ಕೋರ್ಟ್​ ಸಮಸ್ಯೆ ನಡುವೆಯೇ ಬೆಳ್ಳಂಬೆಳಗ್ಗೆ ಟಾಕ್ಸಿಕ್​ ಚಿತ್ರದ ಬಿಗ್​ ಅಪ್​ಡೇಟ್​ ನೀಡಿದ ಯಶ್​!

By Suchethana D  |  First Published Aug 8, 2024, 11:04 AM IST

ಯಶ್​ ಅವರ ಬಹು ನಿರೀಕ್ಷಿತ ಟಾಕ್ಸಿಕ್​ ಚಿತ್ರದ ಕುರಿತು ನಟ ಬಿಗ್​ ಅಪ್​ಡೇಟ್​ ನೀಡಿದ್ದಾರೆ. ಟ್ವೀಟ್​ ಮೂಲಕ ಯಶ್​ ತಿಳಿಸಿದ್ದೇನು?
 


  ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಬಹು ನಿರೀಕ್ಷಿತ ಟಾಕ್ಸಿಕ್​ ಚಿತ್ರ ಕಳೆದೊಂದು ವರ್ಷದಿಂದ ಬಹು ಸುದ್ದಿ ಮಾಡುತ್ತಲೇ ಇದೆ. ನಟ ಯಶ್​ ಫ್ಯಾನ್ಸ್​   ಟಾಕ್ಸಿಸ್​ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ‘ಕೆಜಿಎಫ್’ ಭರ್ಜರಿ ಯಶಸ್ಸಿನ ಬಳಿಕ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಿದೆ. ಈ ಚಿತ್ರದಲ್ಲಿ  ಬಾಲಿವುಡ್​ ಬೇಬೋ,  ಕರೀನಾ ಕಪೂರ್​ ಖಾನ್​ ಅವರು  ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡುತ್ತಿದೆ. ಈ ಮೂಲಕ ನಟಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುತ್ತಾರೆ ಎನ್ನಲಾಗಿತ್ತು.  ನಿರ್ದೇಶಕಿ ಗೀತು ಮೋಹನ್ ದಾಸ್ ಹಾಗೂ  ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಸಂಸ್ಥೆಯ ಜೊತೆಗೆ ಸಿನಿಮಾ ಟೈಟಲ್ ಕೂಡ ಘೋಷಿಸಿ, ಬಳಿಕ ಚಿತ್ರದಲ್ಲಿ ಮೂವರು ನಾಯಕಿಯರು ಎನ್ನುವ ಗುಸುಗುಸು ಶುರುವಾಯಿತು. ಅದರಲ್ಲಿ ಕರೀನಾ ಕಪೂರ್ ಒಬ್ಬರು ಎನ್ನಲಾಯಿತು.  ಈ ವಿಷಯ ತಿಳಿದಾಗಿನಿಂದಲೂ ಅತ್ತ ಕರೀನಾ ಕಪೂರ್​ ಅಭಿಮಾನಿಗಳು ಹಾಗೂ ಯಶ್​ ಅವರ ಫ್ಯಾನ್ಸ್​ ಈ ಸುದ್ದಿ ನಿಜನಾ ಎನ್ನುವ ಗೊಂದಲದಲ್ಲಿದ್ದರು. ಕೊನೆಗೆ ಆಕೆ ತಂಗಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಇದುವರೆಗೂ ಈ ಚಿತ್ರದ ನಾಯಕಿಯ ಗುಟ್ಟನ್ನು ಗುಟ್ಟಾಗಿಯೇ ಇಡಲಾಗಿದ್ದು, ಹಲವರ ಹೆಸರು ಕೇಳಿಬರುತ್ತಿದೆ. 

ಅದರ ನಡುವೆಯೇ, ಕೋರ್ಟ್​ ಗಲಾಟೆ ಶುರುವಾಗಿ ಚಿತ್ರದ ಆರಂಭಕ್ಕೆ ವಿಘ್ನವಾಯಿತು.  ಈಗಾಗಲೇ ಕಾಪಿ ರೈಟ್ಸ್‌ ಸಮಸ್ಯೆಯಿಂದ ಚಿತ್ರ ಬಳಲುತ್ತಿದೆ. ಅದಾದ ಬಳಿಕ ಟಾಕ್ಸಿಕ್ ಚಿತ್ರತಂಡ ಹಾಕಿಕೊಂಡಿರುವ ಶೂಟಿಂಗ್ ಸೆಟ್ ವಿರುದ್ಧ  ವಕೀಲರೊಬ್ಬರು ಕೋರ್ಟ್​ ಮೆಟ್ಟಿಲೇರಿದ್ದಾರೆ.  ಟಾಕ್ಸಿಕ್ ಶೂಟಿಂಗ್ ಸೆಟ್ ಮಮ್ಮೋತ್ (mammoth set)  ಅರಣ್ಯ ಇಲಾಖೆಗೆ ಸೇರಿದ್ದು ಎನ್ನುವ ದೂರು ದಾಖಲಾಗಿದೆ. ಇದು ಅರಣ್ಯಕ್ಕೆ  ಮೀಸಲಿರುವ ಜಾಗ. ಅದರಲ್ಲಿ ಸೆಟ್​ ಹಾಕಿರುವುದು ಸರಿಯಲ್ಲ ಎಂದು ಕೇಸ್​ ದಾಖಲಾಗಿದೆ. ಸದ್ಯ ಯಶ್​ ಹಾಗೂ ಚಿತ್ರ ತಂಡಕ್ಕೆ ಕೋರ್ಟ್​ ನೋಟಿಸ್​ ಜಾರಿಗೊಳಿಸಿದ್ದು, ವಿಚಾರಣೆ ಮುಂದೂಡಲಾಗಿದೆ. ಇದರ ನಡುವೆಯೇ,  ಯಶ್​ ಅವರು ಚಿತ್ರದ ಆರಂಭಕ್ಕೆ ಕುರಿತಂತೆ ಬಿಗ್​ ಅಪ್​ಡೇಟ್​ ಒಂದನ್ನು ನೀಡಿದ್ದಾರೆ. ಈ ಕುರಿತು ಇಂದು ಬೆಳಗ್ಗೆ ಟ್ವೀಟ್​ ಮಾಡಿರುವ ಯಶ್​, ಚಿತ್ರದ ಆರಂಭದ ಹಿಂಟ್​ ನೀಡಿದ್ದಾರೆ. 

Tap to resize

Latest Videos

ಮುಂಗಾರು ಮಳೆ ಶೂಟಿಂಗ್​ನಲ್ಲೇ ಸತ್ತೋಗಿ​ಬಿಟ್ರೆ ಅಂತ ಭಯ ಆಗೋಗಿತ್ತು.. ಜಿಗಣೆ ಕಾಟ ಬೇರೆ.. ಆ ದಿನ ನೆನೆದ ಪೂಜಾ ಗಾಂಧಿ

The journey begins #Toxic ಎನ್ನುವ ಕ್ಯಾಪ್ಷನ್​ ನೀಡಿರುವ ಯಶ್​ ಅವರು, ಇಂದಿನಿಂದ ಶೂಟಿಂಗ್​ ಆರಂಭ ಎನ್ನುವ ಸೂಚನೆ ನೀಡಿದ್ದಾರೆ. ಅಂದಹಾಗೆ,  ಬೆಂಗಳೂರಿನ ನೆಲಮಂಗಲದಲ್ಲಿ ಚಿತ್ರದ ಸೆಟ್​ ಹಾಕಲಾಗಿದೆ ಎನ್ನಲಾಗುತ್ತಿದೆ. ಈ ಮೊದಲು ಇಂದಿನಿಂದ ಅಂದ್ರೆ ಆಗಸ್ಟ್​ 8ರಂದು ಚಿತ್ರೀಕರಣ ಆರಂಭವಾಗುವ ಮುನ್ಸೂಚನೆ ನೀಡಿದ್ದರು ಯಶ್​. ಅದರಂತೆಯೇ ಕೆಲಸ ಶುರುವಾಗಿದೆ. ಇನ್ನು ಈ ಚಿತ್ರದಲ್ಲಿ ಯಾರ್ಯಾರು ಇರುತ್ತಾರೆ ಎನ್ನುವ ಕುತೂಲಹ ಮನೆ ಮಾಡಿದೆ. ಇದಾಗಲೇ ಶೂಟಿಂಗ್​​ಗೂ ಮುನ್ನ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎನ್ನುವ ಕಾರಣಕ್ಕೆ ಯಶ್​ ಅವರು, ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.  ಮಂಗಳೂರು ಸೂರ್ಯ ಸೂರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಕುಟುಂಬ ಸಹಿತ ಭೇಟಿ ಕೊಟ್ಟು ಪೂಜೆ ನೆರವೇರಿಸಿದ್ದರು. 

ಇದಾಗಲೇ ಬಾಲಿವುಡ್​, ಹಾಲಿವುಡ್​ ಜನರನ್ನು ಇದರಲ್ಲಿ ಪರಿಚಯಿಸುವುದಾಗಿ ಯಶ್​ ಹೇಳಿದ್ದರು. ಅದಕ್ಕಾಗಿದೆಯೇ ಟಾಕ್ಸಿಕ್​   ಚಿತ್ರ  ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ.  ಹಾಲಿವುಡ್ ಟೆಕ್ನಿಷನ್​ಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ನಿರ್ದೇಶಕರು  ಗೀತು ಮೋಹನ್ ದಾಸ್. ಚಿತ್ರದಲ್ಲಿ ಯಶ್​ ಅವರ  ಲುಕ್ ಹೇಗಿರಲಿದೆ ಎನ್ನುವ ಕುರಿತು ಪೋಸ್ಟರ್​ ನೋಡಿ ಅಭಿಮಾನಿಗಳು ಪುಳುಕರಾಗಿದ್ದಾರೆ. ಮೊದಲೇ ಹೇಳಿದ ಹಾಗೆ ನಾಯಕ ಯಶ್​ ಆದ್ರೆ ನಾಯಕಿ ಮಾತ್ರ ಇನ್ನೂ ಸೀಕ್ರೇಟ್​ ಇಡಲಾಗಿದೆ.   ಇದಾಗಲೇ ಕಿಯಾರಾ ಅಡ್ವಾನಿ ಹೆಸರೂ ಕೇಳಿಬಂದಿದೆ. ಅದಕ್ಕಾಗಿ ನಾಯಕಿಯ ಕುರಿತು ಇನ್ನೂ ಗುಟ್ಟು ಮೆಂಟೇನ್​ ಮಾಡಲಾಗಿದೆ. 

ಶಾರುಖ್ ಖಾನ್ ಚೈನ್​ ಸ್ಮೋಕರ್​; ಚಿಮ್ನಿಯಂತೆ ಹೊಗೆ ಬಿಡ್ತಾರೆ... ಬಾದ್​ಶಾಹ್​ನ ಕಥೆ ಬಿಚ್ಚಿಟ್ಟ ನಟ ಗೋವಿಂದ

The journey begins 🎬 pic.twitter.com/Ysqmr4xrpg

— Yash (@TheNameIsYash)
click me!