Sandalwood Movies: ಅನಿಶ್ಚಿತತೆಯಲ್ಲಿ ಚಿತ್ರರಂಗ, ಸದ್ಯಕ್ಕಿಲ್ಲ ಸಿನಿಮಾ ಬಿಡುಗಡೆ

Kannadaprabha News   | Asianet News
Published : Jan 06, 2022, 10:04 AM ISTUpdated : Jan 06, 2022, 10:08 AM IST
Sandalwood Movies: ಅನಿಶ್ಚಿತತೆಯಲ್ಲಿ ಚಿತ್ರರಂಗ, ಸದ್ಯಕ್ಕಿಲ್ಲ ಸಿನಿಮಾ ಬಿಡುಗಡೆ

ಸಾರಾಂಶ

ರಾಜ್ಯದಲ್ಲಿ ನೈಟ್‌ ಕರ್ಫ್ಯೂ, ವೀಕೆಂಡ್‌ ಕರ್ಫ್ಯೂ ಜಾರಿಗೆ ಬಂದ ತಕ್ಷಣವೇ ಚಿತ್ರರಂಗಕ್ಕೆ ಅನಿಶ್ಚಿತತೆ ಎದುರಾಗಿದೆ. ಇನ್ನೇನು ಚಿತ್ರಮಂದಿರಗಳಿಗೆ ಪ್ರೇಕ್ಷಕ ಬರುತ್ತಿದ್ದಾನೆ ಎಂದು ಎಲ್ಲರೂ ಸಿನಿಮಾ ಬಿಡುಗಡೆ ಮಾಡಲು ಧೈರ್ಯ ತೆಗೆದುಕೊಳ್ಳುವ ಹೊತ್ತಿಗೆ ಕೊರೋನಾ ಮತ್ತೆ ವಕ್ಕರಿಸಿದೆ. ಈಗ ಚಿತ್ರರಂಗ ಮುಂದೇನು ಎಂಬ ದೊಡ್ಡ ಪ್ರಶ್ನೆಯನ್ನು ಹೊತ್ತುಕೊಂಡು ಕುಳಿತಿದೆ.

ರಾಜ್ಯದಲ್ಲಿ ನೈಟ್‌ ಕರ್ಫ್ಯೂ (Night Curfew), ವೀಕೆಂಡ್‌ ಕರ್ಫ್ಯೂ (Weekend Curfew) ಜಾರಿಗೆ ಬಂದ ತಕ್ಷಣವೇ ಚಿತ್ರರಂಗಕ್ಕೆ ಅನಿಶ್ಚಿತತೆ ಎದುರಾಗಿದೆ. ಇನ್ನೇನು ಚಿತ್ರಮಂದಿರಗಳಿಗೆ ಪ್ರೇಕ್ಷಕ ಬರುತ್ತಿದ್ದಾನೆ ಎಂದು ಎಲ್ಲರೂ ಸಿನಿಮಾ ಬಿಡುಗಡೆ ಮಾಡಲು ಧೈರ್ಯ ತೆಗೆದುಕೊಳ್ಳುವ ಹೊತ್ತಿಗೆ ಕೊರೋನಾ (Corona Virus) ಮತ್ತೆ ವಕ್ಕರಿಸಿದೆ. ಈಗ ಚಿತ್ರರಂಗ ಮುಂದೇನು ಎಂಬ ದೊಡ್ಡ ಪ್ರಶ್ನೆಯನ್ನು ಹೊತ್ತುಕೊಂಡು ಕುಳಿತಿದೆ.

ಜೋಗಿ ಪ್ರೇಮ್‌ (Jogi Prem) ನಿರ್ದೇಶನದ ‘ಏಕ್‌ ಲವ್‌ ಯಾ’ (Ek Love Ya) ಚಿತ್ರ ಇದೇ ಜನವರಿ 21ಕ್ಕೆ ಬಿಡುಗಡೆ ಎಂದು ಘೋಷಣೆ ಮಾಡಲಾಗಿತ್ತು. ಸುದೀಪ್‌ (Sudeep) ಅಭಿನಯದ ಪ್ಯಾನ್‌ ಇಂಡಿಯಾ ಚಿತ್ರ ‘ವಿಕ್ರಾಂತ್‌ ರೋಣ’ (Vikrant Rona) ಫೆಬ್ರವರಿ 24ರಂದು ತೆರೆಗೆ ಬರುವ ತಯಾರಿಯಲ್ಲಿತ್ತು. ಇದರ ಜತೆಗೆ ಫೆ.11ಕ್ಕೆ ಡಾರ್ಲಿಂಗ್‌ ಕೃಷ್ಣ (Darling Krishna) ಅಭಿನಯದ ‘ಲವ್‌ ಮಾಕ್ಟೇಲ್‌ 2’ (Love Mocktail 2), ಶ್ರೀನಿ (Srini) ನಟನೆ- ನಿರ್ದೇಶನದ ‘ಓಲ್ಡ್‌ ಮಾಂಕ್‌’ (OldMonk) ಹಾಗೂ ಶರಣ್‌ (Sharan) ನಟನೆಯ ‘ಅವತಾರ ಪುರುಷ’ (Avatara Purusha) ಸೇರಿದಂತೆ ಹಲವು ಚಿತ್ರಗಳು ಪ್ರೇಕ್ಷಕರ ಮುಂದೆ ಬರುವ ಸಂಭ್ರಮದಲ್ಲಿದ್ದವು. ಆದರೆ ಈಗ ಈ ಸಿನಿಮಾಗಳು ಚಿತ್ರಮಂದಿರಕ್ಕೆ ಬರುವುದು ಅನುಮಾನವಾಗಿದೆ. ಪ್ರೇಮ್‌ ಅಂತೂ ತಮ್ಮ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿರುವುದನ್ನು ಘೋಷಿಸಿಬಿಟ್ಟಿದ್ದಾರೆ.

Actress Prema: ಕೋರ್ಟ್‌ ಸೀನ್‌ನಲ್ಲಿ ನಟಿಸುವ ಬಗ್ಗೆ ಭಯ ಇತ್ತು

ಚಿತ್ರಮಂದಿರದಲ್ಲಿ ಶೇ.50 ಸೀಟು ಭರ್ತಿ ಆದೇಶ ಮತ್ತೆ ಬಂದಿರುವುದರಿಂದ ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುವುದು ಕಡಿಮೆಯಾಗಿದೆ. ಆ ಪ್ರಯುಕ್ತ ಯಾರೂ ಸಿನಿಮಾ ಬಿಡುಗಡೆ ಮಾಡಲು ಮುಂದಾಗುತ್ತಿಲ್ಲ. ಇದೇ ಜ.7ರಂದು ಬಿಡುಗಡೆ ಆಗಬೇಕಿದ್ದ ‘ಡಿಎನ್‌ಎ’ (DNA) ಚಿತ್ರದ ನಿರ್ದೇಶಕ ಪ್ರಕಾಶ್‌ ರಾಜ್‌ ಮೇಹು (PrakashRaj Mehu) ಕೂಡ ಇದೇ ಮಾತನ್ನು ಹೇಳುತ್ತಾರೆ. ‘ಜನಕ್ಕೆ ಸಿನಿಮಾ ನೋಡಲು ಸಮಯ ಸಿಗುವುದೇ ವಾರದ ಕೊನೆಯಲ್ಲಿ. ಆದರೆ, ಶನಿವಾರ ಹಾಗೂ ಭಾನುವಾರ ಎರಡೂ ದಿನ ಸಿನಿಮಾ ಶೋ ಇರಲ್ಲ. ಎಲ್ಲವೂ ಸಂಪೂರ್ಣವಾಗಿ ಬಂದ್‌ ಮಾಡುವಾಗ ನಮ್ಮ ಚಿತ್ರವನ್ನು ಬಿಡುಗಡೆ ಮಾಡುವುದು ಸಾಧ್ಯವಿಲ್ಲ’ ಎನ್ನುತ್ತಾರೆ.

ಫೆಬ್ರವರಿ ಹಾಗೂ ಏಪ್ರಿಲ್‌ ತಿಂಗಳಲ್ಲಿ ಬಿಡುಗಡೆ ಆಗುವ ಚಿತ್ರಗಳ ನಿರ್ಮಾಪಕರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಈ ಸಮಸ್ಯೆ ಬರೀ ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ. ಬೇರೆ ಭಾಷೆಯ ಸಿನಿಮಾಗಳ ಬಿಡುಗಡೆಯೂ ಮುಂದಕ್ಕೆ ಹೋಗಿದೆ. ಜ.14ರಂದು ತೆರೆಗೆ ಬರಬೇಕಿದ್ದ ಪ್ರಭಾಸ್‌ ನಟನೆಯ ಬಹು ಕೋಟಿ ವೆಚ್ಚದ ‘ರಾಧೆ ಶ್ಯಾಮ್‌’ (Radhe Shyam) ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಸದ್ಯ ಕಾದು ನೋಡುವುದಷ್ಟೇ ಎಲ್ಲರ ಮುಂದೆ ಇರುವ ದಾರಿ.

ಕನ್ನಡ ಚಿತ್ರರಂಗಕ್ಕೆ ಹೊಸ ವರ್ಷ ಶುಭ ತರಲಿ: ನಿರ್ಮಾಪಕರಿಗೆ (Producer) ಸಿನಿಮಾ ರಿಲೀಸ್‌ ಚಿಂತೆ. ಪ್ರೇಕ್ಷಕರಿಗೆ ತಮ್ಮಿಷ್ಟದ ನಿರೀಕ್ಷೆಯ ಹೊಸ ಸಿನಿಮಾ ಯಾವಾಗ ಬಿಡುಗಡೆಯಾಗುವುದು ಎಂಬ ಕುತೂಹಲ. ಇವೆರಡರ ಜೊತೆಯಲ್ಲೇ ಹೊಸ ವರ್ಷ (New Year) ಶುರುವಾಗಿದೆ. ಈ ವರ್ಷ ಸಿನಿಮಾ ಬಿಡುಗಡೆ ಮಾಡಲೇಬೇಕಾದ ಒತ್ತಡದಲ್ಲಿರುವವರಿಗೆ, ತಮ್ಮಿಷ್ಟದ ನಟನ ಸಿನಿಮಾಗಾಗಿ ಕಾತರದಿಂದ ಕಾಯುತ್ತಿರುವವರಿಗೆ ಶುಭವಾಗಲಿ ಎನ್ನುವುದೇ ಈ ಹೊತ್ತಿನ ಆಶಯ.

RRR Postponed: ರಿಲೀಸ್ ಮುಂದೂಡಿಕೆ, ಚಿತ್ರತಂಡಕ್ಕೆ 18 ಕೋಟಿ ನಷ್ಟ

ವರ್ಷಾರಂಭಕ್ಕೆ ಪರಭಾಷೆಯ ಸಿನಿಮಾಗಳು ಬಿಡುಗಡೆಯಾಗುವ ಕಾರಣಕ್ಕೆ ಕನ್ನಡದ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಒಮಿಕ್ರಾನ್‌ ಆತಂಕವೂ ಇರುವುದರಿಂದ ಸ್ವಲ್ಪ ಅನಿಶ್ಚಿತತೆ ಕಾಡುತ್ತಿದೆ. ಅದರ ಹೊರತಾಗಿಯೂ ಬಡವ ರಾಸ್ಕಲ್‌ (Badava Rascal) ಗೆಲುವಿನಿಂದ ಚಿತ್ರರಂಗ ಆಸೆಯಿಂದ 2022ನೇ ಇಸವಿಯನ್ನು ನೋಡುತ್ತಿದೆ. ಮೌನವಾಗಿ ಎಲ್ಲರೂ ಹೊಸ ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ಒಳಿತೇ ಆಗಲಿ ಎಂಬ ಸದುದ್ದೇಶದೊಂದಿಗೆ ಈ ವರ್ಷ ಚಿತ್ರಮಂದಿರಗಳಿಗೆ ಆಗಮಿಸಬಹುದಾದ ಚಿತ್ರಗಳ ಪಟ್ಟಿ ನೀಡುತ್ತಿದ್ದೇವೆ. ಈ ಪಟ್ಟಿ ಎಲ್ಲರ ಉಲ್ಲಾಸ ಹೆಚ್ಚಿಸಲಿ. ಚಿತ್ರರಂಗ ಗೆಲುವಾಗಲಿ ಹೊಸ ವರ್ಷ ಎಲ್ಲರಿಗೂ ಶುಭವನ್ನೇ ತರಲಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!