
ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ನಟನೆಯ ಮ್ಯಾಕ್ಸ್ ಸಿನಿಮಾ ಇಂದು, ಅಂದರೆ 25 ಡಿಸಂಬರ್ 2024ರ ಕ್ರಿಸ್‌ಮಸ್ ದಿನ ಬಿಡುಗಡೆ ಆಗಿದೆ. ಕನ್ನಡ ಸೇರಿದಂತೆ, ತಮಿಳು ಹಾಗೂ ತೆಲುಗು ಹೀಗೆ ಮೂರು ಭಾಷೆಗಳಲ್ಲಿ ಬಿಡುಗಡೆ ಕಂಡಿರುವ ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾವನ್ನು ಕಿಚ್ಚ ಅಭಿಮಾನಿಗಳು ಮೆಚ್ಚಿ ಕೊಂಡಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ವರಲಕ್ಷ್ಮೀ ಶರತ್‌ಕುಮಾರ್ ಅವರು ನಟ ಕಿಚ್ಚ ಸುದೀಪ್ ಅವರಿಗೆ ಜೋಡಿಯಾಗಿದ್ದಾರೆ. ಆದರೆ, ಅವರಿಲ್ಲಿ ನಾಯಕಿ ಎನ್ನುವಂತಿಲ್ಲ, ಒಂದು ಪಾತ್ರವೆಂಬಂತೆ ಇದ್ದಾರೆ. ಕಾರಣ, ಈ ಚಿತ್ರದ ಕಥೆಯಲ್ಲಿ ನಾಯಕಿ ಅಗತ್ಯವಿಲ್ಲ.
ಕಿಚ್ಚ ಸುದೀಪ್ ಅವರು ಕನ್ನಡ ಮೂಲದ ನಟರಾದರೂ ಅವರು ಪ್ಯಾನ್ ಇಂಡಿಯಾ ಲೆವೆಲ್ ಸ್ಟಾರ್ ನಟ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಹಿಂದಿ, ತಮಿಳು, ತೆಲುಗು ಮಲಯಾಳಂ ಹಾಗೂ ಬಾಲಿವುಡ್ ಚಿತ್ರರಂಗಗಳಲ್ಲಿ ಕೂಡ ಕಿಚ್ಚ ಸುದೀಪ್ ಅವರು ನಟಿಸಿದ್ದಾರೆ. ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಇಂಥ ನಟ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರವು ಬಿಡುಗಡೆ ಆಗಿದ್ದು, ಇದೀಗ ಮೊದಲ ಶೋ ಮುಗಿದು ಪ್ರೇಕ್ಷಕರಿಂದ ಉತ್ತರ ರೆಸ್ಪಾನ್ಸ್ ಸಿಕ್ಕಿದೆ.
ಶಿವರಾಜ್‌ಕುಮಾರ್ ಸರ್ಜರಿ ಸಕ್ಸಸ್ ಆಯ್ತು, ಮುಂದೆ ಏನೇನು ಆಗ್ಬೇಕಿದೆ? ಅಪ್ಡೇಟ್ ಇಲ್ಲಿದೆ!
ಈ ಮೊದಲೇ ಅವರು ನಟ ಸುದೀಪ್ ಅವರು ತಮ್ಮ ಮ್ಯಾಕ್ಸ್ ಚಿತ್ರದ ಕುರಿತು 'ನನ್ನ ಮ್ಯಾಕ್ಸ್ ಸಿನಿಮಾ ಒಂದು ಸಿಂಪಲ್ ಸಿನಿಮಾ. ಇದು ಪ್ಯಾನ್ ಇಂಡಿಯಾ ಆಗಲೀ ಅಥವಾ ತುಂಬಾ ನಿರೀಕ್ಷೆ ಇಟ್ಟುಕೊಳ್ಳುವಂತ ಸಿನಿಮಾ ಅಲ್ಲ. ಬಿಗ್ ಬಜೆಟ್, ಬಹು ತಾರಾಗಣ ಹೀಗೆ ಯಾವುದೇ ಅದ್ದೂರಿತನ ಇದರಲ್ಲಿಲ್ಲ. ಆದರೆ, ಚಿತ್ರದ ಕಥೆ ವಿಭಿನ್ನವಾಗಿದ್ದು, ನಿರ್ದೇಶಕರು ಹೊಸತನದ ಹೊಸ ಥಾಟ್ ಇಟ್ಟುಕೊಂಡು ಮ್ಯಾಕ್ಸ್ ಮಾಡಿದ್ದಾರೆ. ನೋಡಿ ಹಾರೈಸಿ' ಎಂದಿದ್ದರು.
ಈಗ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಮ್ಯಾಕ್ಸ್ ಚಿತ್ರವು ಸಿಂಪಲ್ ಕಥೆ ಹಾಗೂ ವಿಭಿನ್ನ ನಿರೂಪಣೆ ಮೂಲಕ ಗಮನ ಸೆಳೆಯುತ್ತಿದೆ ಎನ್ನಲಾಗಿದೆ. ಇಲ್ಲಿ ನಟ ಸುದೀಪ್ ಅವರು ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದು, ಚಿತ್ರವು ಸಂಪೂರ್ಣವಾಗಿ ವಿಭಿನ್ನ ಕಥಾಹಂದರ ಹೊಂದಿದೆ. ಮೊದಲಿನಿಂದಲೂ ನಟ ಸುದೀಪ್ ಅವರು ವಿಭಿನ್ನತೆ ಹೊಂದಿರುವ ಕಥೆಯನ್ನೇ ಆಯ್ಕೆ ಮಾಡಿಕೊಳ್ಳುತ್ತ ಬಂದಿದ್ದಾರೆ. ಕೇವಲ ಆಕ್ಷನ್, ಕೇವಲ ರೀಮೇಕ್ ಅಥವಾ ಫ್ಯಾಮಿಲಿ ಓರಿಯಂಟೆಡ್ ಹೀಗೆ ಯಾವುದಕ್ಕೂ ಬ್ರಾಂಡ್ ಆಗದೇ ನಟರಾಗಿ ಮೇಲೇರುತ್ತಿದ್ದಾರೆ ಸುದೀಪ್.
ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ವೈರಲ್ ವಿಡಿಯೋಗೆ ಪರ ಕಾಮೆಂಟ್‌ಗಳೇ ಜಾಸ್ತಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.