ವೀಸಾ ರದ್ದು ಅತಿರೇಕ ಎಂದು ಬೆಂಬಲಕ್ಕೆ ನಿಂತ ನಟ ಕಿಶೋರ್‌ಗೆ ಚೇತನ್ ಅಹಿಂಸಾ ಹೇಳಿದ್ದೇನು?

Published : Apr 21, 2023, 12:32 PM IST
ವೀಸಾ ರದ್ದು ಅತಿರೇಕ ಎಂದು ಬೆಂಬಲಕ್ಕೆ ನಿಂತ ನಟ ಕಿಶೋರ್‌ಗೆ ಚೇತನ್ ಅಹಿಂಸಾ ಹೇಳಿದ್ದೇನು?

ಸಾರಾಂಶ

ವೀಸಾ ರದ್ದು ಅತಿರೇಕ ಎಂದು ಬೆಂಬಲಕ್ಕೆ ನಿಂತ ನಟ ಕಿಶೋರ್‌ಗೆ ಚೇತನ್ ಅಹಿಂಸಾ ಧನ್ಯವಾದ ತಿಳಿಸಿದ್ದಾರೆ. 

ಹಿಂದುಗಳನ್ನು ಕೆರಳಿಸುವಂತಹ ಹೇಳಿಕೆ ನೀಡುತ್ತಿರುವ ಆರೋಪದ ಮೇಲೆ ನಟ ಚೇತನ್‌ ಅಹಿಂಸಾ ಅವರ ಸಾಗರೋತ್ತರ ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಈ ನಡೆಯನ್ನು ಪ್ರಶ್ನಿಸಿ ನಟ ಕಿಶೋರ್ ದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದರು. ಬೆಂಬಲಕ್ಕೆ ನಿಂತಿದ್ದ ಕಿಶೋರ್‌ಗೆ ಧನ್ಯವಾದ ತಿಳಿಸಿದ್ದಾರೆ ಚೇತನ್. ಸಾಮಾಜಿಕ ಜಾಲತಾಣದಲ್ಲಿ ಕಿಶೋರ್‌ಗೆ ಥ್ಯಾಂಕ್ಸ್ ಹೇಳಿದ್ದಾರೆ. ಅಷ್ಟೆಯಲ್ಲದೇ ತಮ್ಮದೇ ಆದ ರೀತಿಯಲ್ಲಿ ಹಿಂದುತ್ವ ರಾಜಕೀಯಕ್ಕೆ ಸವಾಲು ಹಾಕಿದ್ದಕ್ಕಾಗಿಯೂ ಧನ್ಯವಾದ ಎಂದು ಹೇಳಿದ್ದಾರೆ. 

ನಟ ಚೇತನ್ ಹೇಳಿಕೆ ಅನೇಕ ಬಾರಿ ವಿವಾದಕ್ಕೆ ಸಿಲುಕಿವೆ. ಚೇತನ್ ವಿರುದ್ಧ ಅನೇಕರು ಸಿಡಿದೇಳುತ್ತಿದ್ದಾರೆ. ಅವರ ಹೇಳಿಕೆಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ.  ಹಿಂದುತ್ವವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಕ್ಕಾಗಿ ಬೆಂಗಳೂರು ಪೊಲೀಸರು ಮಾರ್ಚ್ 21 ರಂದು ಚೇತನ್ ಅವರನ್ನು ಬಂಧಿಸಿದ್ದರು. ಈ ಬೆಳವಣಿಗಳ ಬಳಿಕ ನಟ ಕಿಶೋರ್ ತಮ್ಮದೇ ಶೈಲಿಯಲ್ಲಿ ಪ್ರಶ್ನೆ ಮಾಡಿದ್ದರು. ಈ ಮೂಲಕ ಚೇತನ್ ಬೆಂಬಲಕ್ಕೆ ನಿಂತಿದ್ದರು.  ಇದೀಗ ಪ್ರತಿಕ್ರಿಯೆ ನೀಡಿರುವ ಚೇತನ್, 'ಧನ್ಯವಾದಗಳು, ಕಿಶೋರ್, ನನ್ನ ವೀಸಾ ರದ್ದತಿಯನ್ನು ಅತಿರೇಕ ಎಂದು ಕರೆಯುವ ಮೂಲಕ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಕ್ಕಾಗಿ. ನಿಮ್ಮದೇ ಆದ ರೀತಿಯಲ್ಲಿ ಹಿಂದುತ್ವ ರಾಜಕಾರಣಕ್ಕೆ ಸವಾಲು ಹಾಕಿದ್ದೀರಿ' ಎಂದು ಹೇಳಿದ್ದಾರೆ. 

ಜೈಲಿಗೆ ಹಾಕೋದು, ಗಡೀಪಾರು ಮಾಡೋದು ಅತಿರೇಕ; ಚೇತನ್ ಬಂಧನ, ವೀಸಾ ರದ್ದು ವಿರುದ್ಧ ನಟ ಕಿಶೋರ್ ಗರಂ

ಕಿಶೋರ್ ಪೋಸ್ಟ್ ಹೀಗಿತ್ತು

‘ಹಿಂದುತ್ವ’ ಅನ್ನುವ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನೋಸ್ಥಿತಿ. ಆದರೆ ‘ಹಿಂದುತ್ವ’ ಎನ್ನುವ ಪದ ಬಳಕೆಯಾಗುತ್ತಿರುವುದು ಒಂದು ಪಕ್ಷದ, ಒಂದು ಸಂಘದ, ಅಧಿಕಾರಕ್ಕಾಗಿ ಒಡೆದಾಳುವ, ಪರದ್ವೇಷದ, ಮೂಲಭೂತವಾದಿ ವೈದಿಕ ಸಂಪ್ರದಾಯದ ಸಂಕುಚಿತ ಪರಿಕಲ್ಪನೆಯಾಗಿಯಷ್ಟೆ' ಎಂದು ಕಿಶೋರ್ ಹೇಳಿದ್ದರು.

ಒಸಿಐ ಕಾರ್ಡ್‌ ರದ್ದು, ದೇಶದಿಂದ ಗಡಿಪಾರಾಗ್ತಾರಾ ಚೇತನ್‌ ಅಹಿಂಸಾ?

'ಹಾಗಾಗಿ ಈ ಜೀವ ವಿರೋಧಿ ರಾಜಕೀಯದ ಟೀಕೆಯಿಂದ ಹಿಂದೂಗಳಿಗೆಲ್ಲರಿಗೂ ಅಪಮಾನವಾಯಿತೆನ್ನುವುದು ಎಷ್ಟು ಉಚಿತ?? ಹಾಗೆ ಅವಮಾನ ಪಡಲೇಬೇಕೆಂದರೆ ವೈದಿಕ ಪರಂಪರೆ ಇಂದಿಗೂ ಪ್ರತಿಪಾದಿಸುತ್ತಿರುವ ನಮ್ಮಲ್ಲೇ ಇರುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ಬೇಧ ಇವುಗಳಿಂದಲ್ಲವೇ? ಆ ನಿಟ್ಟಿನಲ್ಲಿ ನಮ್ಮನ್ನು ನಾವು ತಿದ್ದಿಕೊಂಡು ಹಿಂದೂ ಧರ್ಮವನ್ನು ಎಲ್ಲರಿಗೂ ಮಾದರಿಯಾಗಿಸಬೇಕಲ್ಲವೇ?. ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನಮ್ಮದೇ ಜನರನ್ನು ನಿಂದಿಸುವ, ಆರೋಪಿಸುವ, ಜೈಲಿಗೆ ಹಾಕುವ ಅಥವಾ ಗಡೀಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು??' ಎಂದು ನಟ ಕಿಶೋರ್ ಪ್ರಶ್ನೆ ಮಾಡಿದ್ದರು.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?
ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ