ಶಿವರಾಜ್‌ಕುಮಾರ್ ಸರ್ಜರಿ ಸಕ್ಸಸ್ ಆಯ್ತು, ಮುಂದೆ ಏನೇನು ಆಗ್ಬೇಕಿದೆ? ಅಪ್ಡೇಟ್ ಇಲ್ಲಿದೆ!

Published : Dec 25, 2024, 11:42 AM ISTUpdated : Dec 25, 2024, 03:30 PM IST
ಶಿವರಾಜ್‌ಕುಮಾರ್ ಸರ್ಜರಿ ಸಕ್ಸಸ್ ಆಯ್ತು, ಮುಂದೆ ಏನೇನು ಆಗ್ಬೇಕಿದೆ? ಅಪ್ಡೇಟ್ ಇಲ್ಲಿದೆ!

ಸಾರಾಂಶ

ಶಿವರಾಜ್‌ಕುಮಾರ್ ಅವರ ಅಮೆರಿಕದಲ್ಲಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ವೈದ್ಯ ಮುರುಗೇಶ್ ಮನೋಹರನ್ ಶಿವಣ್ಣನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಗೀತಾ ಶಿವರಾಜ್‌ಕುಮಾರ್ ಹಾಗೂ ಮಧು ಬಂಗಾರಪ್ಪ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಶಿವಣ್ಣ ನಾಲ್ಕು ದಿನಗಳಲ್ಲಿ ವಿಡಿಯೋ ಮೂಲಕ ಮಾತನಾಡಲಿದ್ದಾರೆ. ನಾಲ್ಕು ವಾರಗಳ ವಿಶ್ರಾಂತಿ ಬಳಿಕ ಭಾರತಕ್ಕೆ ವಾಪಸ್ಸಾಗಲಿದ್ದಾರೆ.

ಸ್ಯಾಂಡಲ್‌ವುಡ್ ಸ್ಟಾರ್ ನಟ ಶಿವರಾಜ್‌ಕುಮಾರ್ (Shiva Rajkumar) ಅವರು ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಗೊತ್ತೇ ಇದೆ. ನಿನ್ನೆ ಮಾಡಿರುವ ಶಸ್ತ್ರ ಚಿಕಿತ್ಸೆ ಯಶಸಸ್ವಿಯಾಗಿದ್ದು, ಅದನ್ನು ಮಾಡಿರುವ ವೈದ್ಯರೇ ದೃಢ ಪಡಿಸಿದ್ದಾರೆ. ಈ ಬಗ್ಗೆ ಹೆಲ್ತ್ ಅಪ್‌ಡೇಟ್, ಪ್ರೆಸ್ ನೋಟ್ ಎಲ್ಲವೂ ಬಿಡುಗಡೆ ಆಗಿದ್ದು, ಶಿವಣ್ಣ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲ, ಸ್ವತಃ ಶಿವಣ್ಣ ಅವರಿಗೆ ಚಿಕಿತ್ಸೆ ಮಾಡಿರುವ ವೈದ್ಯರೇ ಮಾತನಾಡಿ ಎಲ್ಲ ಆತಂಕ ದೂರವಾಗುವಂತೆ ಮಾಹಿತಿ ನೋಡಿದ್ದಾರೆ. 

ಜೊತೆಗೆ, ನಟ ಶಿವರಾಜ್‌ಕುಮಾರ್ ಪತ್ನಿ ಗೀತಾ (Geetha Shivarajkumar) ಹಾಗೂ ಗೀತಾ ಅವರ ಸಹೋದರ ಮಧು ಬಂಗಾರಪ್ಪ ಅವರುಗಳೂ ಕೂಡ ವೈದ್ಯರೊಂದಿಗೇ ಕುಳಿತು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಶಿವಣ್ಣ ಅಭಿಮಾನಿಗಳು ಸೇರಿದಂತೆ, ಹಾರೈಸಿದ ಎಲ್ಲರಿಗೂ ಧನ್ಯವಾದವನವ್ನು ಅಲ್ಲಿಂದ ವಿಡಿಯೋ ಸಂದೇಶದ ಮೂಲಕ ನೀಡಿದ್ದಾರೆ. ಇನ್ನು 3-4 ದಿನದಲ್ಲಿ ಸ್ವತಃ ಶಿವಣ್ಣ ಅವರೇ ಅಮೆರಿಕಾ ಆಸ್ಪತ್ರೆಯಿಂದ ವೀಡಿಯೋ ಮೂಲಕ ಮಾತನಾಡಲಿದ್ದಾರೆ ಎಂದು ಪತ್ನಿ ಗೀತಾ ಅವರು ತಿಳಿಸಿದ್ದಾರೆ. 

ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ವೈರಲ್ ವಿಡಿಯೋಗೆ ಪರ ಕಾಮೆಂಟ್‌ಗಳೇ ಜಾಸ್ತಿ!

ಈ  ಬಗ್ಗೆ, ಅಮೆರಿಕಾದಲ್ಲಿ ಶಿವಣ್ಣ ಅವರಿಗೆ ಚಿಕಿತ್ಸೆ ನೀಡಿರುವ ಭಾರತೀಯ ಮೂಲದ ವೈದ್ಯರಾದ ಡಾ ಮುರುಗೇಶ್ ಮನೋಹರನ್ (Dr Murugesh Manoharan) ಅವರು ಹೀಗೆ ಹೇಳಿದ್ದಾರೆ. ಶಿವರಾಜ್ ಕುಮಾರ್ ಆರೋಗ್ಯದ ಕುರಿತು ಮಾಹಿತಿ ಕೊಟ್ಟ ಅಮೆರಿಕಾ ವೈದ್ಯರು ಅಮೇರಿಕದಿಂದ ವೈದ್ಯರ ವಿಡಿಯೋ ಸಂದೇಶದ ಮೂಲಕ ಮಾತಮ್ಮಾಡಿದ್ದಾರೆ. 'ದೇವರ ಆಶೀರ್ವಾದ ಮತ್ತು ಎಲ್ಲರ ಹಾರೈಕೆಯಿಂದ ಸರ್ಜರಿ ಯಶಸ್ವಿಯಾಗಿದೆ. ನಟ ಶಿವರಾಜ್‌ಕುಮಾರ್ ಅವರು ಸರ್ಜರಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. 

ಶಸ್ತ್ರ ಚಿಕಿತ್ಸೆ ನಂತರ ಅವರ ಅರೋಗ್ಯ ಸ್ಥಿರವಾಗಿದೆ. ಆದಷ್ಟು ಬೇಗನೆ ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ..' ಎಂದು 
ಅಮೇರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ವೈದ್ಯರಿಂದ ಅಧಿಕೃತ  ಮಾಹಿತಿ ಹೊರಬಿದ್ದಿದೆ. ಇನ್ನು, ಶಿವಣ್ಣನ ಆರೋಗ್ಯದ ಬಗ್ಗೆ ಅಪ್ಡೇಟ್ ಕೊಟ್ಟ ಗೀತಾ ಶಿವರಾಜ್ ಕುಮಾರ್ ಅವರು 'ನಿಮ್ಮೆಲ್ಲರ ಹಾರೈಕೆಯಿಂದ ಶಿವಣ್ಣ ಆರೋಗ್ಯವಾಗಿದ್ದಾರೆ. ವೈದ್ಯರ ತಂಡ ಅಪರೇಷನ್ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ. ಅಭಿಮಾನಿ ದೇವರುಗಳ ಜೊತೆ ಈಗ ನಮಗೆ ಡಾಕ್ಟರ್ ಕೂಡ ದೇವರಾಗಿದ್ದಾರೆ. 

ನಾನೇ ದರ್ಶನ್‌ಗೆ ಹಣ ನೀಡಿ ಸಿನಿಮಾ ಮಾಡೋ ಶಕ್ತಿ ಇರುವಾಗ ಇಂಥ ಸುದ್ದಿ ಯಾಕೆ ಬೇಕು?

ಸದ್ಯ ಶಿವಣ್ಣರನ್ನ ಐಸಿಯುಗೆ ಶಿಫ್ಟ್ ಮಾಡಿದ್ದಾರೆ. ಇನ್ನು ನಾಲ್ಕು ದಿನದಲ್ಲಿ ಶಿವಣ್ಣ ನಿಮ್ಮ ಜೊತೆ ಮಾತಾಡುತ್ತಾರೆ..' ಎಂದಿದ್ದಾರೆ ಗೀತಾ ಶಿವರಾಜ್‌ಕುಮಾರ್. ಜೊತೆಗೆ, ಮಧು ಬಂಗಾರಪ್ಪನವರು ಕೂಡ ಮಾತನಾಡಿ ಎಲ್ಲ ಅಪ್‌ಡೇಟ್ ನೀಡಿದ್ದಾರೆ. ಒಟ್ಟಿನಲ್ಲಿ, ನಟ ಶಿವರಾಜ್‌ಕುಮಾರ್ ಅವರ ಶಸ್ತ್ರ ಚಿಕಿತ್ಸೆ ಯಶಸಸ್ವಿಯಾಗಿದ್ದು, ಆತಂಕಕ್ಕೆ ಯಾವುದೇ ಆಸ್ಪದವಿಲ್ಲ. ನಾಲ್ಕು ವಾರ ಅಮೆರಿಕಾದಲ್ಲಿ ವಿಶ್ರಾಂತಿ ಪಡೆದು, ಬಳಿಕ ಭಾರತಕ್ಕೆ ವಾಪಸ್ಸಾಗಿ ನಟ ಶಿವಣ್ಣಾ ಅವರು ಎಂದಿನಂತೆ ತಮ್ಮ ನಟನೆ, ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?