ಈಗ ಈ ಸುದ್ದಿ ಕಾರ್ಡ್ ರೂಪದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಅಂದು ಪುನೀತ್ ರಾಜ್‌ಕುಮಾರ್ ನಟನೆಯ ಮೂರನೆಯ ಸಿನಿಮಾ ಆಗಿದ್ದ 'ಅರಸು' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು 'ಅತಿಥಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದರು...
ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ನಾಯಕತ್ವದ 'ಅರಸು' ಸಿನಿಮಾದಲ್ಲಿ ನಟ ದರ್ಶನ್ (Darshan)ಗೆಸ್ಟ್ ರೋಲ್ ಮಾಡಿದ್ದಾರೆ. ಆ ಬಗ್ಗೆ ಕೇಳಿ ರಾಘವೇಂದ್ರ ರಾಜ್‌ಕುಮಾರ್ ಅವರು ಕಾಲ್ ಮಾಡಿದಾಗ ನಟ ದರ್ಶನ್ ಆಡಿದ್ದ ಮಾತುಗಳನ್ನು ಸ್ವತಃ ರಾಘಣ್ಣ ಅವರೇ ಒಮ್ಮೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅದನ್ನು ಬರವಣಿಗೆಯಲ್ಲಿ ಹೊತ್ತಿರುವ ಫೋಟೋ ಕ್ಲಿಪಿಂಗ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಿದ್ದರೆ ಅದರಲ್ಲೇನಿದೆ ನೋಡಿ..
'ರಾಘಣ್ಣಾ, ನೀವು ನನಗೆ ರಿಕ್ವೆಸ್ಟ್ ಮಾಡೋ ಅವಶ್ಯಕತೆ ಇಲ್ಲ. ನೀವು ಬಂದು ಮಾಡಿಕೊಡು ಅನ್ಬೇಕು ಅಷ್ಟೇ. ನಮ್ಮ ಅಪ್ಪಾಜಿನೇ ನಿಮ್ ಜತೆ ನಟಿಸ್ಬೇಕಾದ್ರೆ ಕಥೆ ಕೇಳಿಲ್ಲ. ಇನ್ನು ನಾನು ಕೇಳ್ತೀನಾ?' ಎಂದಿದ್ದರಂತೆ. ಜೊತೆಗೆ, 'ಸಂಭಾವನೆ ಕೊಟ್ರೆ ನಾನು ಮಾಡಲ್ಲ..' ಎಂದಿದ್ರಂತೆ. ಈ ಫೋಟೋ ಕಾರ್ಡ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಸದ್ಯ ಕನ್ನಡದ ಸ್ಟಾರ್ ನಟ ದರ್ಶನ್ ಅವರು ಕೊಲೆ ಕೇಸ್ ಆರೋಪಿಯಾಗಿದ್ದು ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದಾರೆ. ನಟ ಪುನೀತ್ ನಮ್ಮನ್ನಗಲಿದ್ದಾರೆ.
undefined
ನಟ ದರ್ಶನ್ ಹಾಗೂ ಡಾ ರಾಜ್‌ಕುಮಾರ್ ಕುಟುಂಬದ ಸಂಬಂಧ ಮೊದಲು ತುಂಬಾ ಚೆನ್ನಾಗಿತ್ತು ಎನ್ನಲಾಗಿದೆ. ಅಂದರೆ, ರಾಜ್‌ಕುಮಾರ್-ಪಾರ್ವತಮ್ಮ ಹಾಗೂ ತೂಗುದೀಪ ಶ್ರೀನಿವಾಸ್-ಮೀನಾ ಅವರೆಲ್ಲರೂ ತುಂಬಾ ಅನ್ಯೋನ್ಯವಾಗಿದ್ದರು ಎನ್ನಲಾಗಿದೆ. ಅದಕ್ಕಾಗಿಯೇ ಮೈಸೂರಿನಲ್ಲಿ ನಟ ತೂಗುದೀಪ ಶ್ರೀನಿವಾಸ್ ಅವರು ತಾವು ಕಟ್ಟಿರುವ ಮನೆಗೆ 'ಮುಪಾ' ಕೃಪಾ (ಮತ್ತುರಾಜ್-ಪಾರ್ವತಮ್ಮ) ಎಂದು ಹೆಸರಿಟ್ಟಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಅವರು ಸಹ ದೊಡ್ಮನೆ ಕುಟುಂಬದ ಜೊತೆ ಚೆನ್ನಾಗಿಯೇ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಅವರ ನಡುವೆ ಏನೋ ಸ್ವಲ್ಪ ವೈಮನಸ್ಯ ತಲೆದೋರಿರಬಹುದು ಎನ್ನಲಾಗುತ್ತಿದೆ. ನಿಜವಾಗಿಯೂ ನಟ ದರ್ಶನ್ ಹಾಗೂ ಡಾ ರಾಜ್ ಕುಟುಂಬದ ಮಧ್ಯೆ ಮನಸ್ತಾಪ ಇದೆಯೋ ಅಥವಾ ಅದೊಂದು ಸಮ್ಮನೇ ಹಬ್ಬಿರುವ ಗಾಳಿಸುದ್ದಿಯೋ ಎಂಬುದು ಯಾರಿಗೂ ಗೊತ್ತಿಲ್ಲ. ಆ ಬಗ್ಗೆ ಅವರಲ್ಲಿ ಯಾರೂ ಕೂಡ ಅಧಿಕೃತವಾಗಿ ಹೇಳಿಲ್ಲ.
ಆದರೆ, ಈಗ ಈ ಸುದ್ದಿ ಕಾರ್ಡ್ ರೂಪದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಅಂದು ಪುನೀತ್ ರಾಜ್‌ಕುಮಾರ್ ನಟನೆಯ ಮೂರನೆಯ ಸಿನಿಮಾ ಆಗಿದ್ದ 'ಅರಸು' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು 'ಅತಿಥಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಗಾಳಿಸುದ್ದಿಯೇನಲ್ಲ, ಅಧಿಕೃತವೇ. ಅಂದು ಅವರೆಲ್ಲರೂ ಚೆನ್ನಾಗಿ ಇದ್ದರು ಎಂಬದಂತೂ ಸತ್ಯ. ಇಂದು ಆ ಎರಡು ಕುಟುಂಬಗಳ ಮಧ್ಯೆ ಇರುವ ಸಂಬಂಧ ಸರಿಯಾಗಿಲ್ಲ ಎನ್ನವು ಸುದ್ದಿಗೆ ಯಾವುದೇ ಆಧಾರವಿಲ್ಲ.
ಇದೀಗ ಓಡಾಡುತ್ತಿರುವ ಈ ಕಾರ್ಡ್, ಅವರೆಲ್ಲರ ಮಧ್ಯೆ ಸಂಬಂಧ ಸರಿಯಾಗಿಯೇ ಇದೆ ಎನ್ನುವುದಕ್ಕೆ ಸಾಕ್ಷಿ ಎನ್ನಬಹುದಲ್ಲ!. ಯಾವಾಗಲೂ ಯಾಕೆ ಯಾರದೋ ಮಧ್ಯೆ ಸಂಬಂಧ ಸರಿಯಿಲ್ಲ, ಅವರ ಮಧ್ಯೆ ವೈಮನಸ್ಯ ಇದೆ ಎಂದೆಲ್ಲಾ ಯೋಚಿಸಬೇಕು? ಎಲ್ಲರೂ ಚೆನ್ನಾಗಿಯೇ ಇರಬಹುದು. ಪರಿಸ್ಥಿತಿಗೆ ಸರಿಯಾಗಿ ಬೇಕಾದಂತೆ ಎಲ್ಲರೂ ನಡೆದುಕೊಂಡಿರಬಹುದು ಎಂದುಕೊಳ್ಳಬಹುದಲ್ಲ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.