James Poster Release: ಆರ್ಮಿ ಆಫೀಸರ್ ಲುಕ್‌ನಲ್ಲಿ ಮಿಂಚಿದ ಪುನೀತ್​ ರಾಜ್​ಕುಮಾರ್

By Suvarna News  |  First Published Jan 26, 2022, 12:23 PM IST

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಚಿತ್ರದ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಪುನೀತ್ ರಾಜ್‍ಕುಮಾರ್ ಅವರು ಕೊನೆಯದಾಗಿ ಅಭಿನಯಿಸಿರುವ ಚಿತ್ರ ಇದಾಗಿದೆ.


ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ (Puneeth Rajkumar)​  ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' (James) ಚಿತ್ರದ ಪೋಸ್ಟರ್ (Poster) ಇಂದು ಬಿಡುಗಡೆಯಾಗಿದೆ. ಪುನೀತ್ ರಾಜ್‍ಕುಮಾರ್ ಅವರು ಕೊನೆಯದಾಗಿ ಅಭಿನಯಿಸಿರುವ ಚಿತ್ರ ಇದಾಗಿದ್ದು, ಈ ಚಿತ್ರದ ಪೋಸ್ಟರ್ ಅನ್ನು ಗಣರಾಜ್ಯೋತ್ಸವದಂದು (Republic Day) ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಅನೌನ್ಸ್ ಮಾಡಿತ್ತು. ಅದರಂತೆ ಇಂದು ಜೇಮ್ಸ್ ಸಿನಿಮಾದ ಪೋಸ್ಟರ್‌ನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ರಿವೀಲ್ ಮಾಡಿದ್ದಾರೆ. 

ಪುನೀತ್ ಗನ್ ಹಿಡಿದು ಖಡಕ್ ಆರ್ಮಿ ಆಫೀಸರ್ (Army Officer) ಆಗಿ ಮಿಂಚಿದ್ದಾರೆ. ಅದರಲ್ಲಿಯೂ ಪೋಸ್ಟರ್‌ನಲ್ಲಿರುವ 'ಸಲಾಂ ಸೋಲ್ಜರ್ ದೇಶಕ್ಕೆ ನೀನೇ ಪವರ್' ಎಂಬ ಸಾಲುಗಳು ಎಲ್ಲರ ಗಮನ ಸೆಳೆಯುತ್ತಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸೇರಿ ಐದು ಭಾಷೆಯಲ್ಲಿ 'ಜೇಮ್ಸ್' ಸಿನಿಮಾ ತೆರೆಕಾಣಲಿದೆ. ಪೋಸ್ಟರ್ ಜೊತೆಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾದ ಶೂಟಿಂಗ್ (Shooting)​ ಸಂಪೂರ್ಣ ಮುಗಿದಿದ್ದು, ಚಿತ್ರತಂಡ ಕುಂಬಳಕಾಯಿ ಒಡೆದಿದೆ. 

Tap to resize

Latest Videos

undefined

Puneeth Rajkumar: ಜೇಮ್ಸ್‌ ಚಿತ್ರಕ್ಕೆ ಅಪ್ಪು ಧ್ವನಿಯಲ್ಲೇ ಡಬ್ಬಿಂಗ್‌

'ಜೇಮ್ಸ್' ಚಿತ್ರಕ್ಕಾಗಿ ಅಭಿಮಾನಿಗಳು ಮಾತ್ರವಲ್ಲದೇ, ಎಲ್ಲ ಸೆಲೆಬ್ರಿಟಿಗಳು ಕೂಡ ಕಾಯುತ್ತಿದ್ದಾರೆ. ಸ್ಯಾಂಡಲ್​ವುಡ್​ನ ಶಿವರಾಜ್ ಕುಮಾರ್ (Shiva Rajkumar), ರಾಘವೇಂದ್ರ ರಾಜ್‍ಕುಮಾರ್ (Raghavendra Rajkumar) ಸೇರಿದಂತೆ ಅನೇಕ ನಟ-ನಟಿಯರು ಮತ್ತು ತಂತ್ರಜ್ಞರು ಈ ಚಿತ್ರದ ಹೊಸ ಪೋಸ್ಟರನ್ನು ತಮ್ಮ ಸಾಮಾಜಿಕ ಜಾಲತಾಣ (Social Media) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು ಸಹೋದರ ರಾಘಣ್ಣ 'ಜೇಮ್ಸ್' ಚಿತ್ರದ ಪೋಸ್ಟರನ್ನು ಹಂಚಿಕೊಂಡು 'ಸಲಾಂ ಸೋಲ್ಜರ್ ದೇಶಕ್ಕೆ ನೀನೆ ಪವರ್' ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆ ಮೂಲಕ ಅಪ್ಪು ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. 



'ಜೇಮ್ಸ್' ಬಿಡುಗಡೆ ದಿನಾಂಕದ ಬಗ್ಗೆ ಚಿತ್ರತಂಡದಿಂದ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮಾರ್ಚ್​ 17ರಂದು ಪುನೀತ್​ ರಾಜ್​ಕುಮಾರ್ ​ಹುಟ್ಟುಹಬ್ಬ. ಅದೇ ದಿನ 'ಜೇಮ್ಸ್​' ಬಿಡುಗಡೆ ಆಗಬೇಕು ಎಂದು ಅಪ್ಪು ಅಭಿಮಾನಿಗಳು (Fans) ಬಯಸುತ್ತಿದ್ದಾರೆ. 'ಜೇಮ್ಸ್' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಮುಗಿದಿದ್ದು, ಅಪ್ಪು ವಾಯ್ಸ್​ ಡಬ್ಬಿಂಗ್ (Dubbing)​ ಮಾತ್ರ ಬಾಕಿ ಉಳಿದಿದೆ. ಶೂಟಿಂಗ್​ ಸಮಯದಲ್ಲಿ ಅಪ್ಪು ಮಾತನಾಡಿರುವ ಧ್ವನಿಯ​ನ್ನೇ ಇಟ್ಟುಕೊಂಡು ಸಿನಿಮಾದಲ್ಲಿ ಬಳಸಿಕೊಳ್ಳಲು ನಿರ್ದೇಶಕ ಚೇತನ್ ಕುಮಾರ್ (Chetan Kumar) ಪ್ಲಾನ್​ ಮಾಡಿದ್ದಾರೆ. ಒಂದು ವೇಳೆ ಈ ಪ್ಲಾನ್​ ವರ್ಕೌಟ್​ ಆಗದೇ ಇದ್ದರೆ ಸಹೋದರ ಮತ್ತು ನಟ ಡಾ. ಶಿವಣ್ಣ (Shivarajkumar)​ ಅವರಿಂದ ಅಪ್ಪುಗೆ ಕಂಠದಾನ ಮಾಡಲು ಚಿತ್ರ ತಂಡ ಚಿಂತನೆ ನಡೆಸಿದೆ. ಈ ವಿಚಾರಗಳು ತುಂಬಾ ದಿನಗಳಿಂದ ಅಭಿಮಾನಿಗಳಿಗೆ ಗೊಂದಲಗಳಾಗೇ ಉಳಿದಿದೆ.

ಈ ನಡುವೆ 'ಜೇಮ್ಸ್​' ಚಿತ್ರದ ಬಗ್ಗೆ ಮತ್ತೊಂದು ಸುದ್ದಿಯೊಂದು ವೈರಲ್ ಆಗ್ತಿದೆ. ಬಹಳ ವರ್ಷಗಳಿಂದಲೂ ಡಾ.ರಾಜ್‌ಕುಮಾರ್ ಮಕ್ಕಳಾದ ಶಿವಣ್ಣ, ರಾಘಣ್ಣ ಮತ್ತು ಅಪ್ಪು ಮೂರು ಜನ ಸೇರಿ ಸಿನಿಮಾ ಮಾಡಬೇಕು ಎಂದು ಅಂದುಕೊಂಡಿದ್ದರು. ಆದರೆ ಈ ಆಸೆ ಈಡೇರುವ ಮುನ್ನವೇ ಪುನೀತ್ ನಮ್ಮನ್ನೆಲ್ಲ ಅಗಲಿ ಇಹಲೋಕ ತ್ಯಜಿಸಿದರು. ಇದೀಗ ಈ ಆಸೆಗೆ ಮತ್ತೆ ಜೀವ ಬಂದಿದ್ದು, 'ಜೇಮ್ಸ್' ಚಿತ್ರದಲ್ಲಿ ಅಪ್ಪು ಜೊತೆ ರಾಘಣ್ಣ ಮತ್ತು ಶಿವಣ್ಣ ಇಬ್ಬರೂ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಈ ಸುದ್ದಿ ನಿಜವೇ ಆದಲ್ಲಿ, ಅಭಿಮಾನಿಗಳ ಆಸೆ ಜೊತೆಗೆ ಶಿವಣ್ಣ ಮತ್ತು ರಾಘಣ್ಣ ಅವರ ಆಸೆ ಕೂಡ ಈಡೇರಲಿದೆ.

Puneeth Rajkumar: ಪವರ್ ಸ್ಟಾರ್ ಕೊನೇ ಚಿತ್ರ 'ಜೇಮ್ಸ್‌' ಶೂಟಿಂಗ್ ಕಂಪ್ಲೀಟ್‌

ನಿರ್ದೇಶಕ ಚೇತನ್ ಕುಮಾರ್ (Chetan Kumar)  'ಜೇಮ್ಸ್' ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಪುನೀತ್‍ಗೆ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಪುನೀತ್‌ ವಿಶೇಷ ಸ್ಟಂಟ್ಸ್‌, ಹೈವೋಲ್ಟೇಜ್‌ ಆ್ಯಕ್ಷನ್‌ ಜೊತೆಗೆ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್‌ಗೆ ನಾಯಕಿಯಾಗಿ ಕಾಲಿವುಡ್‌ ನಟಿ ಪ್ರಿಯಾ ಆನಂದ್ (Priya Anand) ನಟಿಸುತ್ತಿದ್ದಾರೆ. 'ಸ್ಟೈಲಿಶ್ ವಿಲನ್ (Vilain) ಪಾತ್ರದಲ್ಲಿ ಹಿರಿಯ ತಮಿಳು ನಟ ಶರತ್ ಕುಮಾರ್ (Sarathkumar) ಕಾಣಿಸಿಕೊಂಡಿದ್ದು, ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ಹಾಗೂ ಮುಖೇಶ್ ರಿಷಿ ಸೇರಿದಂತೆ ಮುಂತಾದವರ ತಾರಾಬಳಗ ಚಿತ್ರಕ್ಕಿದೆ. ಕಿಶೋರ್ ಪತ್ತಿಕೊಂಡ (Kishore Pattikonda) 'ಜೇಮ್ಸ್' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇನ್ನು 'ಜೇಮ್ಸ್' ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಹರಿದು ಬರ್ತಿದ್ದಾರೆ ಅಪ್ಪು ಅಭಿಮಾನಿಗಳು. ತಮ್ಮ ತಮ್ಮ ಮೊಬೈಲ್‌ನಲ್ಲಿ 'ಜೇಮ್ಸ್' ಪೋಸ್ಟರ್ ಓಪನ್ ಮಾಡಿಕೊಂಡು ಅಭಿಮಾನಿಗಳು ಅಪ್ಪುಗೆ ಜೈಕಾರ ಕೂಗುತ್ತಿದ್ದಾರೆ. ವಿಶೇಷವಾಗಿ ಡಾ.ರಾಜ್‌ಕುಮಾರ್ (Dr.Rajkumar) ಪ್ರತಿಮೆ‌ ಮುಂದೆ ಜಯಘೋಷ ಕೂಗುತ್ತಾ 'ಜೇಮ್ಸ್' ಚಿತ್ರದ ಪೋಸ್ಟರನ್ನು ದೊಡ್ಮನೆ ಅಭಿಮಾನಿಗಳು ರಿಲೀಸ್ ಮಾಡಿದರು. ಅನಂತರ ಮೊಬೈಲ್‌ಗಳಲ್ಲಿ ಪೋಸ್ಟರ್ ರಿಲೀಸ್ ಆದ ವೇಳೆ ಒಟ್ಟಿಗೆ ಹಿಡಿದು ಅಭಿಮಾನಿಗಳು ಸಂಭ್ರಮಿಸಿದ್ದಾರೆ.
 


ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
Wish you all a "Happy Republic Day". pic.twitter.com/AwtF5nvyoC

— Ashwini Puneeth Rajkumar (@ashwinipuneet)
click me!