
ರಶ್ಮಿಕಾ ಮಂದಣ್ಣ.. ಈ ಹೆಸರನ್ನು ಕೇಳಿದರೆ ಸಾಕು, ಇಂದು ಇಡೀ ಭಾರತ ಕಣ್ಣರಳಿಸುತ್ತದೆ. ಕಾರಣ, ಕನ್ನಡ ಸಿನಿಮಾ 'ಕಿರಿಕ್ ಪಾರ್ಟಿ' ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕನ್ನಡದಲ್ಲಿ 2-3 ಸಿನಿಮಾ ಮಾಡಿದ ಬಳಿಕ ತೆಲುಗಿಗೆ ಹೋದ ರಶ್ಮಿಕಾ ಅವರು ಅಲ್ಲಿ ವಿನಯ್ ದೇವರಕೊಂಡ ಜೋಡಿಯಾಗಿ 'ಗೀತ ಗೋವಿಂದಂ' ಮೂಲಕ ದೊಡ್ಡ ಸ್ಟಾರ್ ಆಗಿಬಿಟ್ಟರು. ಬಳಿಕ ರಶ್ಮಿಕಾ ನಟಿಸಿದ ಆಲ್‌ಮೋಸ್ಟ್ ಆಲ್ ಎಲ್ಲಾ ಚಿತ್ರಗಳೂ ಸೂಪರ್ ಹಿಟ್ ಆಗುವ ಮೂಲಕ ತೆಲುಗಿನ ನಂಬರ್ ಒನ್ ಹೀರೋಯಿನ್ ಪಟ್ಟ ಪಡೆದುಕೊಂಡರು.
ಬಳಿಕ ಅವರು ಬಾಲಿವುಡ್ ಚಿತ್ರರಂಗಕ್ಕೂ ಕಾಲಿಟ್ಟರು. ಅಲ್ಲಿ ರಣಬೀರ್ ಕಪೂರ್ ಜೊತೆ 'ಆನಿಮಲ್' ಚಿತ್ರದಲ್ಲಿ ನಟಿಸಿ ಅಲ್ಲಿ ಕೂಡ ಸಕ್ಸಸ್ ಕಂಡರು. ಪುಷ್ಪಾ, ಪುಷ್ಪಾ 2 ಮೂಲಕ ತೆಲುಗಿನಲ್ಲಿ ಮತ್ತೆ ಮತ್ತೆ ಜಯಭೇರಿ ಭಾರಿಸಿದ್ದಾರೆ. ಅಷ್ಟರಲ್ಲೇ ಮತ್ತೆ ಬಾಲಿವುಡ್‌ಗೆ ಹೋಗಿ ಅಲ್ಲೂ 'ಛಾವಾ' ಸಿನಿಮಾ ಮೂಲಕ ಮತ್ತೆ ಯಶಸ್ಸು ಪಡೆದಿದ್ದಾರೆ. ಇದೀಗ ನಟ ಸಲ್ಮಾನ್ ಖಾನ್ ಅವರೊಂದಿಗೆ 'ಸಿಕಂದರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೀಗೆ ನಟಿ ರಶ್ಮಿಕಾ ಅವರ ಸಕ್ಸಸ್ ಕೆರಿಯರ್ ಜರ್ನಿ ಸಾಕಷ್ಟು ಆಸಕ್ತಿದಾಯಕವಾಗಿದೆ.
ರಶ್ಮಿಕಾ ಬಗ್ಗೆ ಟ್ರೋಲ್ ಕೆಟ್ಟದಾಗಿರುತ್ತೆ.. ಅದು ಸ್ಟಾಪ್ ಆಗಬೇಕು: ನಟಿ ರಮ್ಯಾ ಖಡಕ್ ಮಾತು..!
ನಟಿ ರಶ್ಮಿಕಾ ಮಂದಣ್ಣ ಅವರ ಸಿನಿಮಾ ಜರ್ನಿ ಬಗ್ಗೆ ಯಾರೂ ಏನೂ ಮಾತನಾಡೋ ಹಾಗೇ ಇಲ್ಲ. ಆದರೆ, ಅವರ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ಅವರನ್ನು ಜನರು ಟ್ರೋಲ್ ಮಾಡಿದ್ದು, ಟೀಕೆ ಮಾಡಿದ್ದು, ಕೆಟ್ಟ ಕೆಟ್ಟ ಕಾಮೆಂಟ್‌ಗಳನ್ನು ಮಾಡುವ ಮೂಲಕ ಮಾನಸಿಕ ಹಿಂಸೆ ನೀಡಿದ್ದು, ಎಲ್ಲವೂ ಬಹುತೇಕರಿಗೆ ಗೊತ್ತು. ಈಗಲೂ ಕೂಡ ನಟಿ ರಶ್ಮಿಕಾ ತಮ್ಮ ಹುಟ್ಟೂರು ಹೈದ್ರಾಬಾದ್ ಎಂದು ಹೇಳಿದ್ದಾರೆ ಎನ್ನವು ಮೂಲಕ ಮತ್ತೆ ಮತ್ತೆ ಟ್ರೋಲ್ ಆಗಿದ್ದಾರೆ.
ಆದರೆ, ರಕ್ಷಿತ್ ಜೊತೆಗಿನ ಎಂಗೇಜ್‌ಮೆಂಟ್ ವಿಷಯದಲ್ಲಿ ಅದೇನಾಯ್ತು ಎಂಬುದು ಯಾರಿಗೂ ಗೊತ್ತಿಲ್ಲ. ಸ್ವತಃ ನಟ ರಕ್ಷಿತ್ ಶೆಟ್ಟಿ ಈಗಲೂ ರಶ್ಮಿಕಾ ಬಗ್ಗೆ ಕೆಟ್ಟದಾಗಿ ಹೇಳಿಕೆ ಕೊಡುವುದಿಲ್ಲ, ಬೇಸರ ವ್ಯಕ್ತಪಡಿಸುವುದಿಲ್ಲ. ಅದಕ್ಕೂ ಸಿನಿಪ್ರೇಕ್ಷಕರಿಗೂ ಯಾವುದೇ ಸಂಬಂಧ ಇಲ್ಲ. ಆದರೂ ಆ ವಿಷಯದಲ್ಲಿ ರಶ್ಮಿಕಾರನ್ನೇ ಬಲಿಪಶು ಮಾಡಲಾಯ್ತು. ಅದಿರಲಿ, ಅವರು ತೆಲುಗು ನೆಲದಲ್ಲಿ ತೆಲುಗು ಮಾತನಾಡಿದರೆ ಅದಕ್ಕೂ ಟೀಕೆ..! ಅವರು ಆಂಧ್ರದಲ್ಲಿ ತೆಲುಗು ಮಾತನಾಡಿದರೆ ತಪ್ಪೇನು? ಕರ್ನಾಟಕಕ್ಕೆ ಬಂದರೆ ಅವರು ಕನ್ನಡದಲ್ಲೇ ಮಾತನಾಡುತ್ತಾರೆ.
ದರ್ಶನ್ ಬಗ್ಗೆ ರಮ್ಯಾ 'ನೋ ಕಾಮೆಂಟ್ಸ್'.. ಹಳೆಯ ಟ್ವೀಟ್ ಮರೆಯದ ನೆಟ್ಟಿಗರ ಟ್ರೋಲ್ ರಗಳೆ..!?
ಇನ್ನು ನಟಿಯರಾದ ರಶ್ಮಿಕಾ ಮಂದಣ್ಣ, ರಮ್ಯಾ ಅವರೆಲ್ಲರೂ ಮಾತಿನ ಮಧ್ಯೆ ಹೆಚ್ಚು ಇಂಗ್ಲಿಷ್ ಬಳಸುತ್ತಾರೆ. ಅದು ತೆಲುಗು, ಕನ್ನಡ ಎಂಬ ಬೇಧವಿಲ್ಲ, ಅವರು ಯಾವುದೇ ಭಾಷೆಯಲ್ಲಿ ಮಾತನಾಡುತ್ತಿರಲಿ, ಮಧ್ಯೆ ಹೆಚ್ಚು ಇಂಗ್ಲಿಷ್ ಉಪಯೋಗಿಸುತ್ತಾರೆ. ಅದು ಅವರ ಅಭ್ಯಾಸ. ಇವರೆಲ್ಲಾ ಕನ್ನಡಕ್ಕೇ ಸೀಮಿತರಾದ ನಟಿಯರಲ್ಲವಾದ್ದರಿಂದ ಅದು ತಪ್ಪು ಅಂತ ಹೇಳೋದಕ್ಕೂ ಅಸಾಧ್ಯ. ಅಷ್ಟಕ್ಕೂ, ಆಯಾ ಭಾಷೆಯ ಮೀಡಿಯಾಗಳ ಮುಂದೆ ಅವರದೇ ಭಾಷೆಯಲ್ಲಿ ಮಾತನ್ನಾಡುವುದು ತಪ್ಪು ಎಂದು ಹೇಗೆ ಹೇಳುವುದು ಎನ್ನುತ್ತಾರೆ ಹಲವರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.