
ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ವಿಭಿನ್ನ ಸಿನಿಮಾಗಳ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಸಿನಿಮಾ ಮೂಲಕ ಜನರಿಗೆ ಅದೆಷ್ಟೋ ಅರಿವು ಮೂಡಿಸುವ ವಿಚಾರಗಳನ್ನು ಸಾರುತ್ತಾರೆ. ಪ್ರಜಾಕಿಯ ಮೂಲಕ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಪ್ರತಿ ವರ್ಷ ಚುನಾವಣೆ ಸಮಯದಲ್ಲಿ 10 ವರ್ಷಗಳ ಹಿಂದೆ ಉಪೇಂದ್ರ ವೇದಿಕೆಯಲ್ಲಿ ಭಾಷಣ ನೀಡದ ವಿಡಿಯೋ ವೈರಲ್ ಅಗುತ್ತದೆ. ಹಣದ ಹಿಂದೆ ಹೋದ್ರೆ ಜನರ ಪ್ರೀತಿ ಸಿಗೋಲ್ಲ ಎಂದು ಹೇಳುತ್ತಿದ್ದ ಉಪ್ಪಿ ಪ್ಯಾನ್ ಇಂಡಿಯಾ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಎಂದು ಪ್ರಶ್ನೆ ಮಾಡುತ್ತಿದ್ದಾರೆ ನೆಟ್ಟಿಗರು.
'ನಾನು ಇವತ್ತಿಗೂ ಚಿತ್ರ ಮಾಡುತ್ತಿರುವುದು ಹಾಗೂ ಚಿತ್ರ ಮಾಡುತ್ತಿರುವುದಕ್ಕೆ ಕಾರಣವನ್ನು ಓಪನ್ ಅಗಿ ಹೇಳುತ್ತೀನಿ. ಸಿನಿಮಾದಲ್ಲಿ ಇಷ್ಟೊತ್ತಿಗೆ ನಾನು ನೆಮ್ಮದಿಯಾಗಿ well setteled ಏನೂ ಯೋಚನೆ ಇಲ್ಲ ಅರಾಮ್ ಅಗಿ ಬದುಕಬಹುದು ಊಟ ತಿಂಡಿಗೆ ಯೋಚನೆ ಇಲ್ಲ ಕಷ್ಟಗಳು ನನಗೆ ಬೇಕಿಲ್ಲ ಯಾಕೆ ಒದ್ದಾಡಬೇಕು? ಮೂರು ಮೂರು - ಆರು ಅರು ತಿಂಗಳು ಬೆಳಗ್ಗೆಯಿಂದ ರಾತ್ರಿವರೆಗೂ ಸ್ಕ್ರಿಪ್ಟ್ ಮಾಡಿ ಕಷ್ಟ ಪಡಬೇಕು ಅಂತೆಲ್ಲಾ ಅನಿಸುತ್ತದೆ. ನನ್ನ ಒದ್ದಾಟಕ್ಕೆ ಒಂದು ಕಾರಣ ಇದೆ...ನನ್ನ ಗುರಿ ಇರುವುದು ಸಿನಿಮಾದಲ್ಲಿ ಅಲ್ಲ ಸಿನಿಮಾ ಹೊರತಾಗಿದೆ ಅದಕ್ಕಾಗಿ ಸಿನಿಮಾ ಮಾಡುತ್ತಿರುವೆ. ಸಿನಿಮಾದ ಮೇಲೆ ಮಾತ್ರ ಗುರಿ ಇಟ್ಟಿದ್ದರೆ ಇಷ್ಟೊತ್ತಿಗೆ ಬರೀ ಹಿಟ್ ಆಂಡ್ ಫ್ಲಾಪ್ ಬಗ್ಗೆ ಮಾತ್ರ ಯೋಚನೆ ಮಾಡಬೇಕಿತ್ತು ಎರಡು ವರ್ಷ ಕಾಯುವ ಅಗತ್ಯ ಇರಲಿಲ್ಲ. ನನ್ನ ಪ್ರತಿ ಚಿತ್ರದಲ್ಲೂ ಏನಾದರೂ ಹೇಳಬೇಕು ಅಂತ ಇಷ್ಟ ಪಡ್ತೀನಿ, ಪ್ರತಿ ಚಿತ್ರದಲ್ಲಿ ಏನಾದರೂ ಮಾಡಬೇಕು ಅಂತ ಇಷ್ಟ ಪಡುತ್ತೀನಿ ಅದರಿಂದ ಏನೋ ದಾರಿ ಹುಡುಕುತ್ತಿರುವೆ ನಾನು' ಎಂದು ವೈರಲ್ ವಿಡಿಯೋದಲ್ಲಿ ಉಪೇಂದ್ರ ಮಾತನಾಡಿದ್ದಾರೆ.
ಕಬ್ಜ 2 ಸಿನಿಮಾ ಘೋಷಣೆ ಮಾಡಿದ ಆರ್.ಚಂದ್ರು; 25ನೇ ದಿನದ ಸಂಭ್ರಮಾಚರಣೆ ಹೀಗಿತ್ತು
'ನನ್ನ ಗುರು ಸಾಧಿಸಲು ಸಿನಿಮಾ ಒಂದು ದಾರಿ, ಗುರಿ ಅಲ್ಲ. ಸಿನಿಮಾಯಿಂದ ಏನು ಸಾಧ್ಯ? 50 ಸಾವಿರ ಜನರು ಹೋ ಅಂತಾರೆ ಕಿರುಚುತಾರೆ...ನಾನು ಹೋದ ಮೇಲೆ ಸಾಮಾನ್ಯ ಉಪೇಂದ್ರ ಅಷ್ಟೆ. ಇದೇ ಶರ್ಟ್ ಇದೇ ಪ್ಯಾಂಟ್ ಹಾಕಬೇಕು ಏನೂ ಮಾಡಲು ಸಾಧ್ಯವಿಲ್ಲ.ನನಗೆ ಜನರ ಪ್ರೀತಿ ಬೇಕು ಗುಂಪು ಬೇಕು ಇದರಿಂದ ಏನಾದರೂ ಒಂದು ಮಾಡಬೇಕು ಮಾಡಿದರೆ ವ್ಯವಸ್ಥಿತವಾಗಿ ಮಾಡಬೇಕು ಏನಾದರೂ. ನಿಮ್ಮ ಕಣ್ಣಿಗೆ ಮಣ್ಣು ಎರಚುವುದು ದೊಡ್ಡ ವಿಚಾರ ಅಲ್ಲ. ಯಾರ ಕಣ್ಣಿಗೂ ಮಣ್ಣು ಎರಚುವ ಅಗತ್ಯವಿಲ್ಲ ನನ್ನ ಆತ್ಮಕ್ಕೆ ನಾನು ಕರೆಕ್ಟ್ ಆಗಿದ್ದರೆ ಸಾಕು ನಾನು ಕರೆಕ್ಟ್ ಆಗಿರುವೆ' ಎಂದು ಉಪ್ಪಿ ಹೇಳಿದ್ದಾರೆ.
'ನಾನು ಒಬ್ಬ ಬಡವ ಆಗಿದ್ದೆ ಪ್ಯಾಂಟ್ ಹಾಕಿಕೊಳ್ಳುವುದಕ್ಕೂ ಗತಿ ಇರಲಿಲ್ಲ 5-10 ರೂಪಾಯಿಗೂ ಕಷ್ಟಪಟ್ಟಿರುವೆ ಆ ದಿನಗಳನ್ನು ಎಂದೂ ಮರೆಯುವುದಿಲ್ಲ. 5 ಕೋಟಿ ಕೊಡ್ತೀನಿ ಅಂದ್ರು ಯಾವ ಚಿತ್ರಕ್ಕೂ ಸಹಿ ಹಾಕುತ್ತಿಲ್ಲ..ನನಗೆ 5 ಕೋಟಿ ಬೇಡ ನನಗೆ ಜನರ ಪ್ರೀತಿ ಬೇಕು ಎರಡು ಮೂರು ವರ್ಷ ಕಷ್ಟ ಪಡ್ತೀನಿ ಅಂತ ಹೇಳಿರುವೆ. ನನಗೆ ತೃಪ್ತಿ ಅಗಬೇಕು...ಎರಡು ಅಲ್ಲ 5 ವರ್ಷ ಅದ್ಮೇಲೆ ನನ್ನನ್ನು ನೀವು ಮರೆಯುವುದಿಲ್ಲ. ಆ ದುಡ್ಡಿಗೆ ಆಸೆ ಪಟ್ಟರೆ ನೀವು ನನ್ನನ್ನು ಮರೆಯುವುದು' ಎಂದಿದ್ದಾರೆ ಉಪೇಂದ್ರ.
100 ಕೋಟಿ ದಾಟಿದ ಕಬ್ಜ;ಒಂದು ಸಿನಿಮಾ ಗೆದ್ದರೆ ಉದ್ಯಮ ಉಸಿರಾಡಿದಂತೆ: ಉಪೇಂದ್ರ
ಈ ವಿಡಿಯೋ ನೋಡಿ ಅನೇಕರು ಪ್ಯಾನ್ ಇಂಡಿಯಾ ಚಿತ್ರಕ್ಕೆ ನೀವು ಪಡೆದ ಸಂಭಾವನೆ ಎಷ್ಟು? 10 ವರ್ಷದಲ್ಲಿ ನಿಮ್ಮ ಸಂಭಾವನೆ ಬದಲಾಗಿಲ್ವಾ? ಯಾವ ರೀತಿ ಜನರ ಸೇವೆ ಮಾಡಿದ್ದೀರಾ ಎಂದು ನೆಟ್ಟಿಗರು ಉಪ್ಪಿಗೆ ಪ್ರಶ್ನೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.