ಮೂರಡಿಯ ಕುಳ್ಳಿಗೆ ಸಿಕ್ಕಿದವನು ಎಂಥ ಗಂಡ!

By Suvarna News  |  First Published Apr 9, 2021, 12:01 PM IST

ಕೇವಲ ಮೂರಡಿ ಎತ್ತರದ ಹೆಣ್ಣು ಮಗಳೊಬ್ಬಳು ತನ್ನ ಕನಸಿನ ವರನನ್ನು ಕಂಡುಕೊಂಡ ನಿಜವಾದ ಕತೆಯಿದು. 


ಇದು ಫೇಸ್‌ಬುಕ್‌ನ ಹ್ಯೂಮನ್ಸ್ ಆಫ್ ಬಾಂಬೇ ಪುಟದಲ್ಲಿ ಮೂರಡಿ ಎತ್ತರದ ಕುಳ್ಳಿಯೊಬ್ಬಳು ಹೇಳಿಕೊಂಡ ಆತ್ಮಕತೆ:

ನನ್ನ ಎತ್ತರ ಮೂರು ಅಡಿ. ವಯಸ್ಸು ಇಪ್ಪತ್ತನಾಲ್ಕು. ಯಾವಾಗಾದರೂ ನನ್ನ ತಾಯಿ ನನ್ನ ಮದುವೆಯ ಕುರಿತು ಪ್ರಸ್ತಾಪ ಎತ್ತಿದಾಗ, 'ನನ್ನನ್ನು ಯಾರ್ ಮದುವೆ ಆಗ್ತಾರೆ?' ಎಂಬುದು ನನ್ನ ಪ್ರಶ್ನೆ ಆಗಿರುತ್ತಿತ್ತು. ಅದರಲ್ಲಿ ನಿರಾಸೆಯೂ ಇರುತ್ತಿತ್ತು. ಆಗೆಲ್ಲ ತಾಯಿ ನಕ್ಕು, 'ನೋಡೋಣ, ಯಾರಾದರೂ ರಾಜಕುಮಾರ ಬಂದೇ ಬರುತ್ತಾನೆ' ಎಂದು ಹೇಳುತ್ತಿದ್ದಳು. ನಾನೂ ನಕ್ಕು ಸುಮ್ಮನಾಗುತ್ತಿದ್ದೆ. ನನ್ನ ಮೇಲೆ ನನಗೇ ಆತ್ಮವಿಶ್ವಾಸ ಇರಲಿಲ್ಲ. ಹೀಗಿದ್ದೋರಿಗೆ ಮದುವೆಯ ಬಗ್ಗೆ ಅಂಥ ಭಾವನೆ ಇರುವುದು ಸಹಜ ತಾನೆ!

Tap to resize

Latest Videos

“Whenever Maa spoke about marriage, I’d dismiss her. For someone as low on confidence as me, it was the last thing on my...

Posted by Humans of Bombay on Tuesday, April 6, 2021

ಅದೇ ಸಂದರ್ಭದಲ್ಲಿ ನನ್ನ ಸಹೋದರ ನನಗೆ ಒಂದು ಆಪ್ ಬಗ್ಗೆ ತಿಳಿಸಿದ. ನಾನು ಅದನ್ನು ನನ್ನ ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಂಡೆ. ಅದು ಕುಳ್ಳ ವ್ಯಕ್ತಿಗಳ ಮದುವೆ ಸಂಬಂಧ ಕುದುರಿಸುವ ಆಪ್ ಆಗಿತ್ತು. ಅದೇ ಆಪ್‌ನಲ್ಲೇ ನನಗೆ ಪರಿಚಯವಾದವನು ಕಪಿಲ್. ನನ್ನಂತೆಯೇ ಆತನೂ ಮೂರಡಿಯ ಕುಳ್ಳ. ನನಗಾದರೋ ಮೈತುಂಬ ಕೀಳರಿಮೆ ಇತ್ತು. ಆದರೆ ಆತ ಆತ್ಮವಿಶ್ವಾಸದ ಮೊತ್ತವೇ ಆಗಿದ್ದ.

ಮೂರು ವರ್ಷದಲ್ಲೇ ಮದುವೆಯಾದವಳು ಈಗ ಪೊಲೀಸ್ ಸಾಹಿಬ್! ...

ನಮಗಿಬ್ಬರಿಗೂ ಆದ ಪರಿಚಯ ಇನ್ನೂ ಸ್ವಲ್ಪ ಮುಂದುವರಿಯಿತು. ನಾವಿಬ್ಬರೂ ವೈಯಕ್ತಿಕ ವಿವರ ವಿನಿಮಯ ಮಾಡಿಕೊಳ್ಳತೊಡಗಿದ್ದೆವು. ಮೊದಲು ಮೈ ತೂಕ ಹೆಚ್ಚು ಹೊಂದಿದ್ದ ಆತ ಇತ್ತೀಚೆಗೆ ವರ್ಕೌಟ್ ಮಾಡುತ್ತಾ ದೇಹದ ತೂಕ ಇಪ್ಪತ್ತು ಕೆಜಿಯಷ್ಟು ಇಳಿಸಿದ್ದ. ನನಗೂ ತೂಕ ಇಳಿಸಿಕೊಳ್ಳಲು ಸಜೆಸ್ಟ್ ಮಾಡಿದ. ನಿನ್ನಿಂದ ಅದು ಸಾಧ್ಯ ಎಂದು ಪ್ರೇರೇಪಿಸಿದ.

ಇಷ್ಟಾದರೂ ನಾವು ಪರಸ್ಪರ ಮೀಟ್ ಮಾಡಿರಲಿಲ್ಲ. ಆತ ಇಂದೋರ್‌ನಲ್ಲಿ ಹಾಗೂ ನಾನು ರಾಜಸ್ಥಾನದಲ್ಲಿ ಇದ್ದುದೇ ಅದಕ್ಕೆ ಕಾರಣ. ಆದರೂ ಆತ ನಮ್ಮ ಮನೆಯಲ್ಲಿ ಎಲ್ಲರಿಗೆ ಫೇವರಿಟ್ ಆಗಿಬಿಟ್ಟ. ಆತನನ್ನು ಮದುವೆ ಆಗು ಎಂದು ನನ್ನ ಅಮ್ಮನೇ ಮೊದಲು ಪ್ರೇರೇಪಿಸಿದಳು. ನಾನು ಸುಮ್ಮನೆ ನಕ್ಕು ಬಿಟ್ಟೆ. ಯಾಕೆಂದರೆ ಆತ ಉತ್ತಮ ಸ್ನೇಹಿತನಾಗಿದ್ದ. ಅವನನ್ನು ಕಳೆದುಕೊಳ್ಳಲು ನಾನು ಸಿದ್ಧನಿರಲಿಲ್ಲ.

ಒಂದು ವರ್ಷ ಹೀಗೆಯೇ ಕಳೆಯಿತು. ಒಂದು ದಿನ ಕಪಿಲ್ ನನಗೊಂದು ಫೋಟೋ ಸೆಂಡ್ ಮಾಡಿದ. ಅದರಲ್ಲಿ ನನ್ನ ಪಕ್ಕದ ಮನೆಯ ಆಂಟಿ ಕಪಿಲ್‌ನ ಮನೆಯಲ್ಲಿ ಇದ್ದ ಚಿತ್ರವಿತ್ತು. ಇದು ಹೇಗೆ ಎಂದು ನನಗೆ ಅರ್ಥವಾಗಲಿಲ್ಲ. ನಂತರ ಕಪಿಲ್‌ನೇ ವಿವರಿಸಿದ. ಪಕ್ಕದ ಮನೆಯ ಆಂಟಿ ಯಾವುದೋ ಮದುವೆಯಲ್ಲಿ ಆತನನ್ನು ಭೇಟಿ ಮಾಡಿದ್ದರು. ಅವನನ್ನು ನೋಡಿದ ಕೂಡಲೇ ಆತ ನನಗೆ ತಕ್ಕ ಜೋಡಿ ಎಂದು ಅವರಿಗೆ ಅನಿಸಿತಂತೆ. ಹಾಗೇ ಆತನ ಮನೆಗೆ ಮದುವೆ ಮಾತುಕತೆ ನಡೆಸಲು ಹೋಗಿದ್ದರು! 'ನಮ್ಮ ಸಂಬಂಧ ಪಕ್ಕಾ ಆಯ್ತು' ಎಂದು ಕಪಿಲ್ ನಕ್ಕ.



ಆಲೇ ಕಪಿಲ್ ನನ್ನ ಜತೆ 'ನನ್ನ ಮದುವೆ ಆಗ್ತೀಯಾ?' ಅಂತ ಕೇಳಿದ್ದು. 'ಸಾಕಷ್ಟು ಸಮಯ ತಗೊಂಡು ಯೋಚನೆ ಮಾಡಿ ನಂಗೆ ತಿಳಿಸು. ನಿನ್ನ ಜೊತೆ ಜೀವನ ಕಳೆಯೋಕೆ ಇಷ್ಟಪಡ್ತೀನಿ.' ಎಂದು ಕಪಿಲ್ ಹೇಳಿದ. ನಂಗೆ ಹೇಗೆ ಪ್ರತಿಕ್ರಿಯೆ ಕೊಡೋದು ಅಂತ ಗೊತ್ತಾಗಲಿಲ್ಲ. ಹಾಗೇ ಹದಿನೈದು ದಿನ ಕಳೀತು. ಅದೇ ಸಮಯದಲ್ಲಿ ನಾನು ಹಾಗೂ ನಮ್ಮ ಕುಟುಂಬ ಇಂದೋರ್‌ಗೆ ಹೋಗಿ ಆತನನ್ನು, ಅವನ ಮನೆಯವರನ್ನು ಮೀಟ್ ಮಾಡಿದೆವು. ನಮ್ಮ ಕುಟುಂಬದವರು ಪರಸ್ಪರ ಸಲುಗೆಯಿಂದ ಬೆರೆತರು. ಅದನ್ನು ನೋಡಿ ನಮಗೂ ಖುಷಿಯಾಯಿತು. ಅದೇ ನಮ್ಮ ಮೊದಲ ಭೇಟಿ. ಕಪಿಲ್ ನನ್ನನ್ನು ಅತ್ಯಂತ ಪ್ರೀತಿಯಿಂದ ನೋಡುತ್ತ ಇದ್ದುದನ್ನು ಕಂಡು, ನಾನು ಸರಿಯಾದ ವ್ಯಕ್ತಿಯನ್ನೇ ಆಯ್ದುಕೊಂಡಿದ್ದೇನೆ ಎಂಬ ಸಮಾಧಾನ ನನಗೆ ಆಯಿತು. ಕೆಲವು ತಿಂಗಳ ಬಳಿಕ ಕಪಿಲ್ ರಾಜಸ್ಥಾನಕ್ಕೆ ಬಂದ. ಆತನನ್ನು ನಾನೇ ನಗರದಲ್ಲೆಲ್ಲ ಸುತ್ತಾಡಿಸಿದೆ. ಅವನ ನಡವಳಿಕೆ ನನಗೆ ತುಂಬಾ ಇಷ್ಟವಾಯಿತು. ನಮ್ಮ ಮದುವೆ ಪಕ್ಕಾ ಆಯಿತು.

ಹನ್ನೊಂದು ತಿಂಗಳ ಬಳಿಕ ನಮ್ಮ ಮದುವೆ ನಡೆಯಿತು. ನಾಚಿಕೆಯ ಹುಡುಗಿ ಆಗಿದ್ದ ನಾನು ಮದುವೆ ಹೆಣ್ಣಾಗಿಬಿಟ್ಟಿದ್ದೆ. ನಾನು ಎಷ್ಟು ಉತ್ಸಾಹಭರಿತಳಾಗಿದ್ದೆ ಅಂದರೆ, ಯಾರೂ ನನ್ನ ನೋಡ್ತಾ ಇಲ್ಲ ಅನ್ನೋ ರೀತಿ ಡ್ಯಾನ್ಸ್ ಮಾಡಿದೆ. ಕಪಿಲ್ ಆನಂದದಿಂದ ನನ್ನ ನೋಡ್ತಾ ಇದ್ದ.

47ರಲ್ಲೂ ಮಲೈಕಾ ಫಿಟ್: ಬ್ಯೂಟಿ ಸೀಕ್ರೆಟ್‌ ಹೇಳಿದ ನಟಿ ...

ಮದುವೆಯಾಗಿ ಮೂರು ತಿಂಗಳಾಗಿವೆ. ನಾನು ಬೆಳೆಯುತ್ತಿದ್ದೇನೆ ಎನ್ನಿಸುತ್ತಿದೆ. ಈ ಮೂರು ತಿಂಗಳಲ್ಲಿ ನಂಗೆ ಸಿಕ್ಕಾಪಟ್ಟೆ ಕಾನ್ಫಿಡೆನ್ಸ್ ಬಂದಿದೆ. ಅದು ಬೆಳೆಯುವಂತೆ ಕಪಿಲ್ ನೋಡಿಕೊಂಡಿದ್ದಾನೆ. ನಾನು ಡ್ಯಾನ್ಸ್ ಕಲಿಯುತ್ತಿದ್ದೇನೆ. ಅದರ ವಿಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಹಾಕುತ್ತೇನೆ. ಇದನ್ನೆಲ್ಲ ಕಪಿಲ್ ತುಂಬಾ ಇಷ್ಟಪಡುತ್ತಾನೆ. ಆತನೇ ನನ್ನಲ್ಲಿ ಆತ್ಮವಿಶ್ವಾಸ ತುಂಬುತ್ತಾನೆ.

ಕಪಿಲ್‌ನೊಳಗೆ ಒಬ್ಬ ಬೆಸ್ಟ್ ಶೆಫ್ ಇದ್ದಾನೆ. ಆತ ಮಾಡುವ ಪಿಜ್ಝಾ ಅದ್ಭುತ. ನಮ್ಮ ನಡುವೆ ಎಲ್ಲಾದರೂ ಜಗಳ ಆದರೆ, ಆ ದಿನ ರಾತ್ರಿ ಊಟಕ್ಕೆ ಏನಿರುತ್ತೆ ಅಂತ ನನಗೆ ಗೊತ್ತಾಗಿಬಿಡುತ್ತೆ! ನಮ್ಮ ಎತ್ತರ ಕಡಿಮೆ ಇರಬಹುದು, ಆದರೆ ನಮ್ಮ ಪ್ರೀತಿಯಲ್ಲಿ ಯಾವ ಕೊರತೆಯೂ ಇಲ್ಲ.

 

click me!