Love at First Sight ಆದರೂ ಮೊದಲ ಭೇಟಿಯಲ್ಲೇ ಫಸ್ಟ್ ನೈಟ್ ಮಾಡೋಣಾ ಅನ್ನೋದಾ?

By Suvarna News  |  First Published Jul 20, 2022, 4:25 PM IST

ಮೊದಲ ಡೇಟ್ ಎಲ್ಲರಿಗೂ ಇಂಪಾರ್ಟೆಂಟ್. ಅದನ್ನು ವಿಶೇಷವಾಗಿಸಲು ಸಾಕಷ್ಟು ಪ್ರಯತ್ನ ನಡೆಸ್ತಾರೆ. ಆದ್ರೆ ಕೆಲವೊಮ್ಮೆ ನಿರೀಕ್ಷಿಸಿದ್ದೇ ಒಂದಾದ್ರೆ ಆಗೋದು ಬೇರೆ. ಮೊದಲ ಡೇಟ್ ಬಗ್ಗೆ ಕನಸಿಟ್ಟುಕೊಂಡು ಹೋದ ಕೆಲವರು ಶಾಕ್ ಆದ ಕಥೆ ಇಲ್ಲಿದೆ.
 


ಪ್ರೀತಿಸುವವರೊಂದಿಗಿನ ಮೊದಲ ಡೇಟ್ ಯಾವಾಗ್ಲೂ ವಿಶೇಷವಾಗಿರುತ್ತದೆ.  ಸಂಗಾತಿಯನ್ನು ಮೆಚ್ಚಿಸಲು ಇದು ಒಳ್ಳೆ ಅವಕಾಶ. ಇದೇ ಕಾರಣಕ್ಕೆ ಅನೇಕರು ಸುಂದರವಾಗಿ, ಆಕರ್ಷಕವಾಗಿ ರೆಡಿಯಾಗಿ ಬರ್ತಾರೆ. ಮತ್ತೆ ಕೆಲವರು ಭಯದಲ್ಲಿರ್ತಾರೆ. ಇನ್ನು ಕೆಲವರ ಬಾಯಿಂದ ಮಾತೇ ಬರೋದಿಲ್ಲ. ಏನು ಮಾತನಾಡ್ಬೇಕು? ಹೇಗೆ ಮಾತನಾಡ್ಬೇಕು ಎಂಬುದು ತಿಳಿದಿರೋದಿಲ್ಲ. ಮೊದಲ ಭೇಟಿಯಲ್ಲೇ  ಸಂಗಾತಿ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಿಲ್ಲ ಬಿಡಿ. ಹಾಗಂತ ಮೊದಲ ಡೇಟ್ ನಿರ್ಲಕ್ಷ್ಯ ಮಾಡೋಕೆ ಆಗೋದಿಲ್ಲ. ಮೊದಲ ಡೇಟಿಂಗ್ ಯಾವಾಗ್ಲೂ ನೆನಪಿರುತ್ತದೆ. ಜನರಿಗೆ ಮೊದಲ ಡೇಟ್ ನಲ್ಲಿ ಚಿತ್ರ – ವಿಚಿತ್ರ ಅನುಭವವಾಗಿರುತ್ತದೆ. ಕೆಲವರ ಮೊದಲ ಡೇಟ್ ಅಧ್ಬುತವಾಗಿರುತ್ತದೆ. ಅವರು ಸ್ನೇಹಿತರಾಗ್ತಾರೆ. ನಂತ್ರ ಬಾಳ ಸಂಗಾತಿಯಾಗ್ತಾರೆ. ಇನ್ನು ಕೆಲವರ ಮೊದಲ ಡೇಟ್ ಕೆಟ್ಟ ಅನುಭವ ನೀಡಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ತಮ್ಮ ಮೊದಲ ಡೇಟ್ ಬಗ್ಗೆ ಇಂಟರೆಸ್ಟಿಂಗ್ ವಿಷ್ಯವನ್ನು ಹಂಚಿಕೊಂಡಿದ್ದಾರೆ. ನಾವಿಂದು ಅವರ ಅನುಭವವನ್ನು ನಿಮ್ಮ ಮುಂದಿಡ್ತೇವೆ.

ಮೊದಲ ಡೇಟ್ (Date) ನಲ್ಲಾಯ್ತು ಮರೆಯದ ಅನುಭವ :
ಡೇಟ್ ವೇಳೆ ಪತ್ನಿ (Wife) ಕರೆದ ಭೂಪ :
ಮಹಿಳೆಯೊಬ್ಬಳು ತನ್ನ ಡೇಟ್ ವಿಷ್ಯ ಹೇಳಿದ್ದಾಳೆ. ಆಕೆ ವ್ಯಕ್ತಿ ಜೊತೆ ಡೇಟ್ ಗೆ ಹೋಗಿದ್ದಳಂತೆ. ಹೊಟೇಲ್ ನಲ್ಲಿ ಊಟ ಮುಗಿಸಿದ್ಮೇಲೆ ಆ ವ್ಯಕ್ತಿಯೇ ಮನೆಗೆ ಡ್ರಾಪ್ ಮಾಡೋದಾಗಿ ಹೇಳಿದ್ನಂತೆ. ಇದು ಖುಷಿ ವಿಷ್ಯವೇ ಆಗಿತ್ತು. ಆದ್ರೆ ಮಧ್ಯದಲ್ಲಿ ಕಾರ್ ಕೈ ಕೊಡ್ತು. ಮೆಕ್ಯಾನಿಕ್ ಬರಲು ಸಮಯ ಹಿಡಿಯುತ್ತೆ ಎನ್ನುವ ಕಾರಣಕ್ಕೆ ಆತ ತನ್ನ ಪತ್ನಿಗೆ ಕರೆ ಮಾಡಿದ್ದ. ಆತನಿಗೆ ಮದುವೆಯಾಗಿದೆ ಎಂಬ ವಿಷ್ಯ ಒಂದು ಶಾಕ್ ಆದ್ರೆ ನಮ್ಮ ಡೇಟ್ ಗೆ ಆತನ ಪತ್ನಿ ಬಂದಿದ್ದು ಇನ್ನೊಂದು ಶಾಕ್ ಆಗಿತ್ತು. ನಾವಿಬ್ಬರು ಡೇಟಿಂಗ್‌ನಲ್ಲಿ ಇರುವುದನ್ನು ಕಂಡ ಅವನ ಪತ್ನಿ ನನ್ನನ್ನು ಗೇಲಿ ಮಾಡಿದ್ದು ಮಾತ್ರವಲ್ಲದೆ ತನ್ನ ಪತಿಯನ್ನು ಕಾರಿನಲ್ಲಿ ಕೂರುವಂತೆ ಹೇಳಿದಳು. ಇದು ನನಗೆ ಬಹಳ ಮುಜುಗರದ ಕ್ಷಣವಾಗಿತ್ತು. ಇಬ್ಬರೂ ನನ್ನನ್ನು ನಡು ರಸ್ತೆಯಲ್ಲಿ ಬಿಟ್ಟು ಹೊರಟರು. ನಾನು ಅಲ್ಲಿ ಒಬ್ಬಳೆ ನಿಂತಿದ್ದೆ ಎನ್ನುತ್ತಾಳೆ ಮಹಿಳೆ.  

Tap to resize

Latest Videos

ಡೇಟ್‌ನಲ್ಲಿ ಗ್ರಾಮರ್ ಕ್ಲಾಸ್: ಡೇಟ್ ಗೆ ಬಂದ ಹುಡುಗಿ ತುಂಬಾ ಚೆನ್ನಾಗಿ ಇಂಗ್ಲೀಷ್ ಮಾತಾಡ್ತಿದ್ದಳು. ನನ್ನ ಇಂಗ್ಲೀಷ್ ಅಷ್ಟೇನು ಚೆನ್ನಾಗಿರಲಿಲ್ಲ. ಹಾಗಾಗಿ ಮಾತು ಮಾತಿಗೂ ನನ್ನ ಗ್ರಾಮರ್ ಸರಿ ಮಾಡೋದ್ರಲ್ಲಿ ಆಕೆ ಆಸಕ್ತಿ ತೋರುತ್ತಿದ್ದಳು. ನನಗೆ ಇದು ಡೇಟ್ ಅಲ್ಲ ಗ್ರಾಮರ್ ಕ್ಲಾಸ್ ಎನ್ನಿಸುತ್ತಿತ್ತು ಎಂದಿದ್ದಾನೆ ಇನ್ನೊಬ್ಬ ವ್ಯಕ್ತಿ.  

Relationship Tips : ಹೆಂಡ್ತಿ ಮನೇಲಿ ಬ್ರಾ ಹಾಕ್ತಿಲ್ಲ, ಗಂಡನ ಸಮಸ್ಯೆಗೆ ನೆಟ್ಟಿಗರು ತಬ್ಬಿಬ್ಬು!

ಬೋರಿಂಗ್ ಆಗಿದ್ದ ಹುಡುಗ : ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಹುಡುಗನನ್ನು ಭೇಟಿಯಾಗಿದ್ದೆ. ಆತನ ಪ್ರೊಫೈಲ್ ಮತ್ತು ಮಾತುಕತೆಯಿಂದ ಆತ ಒಳ್ಳೆ ವ್ಯಕ್ತಿ ಎನ್ನಿಸಿದ್ದ. ಇದೇ ಕಾರಣಕ್ಕೆ ಆತನ ಜೊತೆ ಡೇಟ್ ಗೆ ಹೋಗಲು ಒಪ್ಪಿಕೊಂಡಿದ್ದೆ. ಆದ್ರೆ ಅವನು ಭೇಟಿಯಾಗಲು ಬಂದಾಗ ವಿಚಿತ್ರವೆನ್ನಿಸಿದ್ದ. ಚಾಟ್ ಗೂ ಮಾತಿಗೂ ಸಂಬಂಧವೇ ಇರಲಿಲ್ಲ. ಆತನಿಗೆ ಚಾಟ್ ಮಾಡಲು ಸ್ನೇಹಿತರು ಸಹಾಯ ಮಾಡ್ತಿದ್ದರು ಎಂಬುದು ಗೊತ್ತಾಯ್ತು. ಒಟ್ಟಿನಲ್ಲಿ ಆ ಹುಡುಗ ಬೋರಿಂಗ್ ಆಗಿದ್ದ ಎನ್ನುತ್ತಾಳೆ ಈ ಹುಡುಗಿ.  

ಈತನಿಗೆ ಕೇವಲ ಸೆಕ್ಸ್ ಬೇಕಿತ್ತು : ಮೊದಲ ಭೇಟಿಯಲ್ಲೇ ಹುಡುಗ ನನ್ನ ಬಳಿ ಸೆಕ್ಸ್ ಬಗ್ಗೆ ಕೇಳಿದ್ದ. ನಾನು ಕೇವಲ ಸೆಕ್ಸ್ ಬಯಸ್ತೇನೆ. ನನಗೆ ಸಂಬಂಧದಲ್ಲಿ ಆಸಕ್ತಿ ಇಲ್ಲ ಎಂದಿದ್ದ. ಇದನ್ನು ಕೇಳಿ ನಾನು ಶಾಕ್ ಆದೆ ಎನ್ನುತ್ತಾಳೆ ಡೇಟ್ ನಲ್ಲಿ ಕೆಟ್ಟ ಅನುಭವ ಪಡೆದ ಹುಡುಗಿ.

ಮದುವೆಯಾಗಿ 3 ವರ್ಷವಾದರೂ ಹತ್ತಿರ ಬಾರದ ಗಂಡ: ಠಾಣೆ ಮೆಟ್ಟಿಲೇರಿದ ಯುವತಿ  

ಡೇಟ್ ಗೆ ತಾಯಿ ಜೊತೆ ಬಂದಿದ್ದ ಹುಡುಗ : ಡೇಟ್ ಗೆ ಈ ಹುಡುಗ ತಾಯಿ ಕರೆದುಕೊಂಡು ಬಂದಿದ್ದನಂತೆ. ಈ ವಿಷ್ಯವನ್ನು ಆತ ಹೇಳಿರಲಿಲ್ಲವಂತೆ. ಕದ್ದು ಮುಚ್ಚಿ ಬಂದಿದ್ದ ತಾಯಿ ಇನ್ನೊಂದು ಟೇಬಲ್ ನಲ್ಲಿ ಕುಳಿತುಕೊಂಡಿದ್ದಳಂತೆ. ಆದ್ರೆ ಆಕೆ ಈತನ ತಾಯಿ ಎಂಬುದು ನನಗೆ ಆ ನಂತ್ರ ಗೊತ್ತಾಯ್ತು ಎನ್ನುತ್ತಾಳೆ ಹುಡುಗಿ. 

click me!