
ಹಿರಿಯ ನಟ ಕಾಶಿನಾಥ್ ಅವರು ಪುತ್ರ ಅಭಿಮನ್ಯು ಈಗ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಣ್ಣ ಸಣ್ಣ ಹೆಜ್ಜೆ ಇಡುತ್ತಾ ಜರ್ನಿ ಆರಂಭಿಸಿ ನಟನಿಗೆ ತಂದೆಯ ಸಪೋರ್ಟ್ ಎಷ್ಟು ಮುಖ್ಯ? ತಂದೆ ಅಗಲಿದ ಮೇಲೆ ಯಾವ ರೀತಿ ಬದಲಾವಣೆಗಳು ಆಯ್ತು? ತಂದೆಗೆ ಇದ್ದ ಆರೋಗ್ಯ ಸಮಸ್ಯೆ ಬಗ್ಗೆ ಯಾಕೆ ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ ಎಂದು ಹಂಚಿಕೊಂಡಿದ್ದಾರೆ.
'ತಂದೆಗೆ ಆದ ಅರೋಗ್ಯ ಸಮಸ್ಯೆ ಬಗ್ಗೆ ನಾವು ಎಲ್ಲೂ ಪಬ್ಲಿಕ್ ಮಾಡಲಿಲ್ಲ. ನಮ್ಮ ಮನೆಯಲ್ಲಿ ಒಟ್ಟು 15 ಜನ ಇದ್ದೀವಿ ಆದರೆ ಅವರಿಗೂ ನಾನು ಹೇಳಿರಲಿಲ್ಲ. ಕ್ಯಾನ್ಸರ್ ಇದೆ ಎಂದು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಸುಮಾರು 2 ವರ್ಷಗಳ ಕಾಲ ನನಗೆ ನನ್ನ ಚಿಕ್ಕಪ್ಪನಿಗೆ ಮಾತ್ರ ಗೊತ್ತಿತ್ತು. ತಂದೆ ಸತ್ತ ದಿನ ನನ್ನ ತಾಯಿಗೆ ಬಳಿ ಸತ್ಯ ಹೇಳಿದ್ದು. ಯಾರ್ ಅಂದ್ರೆ ಯಾರಿಗೂ ಗೊತ್ತಿರಲಿಲ್ಲ. ಲಿಂಫೋಮಾ ಎಂದು ಎಲ್ಲಾ ಲಿಂಫ್‌ನೋಡ್‌ಗಳಿಗೆ ಬರುವಂತ ಕ್ಯಾನ್ಸರ್ ಇದು. ಈ ಕಾಲದಲ್ಲಿ ಚಿಕ್ಕ ಮಕ್ಕಳಿಗೂ ಕೂಡ ಇದು ಬರುತ್ತದೆ ಅಂತ ಡಾಕ್ಟರ್ ಹೇಳುತ್ತಾರೆ. ಸಂಪೂರ್ಣವಾಗಿ ಗುಣವಾಗುತ್ತದೆ ಎಂದು ಡಾಕ್ಟರ್ ಭರವಸೆ ಕೊಟ್ಟಿದ್ದರು. ತಂದೆ ತಾಯಿ ಇಬ್ರೂ ತುಂಬಾ ಸೆನ್ಸಿಟಿವ್ ವ್ಯಕ್ತಿ ಆಗಿದ್ದರು ಹೀಗಾಗಿ ಅವರ ಮೇಲೆ ನಾವು ಒತ್ತಡ ಹಾಕಲಿಲ್ಲ. ಸುಮಾರ್ ಒಂದುವರೆ ವರ್ಷಗಳ ಕಾಲ ನಾವು ಆಯುರ್ವೇದ ಮತ್ತು ಹೋಮಿಯೋಪತಿ ಚಿಕಿತ್ಸೆ ಟ್ರೈ ಮಾಡಿದ್ವಿ. ಆರ್ಥಿಕವಾಗಿ ನಮಗೆ ಯಾವುದೇ ಸಮಸ್ಯೆ ಇರಲಿಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಕಾಶಿನಾಥ್ ಪುತ್ರ ಅಭಿಮಾನ್ಯ ಮಾತನಾಡಿದ್ದಾರೆ.
ದುಡ್ಡು ಉಳಿಸೋಕೆ ಹೆಂಡತಿ ನಾನು ಒಂದೇ ಬಟ್ಟೆ ಹಾಕೋದು, ಸೀರೆ ಸೆಲ್ವಾರ್ ಬಿಟ್ಟು: ನಿರಂಜನ್ ದೇಶಪಾಂಡೆ
' ತಂದೆ ತುಂಬಾ ಚೆನ್ನಾಗಿ ಜೀವನ ಕಟ್ಟಿಕೊಂಡಿದ್ದರು. ಆ ಸಮಯದಲ್ಲಿ ಎಲ್ಲರೂ ಸಿನಿಮಾ ಸಿನಿಮಾ ಅಂತ ಕಷ್ಟ ಪಡುತ್ತಿದ್ದರು, ನಮ್ಮ ತಂದೆ ಮಾತ್ರವಲ್ಲ ಆ ಸಮಯದಲ್ಲಿ ಬಂದ ಎಲ್ಲರೂ ಕಷ್ಟ ಪಟ್ಟರು. ತುಂಬಾ ಹಣ ಹಾಕಿ ತುಂಬಾ ಹಣ ಮಾಡುತ್ತಿದ್ದ ಸಮಯ ಅದಲ್ಲ. ತಂದೆ ತುಂಬಾ ಸರಿಯಾಗಿ ಪ್ಲ್ಯಾನ್ ಮಾಡುತ್ತಿದ್ದರು ಎಷ್ಟು ಹಣ ಸಿನಿಮಾಗೆ ಹಾಕಬೇಕು ಎಷ್ಟು ಹಣ ಫ್ಯಾಮಿಲಿಗೆ ಬಳಸಬೇಕು ಎಂದು ಯೋಚನೆ ಮಾಡಿ ಮಾಡುತ್ತಿದ್ದರು. ನಮ್ಮ ಜೀವನಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡಿದ್ದಾರೆ' ಎಂದು ಅಭಿಮನ್ಯು ಹೇಳಿದ್ದಾರೆ.
ಒಂದು ಸಮಯದಲ್ಲಿ ಅಪ್ಪ ನಾನು ಮಾತು ಶುರು ಮಾಡುತ್ತಿದ್ದೇ ಜಗಳದಿಂದ: ಹಿತಾ ಸಿಹಿಕಹಿ ಚಂದ್ರು
'ತಂದೆ ಇದ್ದಾಗ ಎದುರಿಸುವ ಚಾಲೆಂಜ್‌ಗಳು ತಂದೆ ಅಗಲಿದ ಮೇಲೆ ಎದುರಿಸಿದ ಚಾಲೆಂಜ್‌ಗಳು ಇದ್ದಿದ್ದೆ. ಎಲ್ಲರ ಜೀವನದಲ್ಲೂ ಒಂದಿಷ್ಟು ಬದಲಾವಣೆಗಳು ಆಗುತ್ತದೆ. ಕಷ್ಟ ಹೇಳಿಕೊಳ್ಳುವು ಇಲ್ಲ ಏಕೆಂದರೆ ತುಂಬಾ ಪರ್ಸನಲ್. ಆದರೆ ಹತ್ತರ ಇದ್ದವರು ದೂರ ಆದರು. ಎಲ್ಲೋ ಇದ್ದವರು ಸಹಾಯ ಮಾಡಲು ಮುಂದೆ ಬಂದರು. ಯಾರು ನಮ್ಮವರು ಅಂದುಕೊಳ್ಳುತ್ತೀವಿ ಅವರು ಸಹಾಯಕ್ಕೆ ಬರಲ್ಲ. ನಾನು ನನ್ನ ಬಗ್ಗೆ ತಿಳಿದುಕೊಂಡಿರುವುದರಲ್ಲಿ...ಬದಲಾವಣೆ ಅಂತ ಆಗಿದ್ದು ತಂದೆ ಅಗಲಿದ ಮೇಲೆ. ಜವಾಬ್ದಾರಿಗಳಿಂದ ನಾನು ಬದಲಾಗುವಂತೆ ಆಗಿತ್ತು. ಎಲ್ಲರ ಜೀವನದಲ್ಲೂ ಇದೊಂದು ಟರ್ನಿಂಗ್ ಪಾಯಿಂಟ್ ಆಗಿರುತ್ತದೆ' ಎಂದಿದ್ದಾರೆ ಅಭಿಮಾನ್ಯು.
ಈಗ ಹಣದ ಹಿಂದೆ ಓಡುತ್ತಿಲ್ಲ, ಪ್ರೀತಿ ಹುಡುಕುತ್ತಿಲ್ಲ ಮದುವೆ ಯೋಚನೆ ಇಲ್ವೇ ಇಲ್ಲ: ನಮ್ರತಾ ಗೌಡ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.