ಕನ್ನಡದ ಮೇರು ನಟರು ಹುಟ್ಟಿದ ಊರು ಯಾವುದು? ಯಾವ ಜಿಲ್ಲೆ? ಉತ್ತರಕ್ಕೆ ಇಲ್ನೋಡಿ..!

Published : Mar 07, 2025, 02:28 PM ISTUpdated : Mar 07, 2025, 04:34 PM IST
ಕನ್ನಡದ ಮೇರು ನಟರು ಹುಟ್ಟಿದ ಊರು ಯಾವುದು? ಯಾವ ಜಿಲ್ಲೆ? ಉತ್ತರಕ್ಕೆ ಇಲ್ನೋಡಿ..!

ಸಾರಾಂಶ

ಅವರು ಹುಟ್ಟಿದ ಊರು ಅವರು ಸ್ಟಾರ್ ನಟರಾದ ಬಳಿಕ ಇನ್ನಷ್ಟು ಫೇಮಸ್ ಆಯ್ತು.. ಹಾಗಿದ್ದರೆ ಕನ್ನಡದ ಮೇರು ನಟರು ಹುಟ್ಟಿದ ಊರು ಯಾವುದು ಅನ್ನೋದಕ್ಕೆ ಇಲ್ಲಿ ನೋಡಿ.. ಡಾ ರಾಜ್‌ಕುಮಾರ್-ಗಾಜನೂರು, ನರಸಿಂಹರಾಜು-ತುಮಕೂರು..

ಕನ್ನಡದಲ್ಲಿ ಅನೇಕ ಮಹನೀಯ ನಟರು ಆಗಿಹೋಗಿದ್ದಾರೆ. ಅವರನ್ನು ಮೇರು ನಟರು ಎಂದು ಕರೆಯವುದು ವಾಡಿಕೆ. ಡಾ ರಾಜ್‌ಕುಮಾರ್ (Dr Rajkumar),  ನರಸಿಂಹರಾಜು, ಕೆಎಸ್‌ ಅಶ್ವಥ್‌, ವಿಷ್ಣುವರ್ಧನ್ (Vishnuvardhan), ರೆಬೆಲ್ ಸ್ಟಾರ್ ಅಂಬರೀಷ್ ಸೇರಿದಂತೆ, , ಅನಂತ್‌ ನಾಗ್, ಶಂಕರ್‌ ನಾಗ್, ವಜ್ರಮುನಿ, ದೊಡ್ಡಣ್ಣ, ತೂಗುದೀಪ ಶ್ರೀನಿವಾಸ್.. ಹೀಗೆ ಹೆಸರು ಹೇಳುತ್ತಾ ಹೋದರೆ, ಒಬ್ಬಿಬ್ಬರಲ್ಲ.. 

ಅವರು ಹುಟ್ಟಿದ ಊರು ಅವರು ಸ್ಟಾರ್ ನಟರಾದ ಬಳಿಕ ಇನ್ನಷ್ಟು ಫೇಮಸ್ ಆಯ್ತು.. ಹಾಗಿದ್ದರೆ ಕನ್ನಡದ ಮೇರು ನಟರು ಹುಟ್ಟಿದ ಊರು ಯಾವುದು ಅನ್ನೋದಕ್ಕೆ ಇಲ್ಲಿ ನೋಡಿ.. ಡಾ ರಾಜ್‌ಕುಮಾರ್-ಗಾಜನೂರು, ನರಸಿಂಹರಾಜು-ತುಮಕೂರು, ವಿಷ್ಣುವರ್ಧನ್-ಮೈಸೂರು, ರೆಬೆಲ್ ಸ್ಟಾರ್ ಅಂಬರೀಷ್-ಮಂಡ್ಯ, ದೊಡ್ಡಣ್ಣ-ಹಾಸನ,  ಶಂಕರ್‌ ನಾಗ್-ಉತ್ತರ ಕನ್ನಡ, ಅನಂತ್‌ ನಾಗ್-ಉತ್ತರ ಕನ್ನಡ, ಜಗ್ಗೇಶ್-ತುಮಕೂರು, ಕಾಶಿನಾಥ್-ಉಡುಪಿ, ರವಿಚಂದ್ರನ್-ಬೆಂಗಳೂರು, ವಜ್ರಮುನಿ-ಬೆಂಗಳೂರು, ಟೈಗರ್ ಪ್ರಭಾಕರ್-ಬೆಂಗೂರು, ತೂಗುದೀಪ ಶ್ರೀನಿವಾಸ-ಮೈಸೂರು..

ಟ್ರೋಲ್‌ ಮಾಡೋರಿಗೆ ರಶ್ಮಿಕಾ ಬಗ್ಗೆ ಅದೆಷ್ಟು ಗೊತ್ತು? ಅವ್ರನ್ನೇ ಟಾರ್ಗೆಟ್ ಮಾಡೋ ರಹಸ್ಯ..!?

ಹೌದು, ಕನ್ನಡಕ್ಕೆ ಹಲವು ಮೇರುನಟರು, ಹಿರಿಯ ನಟರು ಬಹಳಷ್ಟು ಕೊಡುಗೆ ನೀಡಿದ್ದಾರೆ. ಕೆಲವರು ತಮ್ಮ ಸಿನಿಮಾಗಳ ಮೂಲಕ ಕೊಡುಗೆ ನೀಡಿದ್ದರೆ ಇನ್ನೂ ಕೆಲವರು ಹಣದ ಸಹಾಯವನ್ನೂ ಮಾಡಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಷ್ ಅವರು ಬಹಳಷ್ಟು ಕಲಾವಿದರು ಕಷ್ಟದಲ್ಲಿದ್ದಾಗ ವೈಯಕ್ತಿಕವಾಗಿ ಸಹಾಯ ಮಾಡಿದ್ದಲ್ಲದೇ, ಹಲವು ಸಿನಿಮಾಗಳು ಕಾಸಿಲ್ಲದೇ ನಿಂತಾಗ, ಅದಕ್ಕೆ ಕಾಸು ಕೊಟ್ಟು ಶೂಟಿಂಗ್ ಆಗಿ ಸಿನಿಮಾ ತೆರೆಗೆ ಬರುವಂತೆ ನೋಡಿಕೊಂಡಿದ್ದಾರೆ. ಇನ್ನು, ವಿಷ್ಣುವರ್ಧನ್ ಅವರು ರಹಸ್ಯವಾಗಿಯೇ ಹಲವು ಕಲಾವಿದರಿಗೆ, ಸಂಘ-ಸಂಸ್ಥೆಗಳಿಗೆ ಸಹಾಯ ಮಾಡಿದ್ದಾರೆ. 

ಹಲವರು ಮಾಡಿದ ಹಲವು ಸಹಾಯಗಳು ಬೆಳಕಿಗೇ ಬಂದಿಲ್ಲ. ಕಾರಣ, ಅವರು ವೈಯಕ್ತಿಕವಾಗ ಸಹಾಯ ಮಾಡಿದ್ದಾರೆ. ಅದನ್ನು ಅವರು ಮನೆಯವರೂ ಸೇರಿದಂತೆ, ಯಾರಲ್ಲೂ ಹೇಳಿಕೊಂಡಿಲ್ಲ. ಯಾರು ಸಹಾಯ ಪಡೆದಿದ್ದಾರೆ ಅವರಿಂದ 'ಹೇಳಬಾರದು' ಎಂದು ಮಾತು ತೆಗೆದುಕೊಂಡಿರುತ್ತಾರೆ. ಹೀಗಾಗಿ, ಅನೇಕ ಮೇರು ಕಲಾವಿದರ ದಾನಗಳು, ಸಾಮಾಜಿಕ ಸೇವೆಗಳು ಬಯಲಿಗೇ ಬರುವುದಿಲ್ಲ. ಇನ್ನು, ಹಿರಿಯ ಕಲಾವಿದರಲ್ಲಿ ಬಹಳಷ್ಟು ಜನರು ಇಂದು ನಮ್ಮೊಂದಿಗೆ ಇಲ್ಲ.

ರಶ್ಮಿಕಾ ಬಗ್ಗೆ ಟ್ರೋಲ್ ಕೆಟ್ಟದಾಗಿರುತ್ತೆ.. ಅದು ಸ್ಟಾಪ್ ಆಗಬೇಕು: ನಟಿ ರಮ್ಯಾ ಖಡಕ್ ಮಾತು..!

ಕನ್ನಡದ ಹಲವು ಸಿನಿಪ್ರೇಮಿಗಳಿಗೆ ಅವರು ಮೆಚ್ಚುವ, ಆರಾಧಿಸುವ ನಟರುಗಳ ಊರು ಯಾವುದು ಅಂತ ಗೊತ್ತಿರೋದಿಲ್ಲ. ಆದರೆ, ಅವರಿಗೆ ಆ ಬಗ್ಗೆ ಕುತೂಹಲ ಇರುತ್ತದೆ. ಅವರಿಗಾಗಿ ಹುಡಕಾಡಿ, ಈ ಮಾಹಿತಿ ನೀಡಲಾಗಿದೆ, ತಿಳಿದುಕೊಂಡು ಖುಷಿ ಪಡಿ.. ಯಾರಿಗೆ ಗೊತ್ತು? ಅವರಲ್ಲಿ ಯಾರಾದ್ರೂ ನಿಮ್ಮ ಜೆಲ್ಲಯವರೇ ಆಗಿರಬಹುದು, ಊರಿನವರೂ ಆಗಿರಬಹುದು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದರ್ಶನ್‌ ಡೆವಿಲ್‌ ಸಿನಿಮಾದ ಫಸ್ಟ್ ಡೇ ಫಸ್ಟ್‌ ಶೋ ಹೌಸ್‌ಫುಲ್‌: ಎಷ್ಟು ಕೋಟಿ ಕಲೆಕ್ಷನ್ ಆಗಿದೆ ಗೊತ್ತಾ?
ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!