3 ಗಂಡು ಮಕ್ಕಳಿದ್ದ ಆಕೆ ಬಯಸಿದ್ದು ಹೆಣ್ಣು ಮಗು, ಮತ್ತೊಮ್ಮೆ ಗರ್ಭಿಣಿಯಾದ ತಾಯಿಗೆ ತ್ರಿವಳಿ ಗಂಡು!

Published : Oct 14, 2026, 03:34 PM IST
couple expecting baby girl shock

ಸಾರಾಂಶ

ಕೆನಡಾದ ದಂಪತಿ ಹನ್ನಾ ಮತ್ತು ಜಾಕೋಬ್ ಹೆಣ್ಣು ಮಗುವಿನ ಆಸೆಯಿಂದ ಮತ್ತೆ ಗರ್ಭಧರಿಸಿದ್ದರು. ಆದರೆ ಸ್ಕ್ಯಾನಿಂಗ್ ವೇಳೆ ಹೊಟ್ಟೆಯಲ್ಲಿ ಮೂರು ಮಕ್ಕಳಿರುವ ವಿಚಾರ ತಿಳಿದು ಆಘಾತಕ್ಕೊಳಗಾಗಿದ್ದಾರೆ. ಈ ವಿಶಿಷ್ಟ ಘಟನೆಯ ವಿಡಿಯೋ ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದೆ.

ಜೀವನದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಪ್ರಕೃತಿ ಕೊಡುವ ಆಶ್ಚರ್ಯಗಳೇ ಕೆಲವೊಮ್ಮೆ ದೊಡ್ಡದಿರುತ್ತವೆ. ಕೆನಡಾದ ಒಂಟಾರಿಯೊ ನಿವಾಸಿ 29 ವರ್ಷದ ಹನ್ನಾ ಮತ್ತು ಅವರ ಸಂಗಾತಿ 34 ವರ್ಷದ ಜಾಕೋಬ್ ಜೀವನದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದೆ. ಈಗಾಗಲೇ 11, 4 ಮತ್ತು 1 ವರ್ಷ ವಯಸ್ಸಿನ ಮೂರು ಗಂಡು ಮಕ್ಕಳ ಪೋಷಕರಾಗಿದ್ದ ಹನ್ನಾ, ಈ ಬಾರಿ ತಮಗೊಂದು ಮುದ್ದಾದ ಹೆಣ್ಣು ಮಗು ಬೇಕೆಂಬ ಆಸೆಯಿಂದ ಮತ್ತೊಮ್ಮೆ ಗರ್ಭಧರಿಸಲು ತಮ್ಮ ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಕರ ಜಾಕೋಬ್ ಅವರನ್ನು ಒಪ್ಪಿಸಿದ್ದರು.

ಸ್ಕಾನಿಂಗ್ ಕೊಠಡಿಯಲ್ಲಿ ಕಾದಿತ್ತು ಅಚ್ಚರಿ:

ಗರ್ಭಧಾರಣೆಯ 8 ವಾರಗಳ ನಂತರ, ಶಿಶುವಿನ ಆರೋಗ್ಯ ಮತ್ತು ಲಿಂಗದ ನಿರೀಕ್ಷೆಯೊಂದಿಗೆ ಹನ್ನಾ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ಗೆ ತೆರಳಿದ್ದರು. ಆದರೆ ವೈದ್ಯರು ಪರದೆಯನ್ನು ನೋಡುತ್ತಿದ್ದಂತೆಯೇ ಕಥೆ ಸಂಪೂರ್ಣವಾಗಿ ಬದಲಾಯಿತು.

ವೈದ್ಯರು ಪರದೆಯನ್ನು ನೋಡಿ 'ಓಹ್...' ಎಂದಾಗ ಆಕೆಗೆ ಆತಂಕವಾಯಿತು. ನಂತರ ಹೊಟ್ಟೆಯಲ್ಲಿ ಇಬ್ಬರು ಮಕ್ಕಳಿದ್ದಾರೆ ಎಂದು ವೈದ್ಯರು ಹೇಳಿದರು. ಹನ್ನಾ ಆಕೆಯ ತಾಯಿ ಹಾಗೂ ಜಾಕೋಬ್ ಇಬ್ಬರ ಕುಟುಂಬದಲ್ಲೂ ಅವಳಿ ಮಕ್ಕಳಿದ್ದಿದ್ದರಿಂದ, ಸರಿ, ಇದನ್ನು ನಿಭಾಯಿಸಬಲ್ಲೆ ಅಂದುಕೊಂಡಳೂ. ಆದರೆ ತಕ್ಷಣವೇ ವೈದ್ಯರು ಆಕೆಯ ನಾನು ಈಗ ಹೇಳುವ ಮಾತಿಗೆ ನನ್ನ ಬಳಿ ಜಗಳವಾಡಬೇಡಿ ಎಂದು ಆಕೆಗೆ ಮೂರನೇ ಮಗು ಇರುವುದನ್ನೂ ತಿಳಿಸಿದರು.

ಒಬ್ಬರು ಅತ್ತರೆ, ಮತ್ತೊಬ್ಬರು ನಕ್ಕರು!

ಈ ಸುದ್ದಿ ಕೇಳಿ ಹನ್ನಾ ಸಂಪೂರ್ಣ ಆಘಾತಕ್ಕೊಳಗಾದರು. ನಾಲ್ಕು ಮಕ್ಕಳನ್ನು ಬೆಳೆಸುವುದೇ ಕಷ್ಟ ಎನ್ನುವಾಗ, ಮಕ್ಕಳ ಸಂಖ್ಯೆ ದಿಢೀರನೆ 6 ಕ್ಕೆ ಏರುತ್ತದೆ ಎಂದು ಆಕೆ ಊಹಿಸಿರಲಿಲ್ಲ! ನಂತರ ಅಲ್ಟ್ರಾಸೌಂಡ್ ತಂತ್ರಜ್ಞರು ಜಾಕೋಬ್ ಅವರನ್ನು ಕೊಠಡಿಯ ಒಳಗೆ ಕರೆದು ಪ್ರಿಯಕರನಿಗೂ ಹೇಳಿದರು. ಇದನ್ನು ಕೇಳಿದ ಜಾಕೋಬ್ ವೈದ್ಯರು ತಮಾಷೆ ಮಾಡುತ್ತಿದ್ದಾರೆ ಎಂದು ಭಾವಿಸಿ ನಗಲು ಪ್ರಾರಂಭಿಸಿದರು. ಇದು ತಮಾಷೆಯಲ್ಲ, ವಾಸ್ತವ ಎಂದು ತಿಳಿದಾಗ ಅವರೂ ಕೂಡ ಸ್ತಬ್ಧರಾದರು. ನಾವು ಮೂರು ಮಕ್ಕಳನ್ನೂ ಒಟ್ಟಿಗೆ ಪರದೆಯ ಮೇಲೆ ನೋಡಿದಾಗ, ನಾನು ಅಳಲು ಪ್ರಾರಂಭಿಸಿದೆ. ಆದರೆ ಜಾಕೋಬ್ ನಗಲು ತೊಡಗಿ, ಕೆಲವು ಗಂಟೆಗಳ ಕಾಲ ನಗುತ್ತಲೇ ಇದ್ದರು. ಸ್ಕ್ಯಾನಿಂಗ್ ಕೊಠಡಿಯಿಂದ ಹೊರಬಂದಾಗ ಜನರ ನೋಟ ನಮಗೆ ತಮಾಷೆಯಾಗಿ ಕಾಣಿಸುತ್ತಿತ್ತು ನನ್ನ ಕಣ್ಣಲ್ಲಿ ನೀರಿತ್ತು, ಅವರ ಕೈಯಲ್ಲಿ ಅಲ್ಟ್ರಾಸೌಂಡ್ ಫೋಟೋಗಳಿದ್ದವು! ಎನ್ನುತ್ತಾರೆ ಹನ್ನಾ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ :

ಹನ್ನಾ ಈ ವಿಶಿಷ್ಟ ಕಥೆಯನ್ನು ತಮ್ಮ ಟಿಕ್‌ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೊ 5.8 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದು ವೈರಲ್ ಆಗಿದೆ. ಪ್ರಪಂಚದ ಮೂಲೆ ಮೂಲೆಗಳಿಂದ ನೆಟ್ಟಿಗರು ಈ ದಂಪತಿಗೆ ಶುಭ ಹಾರೈಸಿದ್ದಾರೆ.

ಮಕ್ಕಳ ಜೆಂಡರ್ ರಿವೀಲ್ ಕಾರ್ಯಕ್ರಮದಲ್ಲಿ, ಮೂರೂ ಮಕ್ಕಳು ಗಂಡು ಮಕ್ಕಳೇ ಎಂದು ತಿಳಿದಾಗ ದಂಪತಿಗೆ ಮತ್ತೊಮ್ಮೆ ಆಶ್ಚರ್ಯವಾಯಿತು. ಆದರೆ ಅದೇ ಶುಭ ಸಮಾರಂಭದಲ್ಲಿ ಜಾಕೋಬ್ ಎಲ್ಲರ ಎದುರು ಹನ್ನಾ ಅವರಿಗೆ ಪ್ರಪೋಸ್ ಮಾಡಿ, ಉಂಗುರ ತೊಡಿಸಿ ತಮ್ಮ ಮದುವೆಯ ಪ್ರಸ್ತಾಪವನ್ನು ಮುಂದಿಟ್ಟರು.

ಟಿಕ್‌ಟಾಕ್ ನೆಟ್ಟಿಗರು ಈ ವೀಡಿಯೊಗೆ ತಮಾಷೆಯಾಗಿ ಪ್ರತಿಕ್ರಿಯಿಸುತ್ತಾ, ಕನಿಷ್ಠ ಪಕ್ಷ ನಿಮಗೀಗ 6 ಜನ ಸೊಸೆಯಂದಿರು ಸಿಗಲಿದ್ದಾರೆ! ಮತ್ತು ಉತ್ತಮ ಗಂಡುಮಕ್ಕಳನ್ನು ಬೆಳೆಸುವ ನಿಮ್ಮ ಈ ಸೇವೆಗೆ ಧನ್ಯವಾದಗಳು! ಎಂದು ಕಾಮೆಂಟ್ ಮಾಡಿದ್ದಾರೆ.

ನಾವು ಬಯಸಿದಂತೆ ಹೆಣ್ಣು ಮಗು ಸಿಗಲಿಲ್ಲ, ಬದಲಿಗೆ ಮೂರು ಗಂಡು ಮಕ್ಕಳು ಸಿಕ್ಕಿದ್ದಾರೆ! ನೀವು ಏನನ್ನು ಬಯಸುತ್ತೀರೋ ಅದರ ಬಗ್ಗೆ ಜಾಗರೂಕರಾಗಿರಿ ಎಂಬ ಗಾದೆಗೆ ನಮ್ಮ ಕಥೆಯೇ ಸೂಕ್ತ ಉದಾಹರಣೆ. ಆರು ಮಕ್ಕಳನ್ನು ಬೆಳೆಸುವುದು ಸುಲಭವಲ್ಲ ಎಂಬುದು ನಮಗೆ ಗೊತ್ತು, ಆದರೆ ಪ್ರತಿಯೊಂದೂ ಒಂದು ಕಾರಣಕ್ಕಾಗಿಯೇ ನಡೆಯುತ್ತದೆ. ಈ ಮಕ್ಕಳು ನಮ್ಮ ಜೀವನವನ್ನು ಮತ್ತಷ್ಟು ಪೂರ್ಣಗೊಳಿಸಲು ಬಂದಿದ್ದಾರೆ ಎಂದು ಹನ್ನಾ ಹೇಳುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೌತ್ ಇಂಡಿಯಾದ ನೂರಾರು ಕುಟುಂಬಗಳಿಗೆ ಆಸರೆಯಾದ ರಶ್ಮಿಕಾ ಮಂದಣ್ಣ; ಈ ಕಾರ್ಯಕ್ಕೆ 'ಜಯಮ್ಮ' ಕೊಡುಗೆ ಏನು?
ರಷ್ಯಾದಿಂದ ಪ್ರಿಯಕರನಿಗಾಗಿ ಬಿಹಾರಕ್ಕೆ ಬಂದ ಯುವತಿ! ಈ ಪ್ರೇಮಕಥೆಯ ಹಿಂದಿದೆ ರೋಚಕ ತಿರುವು