
ಕೆಲವು ವಿಚಾರಗಳನ್ನು ಮೌಲ್ಯಗಳನ್ನು ನಾವು ಚಿಕ್ಕಂದಿನಲ್ಲಿ ಹಿರಿಯರಿಂದ ಕಲಿತಿರುತ್ತೇವೆ. ಅದನ್ನೇ ಜೀವಮಾನವಿಡೀ ಆಚರಿಸಿಕೊಂಡು ಬರುತ್ತೇವೆ. ಆದರೆ ಆ ಮೌಲ್ಯಗಳೆಲ್ಲ ಆ ಕಾಲದ ರೂಢಿಗಳಿಂದಾಗಿ ಬಂದಿರೋದು. ಇಂದು ಕೂಡ ನಾವು ನಮ್ಮ ಮಕ್ಕಳಿಗೆ ಅದನ್ನೇ ಹೇಳಿಕೊಡಬೇಕು ಅಂತಿಲ್ಲ. ನಾವು ಕಲಿತಿರೋದಕ್ಕೆ ತದ್ವಿರುದ್ಧ ಅನ್ನೋದನ್ನೂ ಮಕ್ಕಳು ಕಲಿಯುತ್ತಾರೆ, ನಾವೂ ಕಲಿಸಬಹುದು ಕೂಡ. ಜೀವನ ಅನ್ನೋದು ಹಾಗೇ ಇರಬೇಕು ಕೂಡ.
ಹಾಗಾದ್ರೆ, ನಾವು ಕಲಿತಿರೋದೇನು, ಮಕ್ಕಳಿಗೆ ಈಗ ಹೇಳಿಕೊಡಬೇಕಾದ್ದೇನು ಅಂತ ನೋಡೋಣ ಬನ್ನಿ.
1. ನಾನು: ನಿನಗಿಂತ ಪ್ರಾಯದಲ್ಲಿ ದೊಡ್ಡವರಾದ ಎಲ್ಲರನ್ನೂ ಗೌರವಿಸು.
ಮಗಳು: ಹಿರಿತನ ಅನ್ನುವುದು ಪ್ರಾಯದಿಂದ ಬರುವುದಿಲ್ಲ, ಅದನ್ನು ಪಡೆಯಬೇಕಾಗುತ್ತದೆ.
2. ನಾನು: ಅವರ ಮಕ್ಕಳ ಮದುವೆಗೆ ನಮ್ಮನ್ನೂ ಕರೆದಿದ್ದರು, ಹಾಗಾಗಿ ನಾವೂ ಅವರನ್ನು ಕರೆಯಬೇಕು.
ಮಗಳು: ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸರಳವಾಗಿ ಮದುವೆ ಆಗಬೇಕು, ಬೇರೊಬ್ಬರಿಗಾಗಿ ಮದುವೆಯಾಗಬೇಕಿಲ್ಲ.
3. ನಾನು: ನಿನ್ನ ತಪ್ಪು ಇಲ್ಲದಿದ್ರೂ ಹಿರಿಯರ ಬಳಿ ಕ್ಷಮೆ ಕೇಳು.
ಮಗಳು: ನಿನ್ನ ತಪ್ಪು ಇದ್ದರೆ ಮಾತ್ರ ಕ್ಷಮೆ ಕೇಳು.
4. ನಾನು: ಹೆತ್ತವರು ಹೇಳೋದು ಯಾವಾಗ್ಲೂ ಸರಿ, ಯಾಕೆಂದರೆ ಅವರು ಅನುಭವಸ್ಥರು.
ಮಗಳು: ನಮ್ಮ ಅನುಭವ ಮತ್ತು ತಲೆಮಾರು ಹಳೆಯದು, ಹೀಗಾಗಿ ನಿನ್ನ ತೀರ್ಮಾನಕ್ಕೆ ನಿನ್ನ ಹೃದಯದ ಮಾತನ್ನು ಕೇಳು.
5. ನಾನು: ಮದ್ಯಪಾನ, ಧೂಮಪಾನ ಮಾಡುವವರು ಕೆಟ್ಟ ವ್ಯಕ್ತಿಗಳು.
ಮಗಳು: ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಅದನ್ನು ಮಾಡುವ ಮಾತ್ರಕ್ಕೇ ಅವರು ಕೆಟ್ಟವರಲ್ಲ.
6. ನಾನು: ಮದುವೆಯ ನಂತರ ಗಂಡ ಹೇಳಿದಂತೆ ಕೇಳಬೇಕು.
ಮಗಳು: ನೀನು ನಿನ್ನ ಗಂಡನ ಆಸ್ತಿಯಲ್ಲ.
7. ನಾನು: ಇದು ಗಂಡುಮಕ್ಕಳ ಹವ್ಯಾಸ.
ಮಗಳು: ಹವ್ಯಾಸಕ್ಕೆ ಲಿಂಗಭೇದವಿಲ್ಲ. ಅದು ಹೃದಯಕ್ಕೆ ಸಂಬಂಧಿಸಿದ್ದು.
8. ನಾನು: ಇನ್ನೆಷ್ಟು ದಿನ ಹೀಗೆ, ನನಗೆ ಬೇಗ ಅಜ್ಜಿ ಆಗಬೇಕು ಎಂಬ ಆಸೆ!
ಮಗಳು: ಮಗು ಹೆರೋದು ಬಿಡೋದು ನಿಮ್ಮ ಆಯ್ಕೆ, ಅದು ನಿಮ್ಮ ಕರ್ತವ್ಯ ಅಲ್ಲ.
ಪಿರಿಯಡ್ಸ್ ಅಂದ್ರೇನು ಅಂತ ಗಂಡಿಗೆ ಕೇಳಿದ್ರೆ ಹೇಗ್ ಹೇಳೋದಾ?
9. ನಾನು: ತಡವಾಗಿ ಮದುವೆಯಾದರೆ ಅಡ್ಜಸ್ಟ್‌ಮೆಂಟ್ ಕಷ್ಟವಾಗುತ್ತೆ.
ಮಗಳು: ನಿನಗಿಷ್ಟ ಬಂದಾಗ ಮದುವೆಯಾಗು. ಯಾಕಂದ್ರೆ ಮದುವೆ ಅಂದ್ರೆನೇ ಅಡ್ಜಸ್ಟ್‌ಮೆಂಟ್.
10. ನಾನು: ಪ್ಲೇಟ್‌ನಲ್ಲಿ ಇರೋದನ್ನೆಲ್ಲ ತಿಂದು ಮುಗಿಸಬೇಕು.
ಮಗಳು: ನಿನಗೆಷ್ಟು ಬೇಕೋ ಅಷ್ಟೇ ತೆಗೆದುಕೋ, ಹೊಟ್ಟೆ ತುಂಬಿದ ಮೇಲೂ ತುಂಬಿಸಬೇಡ.
11. ನಾನು: ಬೆತ್ತದ ರುಚಿ ತೋರಿಸಿದ್ರೆ ಮಾತ್ರ ಮಕ್ಕಳು ಕಲಿಯೋದು.
ಮಗಳು: ನಾವು ಹೆತ್ತವರು, ಡಿಕ್ಟೇಟರ್‌ಗಳಲ್ಲ. ಹೊಡೆಯುವುದು, ಹೊಡೆಸಿಕೊಳ್ಳುವುದನ್ನು ನಾನು ಕಲಿಸಲಾರೆ.
12. ನಾನು: ಆ ಬೇರೆ ಗ್ಲಾಸಿನಲ್ಲಿ ಗಾರ್ಡ್‌ಗೆ ನೀರು ಕೊಡು.
ಮಗಳು: ಎಲ್ಲ ವ್ಯಕ್ತಿಗಳೂ ಸಮಾನ. ಎಲ್ಲರಿಗೂ ಒಂದೇ ಬಗೆಯ ಗೌರವ ನೀಡಬೇಕು.
ಮಗನಿಗೂ ಪಿರಿಯಡ್ಸ್ ಬಗ್ಗೆ ಏಕೆ ಹೇಳಬೇಕು?
13. ನಾನು: ಡಿಪ್ರೆಶನ್ ವಗೈರೆ ಮಕ್ಕಳಿಗೆ ಆಗೊಲ್ಲ.
ಮಗಳು: ಮಕ್ಕಳಿಗೂ ಅವರದೇ ಸುರಕ್ಷಿತ ಮನೋಲೋಕ ಒದಗಿಸಬೇಕು.
14. ನಾನು: ಥೆರಪಿ ಎಲ್ಲ ನಮಗಲ್ಲ, ಅದು ಮನಸ್ಸು ಸರಿ ಇಲ್ಲದವರಿಗೆ.
ಮಗಳು: ನನ್ನ ಮಗುವಿಗೆ ವೃತ್ತಿಪರ ಮನೋ ಕೌನ್ಸೆಲಿಂಗ್ ಬೇಕಾದರೆ ನಾನು ಒದಗಿಸಲು ಸದಾ ಸಿದ್ಧ.
15. ನಾನು: ನಮಗಿಷ್ಟವಿಲ್ಲದಿದ್ದರೂ ಬಂಧುಗಳನ್ನು ತಬ್ಬಿಕೊಂಡು ಸ್ವಾಗತಿಸಬೇಕು.
ಮಗಳು: ವಿಧೇಯರಾಗಿರೋದಕ್ಕಿಂತಲೂ ಸುರಕ್ಷಿತತೆ ಉತ್ತಮ. ಭೌತಿಕ, ಸಾಮಾಜಿಕ ಬೌಂಡರಿಗಳನ್ನು ಗೌರವಿಸಿ.
16. ನಾನು: ಸೊಸೆ ಬಂದಾಗ ಸರಿಹೋಗ್ತಾನೆ.
ಮಗ: ಹೆಂಡತಿ ಅನ್ನೋಳು ಬೇಜವಾಬ್ದಾರಿ ಗಂಡಸನ್ನು ಸರಿಪಡಿಸುವ ರಿಹ್ಯಾಬಿಲಿಟೇಶನ್ ಸೆಂಟರ್ ಅಲ್ಲ.
17. ನಾನು: ಅಡಿಗೆ ಕಲಿ, ನೀನಲ್ಲದಿದ್ದರೆ ಇನ್ಯಾರು ಅಡಿಗೆ ಮಾಡ್ಬೇಕು?
ಮಗಳು: ಅಡಿಗೆ ಕಲಿ, ಯಾಕೆಂದರೆ ಅದೊಂದು ಬದುಕುವ ಕಲೆ.
18. ನಾನು: ರೂಮ್ ಬಾಗಿಲು ಹಾಕಿಕೊಂಡು ಯಾಕೆ ಇರ್ತೀಯ?
ಮಗಳು: ಮಕ್ಕಳು ದೊಡ್ಡವರಾದಂತೆ ಅವರ ಖಾಸಗಿತನ, ಸ್ವಾತಂತ್ರ್ಯವನ್ನು ನಾನು ಗೌರವಿಸ್ತೇನೆ.
19. ನಾನು: ಓಕೆ, ಈಗ ಬಾಯಿ ಮುಚ್ಕೊಂಡು ಇರಬೇಡ, ಊಟ ಮಾಡು.
ಮಗಳು: ಹಸಿವಾದಾಗ ಊಟ ಮಾಡಬೇಕು. ಅಪ್ಪ- ಅಮ್ಮರ ಜಗಳವನ್ನು ಮಾತಿನಿಂದ ಸರಿಪಡಿಸಬೇಕು, ಗಮನ ತಪ್ಪಿಸುವುದಲ್ಲ.
ಮಗಳಿಗೆ ಕಾರು ಡ್ರೈವಿಂಗ್ ಕಲಿಸೋ ಪೋಷಕರು ಮಗನಿಗ್ಯಾಕೆ ಅಡುಗೆ ಕಲಿಸೋಲ್ಲ?
20. ನಾನು: ಒಳ್ಳೆಯ ಮಕ್ಕಳು ಅಳುವುದಿಲ್ಲ.
ಮಗಳು: ಅಳು ಬಂದರೆ ಅಳಬಹುದು. ಭಾವನೆಗಳನ್ನು ಮುಚ್ಚಿಡುವುದಕ್ಕಿಂತ ವ್ಯಕ್ತಪಡಿಸುವುದು ಒಳ್ಳೆಯದು.
21. ನಾನು: ನೆಂಟರಿದ್ದಾರೆ, ಡೀಸೆಂಟ್ ಬಟ್ಟೆಗಳನ್ನು ಧರಿಸು.
ಮಗಳು: ನಿನಗೆ ಕಂಫರ್ಟಬಲ್ ಅನ್ನಿಸುವ ಬಟ್ಟೆಗಳನ್ನು ಧರಿಸು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.