ಅಮೆರಿಕ, ಇಟಲಿ, ಫ್ರಾನ್ಸ್​ ಎಲ್ಲೇ ಹೋದ್ರೂ ನನ್ನನ್ನು ರಶ್ಮಿಕಾ ಹೀಗೆ ಕುಣಿಸ್ತಾಳೆ: ಆ್ಯಂಕರ್​ ಅನುಶ್ರೀ ಎದುರು ಗುಟ್ಟು ರಟ್ಟು

Published : Oct 15, 2026, 07:48 PM IST
Rashmika Mandanna and Vijaya Devarakonda

ಸಾರಾಂಶ

'ರಣಬಾಲಿ' ಸಿನಿಮಾ ಪ್ರಚಾರದ ವೇಳೆ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಆ್ಯಂಕರ್ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ವಿಜಯ್ ದೇವರಕೊಂಡ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನಗೆದ್ದರೆ, ರಶ್ಮಿಕಾ ಮತ್ತು ವಿಜಯ್​ ದಂಪತಿ ಕೊಡವ ಡಾನ್ಸ್ ಬಗ್ಗೆ ಹಂಚಿಕೊಂಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಸದ್ಯ ತಮ್ಮ ಮುಂಬರುವ ಸಿನಿಮಾ ‘ರಣಬಾಲಿ’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ಪ್ರಚಾರದ ವೇಳೆ ಅವರು ವಿವಿಧ ಮಾಧ್ಯಮಗಳ ಮುಂದೆ ತಮ್ಮ ಫ್ಯಾಮಿಲಿ ಲೈಫ್​ ಅನುಭವ ಹಂಚಿಕೊಳ್ಳುತ್ತಿದ್ದಾರೆ. ತಾವು ಭೇಟಿಯಾದದ್ದು, ಮದುವೆಯಾದ ಮೇಲಿನ ಸಂಬಂಧ ಇತ್ಯಾದಿಗಳ ಬಗ್ಗೆ ಮಾತನಾಡಿದ್ದಾರೆ. ಇದೀಗ ರಶ್ಮಿಕಾ ಮತ್ತು ವಿಜಯ ದೇವರಕೊಂಡ ಅವರು ಮೊದಲ ಬಾರಿಗೆ ಆ್ಯಂಕರ್​ ಅನುಶ್ರೀ (Anchor Anushree) ಅವರ ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಇದರಲ್ಲಿ ರಶ್ಮಿಕಾ ಅವರು ಬಹುತೇಕ ಕನ್ನಡದಲ್ಲಿಯೇ ಮಾತನಾಡಿದ್ದು ವಿಶೇಷವಾಗಿದೆ. ವಿಜಯ್​ ಕೂಡ ಕೆಲವೊಂದು ಶಬ್ದಗಳನ್ನು ಕನ್ನಡದಲ್ಲಿ ಹೇಳುವ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ.

ರಶ್ಮಿಕಾ ಕುಣಿಸ್ತಾಳೆ

ಈ ಸಂದರ್ಶನದಲ್ಲಿ ಆ್ಯಂಕರ್​ ಅನುಶ್ರೀ ಅವರು ಕೊಡವ ಡಾನ್ಸ್​ ಬಗ್ಗೆ ಪ್ರಶ್ನಿಸಿದ್ದಾರೆ. ನೀವು ಕೊಡಗಿನವರಾಗಿರುವ ಕಾರಣ, ಎಲ್ಲಿ ಹೋದರೂ ಕೊಡವ ಡಾನ್ಸ್​ ಮಾಡ್ತೀರಾ,ಇದನ್ನು ಪತಿ ವಿಜಯ್​ಗೆ ಹೇಳಿಕೊಟ್ಟಿದ್ದೀರಾ ಎಂದು ಪ್ರಶ್ನಿಸಿದಾಗ, ವಿಜಯ್​ ಅವರು ಕುಳಿತಲ್ಲಿಯೇ ಡಾನ್ಸ್​ ಮಾಡಿಸಿ ತೋರಿಸಿದ್ದಾರೆ. ಅಮೆರಿಕ, ಇಟಲಿ, ಫ್ರಾನ್ಸ್​ ಎಲ್ಲೇ ಹೋದ್ರೂ ನನ್ನನ್ನು ಕೊಡವ ಡಾನ್ಸ್​ನಲ್ಲಿ ರಶ್ಮಿಕಾ ಕುಣಿಸ್ತಾಳೆ. ಈ ಡಾನ್ಸ್ ಇದ್ದೇ ಇರಬೇಕು. ಅದನ್ನು ನನಗೆ ಚೆನ್ನಾಗಿ ಹೇಳಿಕೊಟ್ಟಿದ್ದಾಳೆ ಎನ್ನುವ ಮೂಲಕ ರಶ್ಮಿಕಾರ ಕರ್ನಾಟಕದ ಪ್ರೀತಿಯನ್ನು ತಿಳಿಸಿದ್ದಾರೆ.

ಇದೇ ಪಾಡ್​ಕಾಸ್ಟ್​ನಲ್ಲಿ ರಶ್ಮಿಕಾ ಮತ್ತು ವಿಜಯ್​ ದೇವರಕೊಂಡ (Rashmika Mandanna and Vijaya Devarakonda) ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಕನ್ನಡದಲ್ಲಿ ಮಾತನಾಡಿದ್ದಾರೆ. ನಮಸ್ಕಾರ ನಿಮಗೆ, ಎಲ್ಲರಿಗೂ ಎನ್ನುತ್ತಲೇ ಮಾತು ಶುರು ಮಾಡಿದ ವಿಜಯ್ ದೇವರಕೊಂಡ ಅನುಶ್ರೀ ಅವರನ್ನು ಹೊಗಳಿದ್ದಾರೆ. ನೀವು ತುಂಬಾ ಮುದ್ದಾಗಿದ್ದೀರಿ ಎಂದಿದ್ದಾರೆ. ಅಷ್ಟೇ ಅಲ್ಲ ಅನುಶ್ರೀ ಕೇಳ್ತಿದ್ದ ಎಲ್ಲ ಕನ್ನಡ ಪ್ರಶ್ನೆಗಳನ್ನು ಅರ್ಥ ಮಾಡ್ಕೊಂಡು ಅದಕ್ಕೆ ಉತ್ತರ ನೀಡುವ ಪ್ರಯತ್ನವನ್ನು ವಿಜಯ್ ದೇವರಕೊಂಡ ಮಾಡಿದ್ದಾರೆ. ಅವರು ಕನ್ನಡದಲ್ಲಿ ಮಾತು ಶುರು ಮಾಡ್ತಿದ್ದಂತೆ ಅನುಶ್ರೀ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತಪಸ್ವಿನಿ ಜೊತೆ ಮಾತು

ಪಾಡ್​ಕಾಸ್ಟ್​ ಸಮಯದಲ್ಲಿ ಪ್ರೇಮದ ಊರಲಿ ನಟಿ ತಪಸ್ವಿನಿ ಜೊತೆ ಫೋನ್​ನಲ್ಲಿ ರಶ್ಮಿಕಾ ಮಾತನಾಡಿದ್ದಾರೆ. ಈ ವೇಳೆ ಮೈಸೂರಿಗೆ ಅಥವಾ ಕೊಡಗಿಗೆ ಬಂದಾಗ ಖಂಡಿತವಾಗಿಯೂ ಭೇಟಿಯಾಗುವುದಾಗಿ ರಶ್ಮಿಕಾ ತಪಸ್ವಿನಿಗೆ ಭರವಸೆ ನೀಡಿದ್ದಾರೆ. ಇದರ ನಡುವೆ ತಪಸ್ವಿನಿ ಅಭಿನಯದ ‘ಪ್ರೇಮದ ಊರಲಿ’ ಸಿನಿಮಾ ಕೂಡ ಮಾತಿನ ವಿಷಯವಾಗಿದೆ. ಚಿತ್ರವನ್ನು ವಿಜಯ್ ನೋಡಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ‘ಸಿನಿಮಾ ನೋಡುತ್ತೇನೆ’ ಎಂದು ಹೇಳಿದಾಗ, ತಪಸ್ವಿನಿ ಚಿತ್ರ ತೆಲುಗಿನಲ್ಲಿ ರಿಲೀಸ್ ಆಗಿದ್ದು ಹೈದರಾಬಾದ್‌ನಲ್ಲಿ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಾಯ್‌ಫ್ರೆಂಡ್ ಜೊತೆ ಮದುವೆಗೆ ಸಿದ್ಧಳಾಗಿದ್ದ ಯುವತಿ; ತಾಯಿಯ ಒಂದೇ ಒಂದು ಮಾತಿನಿಂದ ಬದಲಾಯ್ತು ನಿರ್ಧಾರ!
ತಾಯಿಗಾಗಿ ಮಗನ ಅಪರೂಪದ ಸಂಕಲ್ಪ! ಅಮ್ಮ ಕಾಯಿಲೆಯಿಂದ ಗುಣಮುಖರಾದ ತಕ್ಷಣ ಮಗ ಮಾಡಿದ ಕೆಲಸವೇನು ಗೊತ್ತಾ?