ನಟ ವಿನೋದ್ ರಾಜ್ ಅವರು ತಮ್ಮ ಪತ್ನಿ ಮತ್ತು ಮಗನ ಕುರಿತು ಎಲವೊಂದು ಮಾತುಗಳನ್ನಾಡಿದ್ದಾರೆ. ಅವರು ಹೇಳಿದ್ದೇನು?
'ನನ್ನಮ್ಮ ಮತ್ತು ಪತ್ನಿ ಚೆನ್ನಾಗಿ ಇದ್ದರು. ಇಬ್ಬರ ನಡುವೆ ಒಡನಾಟ, ಬಾಂಧವ್ಯ ಚೆನ್ನಾಗಿ ಇತ್ತು. ಆದರೆ, ಪರಿಸ್ಥಿತಿ ಆಕೆಯನ್ನು ತಮಿಳುನಾಡಿನ ಕಡೆಗೆ ಹೋಗುವಂತೆ ಮಾಡಿತು. ಆಕೆ ತುಂಬಾ ದೊಡ್ಡ ತ್ಯಾಗ ಮಾಡಿದ್ದಾರೆ. ನನಗೆ ಚಿತ್ರಗಳಿಂದ ಬರುತ್ತಿದ್ದ ಸಂಭಾವನೆ ಹೆಚ್ಚು ಇರಲಿಲ್ಲ. ಅದರಲ್ಲಿ ಎಲ್ಲರನ್ನೂ ನೋಡಿಕೊಳ್ಳುವುದು ಕಷ್ಟವಾಗಿತ್ತು. ಚೆನ್ನೈನಲ್ಲಿ ಆಸ್ತಿ ಇದ್ದರೂ ಅದು ಬಿಕೋ ಎನ್ನುತ್ತಿತ್ತು. ಅದಕ್ಕಾಗಿ ಆಸ್ತಿ ನೋಡಿಕೊಳ್ಳಲು ಪತ್ನಿಗೆ ಅಲ್ಲಿ ಕಳುಹಿಸುವ ಅನಿವಾರ್ಯತೆ ಉಂಟಾಯಿತು. ಅಲ್ಲಿ ಮನೆ ಮಾಡಿ ನೀನು ಅಲ್ಲಿ ಇರು, ಮಗಗನ್ನು ಓದಿಸು, ನನ್ನ ಮೊಮ್ಮಗ ಚೆನ್ನಾಗಿ ಓದಬೇಕು ಅಂತಾ ಅಮ್ಮ ಹೇಳಿ ಪತ್ನಿ ಮತ್ತು ಮಗನನ್ನು ಅಲ್ಲಿ ಕಳುಹಿಸಿದರು. ಈಗ ಅಲ್ಲಿಯೇ ಮಗನೂ ಓದಿ ಕೆಲಸ ಮಾಡುತ್ತಿದ್ದಾನೆ. ಇಬ್ಬರೂ ಚೆನ್ನಾಗಿದ್ದಾರೆ. ಇಲ್ಲಿ ನಮ್ಮ ಜೊತೆಗಿದ್ದರವರು ನನ್ನ ತಾಯಿಯನ್ನು ನೋಡಿಕೊಂಡರು. ನನ್ನ ಪತ್ನಿ ಇಲ್ಲಿ ಇರಬೇಕು ಎಂದರೂ ಆಗುವುದಿಲ್ಲ...' ಎನ್ನುತ್ತಲೇ ಪತ್ನಿ ಮತ್ತು ಮಗನ ಬಗ್ಗೆ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ ನಟ ವಿನೋದ್ ರಾಜ್.
ಯೂಟ್ಯೂಬ್ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿನೋದ್ ರಾಜ್ ಅವರು ತಮ್ಮ ಪತ್ನಿ ಮತ್ತು ಮಗನ ಕುರಿತು ಮನದಾಳದ ಮಾತುಗಳನ್ನಾಡಿದ್ದಾರೆ. ಅಷ್ಟಕ್ಕೂ, ನಟಿ ಲೀಲಾವತಿ ಅವರ ಸ್ಮರಣಾರ್ಥ ಅವರ ಮಗ, ವಿನೋದ್ ರಾಜ್ ಈಚೆಗಷ್ಟೇ ಅಮ್ಮನ ಸ್ಮಾರಕವನ್ನು ಉದ್ಘಾಟನೆ ಮಾಡಿದ್ದಾರೆ. ಸುಂದರವಾಗಿರುವ ಮಂದಿರವನ್ನು ಕಟ್ಟಿಸಿ ತಮ್ಮ ಇಪ್ಪತೈದನೇ ವರ್ಷದ ಮದುವೆ ವಾರ್ಷಿಕೋತ್ಸವದ ದಿನ ಅಂದರೆ ಡಿಸೆಂಬರ್ 5ರಂದು (ಡಿಸೆಂಬರ್ 05) ಇದರ ಉದ್ಘಾಟನೆ ನೆರವೇರಿಸಿದ್ದಾರೆ. ಮದುವೆ ವಾರ್ಷಿಕೋತ್ಸವದ ಎಂದಾಕ್ಷಣ, ಎಲ್ಲರ ಕಣ್ಣೆದುರಿಗೆ ಬರುವುದು ವಿನೋದ್ ರಾಜ್ ಅವರ ಮದುವೆಯ ವಿಚಾರ. ಏಕೆಂದರೆ ಇದು ಸದಾ ಚರ್ಚೆಯಾಗುತ್ತಿರುವ ವಿಷಯವೇ ಆಗಿದೆ. ಇದಾಗಲೇ ಹಲವಾರು ಬಾರಿ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದರೂ ಇವರ ದಾಂಪತ್ಯ ಜೀವನದ ಬಗ್ಗೆ ಸದಾ ಗಾಳಿಸುದ್ದಿಗಳು ಹರಡುತ್ತಲೇ ಇವೆ. ಅಮ್ಮ ಲೀಲಾವತಿಯವರ ಜೊತೆ ಒಂಟಿಯಾಗಿ ವಾಸಿಸುತ್ತಿದ್ದ ವಿನೋದ್ ರಾಜ್ ಅವರು ಅಮ್ಮ ಬಿಟ್ಟುಹೋದ ಮೇಲೆ ಒಂಟಿಯೆಂದು ಕಣ್ಣೀರು ಹಾಕಿದ್ದು ಇದೆ. ಆದ್ದರಿಂದ ಇವರ ವಿವಾಹ ಜೀವನದ ಬಗ್ಗೆ ಆಗಲೂ ಸಾಕಷ್ಟು ಚರ್ಚೆಯಾಗಿದೆ.
ಆ ಮೂಲ, ಈ ಮೂಲ ಕೇಳಬಾರ್ದು ಎನ್ನುತ್ತಲೇ ಅಮ್ಮನ ಮಲಗುವ ಕೋಣೆ ರಹಸ್ಯ ತೆರೆದಿಟ್ಟ ವಿನೋದ್ ರಾಜ್!
undefined
ತಮ್ಮ ಪತ್ನಿ ತಮಿಳುನಾಡಿನಲ್ಲಿ ಇರುವುದಾಗಿ ತಿಳಿಸಿರುವ ನಟ, ಈ ಬಗ್ಗೆ ಒಂದಿಷ್ಟು ವಿಚಾರಗಳನ್ನು ಹೇಳಿದ್ದಾರೆ. ಸುಮಾರು ಒಂದೂವರೆ ಎಕರೆ ಜಮೀನು ಇದ್ದು, ಅಲ್ಲಿಯೂ ಭತ್ತ ಬೆಳೆಯಲು ಹೇಳಿದ್ದೇನೆ. ನನ್ನ ಪತ್ನಿಗೆ ಭತ್ತ ಬೆಳೆಯುವುದು ಎಂದರೆ ತುಂಬಾ ಇಷ್ಟ. ಇದರ ಜೊತೆಗೆ ಬೆಂಗಳೂರಿನ ಪ್ರಾಪರ್ಟಿಯಲ್ಲಿ ಇರುವಂತೆ ಹಣ್ಣುಗಳ ಗಿಡ, ತೆಂಗಿನ ಮರ ಎಲ್ಲವೂ ಇದೆ. ಬೆಳೆಗಳನ್ನು ಬೆಳೆದು ವಿಡಿಯೋ ಮಾಡಿ ಕಳಿಸ್ತಾ ಇರ್ತಾರೆ. ಅಲ್ಲಿ ಏನಾದರೂ ಅಭಿವೃದ್ಧಿ ಆಗಬೇಕಿದ್ದರೆ ನಾನು ಇಲ್ಲಿಂದ ಸಲಹೆ ಕೊಡುತ್ತೇನೆ ಎಂದಿದ್ದಾರೆ ವಿನೋದ್ ರಾಜ್.
ನಾನಿಲ್ಲಿ, ಅವರಲ್ಲಿ ತುಂಬಾ ಬೇಜಾರು ಆಗುವುದು ಇದೆ. ಅವರು ಕೂಡ ತುಂಬಾ ಬೇಜಾರು ಮಾಡಿಕೊಳ್ಳುತ್ತನೇ ಇರುತ್ತಾರೆ. ಅದರೆ ನನ್ನ ಅಮ್ಮನನ್ನು ನೋಡಿಕೊಳ್ಳಲು ನಾನು ಇಲ್ಲಿ ಇರಬೇಕಿತ್ತು. ಅದಕ್ಕಾಗಿ ನನ್ನ ಮಗನಿಗೆ ಸದಾ ಹೇಳ್ತಾನೇ ಇದ್ದೆ.ನಾನು ಇಲ್ಲಿ ನನ್ನ ಅಮ್ಮನನ್ನು ನೋಡಿಕೊಳ್ತೇನೆ. ನೀನು ಅಲ್ಲಿ ನಿನ್ನ ಅಮ್ಮನನ್ನು ನೋಡಿಕೋ ಎಂದು. ಆದರೆ ಅಮ್ಮ ಅಳ್ತಾರೆ, ಬಾ ಅಂತಾನೆ, ಆಗ ನಾನೇ ಸಮಾಧಾನ ಮಾಡ್ತೇನೆ. ಇಲ್ಲಿ ನನ್ನ ಅಮ್ಮ ಅತ್ತಾಗ ನಾನು ಸಮಾಧಾನ ಮಾಡ್ತೇನೆ, ನೀನು ಅಲ್ಲಿ ಅವಳಿಗೆ ಸಮಾಧಾನ ಮಾಡು ಅಂತೇನೆ ಎಂದು ವಿನೋದ್ ರಾಜ್ ಹೇಳಿದ್ದಾರೆ. ತಮ್ಮ ಮಗನ ಗುಣಗಾನ ಮಾಡಿರುವ ಅವರು, ನನ್ನ ಮಗು ತುಂಬಾನೇ ಒಳ್ಳೆಯವ. ಯಾವಾಗ್ಲೂ ಎದುರು ಮಾತನಾಡಿದ್ದೇ ಇಲ್ಲ. ನಾನು ಹೇಳಿದಂತೆ ಕೇಳ್ತಾನೆ. ಅಮ್ಮನನ್ನು ಸಮಾಧಾನ ಮಾಡ್ತಾನೆ.ಇಬ್ಬರಿಗೂ ಒಳ್ಳೆಯದಾಗಲಿ ಎನ್ನುವುದೇ ನನ್ನ ಆಶಯ. ಇಬ್ರಿಗೂ ಒಳ್ಳೆಯದಾಗಬೇಕು ಅಷ್ಟೇ ಎಂದಿದ್ದಾರೆ. ಸಾಫ್ಟ್ವೇರ್ ಇಂಜಿನಿಯರಿಂಗ್ ಆಗಿ ಕೆಲ್ಸ ಮಾಡುತ್ತಿದ್ದಾನೆ ಮಗ. ಜೊತೆಗೆ ಒದ್ತೇನೆ ಎನ್ನುತ್ತಾನೆ. ಎಷ್ಟು ಬೇಕಾದರೂ ಓದು ಎನ್ನುತ್ತೇನೆ. ಒಟ್ಟಿನಲ್ಲಿ ಅವರು ಚೆನ್ನಾಗಿ ಇರಬೇಕು. ಕೆಲಸ ಮಾಡ್ಕೊಂಡು ಸಂಸಾರ ಸರಿದೂಗಿಸಿಕೊಂಡು ಹೋಗಬೇಕು. ಇವೆಲ್ಲಾ ಮಾಡಲು ಸಾಕಷ್ಟು ಅನುಭವನೂ ಬೇಕು. ಅದನ್ನೆಲ್ಲಾ ಅವನು ಪಡೆಯುತ್ತಾನೆ. ಸಮಯ ಬಂದಾಗ ಅವನಿಗೂ ಎಲ್ಲಾ ಅನುಭವ ಬರುತ್ತದೆ' ಎಂದಿದ್ದಾರೆ ವಿನೋದ್ ರಾಜ್.
ಮದ್ವೆಯಾಗಿ 25 ವರ್ಷಕ್ಕೆ 24 ಮಕ್ಕಳು! ಗಂಡನ ಗುಟ್ಟು ಬಿಚ್ಚಿಟ್ಟು ಎಲ್ಲರನ್ನೂ ಬೆಚ್ಚಿಬೀಳಿಸಿದ ಮಹಿಳೆ!