ಹೀಗೆ ಯಾರಾದ್ರೂ ಮೈ ಮುಟ್ಟಿದರೆ ಸುಮ್ನಿರಬೇಡಿ, ಶಿಕ್ಷಕಿಯ ಬ್ಯಾಡ್ ಟಚ್ ಪಾಠದ ವೀಡಿಯೋ ವೈರಲ್!

By Suvarna News  |  First Published Aug 12, 2023, 5:54 PM IST

ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಸರಿಯಾಗಿ ತಿಳಿಸುವ ಅಗತ್ಯವಿದೆ. ಮಕ್ಕಳು ಥಿಯೆರಿಗಿಂತ ಪ್ರ್ಯಾಕ್ಟಿಕಲ್ ನಲ್ಲಿ ಹೆಚ್ಚು ಕಲಿತಾರೆ. ಇದನ್ನು ಅರಿತಿದ್ದ ಶಿಕ್ಷಕಿ ಈಗ ಎಲ್ಲರಿಂದ ಸೈ ಎನ್ನಿಸಿಕೊಂಡಿದ್ದಾಳೆ.
 


ಈಗಿನ ದಿನಗಳಲ್ಲಿ ದುಷ್ಟರ ಕೈನಿಂದ ಮಕ್ಕಳನ್ನು ಕಾಪಾಡೋದು ಕಷ್ಟವಾಗಿದೆ. ಅಪರಿಚಿತರಿರಲಿ, ಮನೆ ಮಂದಿಯನ್ನೇ ನಂಬೋದು ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಪ್ರೀತಿ, ಮುದ್ದಿನ ಹೆಸರಿನಲ್ಲಿ ಮಕ್ಕಳ ಖಾಸಗಿ ಅಂಗವನ್ನು ಸ್ಪರ್ಶಿಸಿ ಆನಂದ ತೆಗೆದುಕೊಳ್ಳುವ ಕಾಮುಕರ ಸಂಖ್ಯೆ ಸಾಕಷ್ಟಿದೆ. ಹಾಗಾಗಿ ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ತಿಳಿಸೋದು ಬಹಳ ಮುಖ್ಯ. ನೀವು ಮಾತಿನ ಮೂಲಕ ಬ್ಯಾಡ್ ಟಚ್, ಗುಡ್ ಟಚ್ ಬಗ್ಗೆ ಹೇಳಿದ್ರೆ ಮಕ್ಕಳಿಗೆ ಅರ್ಥವಾಗೋದಿಲ್ಲ. ಮಕ್ಕಳಿಗೆ ಇದ್ರ ಬಗ್ಗೆ ಸರಿಯಾದ ಮಾಹಿತಿ ನೀಡ್ಬೇಕು. ಅದನ್ನು ಕೆಲ ಶಿಕ್ಷಕರು ಮಾಡಿ ತೋರಿಸಿದ್ದಾರೆ. ವಿಡಿಯೋ ಮೂಲಕ ಅಥವಾ ತಮ್ಮದೇ ವಿಧಾನದ ಮೂಲಕ ಇದ್ರ ಬಗ್ಗೆ ಮಕ್ಕಳಿಗೆ ಜ್ಞಾನ ನೀಡುವ ಪ್ರಯತ್ನ ನಡೆಸಿದ್ದಾರೆ. 

ಸಾಮಾಜಿಕ ಜಾಲತಾಣ (Social Media ) ದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ಶಿಕ್ಷಕಿ (Teacher) ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ಮಕ್ಕಳಿಗೆ ಅರ್ಥವಾಗುವಂತೆ ವಿವರಿಸಿದ್ದಾರೆ. 
Roshan Rai ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದನ್ನು ಭಾರತ (India)ದಾದ್ಯಂತ ಎಲ್ಲಾ ಶಾಲೆಗಳಲ್ಲಿ ಪುನರಾವರ್ತಿಸಬೇಕು ಎಂದು ಶೀರ್ಷಿಕೆ ಹಾಕಲಾಗಿದೆ. ವೀಡಿಯೋವನ್ನು 1.5 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಶಾಲೆಗಳಲ್ಲಿ ಅಂತಹ ಶಿಕ್ಷಣದ ಅಗತ್ಯವಿದೆ.  ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಅಂತಹ ಜ್ಞಾನ ಅಗತ್ಯವೆಂದು ಅನೇಕರು ಕಮೆಂಟ್ ಮಾಡಿದ್ದಾರೆ.

Tap to resize

Latest Videos

undefined

ಎಐ ತಂತ್ರಜ್ಞಾನ ಬಳಸಿ ಬಾಯ್ ಫ್ರೆಂಡ್ ಗುಟ್ಟು ರಟ್ಟು ಮಾಡಿದ ಯುವತಿ

ವೈರಲ್ ಆದ ವಿಡಿಯೋದಲ್ಲಿ ನೀವು ಶಾಲೆಯ ಮಕ್ಕಳು ಹಾಗೂ ಶಿಕ್ಷಕಿಯೊಬ್ಬರನ್ನು ನೋಡ್ಬಹುದು. ಶಿಕ್ಷಕಿ, ಮಕ್ಕಳನ್ನು ಕರೆದು ಅವರನ್ನು ಸ್ಪರ್ಶಿಸುತ್ತಾರೆ. ಮಕ್ಕಳು ಅದ್ರಲ್ಲಿ ಯಾವುದು ಗುಡ್ ಟಚ್ ಹಾಗೂ ಯಾವುದು ಬ್ಯಾಡ್ ಟಚ್ ಎಂದು ಹೇಳ್ಬೇಕು. ಎಲ್ಲೆಲ್ಲಿ ಸ್ಪರ್ಶಿಸಿದ್ರೆ ಗುಡ್ ಟಚ್, ಹೇಗೆ ಸ್ಪರ್ಶಿಸಿದ್ರೆ ಬ್ಯಾಡ್ ಟಚ್ ಎಂಬುದನ್ನು ಮಕ್ಕಳು ಹೇಳ್ಬೇಕಾಗುತ್ತದೆ. ಅಷ್ಟೇ ಅಲ್ಲ, ಮಕ್ಕಳು ಇದು ಬ್ಯಾಡ್ ಟಚ್ ಅಂದ್ರೂ ಶಿಕ್ಷಕಿ ಬಿಡೋದಿಲ್ಲ, ಇದು ಗುಡ್ ಟಚ್ ಎನ್ನುತ್ತ ಸ್ಪರ್ಶಿಸೋದನ್ನು ಮುಂದುವರೆಸ್ತಾಳೆ. ಆಗ ಆಕೆ ಕೈಯನ್ನು ಮಕ್ಕಳು ನೂಕುತ್ತಾರೆ. ಅಂಕಲ್ ಇದು ಬ್ಯಾಡ್ ಟಚ್ ಅಲ್ಲ ಗುಡ್ ಟಚ್ ಅಂದ್ರೆ ನೀವು ಒಪ್ಪುತ್ತೀರಾ ಎಂದು ಶಿಕ್ಷಕಿ ಕೇಳ್ತಾಳೆ. ಅದಕ್ಕೆ ಮಕ್ಕಳು ಇಲ್ಲವೆಂದು ಉತ್ತರ ನೀಡ್ತಾರೆ. ಅಲ್ಲದೆ ಎಲ್ಲೆಲ್ಲಿ ಟಚ್ ಮಾಡಿದ್ರೆ ಗುಡ್ ಟಚ್ ಎಂಬುದನ್ನು ಮತ್ತೆ ಮತ್ತೆ ಕೇಳಿ ಶಿಕ್ಷಕಿ ಮಕ್ಕಳಿಂದ ಉತ್ತರಪಡೆಯುತ್ತಾಳೆ. 

ಈ ಕೆಲವು ಹುಡುಗರಿಗ್ಯಾಕೆ ಅಮ್ಮನ ವಯಸ್ಸಿನ ಹೆಂಗಸರು ಇಷ್ಟವಾಗೋದು?

ಈ ವಿಡಿಯೋಕ್ಕೆ 31 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 9 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ. ಒಳ್ಳೆಯ ಸ್ಪರ್ಶ ಕೆಟ್ಟ ಸ್ಪರ್ಶವನ್ನು ಪೋಷಕರೇ ಕಲಿಸಬೇಕು. ಶಿಕ್ಷಕರು ಹಾಗೆ ಮಾಡಲು ಏಕೆ ಕಾಯಬೇಕು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಶಿಕ್ಷಕಿ ಅಧ್ಬುತ ಕೆಲಸ ಮಾಡ್ತಿದ್ದಾಳೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಮಕ್ಕಳು ಒಂದು ವರ್ಷದಲ್ಲಿರುವಾಗ್ಲೇ ಮಕ್ಕಳಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ತಿಳಿಸಬೇಕು ಎಂದು ಒಬ್ಬರು ಹೇಳಿದ್ರೆ ಮತ್ತೊಬ್ಬರು ಎಲ್ಲ ಶಾಲೆಗಳಲ್ಲಿ ಈ ರೂಲ್ಸ್ ಜಾರಿಗೆ ಬರಬೇಕು ಎಂದಿದ್ದಾರೆ. 

ಇನ್ನು ಕೆಲವರು ಈ ವಿಡಿಯೋವನ್ನು ವಿರೋಧಿಸಿದ್ದಾರೆ. ಈ ಬೋಧನೆಯ ವಿಧಾನವು ತುಂಬಾ ಸಮಸ್ಯೆಯಿಂದ ಕೂಡಿದೆ. ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶಗಳ ನಡುವಿನ ವ್ಯತ್ಯಾಸಗಳನ್ನು ಕಲಿಸಲು ಎಂದಿಗೂ ಮಕ್ಕಳನ್ನು ಅನುಚಿತ ಸ್ಪರ್ಶಿಸಬಾರದು. ಈ ವಿಡಿಯೋದಲ್ಲಿ ಮಕ್ಕಳು ಕುಣಿದು ಕುಪ್ಪಳಿಸಿದ್ದಾರೆ. ದಯವಿಟ್ಟು ಹೀಗೆ ಮಾಡಬೇಡಿ ಎಂದು ಇನ್ನೊಬ್ಬರು ಹೇಳಿದ್ದಾರೆ.
 

This teacher deserves to get famous 👏

This should be replicated in all schools across India.

Share it as much as you can. pic.twitter.com/n5dx90aQm0

— Roshan Rai (@RoshanKrRaii)
click me!