ಪ್ರೀತಿ ಮಾಡುವಾಗ ಎದುರಿಸಬೇಕಾಗಿ ಬರೋ ತೊಂದ್ರೆಗಳು ಒಂದೆರಡಲ್ಲ. ಗರ್ಲ್‌ಫ್ರೆಂಡ್, ಬಾಯ್‌ಫ್ರೆಂಡ್‌ನ್ನು ಮೀಟ್ ಆಗೋಕೆ ಪೋಷಕರ ಕಣ್ಣು ತಪ್ಪಿಸಿ ಪಡಬಾರದ ಪಾಡು ಪಡ್ತಾರೆ. ಹಾಗೆಯೇ ಮನೆ ಮಂದಿಯ ಕಣ್ಣು ತಪ್ಪಿಸಿ ಲವರ್‌ನ್ನು ಭೇಟಿಯಾಗೋಕೆ ಬಂದ ಯುವಕ, ಆಕೆಯ ಪೋಷಕರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಲವ್ ಮಾಡ್ತೀವಿ ಅಂದ್ರೆ ಎಲ್ಲಾ ರಿಸ್ಕ್ ತೆಗೆದುಕೊಳ್ಳೋಕು ರೆಡಿ ಆಗಿರಬೇಕಾಗಿರುತ್ತದೆ. ಅದರಲ್ಲೂ ಬಾಯ್‌ಫ್ರೆಂಡ್ ಹಾಗೂ ಗರ್ಲ್‌ಫ್ರೆಂಡ್ ಇರೋ ವಿಷ್ಯ ಮನೆ ಮಂದಿಗೆ ಗೊತ್ತಿಲ್ಲಾಂದ್ರೆ ಆ ನಂತ್ರದ ಹೇಳೋದೆ ಬೇಡ. ಸ್ಪೆಷಲ್ ಕ್ಲಾಸ್ ಇದೆ, ಫ್ರೆಂಡ್ ಬರ್ತ್‌ಡೇ ಪಾರ್ಟಿ ಇದೆ ಹೀಗೆ ನಾನಾ ನೆಪ ಹೇಳಿ ಪೋಷಕರ ಕಣ್ಣು ತಪ್ಪಿಸಿ ಮನೆಯಿಂದ ಹೊರ ಹೋಗಬೇಕಾಗುತ್ತದೆ. ಇದಲ್ಲದೆ ರಾತ್ರಿ ಹೊತ್ತು ಅಥವಾ ಪೇರೆಂಟ್ಸ್ ಮನೆಯಲ್ಲಿ ಇಲ್ಲದಿದ್ದಾಗ ಲವರ್‌ನ್ನು ಮೀಟ್ ಮಾಡಲು ಹೋಗಬೇಕಾಗುತ್ತದೆ. ಹಾಗೆಯೇ ಇಲ್ಲೊಬ್ಬ ಯುವಕ ಮನೆ ಮಂದಿಯ ಕಣ್ಣು ತಪ್ಪಿಸಿ ಲವರ್‌ನ್ನು ಭೇಟಿಯಾಗೋಕೆ ಬಂದು, ಆಕೆಯ ಪೋಷಕರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ನಿಜವಾದ ಪ್ರೀತಿ (Love)ಯಲ್ಲಿ, ಒಬ್ಬರು ತಮ್ಮ ಪ್ರೀತಿಪಾತ್ರರನ್ನು ಸಂತೋಷವಾಗಿಡಲು ಯಾವುದೇ ಹಂತಕ್ಕೆ ಹೋಗುತ್ತಾರೆ. ಪ್ರೀತಿಸಿದವರನ್ನು ಮೀಟ್ ಆಗುವ ಯಾವುದೇ ಸಂದರ್ಭವನ್ನು ತಪ್ಪಿಸುವುದಿಲ್ಲ. ಅದರಲ್ಲೂ ಹದಿಹರೆಯದಲ್ಲಿ ಪ್ರೀತಿಸಿದವರನ್ನು ಕದ್ದುಮುಚ್ಚಿ ಭೇಟಿಯಾಗುವುದೇ ಒಂದು ಥ್ರಿಲ್ ಆಗಿದೆ. ಹದಿಹರೆಯದಲ್ಲಿ (Teenage) ತಮ್ಮ ಪ್ರೀತಿಯ ಪಾಲುದಾರರನ್ನು ರಹಸ್ಯವಾಗಿ ಭೇಟಿಯಾಗುವುದರಿಂದ ಹಿಡಿದು ಸಿಕ್ಕಿಬಿದ್ದ ನಂತರ ಅವಮಾನವನ್ನು ಎದುರಿಸುವವರೆಗೆ, ಪ್ರೀತಿಯಲ್ಲಿ ಹಲವಾರು ಜನರು ಒಂದೊಂದು ರೀತಿಯ ಅನುಭವವನ್ನು ಎದುರಿಸುತ್ತಾರೆ.
5 ವರ್ಷದ ಪ್ರೀತಿ, ಸರ್ಪ್ರೈಸ್ ಮದುವೆ ಆಯೋಜಿಸಿದ ಬಾಯ್‌ಫ್ರೆಂಡ್‌ಗೆ ಕೈಕೊಟ್ಟ ಗೆಳತಿ!
ಪ್ರೇಯಸಿಯನ್ನು ಭೇಟಿಯಾಗಲು ಬಂದು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ
ಇತ್ತೀಚಿಗೆ ವೈರಲ್ ಆದ ವೀಡಿಯೋದಲ್ಲಿ ಸಹ ಯುವಕನೊಬ್ಬ ತನ್ನ ಪ್ರೇಯಸಿ (Lover)ಯನ್ನು ಭೇಟಿಯಾಗಲು ಬಂದು ಆಕೆಯ ಪೋಷಕರ ಕೈಗೇ ರೆಡ್ ಹ್ಯಾಂಡ್‌ಗೆ ಸಿಕ್ಕಿಬೀಳುವುದನ್ನು ನೋಡಬಹುದು. ವೀಡಿಯೋದಲ್ಲಿ, ತನ್ನ ಒಳಉಡುಪಿನಲ್ಲಿ (Underwear) ಯುವಕನೊಬ್ಬ ಬಾಲ್ಕನಿಯ ಹೊರಭಾಗಕ್ಕೆ ಜಿಗಿಯುತ್ತಿರುವುದನ್ನು ಕಾಣಬಹುದು ಮತ್ತು ಉದ್ದನೆಯ ಬಟ್ಟೆಯು ಕೆಳಗೆ ನೇತಾಡುತ್ತಿರುವುದನ್ನು ಕಾಣಬಹುದು. ಮೇಲಿನ ಮಹಡಿಯಿಂದ ಇತರ ಇಬ್ಬರು ವ್ಯಕ್ತಿಗಳು ಘಟನೆಯನ್ನು ನೋಡುತ್ತಿರುವಾಗ, ಹುಡುಗಿಯೊಬ್ಬಳು ಯುವಕನ ಬಟ್ಟೆಗಳನ್ನು ಕೆಳಗೆ ಎಸೆದಿದ್ದಾಳೆ. ಉದ್ದನೆಯ ಬಟ್ಟೆಯ ಮೇಲೆ ನೇತಾಡುತ್ತಾ ಯುವಕನು ಕೆಳಗೆ ಇಳಿಯುತ್ತಾನೆ.
ಇದ್ದಕ್ಕಿದ್ದಂತೆ, ಹುಡುಗಿಯ ತಂದೆಯಂತೆ ಕಾಣಿಸುವ ಇನ್ನೊಬ್ಬ ವ್ಯಕ್ತಿ ಸಿಟ್ಟಿನಿಂದ ಬಾಲ್ಕನಿಯನ್ನು ಸಮೀಪಿಸುತ್ತಾನೆ ಮತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಯುವಕನನ್ನು ಹಿಡಿಯಲು ಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ಯುವತಿ ತನ್ನ ತಂದೆಯನ್ನು ತಡೆಯಲು ಪ್ರಯತ್ನಿಸುತ್ತಾಳೆ. ಹೀಗಾಗಿ ಯುವಕನಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಯುವಕನು ಕೆಳ ಮಹಡಿಗೆ ಜಾರುತ್ತಿದ್ದಂತೆ, ಹುಡುಗಿಯ ತಾಯಿ ಇದ್ದಕ್ಕಿದ್ದಂತೆ ಬಾಲ್ಕನಿಗೆ ಬಂದು ಪೊರಕೆಯಿಂದ ಹೊಡೆಯಲು ಪ್ರಾರಂಭಿಸುತ್ತಾಳೆ. ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋ ಸದ್ಯ ಎಲ್ಲರ ಗಮನ ಸೆಳೀತಿದೆ.
ಪ್ರಮೋಶನ್‌ನಿಂದ ಪ್ರೀತಿಯಲ್ಲಿ ಬಿರುಕು, ಲಾಸ್ಟ್ ಮೀಟ್ ನೆಪದಲ್ಲಿ ಪ್ರೇಯಸಿ ಕತೆ ಮುಗಿಸಿದ ಬಾಯ್‌ಫ್ರೆಂಡ್
ಯುವಕನು ತನ್ನ ಗೆಳತಿಯನ್ನು ರಹಸ್ಯವಾಗಿ ಭೇಟಿಯಾಗಲು ತನ್ನ ಪ್ರಾಣವನ್ನು ಪಣಕ್ಕಿಟ್ಟನು. ಹುಡುಗಿಯ ಪೋಷಕರು ಟಿಪಿಕಲ್ ತಂದೆ-ತಾಯಿಯಂತೆಯೇ ಪ್ರತಿಕ್ರಿಯಿಸಿದರು. ಎನೆಝೇಟರ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಭಾರೀ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸರ್‌ಪ್ರೈಸ್ ಕೊಡಲು ಬಂದ ಯುವಕ, ಇನ್ನೊಬ್ಬಳ ತೆಕ್ಕೆಯಲ್ಲಿದ್ಲು ಪ್ರೇಯಸಿ
ಈ ಹಿಂದೆ ವೈರಲ್ ಆದ ವಿಡಿಯೋದಲ್ಲಿ ಯುವಕ ತನ್ನ ಸ್ನೇಹಿತರ ಜೊತೆ ಪ್ರೇಯಸಿಯ (Lover) ಮನೆಗೆ ಆಕೆಗೆ ಸರ್‌ಪ್ರೈಸ್ ಕೊಡಲು ಹೋಗುತ್ತಾನೆ. ಆದರೆ ಅಚ್ಚರಿಯೆಂಬಂತೆ ಆಕೆ ಮನೆಯಲ್ಲಿ ಇನ್ನೊಬ್ಬ ಯುವಕನ ಜೊತೆ ಸರಸದಲ್ಲಿರುವುದು ತಿಳಿದುಬರುತ್ತದೆ. ಎಲ್ಲರಿಗೂ ಆಶ್ಚರ್ಯವಾಗುವಂತೆ, ಹುಡುಗಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಚುಂಬಿಸುತ್ತಾ (Kissing) ಮನೆಯೊಳಗೆ ಪ್ರವೇಶಿಸುತ್ತಾಳೆ. ಆಕೆ ಬೇರೊಬ್ಬ ಪುರುಷನೊಂದಿಗೆ ಚುಂಬಿಸುತ್ತಿರುವುದನ್ನು ಕಂಡು ಯುವಕರು ಆಘಾತಕ್ಕೊಳಗಾಗುತ್ತಾರೆ. ಯುವತಿಯೊಬ್ಬಳು ತನ್ನ ಬಾಯ್‌ಫ್ರೆಂಡ್‌ಗೆ ಮೋಸ ಮಾಡುತ್ತಿರುವ ಈ ವೈರಲ್ ವೀಡಿಯೊ, ಪ್ರೀತಿಯಲ್ಲಿ ಎಲ್ಲವನ್ನೂ ಮಾಡಿದರೂ ಸಹ ವಂಚನೆಯ ಪ್ರವೃತ್ತಿ ಹೆಚ್ಚುತ್ತಿರುವ ಉದಾಹರಣೆಯಾಗಿದೆ.
Every pleasure in life has a price pic.twitter.com/rtHwfFNjtr
— Enezator (@Enezator)