Puneeth Rajkumar: 'ಹರೀಶ ವಯಸ್ಸು 36' ಚಿತ್ರಕ್ಕೆ ಪವರ್ ಸ್ಟಾರ್ ಅಪ್ಪು ಹಾಡು

Suvarna News   | Asianet News
Published : Jan 06, 2022, 10:53 AM ISTUpdated : Jan 06, 2022, 11:00 AM IST
Puneeth Rajkumar: 'ಹರೀಶ ವಯಸ್ಸು 36' ಚಿತ್ರಕ್ಕೆ ಪವರ್ ಸ್ಟಾರ್ ಅಪ್ಪು ಹಾಡು

ಸಾರಾಂಶ

‘ಹರೀಶ ವಯಸ್ಸು 36’ ಚಿತ್ರಕ್ಕಾಗಿ ಪುನೀತ್‌ ರಾಜ್‌ಕುಮಾರ್‌ ಹಾಡಿರುವ ‘ಹರೀಶಣ್ಣಗೆ ವಯಸ್ಸು 36, ಮದ್ವೆ ಆಗ್ಲಿಲ್ಲ ಅಂತ ಬೇಜಾರು’ ಹಾಡು ಬಿಡುಗಡೆಯಾಗಿದೆ. ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಹಾಡು ನೋಡಬಹುದು. 

‘ಹರೀಶ ವಯಸ್ಸು 36’ (Hareesha Vayassu 36) ಚಿತ್ರಕ್ಕಾಗಿ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಹಾಡಿರುವ ‘ಹರೀಶಣ್ಣಗೆ ವಯಸ್ಸು 36, ಮದ್ವೆ ಆಗ್ಲಿಲ್ಲ ಅಂತ ಬೇಜಾರು’ ಹಾಡು ಬಿಡುಗಡೆಯಾಗಿದೆ. ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಹಾಡು ನೋಡಬಹುದು. ಈ ಬಗ್ಗೆ ವಿವರಿಸಿದ ನಿರ್ದೇಶಕ ಗುರುರಾಜ್‌ ಜೇಷ್ಠ (Gururaj Jeshta), ‘ಪುನೀತ್‌ ಸಿನಿಮಾ ರೆಡಿಯಾದ ಮೇಲೆ ಪಿಆರ್‌ಕೆ ಸ್ಟುಡಿಯೋಗೆ (PRK Studio) ಬಂದು ಒಮ್ಮೆ ತೋರಿಸಿ ಅಂದಿದ್ದರು. ಈ ಹಾಡು ರೆಕಾರ್ಡಿಂಗ್‌ನ ದಿನ ಮೊದಲು ಅವರ ತಂದೆ ಡಾ. ರಾಜ್‌ಕುಮಾರ್ (Dr.Rajkumar) ಅವರು ಹಾಡಿದ್ದ ದೇವರ ನಾಮ ಹಾಡಿ ಆ ಬಳಿಕ ನಮ್ಮ ಚಿತ್ರದ ಗೀತೆಗೆ ದನಿಯಾದರು. 

ಇದೀಗ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿರುವ ಹರೀಶ ವಯಸ್ಸು 36 ಚಿತ್ರತಂಡ ಅಪ್ಪು ದನಿಯಾಗಿರುವ ‘ಹರಿಶಣ್ಣಂಗೆ ವಯಸ್ಸು ಮೂವತ್ತಾರು’ ಹಾಡಿನ ಮೇಕಿಂಗ್ ವೀಡಿಯೋ (Making Video) ಬಿಡುಗಡೆ ಮಾಡಿದೆ. ಅಪ್ಪು ದನಿಯಲ್ಲಿ ಮೂಡಿ ಬಂದ ಈ ಹಾಡಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಾಡು ಕೇಳುತ್ತಿದ್ದರೆ ಆ ದಿನ ನೆನಪಾಗುತ್ತದೆ.  ಈ ಸಿನಿಮಾದ ನಾಯಕ ಹೆಸರಿಗೆ ಲ್ಯಾಂಡ್‌ ಬ್ರೋಕರ್‌, ಆದರೆ ನಯಾ ಪೈಸೆ ಆದಾಯ ಇಲ್ಲ. ವಯಸ್ಸು 36, ಮದುವೆಯ ಬಗ್ಗೆ ಆಸೆ ಇದೆ. ಈತನ ಪಡಿಪಾಟಲುಗಳನ್ನೇ ಹಾಸ್ಯವಾಗಿ ಹೇಳಿದ್ದೇವೆ. ಇದರ ವಿನ್ಯಾಸದಲ್ಲಿ ತುಳು ಹಾಸ್ಯ ನಾಟಕದ ಛಾಯೆ ಇದೆ’ ಎಂದರು.

Jothe Jotheyali ಧಾರಾವಾಹಿಯಲ್ಲಿ ದೊಡ್ಡ ಬದಲಾವಣೆ; ಆರ್ಯವರ್ಧನ್‌ ಪ್ಲ್ಯಾನ್ ಏನು?

‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ (Sarkari Hi Pra Shaale Kasaragodu) ಚಿತ್ರದಲ್ಲಿ ಮಲಯಾಳಿ ಟೀಚರ್‌ ಜೋಸೆಫ್‌ ಪಾತ್ರ ನಿರ್ವಹಿಸಿದ್ದ ಯೋಗೀಶ್‌ ಶೆಟ್ಟಿ (Yogish Shetty) ಚಿತ್ರದ ನಾಯಕ. ‘ಈ ಸಿನಿಮಾದ ಆಫರ್‌ ಬರುವಾಗ ನನಗೂ ಮದುವೆ ಆಗಿರಲಿಲ್ಲ. ಆಮೇಲೆ ಮುಂದಿನ ಪರಿಣಾಮ ಊಹಿಸಿ ಮದುವೆ ಆದೆ. ನಿರ್ದೇಶಕರು, ಆ್ಯಕ್ಟಿಂಗ್‌ ಮಾಡೋದು ಬೇಡ. ನೀವು ಇರುವ ಹಾಗೆ ಇದ್ದರಾಯ್ತು ಎಂದಿದ್ದರು. ಹೀಗಾಗಿ ಸಿನಿಮಾ ಸಹಜವಾಗಿ ಬಂದಿದೆ. ನನಗೆ ಹೀರೋಗಿಂತಲೂ ಚಿತ್ರದ ಕ್ಯಾರೆಕ್ಟರ್‌ ಆಗಲಿಕ್ಕೆ ಇಷ್ಟ’ ಎಂದರು. ನಾಯಕಿ ಶ್ವೇತಾ ಅರೆಹೊಳೆ ಭರತನಾಟ್ಯ ಹಾಗೂ ರಂಗಭೂಮಿ ಹಿನ್ನೆಲೆಯವರು. ನಿರ್ಮಾಪಕರಾದ ಲಕ್ಷ್ಮೀಕಾಂತ್‌ ರಾವ್‌, ತ್ರಿಲೋಕ್‌ ಝಾ, ಚಕ್ರಧರ್‌ ರೆಡ್ಡಿ ಹಾಜರಿದ್ದರು.

ಜನವರಿ 7ರಂದು Amazon Primeನಲ್ಲಿ Pushpa ಸಿನಿಮಾ ರಿಲೀಸ್!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟೈಟಲ್ ಹಾಡನ್ನು (Title Song) ಹಾಡಿದ್ದರು. ಈ ಸಿನಿಮಾವನ್ನು ಪಿಆರ್​ಕೆ ಬ್ಯಾನರ್ ಪ್ರಮೋಶನ್ ಮಾಡುವುದಾಗಿ ಹೇಳಿದ್ದರು ಎಂದು ನಿರ್ದೇಶಕ ಗುರುರಾಜ್ ತಿಳಿಸಿದ್ದಾರೆ. ಮೋಹನ್ ಪಡ್ರೆ ಕ್ಯಾಮೆರಾಮ್ಯಾನ್ ಆಗಿದ್ದು, ನಿರ್ದೇಶಕ ಗುರುರಾಜ್ ಜೈಷ್ಠ ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಲಕ್ಷ್ಮಿಕಾಂತ್, ತ್ರಿಲೋಕ್ ಝಾ, ಚಿಂತಕುಂಟ ಈ ಮೂರು ಜನ ನಿರ್ಮಾಪಕರು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸದ್ಯ ಟೈಟಲ್​​, ಪೋಸ್ಟರ್​ನಿಂದಲೇ ಗಮನ ಸೆಳೆಯುತ್ತಿರೋ 'ಹರೀಶ ವಯಸ್ಸು 36' ಸಿನಿಮಾ ಈ ತಿಂಗಳಲ್ಲಿ ಬಿಡುಗಡೆ ಆಗೋದಕ್ಕೆ ರೆಡಿಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?