ನೆಗೆಟಿವ್ ಶೇಡ್ ಹೆಚ್ಚಿದೆ ಎಂದು ಸಿನಿಮಾ ರಿಜೆಕ್ಟ್ ಮಾಡಿದ ಡಾ.ರಾಜ್‌ಕುಮಾರ್. ಟೈಗರ್ ಪ್ರಭಾಕರ್ ಕೈ ಸೇರಿತ್ತು ಈ ಕಥೆ.....
70-80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಒಟ್ಟೊಟ್ಟಿಗೆ ಮೂರ್ನಾಲ್ಕು ಭಾಷೆಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಈಗ ಫ್ಯಾನ್ ಇಂಡಿಯಾ ಸಿನಿಮಾ ಓಡುತ್ತಿದೆ ಆಗ ರಿಮೇಕ್ ಸಿನಿಮಾಗಳ ಕಾಲವಾಗಿತ್ತು. ಸ್ಟಾರ್ ನಟ ನಟಿಯರು ಕೂಡ ರಿಮೇಕ್ ಸಿನಿಮಾಗಳಿಗೆ ಸೈ ಎನ್ನುತ್ತಿದ್ದರು. ಅದರಲ್ಲೂ ಡಾ.ರಾಜ್‌ಕುಮಾರ್ ಹೆಚ್ಚಾಗಿ ಸ್ವಮೇಕ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಸಿನಿಮಾಗಳು ಉತ್ತುಂಗಕ್ಕೆ ಹೋಗಲು ಕಾರಣವಾಗಿದ್ದು ವಜ್ರೇಶ್ವರಿ ಕಂಬೈನ್ಸ್‌ನ ಸ್ವಮೇಕ್ ಸಿನಿಮಾಗಳಿಂದ ಅಂದ್ರೆ ತಪ್ಪಾಗದು. ಹೀಗೆ ಅಣ್ಣಾವ್ರ ಕೈ ಸೇರಿದ ರಿಮೇಕ್ ಸಿನಿಮಾ ಟೈಗರ್ ಪಾಲಾಗಿದ್ದು ಹೇಗೆ ಅಂತ ಇಲ್ಲಿದೆ....
ಕನ್ನಡ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಟೈಗರ್ ಪ್ರಭಾಕರ್ ದೊಡ್ಡ ಕಲಾವಿದರ ಜೊತೆ ತೆರೆ ಹಂಚಿಕೊಂಡಿದ್ದಾರೆ. ನಾಯಕನಾಗಿ ಯಶಸ್ಸು ಕಂಡ ನಟ ಖಡಕ್ ವಿಲನ್ ಆಗಿ ಮಿಂಚಲು ಶುರು ಮಾಡಿದ್ದರು. ಟೈಗರ್ ಪ್ರಭಾಕರ್ ನಾಯಕನಾಗಿ ಮಿಂಚಲು ಬ್ರೇಕ್ ಕೊಟ್ಟ ಸಿನಿಮಾನೇ ಮುತ್ತೈದೆ ಭಾಗ್ಯ. ಈ ಚಿತ್ರವನ್ನು ಡಾ. ರಾಜ್‌ಕುಮಾರ್ ನಟಿಸಬೇಕಿತ್ತಂತೆ. ಹಿರಿಯ ಪತ್ರಕರ್ತ ಮತ್ತು ಪ್ರಭಾಕರ್ ಆಪ್ತರಾಗಿದ್ದ ಎನ್ ಎಸ್ ಶ್ರೀಧರ ಮೂರ್ತಿ ಅವರು ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಸೀರಿಯಲ್ ಬಿಟ್ಟು ಸೀರೆ ವ್ಯಾಪಾರಕ್ಕೆ ಇಳಿದ ನಟಿ ನಯನಾ; ಲಕ್ಷ ಲಕ್ಷ ದುಡಿಯುತ್ತಿರುವ ಸುಂದರಿ!
ತಮಿಳಿನಲ್ಲಿ ಶಿವಾಜಿ ಗಣೇಶನ್ ನಟಿಸಿದ್ದ ಚಿತ್ರದ ರಿಮೇಕ್ ರೈಟ್ಸ್‌ನ ನಿರ್ದೇಶಕ ಕೆ ಎಸ್ ಎಲ್ ಸ್ವಾಮಿ ಕನ್ನಡಕ್ಕೆ ತಂದರು. ಈ ಕಥೆ ಅಣ್ಣಾವ್ರಿಗೆ ಸೂಟ್ ಆಗುತ್ತೆ ಅಂದುಕೊಂಡರು ಆದರೆ ಸ್ವಲ್ಪ ನೆಗೆಟಿವ್ ಶೇಟ್ ಇದೆ ಎನ್ನುವ ಕಾರಣ ಡಾ.ರಾಜ್‌ಕುಮಾರ್ ಬೇಡ ಎಂದುಬಿಟ್ಟರು. ಅಣ್ಣಾವ್ರು ಕೈ ಬಿಟ್ಟ ಸಿನಿಮಾವನ್ನು ಯಾರು ಒಪ್ಪಲ್ಲ ಅಂದುಕೊಂಡಿದ್ದು ಆದರೆ ಸ್ವಾಮಿ ಅವರ ಪತ್ನಿ ಯಾಕೆ ಪ್ರಭಾಕರ್ ಮಾಡಬಾರದು ಎಂದು ಚರ್ಚೆ ಮಾಡಿ ಸಲಹೆ ಕೊಟ್ಟರಂತ. ಶಿವಾಜಿ ಗಣೇಶನ್ ಸಿನಿಮಾ ನೋಡಿದ ಪ್ರಭಾಕರ್ ಇದು ನಾನು ಮಾಡುವ ವಿಲನ್ ಪಾತ್ರ ಮಾಡುವವನು ನನಗೆ ಸೂಟ್ ಆಗಲ್ಲ ಅಂದಿದ್ದರಂತೆ. ಕೊನೆಗೆ ನಿರ್ದೇಶಕರು ಪ್ರಭಾಕರ್‌ರನ್ನು ಒಪ್ಪಿಸಿ ಆರತಿಯನ್ನು ಜೋಡಿ ಮಾಡಿದ್ದರು.
ಬಿಗ್ ಬಾಸ್ ಕೈ ಬಿಟ್ರಾ ಕಿಚ್ಚ ಸುದೀಪ್; 'ಕಾಂತಾರ' ಕಿಂಗ್ ರಿಷಬ್ ಶೆಟ್ಟಿ ಹೊಸ ಹೋಸ್ಟ್?
ಇದೇ ಮುತ್ತೈದೆ ಭಾಗ್ಯ ಸಿನಿಮಾ 25 ವಾರ ಪ್ರದರ್ಶನ ಕಂಡಿತ್ತು, ಇಲ್ಲಿ ಟೈಗರ್ ಪ್ರಭಾಕರ್ ಅಪಾರ ಸಂಖ್ಯೆಯಲ್ಲಿ ಮಹಿಳಾ ಅಭಿಮಾನಿಗಳನ್ನು ಗಳಿಸಿದ್ದರು.