ್ರರಂಗ ಕಂಡ ಅಪರೂಪದ ತಾರೆ ಕಲ್ಪನಾ. 'ಮಿನುಗು ತಾರೆ' ಎಂಬ ಪಟ್ಟ ಹೊತ್ತಿದ್ದ ಕಲ್ಪನಾ ಅಂದು ಅದೆಷ್ಟು ಸ್ಟಾರ್ ಟಮ್ ಹೊಂದಿದ್ದರು ಎಂದರೆ, ಇಂದಿನ ಯಾವ ಸ್ಟಾರ್ ನಟಿಯರಿಗೂ ಕಡಿಮೆಯಿಲ್ಲ ಎನ್ನುವಷ್ಟು. ಅಂದಿನ ಕಾಲಕ್ಕೆ ಸಂಭಾವನೆ ಹಾಗು ಕಲ್ಪನಾ (Kalpana)ಉಳಿದುಕೊಳ್ಳುವ ಹೊಟೆಲ್ ರೂಮ್ ಬೆಲೆ ಸಾವರಾರು ರೂಪಾಯಿ ಇದ್ದು, ಇಂದಿನ ರೇಟ್‌ನಲ್ಲಿ ಲಕ್ಷಾಂತರ ಎನ್ನುವಷ್ಟು ಎನ್ನಲಾಗಿದೆ. ಆದರೆ, ಅಂಥ ಕಲ್ಪನಾ ಬದುಕಿದ್ದು ಕೇವಲ 35 ವರ್ಷ ಮಾತ್ರ ಎಂಬುದು ಸತ್ಯ ಸಂಗತಿ.
18 ಜುಲೈ 1943 ರಂದು ಅಂದಿನ ಮದ್ರಾಸ್ ಪ್ರಾಂತ್ಯ ಹಾಗೂ ಇಂದಿನ ಮಂಗಳೂರಿನಲ್ಲಿ ಜನಿಸಿದ ಕಲ್ಪನಾ ಮೊದಲು ಬಣ್ಣ ಹಚ್ಚಿದ್ದು ನಾಟಕಗಳಲ್ಲಿ. ಗುಡಿಗೇರಿ ಬಸವರಾಜು ಅವರ ನಾಟಕಗಳಲ್ಲಿ ಬಣ್ಣ ಹಚ್ಚಿದ್ದ ಕಲ್ಪನಾ ಅಂದು ತಮ್ಮ ಪ್ರಬುದ್ಧ ಹಾಗು ಅಪರೂಪ ಎನಿಸುವಂಥ ನಾನೆಯಿಂದ ಜನಪ್ರಿಯ ನಟಿಯಾಗಿ ಬೆಳೆದರು, ಬಳಿಕ ಕಪ್ಪು-ಬಿಳುಪು ಕಾಲದಲ್ಲಿದ್ದ ಅಂದಿನ ಚಿತ್ರಂಗವನ್ನು ಪ್ರವೇಶಿಸಿದರು ನಟಿ ಕಲ್ಪನಾ. ಅವರ ಮೊದಲ ಹೆಸರು ಶರತ್ ಲತಾ (Sharath Latha). ಬಿಅರ್ ಪಂತುಲು (BR Panthulu)ನಿರ್ದೇಶನದಲ್ಲಿ 1963ರಲ್ಲಿ ಬಂದ 'ಸಾಕು ಮಗಳು' ಕಲ್ಪನಾ ನಟಿಸಿದ ಮೊದಲ ಕನ್ನಡ ಸಿನಿಮಾ.
undefined
ಕಲ್ಪನಾರ ಮೊದಲ ಸಿನಿಮಾ. ಅಲ್ಲಿಂದ ನಟಿ ಕಲ್ಪನಾ ತಮ್ಮ ಅತ್ಯದ್ಭುತ ಅಭಿನಯದಿಂದ ಜನಮನ ಸೂರೆಗೊಂಡು ದಿನದಿನಕ್ಕೂ ಬೆಳೆಯುತ್ತಲೇ ಹೋದರು. ಅವರು ಗ್ರಾಫ್ ಅದೆಷ್ಟು ಬೇಗ ಬೆಳೆಯಿತು ಎಂದರೆ, ಅವರಿಗೆ ಜನರು 'ಮಿನುಗು ತಾರೆ' ಎಂಬ ಬಿರುದನ್ನು ದಯಪಾಲಿಸಿದರು. ನಾಟಕ ಹಾಗೂ ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಪಟ್ಟ ಗಿಟ್ಟಿಸಿದ್ದ ನಟಿ ಕಲ್ಪನಾರ ಆರಂಭಿಕ ಹಾಗು ಅಂತ್ಯದ ಬದುಕು ತುಂಬಾ ಕಷ್ಟದಿಂದಲೇ ಕೂಡಿತ್ತು.
ನಾಟಕ ಹಾಗೂ ಚಿತ್ರರಂಗಳಲ್ಲಿ ಮೊದಮೊದಲು ಕಲ್ಪನಾರನ್ನ 'ಗೂನು ಬೆನ್ನು' ಕಪ್ಪು ಹುಡುಗಿ ಎಂದೇ ಹಿಯಾಳಿಸುತ್ತಿದ್ದರಂತೆ. ಬಣ್ಣದ ಬದುಕಿಗೆ ಕಾಲಿಡುತ್ತಿದ್ದ ನಟಿಗೆ ಬಿಳಿಯ ಮೈ ಬಣ್ಣ ತುಂಬಾ ಮುಖ್ಯ ಎಂಬ ಅಂದಿನ ಕಾಲದಲ್ಲಿ ಕಪ್ಪು ಹುಡುಗಿ ಕಲ್ಪನಾ ನಾಟಕ-ಸಿನಿಮಾರಂಗಗಳಲ್ಲಿ ಮಿಂಚಿದ್ದು ಅಪರೂಪದ ಸಾಧನೆಯೇ ಸೈ. ಅಂಥ ನಟಿ ಕಲ್ಪನಾ ತಮ್ಮ ವೃತ್ತಿ ಜೀವನದಲ್ಲಿ ಎದುರು ಬಂದ ಬಿಎನ್ ವಿಶ್ವನಾಥ್ (BN VIshwanath), ಗುಡಿಗೇರಿ ಬಸವರಾಜ್ (Gudigeri Basavaraj)ಅವರುಗಳನ್ನು ಮದುವೆಯಾಗಿದ್ದರು.
ಸದ್ಗುರುಗಳಿಂದ ದೀಕ್ಷೆ ಪಡೆದ ನಟಿ ತಮನ್ನಾ ಭಾಟಿಯಾ ಈಗೇನ್ ಮಾಡ್ತಿದಾರೆ, ಅವ್ರೇ ಹೇಳ್ತಾರೆ ಕೇಳಿ!
ನಿಜ ಜೀವನದಲ್ಲಿ ಸೂಕ್ಷ್ಮ ವ್ಯಕ್ತಿತ್ವ ಹಾಗು ಭಾವುಕ ಜೀವಿಯಾಗಿದ್ದ ಕಲ್ಪನಾ, ವೈವಾಹಿಕ ಜೀವನದಲ್ಲಿ ಅವರಿಗೆ ಸರಿಯಾದ ಸಂಗಾತಿ ಸಿಗದೇ ಹತಾಶರಾಗಿದ್ದರು ಎನ್ನಲಾಗಿದೆ. 35 ವರ್ಷಕ್ಕೇ ಸಾವು ಕಂಡ ನಟಿ ಕಲ್ಪನಾ, ಅದಕ್ಕೂ ಮೊದಲೇ ಇಬ್ಬರು ಗಂಡಂದಿರು ಕಲ್ಪನಾರ ಬದುಕಿನಲ್ಲಿ ಬಂದಿದ್ದರು. ಅಷ್ಟೇ ಅಲ್ಲ, ಅಂದಿನ ಮೇರು ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ (Puttanna Kangalಹಾಗು ಕಲ್ಪನಾ ಪರಸ್ಪರ ಪ್ರೀತಿಗೆ ಬಿದ್ದು ಇಬ್ಬರ ಬದುಕನ್ನೂ ಚಿತ್ರಾನ್ನ ಮಾಡಿಕೊಂಡಿದ್ದರು ಎನ್ನಲಾಗಿದೆ.
ಅಂದು ಫ್ಯಾಮಿಲಿಗಾಗಿ ಹೋರಾಡಿ ಒಬ್ಬಂಟಿಯಾದ್ರು, ಮಿಲ್ಲಾ ದತ್ತು ಪಡೆದು ಸದ್ಯ ಜಂಟಿಯಾದ್ರು ನಟಿ ಶಕೀಲಾ!
12 ಮೇ 1979ರಂದು ಸಂಕೇಶ್ವರದ ಮನೆಯಲ್ಲಿ ಕಲ್ಪನಾ ತಮ್ಮ ಬದುಕಿಗೆ ಮಂಗಳ ಹಾಡಿಬಿಟ್ಟರು ಎನ್ನಲಾಗಿದೆ. ಕಲ್ಪನಾರ ದುರಂತ್ಯ ಅಂತ್ಯ ಬಹುತೇಕ ಎಲ್ಲರಿಗೂ ಗೊತ್ತಿರುವಂತೆ, ಆತ್ಮಹತ್ಯೆ ಎನ್ನಲಾಗಿದೆ. ಪುಟ್ಟಣ್ಣರ ಜತೆ ಲವ್‌ಗೆ ಬಿದ್ದಿದ್ದ ನಟಿ ಪುಟ್ಟಣ್ಣ ನಟಿ ಆರತಿ ಹಿಂದೆ ಬಿದ್ದ ವಿಷಯ ತಿಳಿದು ಖಿನ್ನತೆಗೆ ಜಾರಿದ್ದರು. ಬಳಿಕ ಆತ್ಮಹತ್ಯೆಯ ನಿರ್ಧಾರ ಕೈಗೊಂಡು ಈ ಜಗತ್ತಿನಿಂದ ಮರೆಯಾದರು ಎನ್ನಲಾಗಿದೆ. ಅವರ ವೈಯಕ್ತಿಕ ವಿಷಯ ಏನೇ ಇರಲಿ, ಕನ್ನಡ ಚಿತ್ರರಂಗ ಹಾಗೂ ಕಲಾರಾಧಕರು ಖಂಡಿತವಾಗಿಯೂ ಕಲ್ಪನಾರನ್ನು ಎಂದೂ ಮರೆಯಲಾರರು.
ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ನೋಡಿ ರವಿಮಾಮನ ಜತೆ 'ಚೆಲುವೆ'ಯಾಗಿ ಚೆಲ್ಲಾಟವಾಡಿದ್ದ ಬೆಡಗಿ ಸಂಗೀತಾ!