ಡಿವೋರ್ಸ್ ಸುದ್ದಿ ಮಧ್ಯೆ ಯಜುವೇಂದ್ರ ಚಹಲ್ ನಶೆಯಲ್ಲಿ ತೂರಾಡಿದ ವಿಡಿಯೋ ವೈರಲ್

By Roopa Hegde  |  First Published Jan 6, 2025, 1:09 PM IST

ಟೀಂ ಇಂಡಿಯಾ ಆಟಗಾರ ಯಜುವೇಂದ್ರ ಚಹಲ್, ಶೀಘ್ರವೇ ಡಿವೋರ್ಸ್ ಕ್ಲಬ್ ಗೆ ಸೇರುವ ಸಾಧ್ಯತೆ ಇದೆ. ಚಹಲ್ ಹಾಗೂ ಧನಶ್ರೀ ವರ್ಮಾ ಬೇರೆಯಾಗುವ ಎಲ್ಲ ಲಕ್ಷಣ ಕಾಣ ಸಿಗ್ತಿದೆ. ಈ ಮಧ್ಯೆ ಚಹಲ್ ವಿಡಿಯೋ ಒಂದು ಫುಲ್ ವೈರಲ್ ಆಗಿದೆ. 
 


ಟೀಂ ಇಂಡಿಯಾ (Team India) ದಲ್ಲಿ ವಿಚ್ಛೇದಿತರ ಸಂಖ್ಯೆ ಹೆಚ್ಚಾಗ್ತಿದೆ. ಈಗಾಗಲೇ ಅನೇಕ ಆಟಗಾರರು ಡಿವೋರ್ಸ್ (Divorce) ಪಡೆದಿದ್ದು ಈಗ ಆ ಸಾಲಿಗೆ ಯಜುವೇಂದ್ರ ಚಹಲ್ ಸೇರುವ ಸಾಧ್ಯತೆ ದಟ್ಟವಾಗಿದೆ. ಯಜುವೇಂದ್ರ ಚಹಲ್ (Yuzvendra Chahal) ಪತ್ನಿ ಧನಶ್ರೀ ವರ್ಮಾ (Dhanashree Verma)ರಿಂದ ದೂರವಾಗಿದ್ದಾರೆ ಎನ್ನುವ ವಿಷ್ಯ ಫ್ಯಾನ್ಸ್ ಆಘಾತಕ್ಕೆ ಕಾರಣವಾಗಿದೆ. ವರ್ಷದ ಆರಂಭದಲ್ಲಿಯೇ ಚಹಲ್ ದಿಟ್ಟ ನಿರ್ಧಾರ ತೆಗೆದುಕೊಂಡಂತಿದೆ. ಯಜುವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಅನ್ಫಾಲೋ ಮಾಡಿದ್ದಲ್ಲದೆ ಇಬ್ಬರು ಒಟ್ಟಿಗಿರುವ ಫೋಟೋಗಳನ್ನು ಡಿಲಿಟ್ ಮಾಡಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್, ಇಬ್ಬರ ಮಧ್ಯೆ ಯಾವ್ದು ಸರಿ ಇಲ್ಲ, ದಂಪತಿ ದೂರವಾಗಿದ್ದು, ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಚರ್ಚೆ ಶುರು ಮಾಡಿದ್ದಾರೆ. ಈ ಬಗ್ಗೆ ಯಜುವೇಂದ್ರ ಚಹಲ್ ಅಥವಾ ಧನುಶ್ರೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚಹಲ್ ವಿಚ್ಛೇದನ ಸದ್ದು ಮಾಡ್ತಿದ್ದಂತೆ ಅನೇಕ ವಿಡಿಯೋಗಳು ಮತ್ತೆ ವೈರಲ್ ಆಗ್ತಿವೆ.

ಇನ್ಸ್ಟಾಗ್ರಾಮ್ ನಲ್ಲಿ ಚಹಲ್ ವಿಡಿಯೋ ಒಂದು ಗಮನ ಸೆಳೆದಿದೆ. ಅದ್ರಲ್ಲಿ ಚಹಲ್ ನಶೆಯಲ್ಲಿದ್ದಾರೆ. ಅವರಿಗೆ ಸರಿಯಾಗಿ ನಡೆಯೋಕೆ ಆಗ್ತಿಲ್ಲ. ಬೇರೆಯವರ ಸಹಾಯ ಪಡೆದು ಅವರು ಕಾರ್ ಹತ್ತುತ್ತಾರೆ. ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆಗಿದೆ. ಯಜುವೇಂದ್ರ ಚಹಲ್ ಫುಲ್ ಡ್ರಿಂಕ್ ಮಾಡಿದ್ದಾರೆ. ಸ್ಟ್ರಾಂಗ್ ಆಗಿ ಭಾಯಿ ಅಂತ ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋ ನೋಡಿದ ಚಹಲ್ ಪ್ಯಾನ್ಸ್, ಆಟಗಾರನಿಗೆ ಧೈರ್ಯ ಹೇಳುವ ಕೆಲಸ ಮಾಡ್ತಿದ್ದಾರೆ. ಡಿವೋರ್ಸ್ ಕ್ಲಬ್ ಗೆ ಸ್ವಾಗತ. ಶಿಖರ್ ಧವನ್, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ನಂತ್ರ ಈಗ ಯಜುವೇಂದ್ರ ಚಹಲ್ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಓಪನರ್, ಫಾಸ್ಟ್ ಬೌಲರ್, ಸ್ಪಿನ್ನರ್, ವಿಕೆಟ್ ಕೀಪರ್ ಸೇರಿದಂತೆ ಎಲ್ಲರೂ ವಿಚ್ಛೇದಿತರು. ಇನ್ಮುಂದೆ ಇಂಡಿಯಾ ಟೀಂ ಸ್ಟ್ರಾಂಗ್ ಆಗುತ್ತೆ ಎಂಬ ಕಮೆಂಟ್ ನಿಂದ ಹಿಡಿದು, ವಿಚ್ಛೇದನ ಪಡೆಯುತ್ತಿರುವ ಚಹಲ್ ಗೆ ಐಪಿಎಲ್ ನಲ್ಲಿ ಸ್ಥಾನ ಸಿಗುತ್ತೆ ಅಂತ ಬಳಕೆದಾರರು ಬರೆದಿದ್ದಾರೆ.‌

Tap to resize

Latest Videos

ಚಹಲ್-ಧನಶ್ರೀ ವರ್ಮಾ ಬೇರೆಯಾಗಲು ಕಾರಣ ಯಾರು? ಇವರಿಬ್ಬರ ಮಧ್ಯ ಬಂದಿದ್ದು ಯಾರು?

ಸೆಲೆಬ್ರಿಟಿಗಳು, ಯುಟ್ಯೂಬರ್ ಮದುವೆ ಆಗ್ಬೇಡಿ, ಇವರಲ್ಲಿ ಡಿವೋರ್ಸ್ ಹೆಚ್ಚು ಎಂದು ಒಬ್ಬರು ಕಮೆಂಟ್ ಮಾಡಿದ್ದು, ಅದಕ್ಕೆ ಅನೇಕರು ರಿಪ್ಲೇ ಮಾಡಿದ್ದಾರೆ. ಎಲ್ಲರೂ ಹೀಗಿರಲು ಸಾಧ್ಯವಿಲ್ಲ, ಆದ್ರೆ ಯಾರು ಒಳ್ಳೆಯವರು, ಯಾರು ಕೆಟ್ಟವರು ಅಂತ ಗುರುತಿಸೋದು ಕಷ್ಟವೆಂಬ ಕಮೆಂಟ್ ಇಲ್ಲಿದೆ.

ಚಹಲ್ - ಧನಶ್ರೀ ವರ್ಮಾ: ಇಬ್ಬರಲ್ಲಿ ಯಾರ ಬಳಿ ಹೆಚ್ಚಿದೆ ಸಂಪತ್ತು?

ಅದೇನೇ ಇರಲಿ, ಇನ್ಸ್ಟಾದಲ್ಲಿ ಪೋಸ್ಟ್ ಆಗಿರುವ ವಿಡಿಯೋ ಹಳೇದು. ಆದ್ರೆ ಚಹಲ್, ವಿಚ್ಛೇದನ ಸುದ್ದಿ ಚರ್ಚೆಯಾಗ್ತಿದ್ದಂತೆ ಮತ್ತೆ ಹಳೆ ವಿಡಿಯೋಗಳು ವೈರಲ್ ಆಗ್ತಿವೆ. ಚಹಲ್ ಶನಿವಾರ ಇನ್ಸ್ಟಾ ಪೋಸ್ಟ್ ಮೂಲಕ ವಿಚ್ಛೇದನದ ಕಾರಣವನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಅವರು ತಮ್ಮ ಪೋಸ್ಟ್ ನಲ್ಲಿ, ಕಠಿಣ ಪರಿಶ್ರಮವು ಜನರ ವ್ಯಕ್ತಿತ್ವವನ್ನು ತೋರಿಸುತ್ತದೆ. ನಿಮ್ಮ ಪ್ರಯಾಣ ನಿಮಗೆ ಗೊತ್ತಿರುತ್ತದೆ. ನಿಮ್ಮ ನೋವು ನಿಮಗೆ ಗೊತ್ತಿರುತ್ತದೆ. ಈ ಹಂತಕ್ಕೇರಲು ನೀವು ಏನೆಲ್ಲ ಮಾಡಿದ್ದೀರ ಎನ್ನುವುದು ನಿಮಗೆ ಹಾಗೂ ಜಗತ್ತಿಗೆ ಗೊತ್ತಿದೆ. ನೀವು ನಿಮ್ಮ ತಂದೆ-ತಾಯಿ ಹೆಮ್ಮೆಪಡುವಂತೆ ಮಾಡಲು ಸಾಕಷ್ಟು ಬೆವರು ಹರಿಸಿರುತ್ತೀರ.  ಯಾವಾಗಲೂ ಹೆಮ್ಮೆಯ ಮಗನಾಗಿಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದರು. ಅಂದ್ರೆ ಚಹಲ್ ಕುಟುಂಬ ಹಾಗೂ ಧನಶ್ರೀ ಮಧ್ಯೆ ಇರುವ ಬಿರುಕೇ ವಿಚ್ಛೇದನಕ್ಕೆ ಕಾರಣ ಎಂಬ ಸಂಶಯ ಇದ್ರಿಂದ ಮೂಡ್ತಿದೆ. ಕೆಲ ದಿನಗಳ ಹಿಂದಿನಿಂದಲೂ ಚಹಲ್ ಹಾಗೂ ಧನಶ್ರೀ ಡಿವೋರ್ಸ್ ಪಡೆಯುತ್ತಾರೆ ಎನ್ನುವ ವದಂತಿ ಓಡಾಡ್ತಾ ಇತ್ತು. ಧನುಶ್ರೀ ಡಾನ್ಸ್ ಕೋರಿಯೋಗ್ರಫರ್. ಧನಶ್ರೀ ಹಾಗೂ ಚಹಲ್ ಮದುವೆಯಾಗಿ ನಾಲ್ಕು ವರ್ಷವಷ್ಟೇ ಕಳೆದಿದೆ.  
 

click me!