ಶಾರುಖ್ ಖಾನ್ ಚೈನ್ ಸ್ಮೋಕರ್; ಚಿಮ್ನಿಯಂತೆ ಹೊಗೆ ಬಿಡ್ತಾರೆ ಎನ್ನುತ್ತಲೇ ಶಾರುಖ್ರ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಹಿರಿಯ ನಟ ಗೋವಿಂದ ನಾಮದೇವ.
ಶಾರುಖ್ ಖಾನ್ ಅವರು ಬಾಲಿವುಡ್ನಲ್ಲಿ ಛಾಪು ಮೂಡಿಸಿರುವ ನಟ. ಇವರನ್ನು ಅನುಸರಿಸಿ ಲಕ್ಷಾಂತರ ಮಂದಿ ಇವರನ್ನು ಫಾಲೋ ಮಾಡುತ್ತಿದ್ದಾರೆ. ಇವರಂತೆಯೇ ವೇಷ ಭೂಷಣ, ಹ್ಯಾಬಿಟ್ ಎಲ್ಲವನ್ನೂ ಅನುಸರಿಸುವ ಜನರ ದಂಡೇ ಇದೆ. ಆದರೆ ಇದೇ ವೇಳೆ ಶಾರುಖ್ ಖಾನ್ ಅವರ ಚೈನ್ ಸ್ಮೋಕಿಂಗ್ ಅಭ್ಯಾಸದ ಕುರಿತು ಶಾಕಿಂಗ್ ಹೇಳಿಕೆ ನೀಡಿದ್ದಾರೆ ಹಿರಿಯ ನಟ ಗೋವಿಂದ ನಾಮದೇವ್ ಅವರು. ಸಂದರ್ಶನವೊಂದರಲ್ಲಿ ಅವರು ಸಲ್ಮಾನ್ ಖಾನ್ ಮತ್ತು ಶಾರುಖ್ ಕುರಿತು ಹೇಳಿದ್ದಾರೆ. ಸಲ್ಮಾನ್ ಖಾನ್ ಶೂಟಿಂಗ್ ಸೆಟ್ನಲ್ಲಿ ಯಾರ ಜೊತೆಯೂ ಮಾತನಾಡುವುದಿಲ್ಲ, ಆದರೆ ಶಾರುಖ್ ಎಲ್ಲರ ಜೊತೆಯೂ ಮಿಂಗಲ್ ಆಗಿರುತ್ತಾರೆ. ಅವರ ಕೆಲಸದ ಪರಿಗೆ ಅವರೇ ಸಾಟಿ, ದಿನದ 24 ಗಂಟೆ ಬೇಕಾದರೂ ದುಡಿಯುತ್ತಾರೆ ಎಂದೆಲ್ಲಾ ಹೊಗಳಿರುವ ಗೋವಿಂದ ಅವರು ಸ್ಮೋಕಿಂಗ್ ವಿಷಯದ ಬಗ್ಗೆಯೂ ಮಾತನಾಡಿದ್ದಾರೆ.
ಶಾರುಖ್ ಅವರು ವಿಭಿನ್ನ ವ್ಯಕ್ತಿತ್ವ. ಅವರು ಎಲ್ಲರಂತಲ್ಲ. ಆದರೆ ಅವರು ಚೈನ್ ಸ್ಮೋಕರ್, ಒಮ್ಮೆ ಸಿಗರೆಟ್ ಶುರು ಮಾಡಿದರು ಎಂದರೆ ಚಿಮ್ನಿ ಬಿಟ್ಟಂತೆ ಹೊಗೆ ಬಿಡುತ್ತಲೇ ಇರುತ್ತಾರೆ. ಧಮ್ ಹೊಡೆಯುವುದು ಅವರಿಗೆ ಅವರಿಗೆ ತುಂಬಾ ಇಷ್ಟ ಎಂದಿದ್ದಾರೆ. ಅಷ್ಟಕ್ಕೂ ಕೆಲ ತಿಂಗಳ ಹಿಂದೆ ಖುದ್ದು ಶಾರುಖ್ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದರು. ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ, ಈ ವಿಷಯವನ್ನು ಅವರು ಹೇಳಿದ್ದರು. ಇದಕ್ಕೂ ಮುನ್ನ ಅಂದರೆ 2011 ರಲ್ಲಿ ಶಾರುಖ್ ಖಾನ್ ಅವರು ಸಂದರ್ಶನವೊಂದರಲ್ಲಿ ತಮ್ಮ ಧೂಮಪಾನದ ಅಭ್ಯಾಸದ ಬಗ್ಗೆ ಮಾತನಾಡಿದ್ದರು. ‘ನನಗೆ ನಿದ್ದೆ ಬರುತ್ತಿಲ್ಲ’ ಎಂದಿದ್ದರು. ಆ ಸಮಯದಲ್ಲಿ ತಮಗಿದ್ದ ಸ್ಮೋಕಿಂಗ್ ಅಭ್ಯಾಸದ ಕುರಿತು ಮಾತನಾಡಿದ್ದರು. ನಾನು ಸುಮಾರು 100 ಸಿಗರೇಟ್ (cigarette) ಸೇದುತ್ತೇನೆ. ಅದು ಎಷ್ಟರ ಮಟ್ಟಿಗೆ ತೀವ್ರವಾಗಿರುತ್ತದೆ ಎಂದರೆ, ಸ್ಮೋಕಿಂಗ್ ಮಾಡುತ್ತಾ ತಿನ್ನುವುದನ್ನೂ ಸಹ ಮರೆತುಬಿಡುತ್ತೇನೆ. ಅಷ್ಟೇ ಅಲ್ಲ ನಾನು ನೀರು ಕೂಡ ಕುಡಿಯುವುದಿಲ್ಲ. ಒಟ್ಟಾರೆಯಾಗಿ ನಾನು ಮೂವತ್ತು ಕಪ್ ಕಪ್ಪು ಕಾಫಿ ಕುಡಿಯುತ್ತೇನೆ. ಇದೇ ವೇಳೆ ನನ್ನ ಸಿಕ್ಸ್ ಪ್ಯಾಕ್ ಕಾಪಾಡಿಕೊಳ್ಳುವ ಅಗತ್ಯವೂ ಇದೆ. ಆದರೆ ನಾನು ನನ್ನ ಬಗ್ಗೆ ಕಡಿಮೆ ಕಾಳಜಿ ವಹಿಸುತ್ತೇನೆ ಎಂದಿದ್ದರು.
ಶಾರುಖ್ ಜೊತೆ ನಟಿಸುವಾಗ್ಲೇ ಕಾಜೋಲ್ಗೆ ಗರ್ಭಪಾತ! ಭಯಾನಕ ಘಟನೆ ನೆನಪಿಸಿಕೊಂಡ ನಟಿ
ಇದನ್ನೇ ಕಳೆದ ವರ್ಷ ಅವರ ಫ್ಯಾನ್ ಒಬ್ಬ ಆಸ್ಕ್ ಎಸ್ಆರ್ಕೆ ನಲ್ಲಿ ಕೇಳಿದ್ದರು. ಸ್ಮೋಕಿಂಗ್ ಅಭ್ಯಾಸ ಬಿಟ್ಟಿದ್ದೀರಾ ಎಂದು ಪ್ರಶ್ನಿಸಿದ್ದರು. ಆದರೆ ಇನ್ನೂ ಸ್ಮೋಕಿಂಗ್ ಅಭ್ಯಾಸವನ್ನು ಬಿಡದ್ದದ್ದನ್ನು ಶಾರುಖ್ ಪರೋಕ್ಷವಾಗಿ ಹೇಳಿಕೊಂಡಿದ್ದರು. ತಮ್ಮ ಸುತ್ತಲೂ ಕ್ಯಾನ್ಸರ್ ಕಡ್ಡಿಯ ಹೊಗೆ (ಸಿಗರೇಟ್) ಸುತ್ತುತ್ತಲೇ ಇದೆ ಎಂದಿದ್ದರು. ಇನ್ನು ಹಲವರು ದಿನವೊಂದಕ್ಕೆ 100 ಸಿಗರೇಟ್ ಸ್ಮೋಕ್ (smoking) ಮಾಡುವ ತಮ್ಮ ನೆಚ್ಚಿನ ತಾರೆಯ ವಿಷಯ ಕೇಳಿ ದಂಗಾಗಿ ಹೋಗಿದ್ದಾರೆ.
ನಿಜವಾಗಿಯೂ ಶಾರುಖ್ ಈ ಪರಿಯ ಧೂಮಪಾನ ವ್ಯಸನಿಯೇ ಅಥವಾ ಇದನ್ನು ತಮಾಷೆಯಾಗಿ ಹೇಳುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಆದರೆ ಹಿಂದಿನ ಸಂದರ್ಶನವನ್ನು ನೋಡಿದರೆ ಶಾರುಖ್ ಅವರು ನಿಜವಾಗಿಯೂ ಈ ಪರಿಯ ಧೂಮಪಾನ ವ್ಯಸನಿ ಎನ್ನುವುದು ತಿಳಿದಿದೆ ಎಂದು ಇನ್ನು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟೊಂದು ಬಿಜಿ ಶೆಡ್ಯೂಲ್ ನಡುವೆ ಅಷ್ಟೆಲ್ಲಾ ಸ್ಮೋಕ್ ಮಾಡಲು ಟೈಮ್ ಎಲ್ಲಿರುತ್ತದೆ ಎಂದು ಇನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ. ಇದೇ ವಿಷಯವನ್ನು ಇದೀಗ ಗೋವಿಂದ ಅವರು ಹೇಳಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಲೇ ಅಭಿಮಾನಿಗಳು ದಯವಿಟ್ಟು ಈ ಅಭ್ಯಾಸ ಬಿಟ್ಟು ಬಿಡಿ ಎನ್ನುತ್ತಿದ್ದಾರೆ. ನಿಮ್ಮನ್ನು ಫಾಲೋ ಮಾಡುವವರ ಸಂಖ್ಯೆ ಬಹು ದೊಡ್ಡದಿದೆ. ನೀವು ಸೇವನೆ ಮಾಡಿದರೆ, ಅದು ಇತರರಿಗೂ ಮಾದರಿಯಾಗಿ ಬಿಡುತ್ತದೆ. ಇದು ಒಳ್ಳೆಯದಲ್ಲ ಎಂದಿದ್ದಾರೆ. ಆದರೆ ಇಂಥ ನುಡಿಗಳನ್ನು ಶಾರುಖ್ ಅದೆಷ್ಟೋ ಬಾರಿ ಕೇಳಿಸಿಕೊಂಡಾಗಿದೆ. ಸದ್ಯ ಬಿಡುವಂತೆ ಕಾಣುತ್ತಿಲ್ಲ.
ಕಾಜೋಲ್ ಹುಟ್ಟುಹಬ್ಬ: ನಟಿಯ ಜೊತೆ ಮಂಚ ಏರುವ ಆಸೆ ಇತ್ತಾ ಶಾರುಖ್ಗೆ? ಹಳೆಯ ವಿಡಿಯೋ ವೈರಲ್
