Ambareesh ಸ್ಮಾರಕ ನಿರ್ಮಾಣಕ್ಕೆ 12 ಕೋಟಿ: ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ

By Suvarna NewsFirst Published Jan 6, 2022, 3:23 PM IST
Highlights

ಅಂಬರೀಶ್ ಸ್ಮಾರಕ ನಿರ್ಮಾಣಕ್ಕಾಗಿ 12 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್‌ ಅವರ ಸ್ಮಾರಕ ನಿರ್ಮಾಣ ಆಗಲಿದೆ.
 

ಬೆಂಗಳೂರು (ಜ.06): ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾಗಿ ಮೂರು ವರ್ಷ ಕಳೆದಿದ್ದರೂ ಇನ್ನೂ ಸ್ಮಾರಕ ನಿರ್ಮಾಣ ಕಾರ್ಯ ಆರಂಭವಾಗಿಲ್ಲ ಎಂದು ಬೇಸರ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಈಗ ಗುಡ್‌ ನ್ಯೂಸ್‌ ಸಿಕ್ಕಿದೆ. ಕನ್ನಡ ಚಿತ್ರರಂಗಕ್ಕೆ (Sandalwood) ಹಿರಿಯ ನಟ 'ಮಂಡ್ಯದ ಗಂಡು' ಅಂಬರೀಷ್‌ (Ambareesh) ನೀಡಿದ ಕೊಡುಗೆ ದೊಡ್ಡದು. ಅವರಿಗೆ ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳ ಬಳಗ ಇದೆ. 2018ರ ನವೆಂಬರ್‌ 24ರಂದು 'ರೆಬೆಲ್ ಸ್ಟಾರ್' ಇಹಲೋಕ ತ್ಯಜಿಸಿದರು. ಆದರೆ ಸಿನಿಮಾಗಳ ಮೂಲಕ ಜನರ ಮನದಲ್ಲಿ ಅವರು ಸದಾ ಜೀವಂತ. ಸ್ಮಾರಕದ ಮೂಲಕ ಅವರ ನೆನಪನ್ನು ಶಾಶ್ವತವಾಗಿರಿಸುವ ಆಸೆ ಅಭಿಮಾನಿಗಳು ಮತ್ತು ಕುಟುಂಬದವರದ್ದು. ಆ ಕಾರ್ಯಕ್ಕೆ ಇದೀಗ ಹೊಸ ವೇಗ ದೊರೆತಿದೆ.

ಹೌದು! ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಸ್ಮಾರಕ ನಿರ್ಮಾಣಕ್ಕಾಗಿ 12 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ (Cabinet Meeting) ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ (Kanteerava Studio) ಅಂಬರೀಷ್‌ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಅದೇ ಸ್ಟುಡಿಯೋ ಆವರಣದಲ್ಲಿ ಅವರ ಸ್ಮಾರಕ ಕೂಡ ನಿರ್ಮಾಣ ಆಗಲಿದೆ. ಅದಕ್ಕಾಗಿ 1 ಎಕರೆ 34 ಗುಂಟೆ ಜಾಗವನ್ನು ರಾಜ್ಯ ಸರ್ಕಾರ ಈ ಹಿಂದೆ ನೀಡಿದ್ದು, ಅದರ ಮೊದಲ ಹಂತವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರು  5 ಕೋಟಿ ರೂ. ಬಿಡುಗಡೆ ಮಾಡಿದ್ದರು. 

Latest Videos

MLC Election:ಮಂಡ್ಯದಲ್ಲಿ ಸುಮಲತಾ ಬೆಂಬಲ ಯಾವ ಪಕ್ಷಕ್ಕೆ ಎನ್ನುವ ಕುತೂಹಲಕ್ಕೆ ತೆರೆ

ಈ ಹಿಂದೆ ನಡೆದ ಅಂಬಿ ಪುಣ್ಯಸ್ಮರಣೆಯಲ್ಲಿ ಪತ್ನಿ ಸುಮಲತಾ ಅಂಬರೀಶ್ (Sumalatha Ambareesh), ಅಭಿಷೇಕ್ ಅಂಬರೀಶ್ (Abhishek Ambareesh) ಸೇರಿದಂತೆ ಕುಟುಂಬಸ್ಥರು ಕಂಠೀರವ ಸ್ಟುಡಿಯೋಗೆ ಬಂದು ಅಂಬಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಅಂಬರೀಶ್ ಅವರು ಇಲ್ಲದೆ ಮೂರು ವರ್ಷ ಕಳೆದು ಹೋಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದರು. ಹಾಗೂ  ಅಂಬರೀಶ್ ಅವರು ಸಿನಿಮಾ, ರಾಜಕಾರಣಿಯಲ್ಲ. ಅವರು ಸಮಾಜಮುಖಿ ಕೆಲಸಗಳನ್ನು ತೋರಿಕೆಗಾಗಿ ಮಾಡಿಲ್ಲ. ಕಷ್ಟದಲ್ಲಿ ಇದ್ದವರಿಗೆ ಸ್ಪಂದಿಸಿದವರು. ಅವರ ಸಮಾಜಮುಖಿ ಕೆಲಸಗಳನ್ನು ಮುಂದುವರಿಸಲು ಡಾ.ಅಂಬರೀಶ್ ಚಾರಿಟೇಬಲ್ ಟ್ರಸ್ಟ್ (Dr.Ambareesh Charitable Trust) ಮಾಡಿದ್ದೇವೆ. 

ಈ ಮೂಲಕ ಅವರ ಕನಸುಗಳನ್ನು ಮುಂದುವರೆಸುತ್ತಿದ್ದೇವೆ. ಗ್ರಾಮೀಣ ಪ್ರತಿಭೆಗಳನ್ನು ಹೊರ ತರುವ ಕೆಲಸ ಮಾಡುತ್ತೇವೆ. ಕೋವಿಡ್ (Covid) ಸಂದರ್ಭದಲ್ಲಿ ಏನು ಮಾಡೋಕೆ ಆಗಿಲ್ಲ. ಈ ಫೌಂಡೇಶನ್ ಮೂಲಕ ಅಂಬರೀಶ್ ಮಾಡುವ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ. ಜೊತೆಗೆ ಕ್ರೀಡಾಪಟುಗಳು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುತ್ತೇವೆ. ನಮಗೆ ಶಕ್ತಿಯಿದ್ದಷ್ಟು ಕೆಲಸ ಮಾಡುತ್ತೇವೆ. ಇವತ್ತು ಅಂಬರೀಶ್ ಮೂರನೇ ಪುಣ್ಯ ಸ್ಮರಣೆ. ಅವರು ಇಲ್ಲ ಎಂಬ ನೋವು ಶಾಶ್ವತ. ಅವರು ಜೀವನದಲ್ಲಿ ನಡೆದುಕೊಂಡು ಬಂದಿರೋ ಹಾದಿ ನಮಗೆ ಶಕ್ತಿ. ಅಂಥವರನ್ನು ಕಳೆದುಕೊಂಡ ಮೇಲೆ ಧೈರ್ಯ ಬೇಕು. ಅವರ ಜೊತೆ ಕಳೆದ ಸಮಯ ನೆನಪಿಸಿಕೊಂಡರೆ ಧೈರ್ಯ ಬರುತ್ತದೆ ಎಂದು ಸುಮಲತಾ ಅಂಬರೀಶ್ ಹೇಳಿದ್ದರು.

ಆಕ್ರೋಶಕ್ಕೆ ಕಾರಣವಾದ ಸಂಸದೆ ಸುಮಲತಾ ಅಂಬರೀಶ್ ನಡೆ

ಅಂಬರೀಶ್‌ಗೆ ಪ್ರಶಸ್ತಿ ಸಿಕ್ಕೆ ಸಿಗುತ್ತೆ: ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಅಂಬರೀಶ್ ತುಂಬಾ ವರ್ಷದಿಂದ ಆಪ್ತರು. ಅಂಬರೀಶ್‌ಗೆ ಪ್ರಶಸ್ತಿ ಸಿಕ್ಕೆ ಸಿಗುತ್ತೆ. ಅವರು ಯಾವುದೇ ಸ್ಥಾನ, ಪ್ರಶಸ್ತಿಯನ್ನು ಲಾಬಿ ಮಾಡಿ ಕಸಿದುಕೊಂಡಿಲ್ಲ. ಹೀಗಾಗಿ ಅಭಿಮಾನಿಗಳು ಹೋರಾಟ ಎನ್ನುವ ಪದ ಉಪಯೋಗಿಸಬಾರದು. ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದೆ ಅಂದರೆ ಅಂಬರೀಶ್‌ಗೆ ಸಿಕ್ಕ ಹಾಗೆ ಎಂದು ಈ ಹಿಂದೆ ಸುಮಲತಾ ತಿಳಿಸಿದ್ದರು.

click me!