ʼಕೆಟ್ಟ ಕಣ್ಣು ಯಾವಾಗಲೂ ನೋಡ್ತಿರತ್ತೆ, ಆದರೆ ನನ್ನ ಟಚ್‌ ಮಾಡೋಕಾಗೋದಿಲ್ಲʼ: ನಟಿ ಪವಿತ್ರಾ ಗೌಡ ಮಾರ್ಮಿಕ ಹೇಳಿಕೆ!

ನಟಿ, ಮಾಡೆಲ್‌ ಆಗಿರುವ ಪವಿತ್ರಾ ಗೌಡ ಅವರು ಯುಗಾದಿ ಪ್ರಯುಕ್ತ ವಿಶೇಷ ಪೋಸ್ಟ್‌ ಹಂಚಿಕೊಂಡಿದ್ದಾರೆ.

actress pavithra gowda special post about ugadi 2025

ನಟಿ, ಮಾಡೆಲ್‌ ಪವಿತ್ರಾ ಗೌಡ ಅವರು ಯುಗಾದಿ ಪ್ರಯುಕ್ತ ಮನೆಯಲ್ಲಿ ವಿಶೇಷ ಹೋಮ ಆಚರಿಸಿದ್ದಾರೆ. ಅಷ್ಟೇ ಅಲ್ಲದೆ ವಿಶೇಷ ವಿಷಯ ಹಂಚಿಕೊಂಡಿದ್ದಾರೆ. ಪವಿತ್ರಾ ಪೋಸ್ಟ್‌ ಸಾಕಷ್ಟು ಅಚ್ಚರಿ ಮೂಡಿಸಿದೆ.‌

ಪವಿತ್ರಾ ಗೌಡ ಪೋಸ್ಟ್‌ ಏನು?
“ಕೆಟ್ಟ ಕಣ್ಣು ಯಾವಾಗಲೂ ನೋಡುತ್ತಿರುತ್ತದೆ. ಆದರೆ ಅದು ನನ್ನನ್ನು ಟಚ್‌ ಮಾಡಲಾಗೋದಿಲ್ಲ. ಈ ನೆಗೆಟಿವಿಟಿ ತುಂಬಿರುವ ಜಗತ್ತಿನಲ್ಲಿ ನಿಮ್ಮ ಕೆಟ್ಟ ಕಣ್ಣು ಕೂಡ ಪಾಸಿಟಿವಿಯಿಂದ ಮಿಂಚಲಿ. ಯುಗಾದಿ ಹಬ್ಬದ ಶುಭಾಶಯಗಳು” ಎಂದು ಪವಿತ್ರಾ ಗೌಡ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. 

Latest Videos

ಮಹಿಳಾ ದಿನದಂದು ಹೆಣ್ಮಕ್ಕಳಿಗೆ ಸ್ಪೆಷಲ್ ಮೆಸೇಜ್ ಕೊಟ್ಟ ಪವಿತ್ರಾ ಗೌಡ

ನೆಟ್ಟಿಗರಿಂದ ಶುಭಾಶಯ! 
“2025ರ ಯುಗಾದಿಯು ವಿಶ್ವಾವಸು ನಾಮ ಸಂವತ್ಸರವನ್ನು ಹೊತ್ತು ತರಲಿದೆ. ಹಿಂದಿನ ವರ್ಷ ಕಳೆದ ನೋವು, ದುಃಖಗಳೆಲ್ಲಾ ಮಾಯವಾಗಿ, ಹೊಸ ವರ್ಷದ ಈ ಯುಗಾದಿ ನಿಮಗೆ ಸಂತೋಷ, ಶಾಂತಿ, ಸಮೃದ್ಧಿಯನ್ನು ತರಲಿ.. ಸರ್ವರಿಗೂ 2025ರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ನೆಟ್ಟಿಗರು ಪವಿತ್ರಾ ಗೌಡ ಪೋಸ್ಟ್‌ಗೆ ಕಾಮೆಂಟ್‌ ಮಾಡಿದ್ದಾರೆ. 

ಮಹಿಳಾ ದಿನದ ಶುಭಾಶಯ ತಿಳಿಸಿದ್ದರು! 
ಕೆಲ ದಿನಗಳ ಹಿಂದೆ ಪವಿತ್ರಾ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷವಾದ ವಿಡಿಯೋ ಶೇರ್ ಮಾಡಿದ್ದರು. ಮಹಿಳಾ ದಿನಾಚರಣೆ ಶುಭಾಶಯ ತಿಳಿಸುವುದರ ಜೊತೆಗೆ, ವಿಶೇಷ ಸಂದೇಶ ನೀಡಿದ್ದರು. ಕಪ್ಪು ಬಿಳುಪಿನ ಸೀರೆಯಲ್ಲಿ ಮಿಂಚುತ್ತಿದ್ದ, ಕೇಸರಿ ಬಣ್ಣದ ಗುಲಾಬಿ ಹೂ ಹಿಡಿದು, ನಗುತ್ತಿರುವ ವಿಡಿಯೋವನ್ನು ಅವರು ಶೇರ್‌ ಮಾಡಿದ್ದರು. “ಡಿಯರ್ ಮೀ, ನಿನ್ನನ್ನು ನಿನ್ನೆಗಿಂತ ಇಂದು ಸ್ವಲ್ಪ ಹೆಚ್ಚಾಗಿ ಪ್ರೀತಿಸು, ಬೇರೆಯವರಿಗಿಂತ ಮೊದಲು ನಿಮಗೆ ನೀವು ಆದ್ಯತೆ ಕೊಡಿ, ನಿಮ್ಮ ಗುರಿಗಳ ಕಡೆ ಗಮನ ಕೊಡಿ, ನಿಮ್ಮ ಬಳಿ ಏನು ಇದೆಯೋ ಅದಕ್ಕಾಗಿ ನೀವು ಕೃತಜ್ಞತೆಯಿಂದ ಇರಿ, ನಿಮ್ಮ ಬಗ್ಗೆ ನೀವು ಹೆಮ್ಮೆ ಪಡಿ, ನೀವೋಬ್ಬ ಅದ್ಭುತ ಮಹಿಳೆ ಅನ್ನೋದನ್ನು ನೆನೆಪಿಸಿಕೊಳ್ಳಿ. ಈ ದಿನವನ್ನು ಆಚರಿಸಿ” ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಪ್ರಪಂಚದ ಎಲ್ಲ ಮಹಿಳೆಯರಿಗೂ ಶುಭಾಶಯ ತಿಳಿಸಿದ್ದರು. 

ಪವಿತ್ರಾ ಗೌಡ ಅಂಗಡಿಯಲ್ಲಿ ಸ್ಪೆಷಲ್ ಗಿಫ್ಟ್‌ ಖರೀದಿಸಿದ 'ಕಾಮಿಡಿ ಕಿಲಾಡಿಗಳು' ಮಂಥನ; ಎಲ್ಲರೂ ಶಾಕ್

ಟೆಂಪಲ್‌ ರನ್‌ ಮಾಡ್ತಿರುವ ಪವಿತ್ರಾ ಗೌಡ
ಇನ್ನು ಟೆಂಪಲ್‌ ರನ್‌ ಮಾಡುತ್ತಿರುವ ಪವಿತ್ರಾ ಗೌಡ ಅವರು ಕೆಲ ದಿನಗಳ ಹಿಂದೆಯೇ ಮುಂಬೈಗೆ ತೆರಳಿದ್ದರು, ಶಿರಡಿ ಸಾಯಿ ಬಾಬಾನ ದರ್ಶನ ಪಡೆದಿದ್ದರು. ಇನ್ನು ಮಹಾಕುಂಭಮೇಳಕ್ಕೂ ಭೇಟಿ ನೀಡಿದ್ದರು. 

ಕಾಂಟ್ರವರ್ಸಿ ಎಲ್ಲಿಗೆ ಬಂತು?
ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದರು. ಇದು ನಟ ದರ್ಶನ್‌ ಕಿವಿಗೆ ಬಿದ್ದಿತ್ತು. ಆ ನಂತರ ದರ್ಶನ್‌ ಅವರು ತಮ್ಮ ಗ್ಯಾಂಗ್‌ ಸಹಾಯದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿದ್ದಾರೆ ಎನ್ನಲಾಗಿದೆ. ಆ ವೇಳೆ ರೇಣುಕಾಸ್ವಾಮಿ ಸತ್ತಿದ್ದು, ರಾಜಕಾಲುವೆಯಲ್ಲಿ ಅವರ ಶವ ಸಿಕ್ಕಿತ್ತು. ಪೊಲೀಸರು ಈ ಬಗ್ಗೆ ತನಿಖೆ ಮಾಡಿದಾಗ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಒಟ್ಟೂ 18 ಜನರ ಹೆಸರು ಹೊರಗಡೆ ಬಂದಿದೆ. 2024 ಜೂನ್‌ 8 ರಂದು ರೇಣುಕಾಸ್ವಾಮಿ ಕೊಲೆ ನಡೆದಿದ್ದು, ಜೂನ್‌ 9ರಿಂದ ದರ್ಶನ್‌ ಅವರನ್ನು ವಶಕ್ಕೆ ಪಡೆದು ತನಿಖೆ ಮಾಡಲಾಗಿದೆ. ದರ್ಶನ್‌ ಅವರು ಬೆಂಗಳೂರು, ಬಳ್ಳಾರಿ ಜೈಲಿನಲ್ಲಿ ಒಂದಷ್ಟು ತಿಂಗಳು ಕಾಲ ಕಳೆದ ನಂತರದಲ್ಲಿ ಜಾಮೀನಿನ ಮೂಲಕ ಹೊರಗಡೆ ಬಂದಿದ್ದಾರೆ. ಇನ್ನು ಕೋರ್ಟ್‌ನಲ್ಲಿ ಈ ಪ್ರಕರಣ ನಡೆಯುತ್ತಿದೆ. ಈ ಪ್ರಕರಣ ಏನಾಗಲಿದೆ ಎಂದು ಕಾದು ನೋಡಬೇಕಿದೆ. 
 

vuukle one pixel image
click me!