ಬ್ರೆಜಿಲ್‌ನ ಅಮೆಜಾನ್ ಅರಣ್ಯದಲ್ಲಿ ಬುಡಕಟ್ಟು ಜನಾಂಗದ ಹುಡುಗರು ಮದ್ವೆಯಾಗಬೇಕಾದ್ರೆ ವಿಚಿತ್ರ ಇರುವೆ ಪರೀಕ್ಷೆಯನ್ನು ಪಾಸ್ ಮಾಡ್ಬೇಕು. ಈ ವಿಶೇಷ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಮದುವೆ, ಫೇಲಾದರೆ ಮದುನೆ ಅನ್ನೋದು ಜೀವಮಾನದಲ್ಲೇ ಆಗಲ್ಲ.
ಮದುವೆ ಎಂಬ ವಿಚಾರಕ್ಕೆ ಬಂದಾಗ ಪ್ರತಿಯೊಂದು ದೇಶವು ತನ್ನದೇ ಆದ ಸಂಪ್ರದಾಯಗಳನ್ನು ಹೊಂದಿದೆ. ಇವುಗಳಲ್ಲಿ ಕೆಲವು ಪದ್ಧತಿಗಳು ವಿಲಕ್ಷಣವಾಗಿರುತ್ತವೆ. ಹಾಗೆಯೇ ಬ್ರೆಜಿಲ್‌ನ ಅಮೆಜಾನ್ ಕಾಡಿನ, ಬುಡಕಟ್ಟು ಜನಾಂಗದಲ್ಲಿ ಮದುವೆಯಾಗದ ಹುಡುಗರು ಒಂದು ವಿಚಿತ್ರ ಪರೀಕ್ಷೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ಅಸಹನೀಯ ನೋವಿನ ಪರೀಕ್ಷೆಗೆ ಒಳಗಾಗುವ ಮೂಲಕ ತಾವು ಪುರುಷರಾಗಿದ್ದೇವೆ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಹೀಗೆ ಮಾಡಿದರಷ್ಟೇ ಅವರು ಮದುವೆಯಾಗಲು ಅರ್ಹರು ಎಂದು ನಿರ್ಧರಿಸಲಾಗುತ್ತದೆ.
ಅಮೆಜಾನ್ ಅರಣ್ಯದ ಸತೇರೆ-ಮಾವೆ ಬುಡಕಟ್ಟು ಜನಾಂಗದವರು (Tribals) ಇಲ್ಲಿನ ಹುಡುಗರು ವಯಸ್ಸಾದಾಗ ಈ ಪರೀಕ್ಷೆಯನ್ನು (Test) ಇಡೀ ಸಮುದಾಯದ ಮುಂದೆ ಸಾಬೀತುಪಡಿಸಬೇಕು ಎಂಬ ನಂಬಿಕೆಯನ್ನು ಹೊಂದಿದ್ದಾರೆ. ಈ ವಿಚಿತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಹೊರತು ಈ ಹುಡುಗರು (Boys) ಮದುವೆಯಾಗಲು ಸಾಧ್ಯವಿಲ್ಲ. ಈ ಸವಾಲಿನಲ್ಲಿ ಗೆದ್ದರೆ ಮಾತ್ರ ಆತ ಮದುವೆ (Marriage)ಯಾಗೋಕೆ ಅರ್ಹ ಎಂದು ನಿರ್ಧರಿಸಲಾಗುತ್ತದೆ. ಜೊತೆಗೆ ಆತ ಶಕ್ತಿಶಾಲಿ ಪುರುಷ ಎಂಬ ಬಿರುದು ಕೂಡ ನೀಡಲಾಗುತ್ತದೆ. ಆ ಸವಾಲು ಏನು ಅನ್ನೋ ಮಾಹಿತಿ ಇಲ್ಲಿದೆ.
ಈ ಸಮುದಾಯದಲ್ಲಿ ಗಂಡ ಸಾವನ್ನಪ್ಪಿದರೂ ಮಹಿಳೆಯರು ವಿಧವೆಯರಾಗಲ್ವಂತೆ !
ಏನಿದು ವಿಚಿತ್ರ ಸವಾಲು?
ಈ ಅಸಾಮಾನ್ಯ ಸಂಪ್ರದಾಯದಲ್ಲಿ, ಬುಡಕಟ್ಟು ಜನಾಂಗದ ಹುಡುಗರು ಇರುವೆಗಳಿರುವ ಕೈಗವಸುಗಳ ಒಳಗೆ ಹತ್ತು ನಿಮಿಷ ಕೈ ಹಾಕಿ ಕುಳಿತುಕೊಳ್ಳಬೇಕು. ಅದು ಅಂತಿಂಥಾ ಇರುವೆಯಲ್ಲ. ಅಪಾಯಕಾರಿ (Dangerous) ಬುಲೆಟ್ ಇರುವೆ. ಅಪಾಯಕಾರಿ ಬುಲೆಟ್ ಇರುವೆಗಳಿಂದ ತುಂಬಿದ ಕೈಗವಸುಗಳಲ್ಲಿ ಹುಡುಗರು ತಮ್ಮ ಕೈ ಹಾಕಬೇಕು. ಬುಡಕಟ್ಟಿನ ನಿಯಮಗಳ ಪ್ರಕಾರ, ಚಿಕ್ಕ ಹುಡುಗರು ಪುರುಷರಾಗಲು ಈ ಬುಲೆಟ್ ಇರುವೆಗಳಿಂದ (Ant) ಕಚ್ಚುವ ಸಂಕಟವನ್ನು ಸಹಿಸಿಕೊಳ್ಳಬೇಕು.
ಈ ಅಪಾಯಕಾರಿ ಇರುವೆಗಳನ್ನು ಮೊದಲು ದಪ್ಪ ಕೈಗವಸುಗಳಲ್ಲಿ ಸುತ್ತಿಡಲಾಗುತ್ತದೆ. ಅವುಗಳನ್ನು ತೆರೆದಾಗ, ಹುಡುಗರು ಈ ಕೈಗವಸುಗಳಲ್ಲಿ ತಮ್ಮ ಕೈಗಳನ್ನು ಹಾಕಬೇಕು. ಈ ಸಂದರ್ಭದಲ್ಲಿ ಎಲ್ಲಾ ಇರುವೆಗಳು ಅವರನ್ನು ಅಟ್ಯಾಕ್ ಮಾಡುತ್ತವೆ. ಈ ಸಂದರ್ಭದಲ್ಲಿ ಗುಂಡು ತಗುಲಿದಷ್ಟೇ ನೋವಾಗುತ್ತದೆ ಎನ್ನುತ್ತಾರೆ ಇಲ್ಲಿನ ಹುಡುಗರು. ಹಲವಾರು ದಿನಗಳವರೆಗೆ, ಕೈಯಲ್ಲಿ ಊತವೂ ಇರುತ್ತದೆ ಎಂದು ತಿಳಿಸುತ್ತಾರೆ..
ಭಾರತದ ಈ ಗ್ರಾಮದಲ್ಲಿ ಮಹಿಳೆಯರು ಬಟ್ಟೆ ಧರಿಸುವುದೇ ಇಲ್ಲ!
ಈ ಇರುವೆ ಕಚ್ಚಿದ ನೋವು 30 ಜೇನುನೊಣ ಕಚ್ಚಿದ ನೋವಿಗೆ ಸಮನಾಗಿರುತ್ತದೆಯಂತೆ. ಈ ಕೈವಚ ಹಾಕಿಕೊಂಡು 30 ನಿಮಿಷಗಳ ಕುಣಿದರೆ ಮಾತ್ರ ಆತನಿಗೆ ಆ ಸಮುದಾಯದಲ್ಲಿ ಮರ್ಯಾದೆ ನೀಡಲಾಗುತ್ತದೆ. ಈ ವಿಚಿತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಹೊರತು ಅಲ್ಲಿನ ಪುರುಷರಿಗೆ (Men) ಮದುವೆಯಾಗುವುದಿಲ್ಲವಂತೆ.
ಈ ಸಮಾರಂಭಕ್ಕಾಗಿ, 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಕಾಡಿನಿಂದ ಅಪಾಯಕಾರಿ ಇರುವೆಗಳನ್ನು ತಾವಾಗಿಯೇ ತರಬೇಕು, ಮರದ ಕೈಗವಸುಗಳನ್ನು ತಯಾರಿಸಬೇಕು ಮತ್ತು ಇರುವೆಗಳನ್ನು ತುಂಬಬೇಕು. ಅದನ್ನು ಅನುಸರಿಸಿ, ಈ ಮಕ್ಕಳು ಸಾಂಪ್ರದಾಯಿಕ ನೃತ್ಯ ಮತ್ತು ಹಾಡಿನ ನಂತರ ಈ ಕೈಗವಸುಗಳನ್ನು 20 ಬಾರಿ ಧರಿಸುತ್ತಾರೆ. ಇದನ್ನು ಒಮ್ಮೆಗೆ 10 ನಿಮಿಷಗಳ ಕಾಲ ಧರಿಸಲಾಗುತ್ತದೆ. ಈ ಅಪಾಯಕಾರಿ ಇರುವೆ ಕಡಿತದ ನೋವು ಸಹಿಸಲಾಗದೆ ಹಲವರು ಒದ್ದಾಡುತ್ತಾರೆ. ನೆಲಕ್ಕೆ ಬಿದ್ದು ಉರುಳಾಡುತ್ತಾರೆ. ನೋವು ಇಲ್ಲದೆ ಜಗತ್ತಿನಲ್ಲಿ ಏನೂ ನಡೆಯುವುದಿಲ್ಲ ಎಂದು ಹುಡುಗರು ಈ ಅಭ್ಯಾಸದ ಮೂಲಕ ಪ್ರದರ್ಶಿಸುತ್ತಾರೆ.
ಇಲ್ಲಿ ಮದ್ವೆಯಾದ ನಂತ್ರ, ಹುಡುಗನ್ನು ಹೆಂಡ್ತಿ ಮನೆಗೆ ಕಳುಹಿಸ್ತಾರೆ!