ವಿಷ್ಣು ದಾದ ಜೊತೆ ಕಳೆದ ದಿನಗಳನ್ನು ನೆನೆದು ಭಾವುಕರಾದ ನಟ ಅಭಿಜಿತ್. ಗಣೇಶ್ ಹಬ್ಬದ ದಿನ ಅದೇ ಸೋಫಾ ಆದರೆ ಅಂದು.......?
ಕನ್ನಡ ಚಿತ್ರರಂಗದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. ಊರಿನ ಮಗ ಮನೆ ದೇವರ ರೀತಿ ಅಭಿಮಾನಿಗಳು ಪ್ರೀತಿಸುತ್ತಿದ್ದರು. ಕಲಾವಿದರು ಜೊತೆ ಅದ್ಭುತ ಸಂಬಂಧ ಕೂಡ ಹೊಂದಿದ್ದರು. ಯಾರೇ ಬರಲಿ ಬಾಯಿ ತುಂಬಾ ಮಾತನಾಡಿಸಿ ಉಪಚಾರ ಮಾಡುತ್ತಿದ್ದರು, ತುಂಬಾ ದಿನಗಳಾಯ್ತು ಬಂದಿಲ್ಲ ಅಂದ್ರೆ ಕರೆ ಮಾಡಿ ಬನ್ನಿ ಎನ್ನುತ್ತಿದ್ದರಂತೆ. ನಟ ಅಭಿಜಿತ್ ಕೂಡ ವಿಷ್ಣು ದಾದ ಜೊತೆ ತುಂಬಾ ಕ್ಲೋಸ್ ಆಗಿದ್ದರು. ದಾದಾ ಅಗಲಿದ ದಿನ ಏನಾಯ್ತು ಎಂದು ಹಂಚಿಕೊಂಡಿದ್ದಾರೆ.
'ನನ್ನ ಸಿನಿ ಜರ್ನಿ ಆರಂಭದಲ್ಲಿ ನಾನು ವಿಷ್ಣುವರ್ಧನ್ ರೀತಿ ಇದ್ದೀನಿ ನೋಡಲು ಎಂದು ಹೇಳುತ್ತಿದ್ದರು ಏಕೆಂದರೆ ಅಷ್ಟು ಕೆಂಪಾಗಿದ್ದೆ. ಸ್ಟಾರ್ ನಟರಿಂದ influence ಆಗಿರಬಹುದು. ನಾನು ಪ್ರೀತಿಸುತ್ತಿದ್ದ ದಿನಗಳಲ್ಲಿ ಅವರ ಸಿನಿಮಾಗಳನ್ನು ನೋಡುತ್ತಿದ್ದೆವು. ವಿಷ್ಣುವರ್ಧನ್ ಅವರು ಸತ್ತಿದ್ದಾರೆ ಅಂತ ಹೇಳುವುದಕ್ಕೆ ಮನಸ್ಸು ಬರುವುದಿಲ್ಲ. ಅವರು ಈ ಲೋಕ ಬಿಟ್ಟು ಹೋಗುವ 15 ದಿನಗಳ ಮುನ್ನ ನನಗೆ ಕರೆ ಮಾಡಿ ಎಲ್ಲಿದ್ದೀರಾ? ನಾನು ಬೆಂಗಳೂರಿಗೆ ಬಂದಿರುವೆ ನೀವು ನಮ್ಮ ಮನೆಗೆ ಬರಬೇಕು ಎಂದು ಹೇಳಿದ್ದರು. ಅವರ ಮನೆಗೆ ಹೋಗಿ ಊಟ ಮಾಡಿ ಸಮಯ ಕಳೆದೆ ಹೊರಡಬೇಕು ಎಂದು ಹೇಳಿದಕ್ಕೆ ಇಷ್ಟು ಬೇಗ ಯಾಕೆ ಏನು ಕೆಲಸ ಇದೆ ಎಂದು ಪ್ರಶ್ನೆ ಮಾಡಿದ್ದರು. ಸ್ವಲ್ಪ ಕೆಲಸ ಇದೆ ಹೋಗಲೇ ಬೇಕು ಎಂದು ಹೇಳಿದೆ ಅದಿಕ್ಕೆ ಹೊರಡುತ್ತೀರಾ ಎಂದು ಕೇಳಿದರು ಆಗ ನಾನು ಹೌದು ಹೋರಡುವೆ ಎಂದೆ. ಸಾಮಾನ್ಯವಾಗಿ ಎಲ್ಲರಿಗೂ ಮನೆಯಲ್ಲಿ ವಿಶ್ ಮಾಡುತ್ತಾರೆ ಗೇಟ್‌ವರೆಗೂ ಬಂದು ಮಾಡುವುದು ತುಂಬಾ ಅಪರೂಪ ಆದರೆ ಅವತ್ತು ಗೇಟ್‌ವರೆಗೂ ಬಂದು ನಾನು ಕಾರನ್ನು ತಿರುಗಿಸಿಕೊಂಡು ಹೋಗುವವರೆಗೂ ಗೇಟ್ ಬಳಿ ನಿಂತಿದ್ದರು. ಆಗಲೂ ಕೈ ಸನ್ನಿ ಮಾಡಿ ಬೈ ಹೇಳಿದೆ ಅವರು ಹಾಗೆ ಕೈ ತೋರಿಸಿದ್ದರು. ಯಾವತ್ತು ಸಿಂಹ ಇಷ್ಟು ಮೌನವಾಗಿರಲಿಲ್ಲ ಏನಾಯ್ತು ಅಂತ ನನ್ನ ಯೋಚನೆ ಆದರೆ ಸ್ವಲ್ಪ ದಿನಕ್ಕೆ ರಾತ್ರಿ ಸುದ್ದಿ ಬಂತು' ಎಂದು ಅಭಿಜಿತ್ ಕನ್ನಡ ಯುಟ್ಯೂಬ್ ಸಂದರ್ಶನ್‌ವೊಂದರಲ್ಲಿ ಹೇಳಿದ್ದಾರೆ.
undefined
ಕನ್ನಡದಲ್ಲಿ ಬಾಂಡ್ ಚಿತ್ರ ಪರಿಚಯಿಸಿದ ಭಗವಾನ್ ; ಅಣ್ಣಾವ್ರ ಜೊತೆ ಬಾಂಧವ್ಯ ಹೀಗಿತ್ತು
'ವಯಸ್ಸಾದವರು ಅಂದ್ರೆ ಏನೋ ಆಗಿತ್ತು ಅಂದುಕೊಳ್ಳಬಹುದು ಆದರೆ ಅವರು ತುಂಬಾ ಯಂಗ್ ಆಗಿದ್ದ ಕಾರಣ ನಂಬಲು ಆಗಲಿಲ್ಲ. 59 ವರ್ಷದ ಸೂಪರ್ ಸ್ಟಾರ್ ಇನ್ನಿಲ್ಲ ಅಂದ್ರೆ ಶಾಕ್ ನಮಗೆ...ಆ ದಿನ ಇಡೀ ರಾತ್ರಿ ನಾನು ನನ್ನ ಪತ್ನಿ ನಿದ್ರೆ ಮಾಡಿಲ್ಲ. ಅಷ್ಟೊತ್ತರಲ್ಲಿ ಯಾರು ಕರೆ ಮಾಡುತ್ತಿರುವುದು ಎಂದು ಪೋನ್ ನೋಡಿದರೆ ಪದ್ಮವಸಂತಿ ಅವರು. ಕಾರನ್ನು ತೆಗೆದುಕೊಂಡು ತಕ್ಷಣ ಅವರ ಮನೆಗೆ ಹೋಗಿದ್ದೆ. ಈ ಘಟನೆ ನಡೆದ ಒಂದು ತಿಂಗಳ ಹಿಂದೆ ಗಣೇಶ್ ಹಬ್ಬದ ದಿನ ಅದೇ ಸೋಫಾ ಜಾಗದಲ್ಲಿ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದರು ಆದರೆ ಈಗ ಹೀಗೆ ಅಂತ ನೋಡಿ ಜೀರ್ಣ ಮಾಡಿಕೊಳ್ಳಲು ಆಗಲಿಲ್ಲ. 7 ಗಂಟೆವರೆಗೂ ಅಲ್ಲಿ ಇದ್ದೆ....ಮನೆಗೆ ಬಂದು ಫೋನ್ ಆಫ್ ಮಾಡಿ ಸುಮ್ಮನೆ ಕುಳಿತುಕೊಂಡೆ. 10-15 ದಿನ ಏನೋ ನೆಮ್ಮದಿ ಇರಲಿಲ್ಲ ನಾರ್ಮಲ್ ಲೈಫ್‌ಗೆ ಮರುಳಲು ತುಂಬಾ ಕಷ್ಟ ಆಯ್ತು. ನಿಜ ಹೇಳಬೇಕು ಅಂದ್ರೆ ಸ್ವಂತ ಅಣ್ಣನನ್ನು ಕಳೆದುಕೊಂಡ ಹಾಗೆ ಆಯ್ತು. ವಿಷ್ಣು ದಾದ ಎಲ್ಲೋ ಇದ್ದಾರೆ ಖುಷಿಯಾಗಿರಲಿ' ಎಂದಿದ್ದಾರೆ ಅಭಿಜಿತ್.