ಹನಿಮೂನ್‌ಗೆ ಎಲ್ಲಿ ಹೋಗ್ತೀರಾ ಅಂತ ಕೇಳಿದ್ರೆ ಬಾತ್‌ರೂಮ್‌ಗೆ ಹೋಗಬೇಕು ಬಿಟ್ಟುಬಿಡಿ ಎಂದ ಅಭಿಷೇಕ್ ಅಂಬರೀಶ್!

Published : Jun 08, 2023, 11:14 AM IST
ಹನಿಮೂನ್‌ಗೆ ಎಲ್ಲಿ ಹೋಗ್ತೀರಾ ಅಂತ ಕೇಳಿದ್ರೆ ಬಾತ್‌ರೂಮ್‌ಗೆ ಹೋಗಬೇಕು ಬಿಟ್ಟುಬಿಡಿ ಎಂದ ಅಭಿಷೇಕ್ ಅಂಬರೀಶ್!

ಸಾರಾಂಶ

ಬಂದವರೆಲ್ಲಾ ಅಂಬಿ ಇರಬೇಕು ಎನ್ನುತ್ತಿದ್ದರು. ಮದುವೆ, ತಂದೆ, ಸ್ನೇಹಿತರು ಮತ್ತು ಹನಿಮೂನ್‌ ಬಗ್ಗೆ ಮಾತನಾಡಿದ ಅಭಿ. 

ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಖ್ಯಾತ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಜೂನ್ 5ರಂದು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಜೂನ್ 7ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಆರತಕ್ಷತೆ ನಡೆಯಿತ್ತು. ಆರತಕ್ಷತೆ ಕೊನೆಯಲ್ಲಿ ಮಾಧ್ಯಮ ಸ್ನೇಹಿತರ ಜೊತೆ ಅಭಿ ಮಾತನಾಡಿದ್ದಾರೆ. 

'ಮಾಧ್ಯಮ ಸ್ನೇಹಿತರು ಗಂಟೆಗಟ್ಟಲೆ ಕುಳಿತಿದ್ದೀರಿ. ಮದುವೆಗೆ ಆಗಮಿಸಿರುವ ಪ್ರತಿಯೊಬ್ಬರು  ಮಾತನಾಡಿದ್ದಾರೆ ಅಂದುಕೊಂಡಿದ್ದೀನಿ. ನನ್ನ ಕಡೆಯಿಂದ ನನ್ನ ಕುಟುಂಬದ ಕಡೆಯಿಂದ ಹೃತ್ಪೂರ್ವಕವಾದ ಧನ್ಯವಾದಗಳು. ನಿಮ್ಮ ಕೆಲಸನೂ ಆಯ್ತು ನನ್ನ ಮದುವೆ ಒಳ್ಳೆ ಕವರೇಜ್ ಸಿಕ್ಕಿದೆ ಎಲ್ಲಾ ಔಟ್‌ಪುಟ್‌ ಲೈವ್ ಕೊಟ್ಟಿದ್ದೀವಿ ನಾವು ಮಾಡಿರುವ ಸಣ್ಣ ಪುಟ್ಟ ತಪ್ಪುಗಳನ್ನು ನೀವು ದೊಡ್ಡದಾಗಿ ತೋರಿಸುತ್ತೀರಾ ಒಟ್ಟಿನಲ್ಲಿ ಎಲ್ಲಾ ರೀತಿ ಕಂಟೆನ್ಟ್‌ ಸಿಕ್ಕಿದೆ ಅಂತ ಅಂದುಕೊಂಡಿದ್ದೀನಿ' ಎಂದು ಅಭಿ ಮಾತನಾಡಿದ್ದಾರೆ. 

ಅರಮನೆ ಮೈದಾನದಲ್ಲಿ ಅಭಿಷೇಕ್‌-ಅವಿವಾ ಅದ್ಧೂರಿ ಆರತಕ್ಷತೆ: ನಟ-ನಟಿಯರು, ರಾಜಕಾರಣಿಗಳಿಂದ ನವ ಜೋಡಿಗೆ ಶುಭಹಾರೈಕೆ

'ನಮ್ಮ ತಂದೆ ಅಭಿಮಾನಿಗಳು ತುಂಬಾ ಪ್ರೀತಿ ಕೊಡುತ್ತಿದ್ದಾರೆ ಅದನ್ನು ತಡೆಯುವುದಕ್ಕೆ ಶಕ್ತಿ ಬೇಕು. ಎಲ್ಲೋ ಸ್ಟೇಜ್ ಮುರಿಯಿತ್ತು ಅಂತ ಹೇಳುತ್ತಿದ್ದರು ಅದಿಕ್ಕೆ ರಿಷಬ್ ಶೆಟ್ರು ಹೇಳುತ್ತಿದ್ದರು ಅಂಬರೀಶ್ ಅಣ್ಣನ ಮಗನ ಮದುವೆ ಅಂದ್ಮೇಲೆ ಸ್ಟೇಜ್ ಮುರಿಯಲೇ ಬೇಕು ಅಂತ. ನನ್ನ ಮದುವೆಗೆ ಸಿನಿಮಾ ಗಣ್ಯರು, ಸ್ನೇಹಿತರು, ರಾಜಕಾರಣಿಗಳು ಹಾಗೂ ಅಭಿಮಾನಿಗಳು ಬಂದಿದ್ದಾರೆ...ಮೊದಲು ಅವರಿಗೆ ಧನ್ಯವಾದಗಳನ್ನು ಹೇಳುತ್ತೀನಿ. ವೇದಿಕೆ ಮೇಲೆ ಬಂದವರು ನಿಮ್ಮಪ್ಪ ನಮ್ಮ ಸ್ನೇಹಿತ ಕಣ್ಣಪ್ಪ we cant miss this ಎನ್ನುತ್ತಿದ್ದಾರೆ. ಅದೆಷ್ಟೋ ಜನ ಬರುವುದೇ ಕಷ್ಟ ಅವರು ಸೆಕ್ಯೂರಿಟಿ ಪ್ರೋಟೋಕಾಲ್‌ ಎಲ್ಲಾ ಮ್ಯಾನೇಜ್ ಮಾಡಿಕೊಂಡು ಬರಬೇಕು ತುಂಬಾ ಕಷ್ಟನೇ. ಕಾಶ್ಮೀರದಿಂದ ಕನ್ಯಾಕುಮಾರ್, ವೆಸ್ಟ್‌ಯಿಂದ ಈಸ್ಟ್‌ ಬೇರೆ ದೇಶ ಎಲ್ಲಾ ಕಡೆಯಿಂದ ಜನರು ಮದುವೆಗೆ ಬಂದಿದ್ದಾರೆ. ಅಂಬರೀಶ್ ಅಣ್ಣ ಅವರ ಮಗನಿಗೆ ಆಶೀರ್ವಾದ ಮಾಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಬಂದಿದ್ದಾರೆ ಅದೇ ನನಗೆ ಖುಷಿ.  ನನ್ನ ತಂದೆ ಇದ್ದಿದ್ದರೆ ಇನ್ನು ಸೌಂಡ್ ಹೆಚ್ಚಾಗಿರುತ್ತಿತ್ತು ಜೋರ್ ಆಗಿ ನಡೆಯುತ್ತಿತ್ತು...ಮಾಧ್ಯಮದವರಿಗೆ ಒಳ್ಳೆ ಮನೋರಂಜನೆ ಸಿಗುತ್ತಿತ್ತು. ನೀವೆಲ್ಲಾ ಕೇಳುವ ಪ್ರಶ್ನೆಗೆ ತಂದೆ ಕರೆಕ್ಟ್‌ ಆಗಿರುವ ಉತ್ತರ ಕೊಡುತ್ತಿದ್ದರು' ಎಂದು ಅಭಿ ಹೇಳಿದ್ದಾರೆ. 

'ಮದುವೆ ಬಂದವರೆಲ್ಲಾ ಅಂಬರೀಶ್ ಅಣ್ಣ ಬಗ್ಗೆ ಮಾತನಾಡುತ್ತಾರೆ. ಶತ್ರುಘ್ನ ಸಿನ್ಹಾ ಅವರ ಕಾಲಿಗೆ ಪೆಟ್ಟು ಬಿದ್ದಿದೆ ಆದರೂ ಮದುವೆಯಲ್ಲಿ ಭಾಗಿಯಾಗಿದ್ದರು. ಚಿರಂಜೀವಿ ಸರ್ ಅವರು ಕುಟುಂಬದ ಜೊತೆ ಬಂದು ವಿಶ್ ಮಾಡಿದ ಖುಷಿ ಇದೆ' ಎಂದಿದ್ದಾರೆ ಅಭಿ. 

ಬಿದ್ದಪ್ಪ ಕುಟುಂಬದಿಂದ ಅಭಿಗೆ ಭರ್ಜರಿ ಗಿಪ್ಟ್ ,ಸೊಸೆಗಾಗಿ ಕೋಟಿ ಬೆಲೆ ಚಿನ್ನ ಸುರಿದ ಸುಮಲತಾ..

ಮದುವೆ ಜೀವನ ಹೇಗಿದೆ ಜವಾಬ್ದಾರಿಗಳು ಬದಲಾಗುತ್ತದೆ ಎಂದು ಮಾಧ್ಯಮ ಮಿತ್ರರು ಪ್ರಶ್ನೆ ಮಾಡಿದಾಗ 'ನಿಮಗೆ ಮದುವೆ ಆಗಿದ್ಯಾ? ಇಲ್ಲ ಅಂದ್ರೆ ಮದುವೆ ಮಾಡಿಕೊಳ್ಳಲಿ ಎಲ್ಲವೂ ಅರ್ಥವಾಗುತ್ತದೆ ಎಂದು ಅಭಿ ಕಾಮಿಡಿ ಮಾಡಿದರು. ಇಲ್ಲಿಗೆ ಬಿಡಲಿಲ್ಲ...ಮದುವೆ ನಂತರ ಎಲ್ಲಿಗೆ ಮೊದಲ ಟ್ರಿಪ್ ಎಂದು ಪ್ರಶ್ನೆ ಮಾಡಿದಾಗ ಮೊದಲು ನಾನು ಕ್ಯಾರವಾನ್‌ಗೆ ಹೋಗಬೇಕ ಬಾತ್‌ರೂಮ್‌ಗೆ ಹೋಗಬೇಕು ಬಿಟ್ಟುಬಿಡಿ ನನ್ನನ್ನು'ಎಂದು ಅಭಿ ಓಡಿ ಹೋಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬರ್ತಾ ಬರ್ತಾ ಸಖತ್ Bold ಆಗ್ತಿದ್ದಾರೆ ಬಿಗ್ ಬಾಸ್ ಸಿಂಹಿಣಿ Sangeetha Sringeri
ಮದ್ವೆ ಬಗ್ಗೆ ಡಾಲಿ ಧನಂಜಯ್​ ಒಂದೇ ಒಂದು ಮಾತು: 67% Gen Z ಮದ್ವೆಗೆ ರೆಡಿ! ಅಂಥದ್ದೇನು ಹೇಳಿದ್ರು ನಟ?