ಅಮ್ಮಾ ಪ್ಲೀಸ್​ ಸ್ವಲ್ಪ ಹೊತ್ತು ಮಲಗ್ತೀನಿ ಎಂದ್ರೂ ಈ ಅಮ್ಮ ಕೇಳ್ಲೇ ಇಲ್ಲ ನೋಡಿ: ನಿಮ್​ ಮನೆಯಲ್ಲೂ ಹೀಗೇನಾ?

Published : Jan 06, 2025, 12:30 PM ISTUpdated : Jan 06, 2025, 12:37 PM IST
ಅಮ್ಮಾ ಪ್ಲೀಸ್​ ಸ್ವಲ್ಪ ಹೊತ್ತು ಮಲಗ್ತೀನಿ ಎಂದ್ರೂ ಈ ಅಮ್ಮ ಕೇಳ್ಲೇ ಇಲ್ಲ ನೋಡಿ:  ನಿಮ್​ ಮನೆಯಲ್ಲೂ ಹೀಗೇನಾ?

ಸಾರಾಂಶ

ಮರಿಯನ್ನು ಎಬ್ಬಿಸಲು ಅಮ್ಮ ಆನೆಯ ತುಂಟಾಟದ ವಿಡಿಯೋ ವೈರಲ್ ಆಗಿದೆ. ಮಲಗಿದ್ದ ಮರಿಯನ್ನು ಎಬ್ಬಿಸಲು ಅಮ್ಮ ಆನೆ ಸೊಂಡಿಲಿನಿಂದ ಬಾಲವನ್ನೆಳೆದು ಎಬ್ಬಿಸುತ್ತಿರುವ ದೃಶ್ಯ ಮನಮುಟ್ಟುವಂತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಅನೇಕರು ತಮ್ಮ ಬಾಲ್ಯದ ಅಮ್ಮನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಅಮ್ಮ-ಮಗುವಿನ ವಿಷಯ ಬಂದಾಗ ಮನುಷ್ಯರು ಮತ್ತು ಪ್ರಾಣಿ-ಪಕ್ಷಿಗಳು ಯಾವುದೇ ವ್ಯತ್ಯಾಸವೇ ಇಲ್ಲ ಎನ್ನಬಹುದೇನೋ. ಕಾಡು ಮೃಗಗಳಾದರೂ ಅದೇ ಪ್ರೀತಿ, ಸಾಕು ಪ್ರಾಣಿಗಳಾದರೂ ಅದೇ ಪ್ರೀತಿ. ಅದರಲ್ಲಿಯೂ ಕೆಲವೊಂದು ಪ್ರಾಣಿ-ಪಕ್ಷಿಗಳಲ್ಲಿ ಅಮ್ಮ-ಮಗುವಿನ ತುಂಟಾಟ ನೋಡುವುದೇ ಕಣ್ಣಿಗೆ ಹಬ್ಬ. ಆನೆ ಇಂಥ ಪ್ರಾಣಿಗಳಲ್ಲಿ ಒಂದು. ಮರಿಗಳ ಜೊತೆ ಅಮ್ಮ ಆನೆಯ ಆಟ-ತುಂಟಾಟಗಳ ಅದೆಷ್ಟೋ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​  ಆಗಿವೆ. 

ಅಂಥದ್ದೇ  ಒಂದು ವಿಡಿಯೋ ಇಲ್ಲಿದೆ. ಇಲ್ಲಿ ಆನೆಯ ಪುಟ್ಟ ಮರಿ ಮಲಗಿದೆ. ಅದನ್ನು ಎಬ್ಬಿಸಲು ಅಮ್ಮ ಆನೆ ಏನೆಲ್ಲಾ ಸರ್ಕಸ್​ ಮಾಡುತ್ತಿದೆ. ಅಮ್ಮಾ ಪ್ಲೀಸ್​ ಸ್ವಲ್ಪ ಹೊತ್ತು ಮಲಗ್ತೀನಿ, ಬಿಟ್​ಬಿಡು ಎನ್ನುವ ರೀತಿಯಲ್ಲಿ ಆನೆಯ ಮರಿ ಹೇಳಿದಂತೆ ಕಾಣಿಸುತ್ತದೆ. ಆದರೂ ಈ ಅಮ್ಮ ಎಷ್ಟೆಂದ್ರೂ ಅಮ್ಮ ಅಲ್ವಾ? ಲೇಟಾಯ್ತು ಬೇಗ ಏಳು ಎನ್ನುವ ರೀತಿಯಲ್ಲಿ ಮರಿಯನ್ನು ಏಳಿಸುತ್ತಿದೆ. ಸಾಲದು ಎನ್ನುವುದಕ್ಕೆ ಬಾಲವನ್ನು ಸೊಂಡಿಲಿನಿಂದ ಹಿಡಿದು ಅಲ್ಲಾಡಿಸಿದೆ. ಅಮ್ಮನ 'ಕಾಟ'ಕ್ಕೆ ಬೇಸತ್ತ ಕಂದಮ್ಮ ಕೊನೆಗೂ ಎದ್ದು ಅಮ್ಮನ ಜೊತೆ ನಿಂತಿದೆ. ಇದರ ಕ್ಯೂಟ್​ ವಿಡಿಯೋಗೆ ನೂರಾರು ಮಂದಿ ಕಮೆಂಟ್​ ಮಾಡಿದ್ದಾರೆ. 

ಅಣ್ಣಾವ್ರೇ... ದಾರಿ ಬಿಡಿ... ತನ್ನ ದಾರಿಗೆ ಅಡ್ಡವಾಗಿದ್ದ ವ್ಯಕ್ತಿಗೆ ಸೂಚನೆ ಕೊಟ್ಟ ಆನೆಯ ಕ್ಯೂಟ್​ ವಿಡಿಯೋ ವೈರಲ್​

ಕನ್ನಡ ರೀಲ್ಸ್​ ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದೆ. ಇದನ್ನು ನೋಡಿ ನನ್ನ ಅಮ್ಮನ ನೆನಪಾಯ್ತು ಎಂದು ಹಲವರು ಕಮೆಂಟ್​ ಮೂಲಕ ಹೇಳಿದ್ರೆ, ನಮ್ಮ ಮನೆಯಲ್ಲಿಯೂ ಮಗುವನ್ನು ಹೀಗೆಯೇ ಏಳಿಸ್ಬೇಕು ಎಂದು ಮತ್ತೆ ಕೆಲವರು ಹೇಳಿದ್ದಾರೆ. ಮುಂಜಾನೆ ನಮ್ಮ ಮನೆಯಲ್ಲಿ ನಮ್ಮ ಅಮ್ಮನೂ ಹೀಗೆ ಎನ್ನುವ ಶೀರ್ಷಿಕೆಯನ್ನು ಈ ವಿಡಿಯೋಗೆ ಕೊಡಲಾಗಿದೆ.

ಆದರೆ rs850 ಎನ್ನುವ ಇನ್​ಸ್ಟಾಗ್ರಾಮ್​ ಖಾತೆದಾರರು ಮಾತ್ರ ನಮ್ಮ ಮನೆಯಲ್ಲಿ ಉಲ್ಟಾ. ನನ್ನ ಅಮ್ಮನನ್ನು ನಾನೇ ಹೀಗೆ ಎಬ್ಬಿಸಬೇಕು ಎಂದಿದ್ದಾರೆ. ಅದಕ್ಕೆ ಕೆಲವರು ಸೋ ಲಕ್ಕಿ ನಿಮ್ಮಮ್ಮ ಎಂದಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಸೋಷಿಯಲ್​  ಮೀಡಿಯಾದಲ್ಲಿ ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಇಂಥ ಕ್ಯೂಟ್​ ವಿಡಿಯೋಗಳನ್ನು ನೋಡುತ್ತಿದ್ದರೆ ಎಷ್ಟು ಖುಷಿಯಾಗುತ್ತದೆ, ಮನಸ್ಸು ರಿಲ್ಯಾಕ್ಸ್​ ಆಗುತ್ತದೆ ಎಂದು ಹಲವರು ಹೇಳಿದ್ದಾರೆ. 

ಮನೆಯೊಳಗೇ ನುಗ್ಗಿದ ಚಿರತೆ: ನಾಯಿ ಬೊಗಳಿದ್ರೂ ಏಳಲಿಲ್ಲ ಮನೆಯವರು! ಮುಂದೇನಾಯ್ತು? ಶಾಕಿಂಗ್‌ ವಿಡಿಯೋ ವೈರಲ್‌

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌