ಪ್ರೇಯಸಿ ಕುಟುಂಬದವರ ಮನವೊಲಿಸಲು ಮೊಣಕಾಲ ಮೇಲೆ 1,100 ಹೆಜ್ಜೆ ಹಾಕಿದ ಯುವಕ! ಮುಂದೇನಾಯ್ತು

Published : Oct 16, 2026, 07:56 PM IST
Men in Love

ಸಾರಾಂಶ

ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಯುವಕನೊಬ್ಬ ತನ್ನ ಪ್ರೇಯಸಿಯ ಮನೆಯವರನ್ನು ಮದುವೆಗೆ ಒಪ್ಪಿಸಲು ಮೈಹಾರ್‌ನ ಮಾ ಶಾರದಾ ದೇವಿ ದೇವಸ್ಥಾನದ 1,100 ಮೆಟ್ಟಿಲುಗಳನ್ನು ಮೊಣಕಾಲಿನ ಮೇಲೆ ಹತ್ತಿದ್ದಾನೆ. ಪ್ರೀತಿಯನ್ನು ಸಾಬೀತುಪಡಿಸಲು ಆತ ಮಾಡಿದ ಈ ಸಾಹಸದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನೆಟ್ಟಿಗರು ಈತನ ಕಾರ್ಯದ ಬಗ್ಗೆ ಪರ-ವಿರೋಧ ಚರ್ಚೆ ನಡೆಸುತ್ತಿದ್ದಾರೆ.

ದಾಮೋಹ್ (ಮಧ್ಯ ಪ್ರದೇಶ): ಪ್ರೀತಿ ಕುರುಡು, ಕಿವುಡು ಎಲ್ಲವೂ ಹೌದು. ಪ್ರೀತಿಯಲ್ಲಿ ಒಮ್ಮೆ ಬಿದ್ದರೆ, ಅದರಿಂದ ತಪ್ಪಿಸಿಕೊಳ್ಳುವುದು ಹಲವರಿಗೆ ಸಾಧ್ಯವಾಗದ ಮಾತು. ಕೆಲವರಿಗೆ ಇದೊಂದು ಜಸ್ಟ್​ ಫನ್​ ಆದರೆ, ಮತ್ತೆ ಕೆಲವರಿಗೆ ಇದೇ ಜೀವನದ ದಾರಿ ಆಗಿಬಿಡುತ್ತದೆ. ಕೆಲವೊಮ್ಮೆ ಯುವಕನೋ, ಯುವತಿಯೋ ಜಸ್ಟ್​ ಟೈಮ್​ಪಾಸ್​ಗಾಗಿ ಪ್ರೀತಿಯ ನೆಪದಲ್ಲಿ ಸುತ್ತಾಡುವುದು ಇದೆ. ಆದರೆ, ಅದನ್ನೇ ನಿಜವೆಂದು ನಂಬಿಕೊಳ್ಳುವ ಆ ಯುವಕನೋ, ಯುವತಿಯೋ ಇದರಿಂದ ಮನನೊಂದು ಜೀವವನ್ನೇ ಕಳೆದುಕೊಳ್ಳುವ ಮಟ್ಟಿಗೆ ಹೋಗುತ್ತಾರೆ. ಪ್ರೀತಿಸಿದ ಹುಡುಗನೋ, ಹುಡುಗಿಯೋ ಓಕೆ ಅಂದ್ರೆ ಆಗಿಲ್ಲವಲ್ಲ. ಅವರ ಮನೆಯವರನ್ನು ಒಪ್ಪಿಸುವುದು ಕೂಡ ದೊಡ್ಡ ಸವಾಲಿನ ಕೆಲಸವೇ. ಅದರಲ್ಲಿಯೂ ಜಾತಿ ಬೇರೆಯಾದರೆ, ಹುಡುಗನಿಗೆ ಸರಿಯಾದ ಕೆಲಸ ಇಲ್ಲದಿದ್ದರೆ, ಹುಡುಗಿಯ ಮನೆಯವರ ದೊಡ್ಡ ದೊಡ್ಡ ಬೇಡಿಕೆಗಳನ್ನು ಈಡೇರಿಸುವುದು ಹುಡುಗನಿಗೆ ಕಷ್ಟವಾದರೆ ಅಥವಾ ಅದೇ ಇನ್ನೊಂದೆಡೆ ಹುಡುಗಿ ಹೀಗೆಯೇ ಇರಬೇಕು ಎಂದು ಹುಡುಗನ ಮನೆಯವರು ಕಂಡ ಕನಸು ಈ ಪ್ರೇಯಸಿಯಲ್ಲಿ ಇಲ್ಲದೇ ಹೋದರೆ... ಹೀಗೆ ರೇ... ರೇ... ಗಳ ಮಧ್ಯೆ ಪ್ರೇಮ ತುಂಡಾಗುವುದು ಇದೆ.

ಇದೇ ಕಾರಣಕ್ಕೆ ಇಲ್ಲೊಬ್ಬ ಯುವಕ, ತಾನು ಯುವತಿಯನ್ನು ಎಷ್ಟು ಪ್ರೀತಿಸ್ತೇನೆ ಎಂದು ಸಾಬೀತು ಮಾಡಲು, ಆಕೆಯ ಮನೆಯವರಿಗೆ ಇದನ್ನು ತೋರಿಸುವುದಕ್ಕಾಗಿ ಮೊಣಕಾಲುಗಳ ಮೇಲೆ 1,100 ಕಡಿದಾದ ಮೆಟ್ಟಿಲುಗಳನ್ನು ಹತ್ತಿದ್ದಾನೆ. ಇದರ ಫೋಟೋಗಳು ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಮಧ್ಯಪ್ರದೇಶದ ಯುವಕನೊಬ್ಬ ಮೈಹಾರ್‌ನಲ್ಲಿರುವ ಮಾ ಶಾರದಾ ದೇವಿ ದೇವಸ್ಥಾನದಲ್ಲಿ ಹೀಗೆ ಮಾಡಿದ್ದು, ಅದರ ಬಗ್ಗೆ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

1,100 ಮೆಟ್ಟಿಲು ಏರಿದ

ಈತ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಕಿಯೋಲಾರಿ ಗ್ರಾಮದ ಯುವಕ ಎನ್ನಲಾಗಿದೆ. ಮಧ್ಯಪ್ರದೇಶದ ಮೈಹಾರ್‌ನಲ್ಲಿರುವ ಮಾ ಶಾರದಾ ದೇವಿ ದೇವಸ್ಥಾನದಲ್ಲಿ ಸುಮಾರು 1,100 ಮೆಟ್ಟಿಲುಗಳು ಇದ್ದು, ಪ್ರೀತಿಯನ್ನು ಸಾಬೀತು ಪಡಿಸಲು ಮೊಣಕಾಲಿನ ಮೇಲೆ ದೀಪ ಹಿಡಿದು ನಡೆದು ಹೋಗಿದ್ದಾನೆ. ಮದುವೆಗೆ ತನ್ನ ಗೆಳತಿಯ ಕುಟುಂಬದಿಂದ ಅನುಮೋದನೆಯನ್ನು ಪಡೆಯಲು ಸಂಪೂರ್ಣವಾಗಿ ಮೊಣಕಾಲುಗಳ ಮೇಲೆ ಮೆಟ್ಟಿಲುಗಳನ್ನು ಹತ್ತುವುದಾಗಿ ಅವನು ಪ್ರತಿಜ್ಞೆ ಮಾಡಿದ್ದನಂತೆ.

ನೆಟ್ಟಿಗರ ಸಲಹೆ

ಇದು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆ ಹುಡುಗನ ತಪಸ್ಸು ಫಲಿಸಿತೋ ಇಲ್ಲವೋ ಗೊತ್ತಿಲ್ಲ. ಆದರೆ ಸೋಷಿಯಲ್​​ ಮೀಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾನೆ. ಕೆಲವರು ಟ್ರೂ ಲವ್​ ಎಂದಿದ್ದರೆ, ಮತ್ತೆ ಕೆಲವರು ಯಾವುದೋ ಹುಡುಗಿಗಾಗಿ ಜೀವನ ಹಾಳುಮಾಡಿಕೊಳ್ಳಬೇಡ ಗುರೂ. ಅವಳು ಎಂಥವಳು ಎಂದು ಮೊದಲು ನೋಡು, ಈಗಿನ ಹೆಚ್ಚಿನ ಹುಡುಗಿಯರಿಗೆ ಲವ್​ ಎನ್ನೋದು ಟೈಮ್​ಪಾಸ್​ ಆಗಿರುತ್ತದೆ. ನೀನು ನಿನ್ನ ಜೀವನವನ್ನು ಹಾಳುಮಾಡಿಕೊಳ್ಳಬೇಡ ಎಂದು ಸಲಹೆ ಕೊಡುತ್ತಿದ್ದಾರೆ. ಒಟ್ಟಿನಲ್ಲಿ ಈತ ಈಗ ಸದ್ಯ ಹೀರೋ ಆಗಿದ್ದಾನೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

‘ನೀವು ನಮ್ಮ ಕುಟುಂಬದವರು, ನಿಮ್ಮಿಂದ ಹಣ ಪಡೆಯಲ್ಲ’… ಮೃತ ಸ್ನೇಹಿತನ ಮಗನಿಗೆ ಅಂಗಡಿ ಮಾಲೀಕ ತೋರಿದ ಪ್ರೀತಿ
Reservation ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪು