ಈ ಕಾಲದಲ್ಲಿ ನಿಷ್ಕಲ್ಮಶವಾಗಿ ಪ್ರೀತಿಸುವವರು ಮೋಸ ಹೋಗುವುದೇ ಹೆಚ್ಚು. ಇಲ್ಲಿಯೂ ಅಂಥಹದ್ದೇ ಘಟನೆಯೊಂದು ನಡೆದಿದೆ. ತನ್ನ ಪ್ರೇಯಸಿಗೆ ಸರ್‌ಪ್ರೈಸ್ ಕೊಡಲು ಬಂದ ಹುಡುಗ, ಆಕೆ ಇನ್ನೊಬ್ಬಳ ತೆಕ್ಕೆಯಲ್ಲಿರೋದನ್ನು ನೋಡಿ ದಂಗಾಗಿದ್ದಾನೆ.
ಪ್ರೇಮ, ಪ್ಯಾರ್, ಲವ್ ಎಂದೆಲ್ಲಾ ಕರೆಸಿಕೊಳ್ಳೋ ಪ್ರೀತಿಗೆ ಎಲ್ಲವನ್ನೂ ಮರುಳು ಮಾಡುವ ಶಕ್ತಿಯಿದೆ. ಪ್ರೀತಿ ಒಬ್ಬನ ಜೀವನವನ್ನು ಬೆಳಗಿಸಲೂ ಬಹುದು. ವ್ಯಕ್ತಿಯೊಬ್ಬನ ಜೀವನವನ್ನು ಹಾಳು ಮಾಡಲೂಬಹುದು. ಒಬ್ಬ ವ್ಯಕ್ತಿಯ ಜೀವನದಲ್ಲಿ ಬದುಕುವ ಜೀವನೋತ್ಸಾಹ ತುಂಬಿದರೆ, ಇನ್ನೊಬ್ಬನ ಬಾಳನ್ನು ನಿರಾಶೆಯ ಕೂಪವಾಗಿಸಬಹುದು. ಪ್ರೀತಿ ಅಂದ್ಮೇಲೆ ಅಲ್ಲಿ ದೋಖಾ ಸಹ ಇದ್ದೇ ಇರುತ್ತೆ. ಈ ಮೋಸದಾಟದಲ್ಲೇ ಅದೆಷ್ಟೋ ಹುಡುಗ-ಹುಡುಗಿಯರು ಜೀವನ ಹಾಳು ಮಾಡಿಕೊಳ್ಳುತ್ತಾರೆ. ಜೀವನವೇ ಹಾಳಾಯ್ತೆಂದು ಕೊರಗುತ್ತಾರೆ. ಇಲ್ಲೊಬ್ಬನ ಜೀವನದಲ್ಲಿಯೂ ಹಾಗೆಯೇ ಆಗಿದೆ. ಚಿನ್ನ, ರನ್ನ, ನೀನೇ ಪ್ರಾಣ ಅಂತ ಪ್ರೀತಿಸುತ್ತಿದ್ದ ಹುಡುಗಿಗೆ ಸರ್‌ಪ್ರೈಸ್ ಕೊಡಲು ಹೋಗುವಾಗಲೇ ಆಕೆ ಇನ್ನೊಬ್ಬನ ಜೊತೆ ಚಕ್ಕಂದವಾಡ್ತಿರೋದು ಬಹಿರಂಗವಾಗಿದೆ.
ಏಳೇಳು ಜನ್ಮಕ್ಕೂ ನೀನೆ ನನ್ನ ಜೀವ ಅಂತ ಪ್ರೀತಿಸುವವರು ಈಗ ವಿರಳ. ಈಗೇನಿದ್ದರೂ ಇವತ್ತು ಒಬ್ಬನ ಜೊತೆ ತಿರುಗಾಡಿದರೆ, ನಾಳೆ ಇನ್ನೊಬ್ಬನ ಜೊತೆ ಸುತ್ತಾಡುತ್ತಾರೆ. ಹೆಚ್ಚು ಗಿಫ್ಟ್, ದುಡ್ಡು ಸುರಿಸುವವನ ಜೊತೆ ಓಡಿಬಿಡುತ್ತಾರೆ. ಹೀಗಾಗಿ ಈ ಕಾಲದಲ್ಲಿ ನಿಷ್ಕಲ್ಮಶವಾಗಿ ಪ್ರೀತಿಸುವವರು (Love) ಮೋಸ ಹೋಗುವುದೇ ಹೆಚ್ಚು. ಇಲ್ಲಿಯೂ ಅಂಥಹದ್ದೇ ಘಟನೆಯೊಂದು ನಡೆದಿದೆ. ಹುಡುಗಿ ಮೋಸ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Real Story: ಖಾತೆಯಿಂದ ಹಣ ವಿತ್ ಡ್ರಾ, ದುಬಾರಿ ಗಿಫ್ಟ್… ನನಗಲ್ಲ ಅಂದ್ಮೇಲೆ ಗಂಡ ನೀಡ್ತಿರೋದು ಯಾರಿಗೆ?
ಸರ್‌ಪ್ರೈಸ್ ಕೊಡಲು ಬಂದ ಯುವಕ, ಇನ್ನೊಬ್ಬಳ ತೆಕ್ಕೆಯಲ್ಲಿದ್ಲು ಪ್ರೇಯಸಿ
ಕೆಲವೊಮ್ಮೆ ನಿಜವಾದ ಪ್ರೀತಿ ಎಂಬುದು ತುಂಬಾ ದುಬಾರಿಯಾಗಿದೆ ಎಂದೆನಿಸುತ್ತದೆ. ಯಾಕೆಂದರೆ ಹೀರ್ ರಂಝಾ, ಲೈಲಾ ಮಜ್ನು ಮತ್ತು ಜ್ಯಾಕ್ ಅಂಡ್ ರೋಸ್‌ನಂತಹ ಮಹಾನ್ ಪ್ರೇಮಕಥೆಗಳು ಈಗಿಲ್ಲ. ಇವತ್ತಿನ ಸಮಾಜದಲ್ಲಿ ನಂಬಿಕೆಯ ಕೊರತೆ ಅಥವಾ ಮೋಸವನ್ನು ಎದುರಿಸುವ ಪ್ರೀತಿಯೇ ಹೆಚ್ಚಾಗಿದೆ. ಪ್ರೀತಿಯಲ್ಲಿ ಮೋಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಒಂದು ಪ್ರವೃತ್ತಿಯಾಗಿ ಬದಲಾಗಿದೆ. ಹದಿಹರೆಯದವರು ಸುಲಭವಾಗಿ ಸಂಗಾತಿಗಳಿಗೆ ಮೋಸ ಮಾಡಿ ಬಿಡುತ್ತಾರೆ ಮತ್ತು ಕೇವಲ ದೈಹಿಕ ಸೌಂದರ್ಯಕ್ಕಾಗಿ ಮತ್ತು ಹಣದ ಲಾಭಕ್ಕಾಗಿ ಸಂಬಂಧಗಳಿಂದ ಹೊರಬರುತ್ತಾರೆ. ಆನ್‌ಲೈನ್ ಡೇಟಿಂಗ್ ಮತ್ತು ಕ್ಯಾಶುಯಲ್ ಹುಕ್-ಅಪ್‌ಗಳ ಈ ಯುಗದಲ್ಲಿ, ನಿಜವಾದ ಪ್ರೀತಿಯನ್ನು ಕಂಡುಹಿಡಿಯುವುದು ಅಸಾಧ್ಯವೆಂದು ತೋರುತ್ತದೆ.
ವೈರಲ್ ಆದ ವೀಡಿಯೋದಲ್ಲಿ ಯುವಕ ತನ್ನ ಸ್ನೇಹಿತರ ಜೊತೆ ಪ್ರೇಯಸಿಯ (Lover) ಮನೆಗೆ ಆಕೆಗೆ ಸರ್‌ಪ್ರೈಸ್ ಕೊಡಲು ಹೋಗುತ್ತಾನೆ. ಆದರೆ ಅಚ್ಚರಿಯೆಂಬಂತೆ ಆಕೆ ಮನೆಯಲ್ಲಿ ಇನ್ನೊಬ್ಬ ಯುವಕನ ಜೊತೆ ಸರಸದಲ್ಲಿರುವುದು ತಿಳಿದುಬರುತ್ತದೆ. ಎಲ್ಲರಿಗೂ ಆಶ್ಚರ್ಯವಾಗುವಂತೆ, ಹುಡುಗಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಚುಂಬಿಸುತ್ತಾ (Kissing) ಮನೆಯೊಳಗೆ ಪ್ರವೇಶಿಸುತ್ತಾಳೆ. ಆಕೆ ಬೇರೊಬ್ಬ ಪುರುಷನೊಂದಿಗೆ ಚುಂಬಿಸುತ್ತಿರುವುದನ್ನು ಕಂಡು ಯುವಕರು ಆಘಾತಕ್ಕೊಳಗಾಗುತ್ತಾರೆ. ಯುವತಿಯೊಬ್ಬಳು ತನ್ನ ಬಾಯ್‌ಫ್ರೆಂಡ್‌ಗೆ ಮೋಸ ಮಾಡುತ್ತಿರುವ ಈ ವೈರಲ್ ವೀಡಿಯೊ, ಪ್ರೀತಿಯಲ್ಲಿ ಎಲ್ಲವನ್ನೂ ಮಾಡಿದರೂ ಸಹ ವಂಚನೆಯ ಪ್ರವೃತ್ತಿ ಹೆಚ್ಚುತ್ತಿರುವ ಉದಾಹರಣೆಯಾಗಿದೆ.
Cheating Affairs: ನಂಬಿಕೊಂಡ ಸಂಗಾತಿಗೆ ಮೋಸ ಮಾಡಿದ್ದು ಮಜಕ್ಕಂತೆ ಇವರು!?
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಯುವಕನೊಬ್ಬ ತನ್ನ ಗೆಳತಿಯನ್ನು ಅಚ್ಚರಿಗೊಳಿಸಲು ತನ್ನ ಸ್ನೇಹಿತರೊಂದಿಗೆ ಮನೆಯೊಳಗೆ ಅಡಗಿಕೊಂಡಿರುವುದನ್ನು ತೋರಿಸುತ್ತದೆ. ಆಕೆಗೆ ವಿಶೇಷ ಭಾವನೆ ಮೂಡಿಸಲು ಅವರು ಮನೆಯನ್ನು ಸಂಪೂರ್ಣವಾಗಿ ಅಲಂಕರಿಸಿದ್ದಾರೆ. ಆದರೆ, ಎಲ್ಲರಿಗೂ ಆಶ್ಚರ್ಯವಾಗುವಂತೆ, ಹುಡುಗಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಚುಂಬಿಸುತ್ತಾ ಮನೆಗೆ ಪ್ರವೇಶಿಸುತ್ತಾಳೆ. ಸಿಕ್ಕಿಬಿದ್ದ ನಂತರ, ಹುಡುಗಿ ಅವನಿಗೆ ವಿವರಿಸಲು ಪ್ರಯತ್ನಿಸುತ್ತಾಳೆ. ಆದರೆ ಯುವಕ ಬೇಸರದಿಂದ ಇಬ್ಬರಿಗೂ ಮನೆಯಿಂದ ಹೊರಹೋಗುವಂತೆ ಹೇಳುವುದನ್ನು ಕಾಣಬಹುದು.
ವೈರಲ್ ಆದ ವಿಡಿಯೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು 'ಈ ದಿನಗಳಲ್ಲಿ ನಿಜವಾದ ಪ್ರೀತಿಯನ್ನು ಕಂಡುಹಿಡಿಯುವುದು ಕಷ್ಟ' ಎಂದಿದ್ದಾರೆ. ಮತ್ತೊಬ್ಬರು, 'ಈ ಪೀಳಿಗೆಯ ಹುಡುಗರು ತುಂಬಾ ಮುಗ್ಧರು. ಒಬ್ಬ ಹುಡುಗಿಯನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಾರೆ. ಆದರೆ ಹುಡುಗಿಯರು ಸುಲಭವಾಗಿ ಮೋಸ ಮಾಡಿಬಿಡುತ್ತಾರೆ. 80 ಮತ್ತು 90 ರ ದಶಕದ ಆ ಹುಡುಗಿಯರನ್ನು ನಾವು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತೇನೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು 'ಹಲವಾರು ಹುಡುಗರು ಈ ರೀತಿಯ ಸಮಸ್ಯೆಯನ್ನು ಎದುರಿಸಿರುತ್ತಾರೆ' ಎಂದು ಬರೆದಿದ್ದಾರೆ. ಮತ್ತೊಬ್ಬರು 'ನನ್ನ ಶತ್ರುವಿಗೂ ಕೂಡ ಈ ಪರಿಸ್ಥಿತಿ ಬರಬಾರದು ಎಂದು ನಾನು ಬಯಸುತ್ತೇನೆ' ಎಂದು ತಿಳಿಸಿದ್ದಾರೆ.