Raghavendra Rajkumar: ಸಿನಿಮಾ ಲೈಫು ಮುಗಿದುಹೋಯ್ತು ಅಂದುಕೊಂಡಿದ್ದೆ

By Suvarna NewsFirst Published Jan 26, 2022, 10:17 AM IST
Highlights

'ಸಿನಿಮಾ ಲೈಫು ಮುಗಿದುಹೋಯ್ತು ಅಂದುಕೊಂಡಿದ್ದೆ. ಆಗ ಲಾಲಿ ರಾಘವ ಅವರು 'ಸ್ತಬ್ದ' ಚಿತ್ರಕ್ಕೆ ಕರೆತಂದರು' ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದಾರೆ. ಲಾಲಿ ರಾಘವ ನಿರ್ದೇಶನದ ಈ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರು ಹರ್ಷಿಕಾ ಪೂಣಚ್ಚ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಸಿನಿಮಾ ಲೈಫು ಮುಗಿದುಹೋಯ್ತು ಅಂದುಕೊಂಡಿದ್ದೆ. ಆಗ ಲಾಲಿ ರಾಘವ (Laali Raghava) ಅವರು 'ಸ್ತಬ್ದ' (Sthabda) ಚಿತ್ರಕ್ಕೆ ಕರೆತಂದರು' ಎಂದು ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಹೇಳಿದ್ದಾರೆ. ಲಾಲಿ ರಾಘವ ನಿರ್ದೇಶನದ ಈ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರು ಹರ್ಷಿಕಾ ಪೂಣಚ್ಚ (Harshika Poonacha) ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮುಹೂರ್ತ (Muhurta) ಇತ್ತೀಚೆಗೆ ನಡೆಯಿತು. 

ವೈದ್ಯರಾಗಿರುವ ಡಾ.ಡಿ.ವಿ.ವಿದ್ಯಾಸಾಗರ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಲಾಲಿ ರಾಘವ ನಿರ್ದೇಶಿಸುತ್ತಿದ್ದಾರೆ. ತಮಿಳಿನಲ್ಲಿ ಒಂದು ಚಿತ್ರ ನಿರ್ದೇಶಿಸಿರುವ ನನಗೆ ಇದು ಎರಡನೇ ಚಿತ್ರ. ಈ ಚಿತ್ರವು, ಮನುಷ್ಯನ ಮನಸ್ಸು, ಸ್ಥಿಮಿತತೆ ಕಳೆದುಕೊಂಡು ಭ್ರಮಾಲೋಕಕ್ಕೆ ಪಯಣಿಸಿದಾಗ, ಆಗುವಂತಹ ಪರಿಣಾಮಗಳನ್ನು ಮತ್ತು ಅದರಿಂದ ಹೊರಬರಲು ನಾಯಕ ನಡೆಸುವ ಹೋರಾಟವನ್ನು ಪ್ರತಿಬಿಂಬಿಸುತ್ತದೆ. ಈ ಚಿತ್ರದಲ್ಲಿ ಉದಯೋನ್ಮುಖ ನಟ ಪ್ರತಾಪ್ ಸಿಂಹ (Prathap Simha) ಅವರೊಂದಿಗೆ, ರಾಜ್ಯ ಪ್ರಶಸ್ತಿ ವಿಜೇತ ರಾಘವೇಂದ್ರ ರಾಜಕುಮಾರ್ ಮತ್ತು ಹರ್ಷಿಕಾ ಪೂಣಚ್ಛ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

Puneeth Rajkumar ಕುರಿತು 'ಯಾರೋ ನೀನು' ಹಾಡು ಬಿಡುಗಡೆ ಮಾಡಿದ Raghavendra Rajkumar!

ರಾಘಣ್ಣ, 'ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಎಲ್ಲಾ ಪಾತ್ರ ಸೇರಿ ಒಂದು ಪಾತ್ರ ಆಗುತ್ತೆ. ಇಡೀ ಸಿನಿಮಾ ಒಂದು ಪಾತ್ರದ ಹಾಗಿದೆ' ಎಂದು ಹೇಳಿದರು. ಲಾಲಿ ರಾಘವ ಮಾತನಾಡಿ, 'ಇದು ಇಲ್ಯೂಶನ್ ಮೇಲೆ ನಡೆಯುವ ಸಿನಿಮಾ. ಒಬ್ಬ ವ್ಯಕ್ತಿಗೆ ತಾನೊಬ್ಬನೇ ಇದ್ದೇನೆ ಅಂತ ಅನಿಸುತ್ತಿರುತ್ತೆ. ಆದರೆ ಆಚೆ ನಿಂತು ನೋಡಿದಾಗ ಅವನ ಅಕ್ಕಪಕ್ಕ ಅನೇಕ ಮಂದಿ ಕೂತಿರೋದು ಕಾಣಿಸುತ್ತೆ. ಅವರ ನೆಗೆಟಿವ್ ಎನರ್ಜಿ ಈತನೆಡೆಗೆ ಹರಿದು ಬಂದಾಗ ಏನಾಗುತ್ತೆ ಅನ್ನುವ ವಿಷಯ ಈ ಚಿತ್ರದ ಮೂಲಕ ಹೇಳಲು ಹೊರಟಿದ್ದೇವೆ' ಎಂದರು. ಚಿತ್ರದ ನಾಯಕಿ ಹರ್ಷಿಕಾ ಪೂಣಚ್ಚ, ನನ್ನ ಮೊದಲ ಚಿತ್ರದ ನಂತರ ರಾಘಣ್ಣ ಫೋನ್ ಮಾಡಿದ್ದರು.‌ 

ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ 'ಜಾಕಿ' ಚಿತ್ರದಲ್ಲಿ ನೀವು ನಟಿಸಬೇಕೆಂದರು. ಆಗ ನನ್ನಗಾದ ಆನಂದಕ್ಕೆ ಪಾರವೇ ಇಲ್ಲ. ಶಿವಣ್ಣ, ಪುನೀತ್ ಸರ್ ಜೊತೆ ನಟಿಸಿದ್ದೆ. ಈ ಚಿತ್ರದಲ್ಲಿ ರಾಘಣ್ಣ ಅವರ ಮಗಳಾಗಿ ಅಭಿನಯಿಸುತ್ತಿದ್ದೇನೆ. ಡಾ.ರಾಜಕುಮಾರ್ ಅವರ ಮೂರು ಮಕ್ಕಳ ಜೊತೆ ನಟಿಸುವ ಭಾಗ್ಯ ನನಗೆ ಸಿಕ್ಕಿರುವ ಸಂತೋಷವಿದೆ ಎಂದರು. ನಾನು ಈಗಾಗಲೇ ರಾಘಣ್ಣ ಅವರೊಂದಿಗೆ 'ರಾಜತಂತ್ರ', 'ರಾಜಿ' ಚಿತ್ರಗಳಲ್ಲಿ ನಟಿಸಿದ್ದೇನೆ. ರಾಘಣ್ಣ ಅವರೊಟ್ಟಿಗೆ ಅಭಿನಯಿಸುವುದೇ ಒಂದು ಸುಂದರ ಅನುಭವ. ಉತ್ತಮ ಕಥೆಯುಳ್ಳ ಚಿತ್ರ ನಮ್ಮೆಲ್ಲರ ಬೆಂಬಲವಿರಲಿ ಎಂದು ನಟ ಪ್ರತಾಪ್ ಸಿಂಹ ಹೇಳಿದರು.

Raghavendra Rajkumar: ನನಗೆ ಮೂರು ಹೆಣ್ಣುಮಕ್ಕಳು, ತಮ್ಮನ ಹೆಂಡತಿಯೂ ಒಬ್ಬ ಮಗಳು!

ತಾಂತ್ರಿಕ ವಿಭಾಗದಲ್ಲಿ ರಾಜತಂತ್ರ ಚಿತ್ರದ ನಿರ್ದೇಶನ ಮತ್ತು 36 ಕ್ಕೂ ಹೆಚ್ಚಿನ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಕ್ರಿಯಾಶೀಲ ತಂತ್ರಜ್ಞ ಪಿ. ವಿ. ಆರ್ ಸ್ವಾಮಿ ಛಾಯಾಗ್ರಹಣ, ಹಂಸಲೇಖ ಅವರ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಆರವ್ ರಿಷಿಕ್ (ಹಂಸಲೇಖ) ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಲಾಲಿ ರಾಘವ್. ನಿರ್ಮಾಪಕ ಡಾ ಡಿ ವಿ ವಿದ್ಯಾಸಾಗರ್ ಖುಷಿಯಲ್ಲಿ ಕಣ್ಣೀರಿಟ್ಟರು. ನಟ ಪ್ರಶಾಂತ್ ಸಿದ್ಧಿ, ಡಿಓಪಿ ಪಿವಿಆರ್ ಸ್ವಾಮಿ ಮತ್ತಿತರರು ಹಾಜರಿದ್ದರು. ಶಾಸಕಿ ಸೌಮ್ಯ ರೆಡ್ಡಿ, ಮಮತಾ ದೇವರಾಜ್, ಪಾನಿ ಪುರಿ ಕಿಟ್ಟಿ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

click me!