ರೆಗ್ಯುಲರ್‌ ಸೆಕ್ಸ್ ಮಾಡಿದ್ರೆ ಇಮ್ಯೂನಿಟಿ ಹೆಚ್ಚಾಗುತ್ತಾ?

By Suvarna NewsFirst Published Apr 18, 2021, 2:28 PM IST
Highlights

ರೆಗ್ಯುಲರ್ ಆಗಿ ಸೆಕ್ಸ್ ನಡೆಸುತ್ತಾ ಇದ್ದರೆ ನಿಮ್ಮ ದೇಹದ ರೋಗ ಪ್ರತಿರೋಧ ಶಕ್ತಿ ಕೂಡ ಗಟ್ಟಿಯಾಗಿ ಇರುತ್ತೆ.

ದಿನೇ ದಿನೇ ರೂಪಾಂತರಿ ಕೊರೋನಾ ಅಬ್ಬರ ಹೆಚ್ಚುತ್ತಿದೆ. ಆಸ್ಪತ್ರೆಯಲ್ಲಿ ಬೆಡ್‌ಗಳು ಸಿಗುತ್ತಿಲ್ಲ. ಚಿಕಿತ್ಸೆಯಿಲ್ಲದೇ ಮರಣ ಹೊಂದುವವರೂ ಅಧಿಕವಾಗುತ್ತಿದ್ದಾರೆ. ಇಂಥಾ ಟೈಮ್‌ನಲ್ಲಿ ಇಮ್ಯೂನಿಟಿ ಅನ್ನೋದು ಮಹತ್ವದ ಪಾತ್ರ ವಹಿಸುತ್ತೆ. ನಮ್ನಮ್ಮ ದೇಹದ ಪ್ರತಿರೋಧ ಶಕ್ತಿ ಹೆಚ್ಚಿಸಲು ಒಂದಿಷ್ಟು ಆಹಾರ ಪದಾರ್ಥ, ವ್ಯಾಯಾಮ ಇತ್ಯಾದಿ ಸಹಾಯ ಮಾಡಬಹುದು.

ಆದರೆ ಇವೆಲ್ಲಕ್ಕಿಂತ ವೇಗವಾಗಿ ಇಮ್ಯೂನಿಟಿ ಹೆಚ್ಚಿಸುವ ಮಾರ್ಗವೊಂದರ ಬಗ್ಗೆ ಸಂಶೋಧಕರು ತೀವ್ರವಾದ ಅಧ್ಯಯನದಲ್ಲಿ ತೊಡಗಿದ್ದಾರೆ. ಮನುಷ್ಯರಿಗೆ ತೀರಾ ಸಹಜವಾದ ಸೆಕ್ಸ್‌ನಿಂದ ಇಮ್ಯೂನಿಟಿ ಹೆಚ್ಚಾಗುತ್ತಾ ಅನ್ನೋದು ಈ ಅಧ್ಯಯನದ ವಸ್ತು. ಬಹಳ ಆಶಾದಾಯಕವಾದ ವಿಚಾರಗಳು ಈ ಅಧ್ಯಯನದಿಂದ ಹೊರಬಂದಿವೆ.

ಲೈಫ್‌ನಲ್ಲಿ ಉತ್ಸಾಹ

ಹಾಗೆ ನೋಡಿದರೆ ಸಂತಾನೋತ್ಪತ್ತಿಗಾಗಿ ಇರುವ ಲೈಂಗಿಕತೆ ಅಷ್ಟಕ್ಕೇ ಸೀಮಿತವಾಗಿಲ್ಲ. ಅದು ವ್ಯಕ್ತಿಗಳ ನಡುವಿನ ಸಂಬಂಧವನ್ನು ಗಟ್ಟಿ ಮಾಡುತ್ತೆ. ಎಮೋಶನಲೀ ಇಬ್ಬರನ್ನೂ ಹೆಚ್ಚೆಚ್ಚು ಕನೆಕ್ಟ್ ಮಾಡುತ್ತಾ ಹೋಗುತ್ತೆ. ಇದರ ಜೊತೆಗೆ ಆರೋಗ್ಯಕ್ಕೆ ಪೂರಕವಾದ ಹತ್ತಾರು ಲಾಭಗಳು ಈ ಸೆಕ್ಸ್‌ನಿಂದ ಆಗುತ್ತೆ. ಆದರೆ ಹೆಚ್ಚಿನವರು ಕೆಲಸದ ಒತ್ತಡ, ಪ್ರೆಗ್ನಿನ್ಸಿ ಭಯ, ಮಗುವಿಗೆ ಎಲ್ಲಿ ಎಚ್ಚರಾಗಿ ಬಿಡುತ್ತೋ ಎಂಬೆಲ್ಲ ಕಾರಣಕ್ಕೆ ಸೆಕ್ಸ್‌ಲೈಫ್‌ಗೆ ಪ್ರಾಧಾನ್ಯತೆ ನೀಡುತ್ತಿಲ್ಲ. ಇದರಿಂದ ಆ ಜೋಡಿಗಳ ನಡುವೆ ಮನಸ್ತಾಪ, ವಿರಸ ಹೆಚ್ಚಾಗೋದೋ ಇದೆ. ಆದರೆ ಸೆಕ್ಸ್‌ನಲ್ಲಿ ಸಕ್ರಿಯವಾಗಿರುವ ಜೋಡಿಗಳು ಲೈಫ್‌ನಲ್ಲಿ ಹೆಚ್ಚು ಉತ್ಸಾಹಿತರಾಗಿರ್ತಾರೆ. ಈ ಉತ್ಸಾಹವೇ ಅವರನ್ನು ಹೆಚ್ಚಿನ ಆರೋಗ್ಯ ಸಮಸ್ಯೆಗಳಿಂದ ದೂರವಿಡುತ್ತದೆ.



ಸೆಕ್ಸ್‌ನಿಂದ ನಿಜಕ್ಕೂ ಪ್ರತಿರೋಧ ಶಕ್ತಿ ಹೆಚ್ಚುತ್ತಾ?

ಹೌದು. ಸೆಕ್ಸ್‌ನಿಂದ ಬರೀ ಸಂತಾನೋತ್ಪತ್ತಿ ಪ್ರಯೋಜನ ಮಾತ್ರವಲ್ಲ ಅನ್ನೋದನ್ನ ವೈದ್ಯಕೀಯವೂ ಒಪ್ಪುತ್ತೆ. ವಿಲ್ಕ್ಸ್ ಯುನಿವರ್ಸಿಟಿಯ ಸಂಶೋಧನೆಯ ಪ್ರಕಾರ ಸೆಕ್ಸ್‌ ಮಾಡೋದ್ರಿಂದ ದೇಹ ವೈರಸ್‌, ಜರ್ಮ್ಸ್ ಇತ್ಯಾದಿಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತೆ. ಕನಿಷ್ಠ ವಾರಕ್ಕೆರಡು ಬಾರಿ ಸೆಕ್ಸ್‌ ಮಾಡಿದ್ರೆ ವೈರಸ್‌ ಅಟ್ಯಾಕ್‌ಗಳಾದರೂ ಬಹಳ ಬೇಗ ವ್ಯಕ್ತಿಗಳು ಚೇತರಿಸಿಕೊಂಡು ಬಿಡುತ್ತಾರೆ. ಅದೇ ಸೆಕ್ಸ್‌ ವಿಳಂಬವಾದಷ್ಟೂ ಆ ಚೇತರಿಕೆಯೂ ವಿಳಂಬವಾಗುತ್ತಾ ಹೋಗುತ್ತದೆ. ಸೆಕ್ಸ್‌ ನಿಮ್ಮ ಇಮ್ಯೂನ್‌ ಸಿಸ್ಟಮ್‌ಅನ್ನು ಬೂಸ್ಟ್‌ ಮಾಡಿ ದೇಹ ಚಟುವಟಿಕೆ, ಉಲ್ಲಾಸದಿಂದಿರುವಂತೆ ಮಾಡುತ್ತದೆ. ಇದರಿಂದ ಸ್ಟ್ರೆಸ್‌ ಲೆವೆಲ್ ಇಳಿದೇ ಬಿಡುತ್ತದೆ. ಸ್ಟ್ರೆಸ್ ಇಳಿದರೆ ಅರ್ಧಕ್ಕರ್ಧ ಡೇಂಜರ್ ಕಳೆದ ಹಾಗೆ. ಇದರಿಂದ ನಿಮ್ಮ ಬ್ಲಡ್‌ ಪ್ರೆಶರ್‌ ಸಮತೋಲನದಲ್ಲಿರುತ್ತದೆ. ಹೃದಯದ ಕಾರ್ಯನಿರ್ವಹಣೆ ಉತ್ತಮವಾಗಿರುತ್ತದೆ. ಹಾರ್ಟ್ ಅಟ್ಯಾಕ್ ರಿಸ್ಕ್‌ನಿಂದ ನೀವು ಪಾರಾಗಬಹುದು. ಕೋವಿಡ್ ಬಂದ ಹಲವರು ಹಾರ್ಟ್ ಅಟ್ಯಾಕ್‌ನಿಂದ ಮೃತಪಟ್ಟಿರೋದು ನಮಗೆಲ್ಲ ಗೊತ್ತು. ಆದರೆ ಸೆಕ್ಸ್ ಅಂಥ ಅಪಾಯವನ್ನೂ ದೂರ ಮಾಡುತ್ತೆ ಅಂತ ಸ್ಟಡಿ ಹೇಳುತ್ತೆ.

ಕ್ಯಾಲೊರಿ ಬರ್ನ್

ಇನ್ನೊಂದು ಉತ್ತಮ ಅಂಶ ಅಂದರೆ ಕ್ಯಾಲೊರಿ ಬರ್ನ್ ಆಗೋದು. ನೀವು ವ್ಯಾಯಾಮ ಮಾಡಿ ಕ್ಯಾಲೊರಿ ಬರ್ನ್ ಮಾಡೋದಕ್ಕಿಂತ ಎಷ್ಟೋ ಹೆಚ್ಚಿನ ಕ್ಯಾಲೊರಿ ಸೆಕ್ಸ್‌ನಲ್ಲಿ ಬರ್ನ್ ಆಗುತ್ತೆ. ಕೋವಿಡ್‌ ಟೈಮ್‌ನಲ್ಲಿ ಹೊರಗೆ ವ್ಯಾಯಾಮ ಮಾಡೋದು ರಿಸ್ಕ್‌ ಅಂದುಕೊಳ್ಳುವ ದಂಪತಿಗೆ ಇದು ಬೆಸ್ಟ್‌. ಜೊತೆಗೆ ಸೆಕ್ಸ್ ಮಾಡೋದ್ರಿಂದ ನಿದ್ರೆ ಚೆನ್ನಾಗಿ ಬರುತ್ತದೆ. ಒಂದೊಳ್ಳೆ ನಿದ್ದೆ ನಿಮ್ಮ ಇಮ್ಯೂನಿಟಿ ಹೆಚ್ಚಲು ಸಾಕಷ್ಟು ಕೊಡುಗೆ ನೀಡಬಲ್ಲದು. ನಮ್ಮ ಹಿಂದಿನವರು ಸಾಕಷ್ಟು ನಿದ್ರೆ ಮಾಡಿ, ಹೆಚ್ಚು ಒತ್ತಡ ಸೃಷ್ಟಿಸಿಕೊಳ್ಳದೆ, ಆರೋಗ್ಯಕರ ಲೈಂಗಿಕತೆಯನ್ನೂ ಹೊಂದಿದ್ದು ಹತ್ತಾರು ಮಕ್ಕಳನ್ನು ಮಾಡಿದರೂ ಹೆಚ್ಚು ವರ್ಷ ಆರಾಮಾಗಿ ಬದುಕುತ್ತಿದ್ದರು ಎನ್ನೋದು ನಿಮಗೆ ಗೊತ್ತೇ ಇದೆ ಅಲ್ಲವೇ.

ದಂಪತಿಗಳು ನಿಮ್ಮ ಸೆಕ್ಸ್‌ಲೈಫ್‌ಗೆ ಪುನರುಜ್ಜೀವನ ನೀಡಿದರೆ ಉತ್ತಮ. ಇದರಿಂದ ನಿಮ್ಮ ಎಮೋಶನಲ್‌ ಬ್ಯಾಲೆನ್ಸ್ ಹೆಚ್ಚುತ್ತೆ. ಕೋವಿಡ್‌ ಸಿಕ್ಕಾಪಟ್ಟೆ ಏರುತ್ತಿರುವ ಈ ಟೈಮ್‌ನಲ್ಲಿ ಹುಲ್ಲುಕಡ್ಡಿಯೂ ಆಸರೆಯೇ. ಆ ಹುಲ್ಲುಕಡ್ಡಿ ನಿಮ್ಮ ಲೈಂಗಿಕತೆಯೂ ಆಗಿರಬಹುದು. ಜೋಡಿ ಇಲ್ಲದವರು ಹಸ್ತುಮೈಥುನ ಮಾಡೋದ್ರಿಂದಲೂ ತಕ್ಕಮಟ್ಟಿನ ಪ್ರಯೋಜನ ಪಡೆಯಬಹುದು ಅನ್ನುತ್ತೆ ಅಧ್ಯಯನ. ಸೋ, ಸೆಕ್ಸ್ ಅಥವಾ ಲೈಂಗಿಕತೆಯೂ ನಿಮ್ಮನ್ನು ಅಪಾಯದಿಂದ ಪಾರು ಮಾಡಬಲ್ಲದು ಅನ್ನೋದು ಗಮನದಲ್ಲಿರಲಿ.

click me!