ಪೇಯ್ಡ್‌ ವೈಫ್‌ ಆಗಿರಲು ನಟಿಗೆ ಉದ್ಯಮಿಯಿಂದ ಆಫರ್, ತಿಂಗಳಿಗೆ 25 ಲಕ್ಷ ಸಂಬಳ !

Published : Jul 20, 2022, 12:40 PM ISTUpdated : Jul 20, 2022, 01:15 PM IST
ಪೇಯ್ಡ್‌ ವೈಫ್‌ ಆಗಿರಲು ನಟಿಗೆ ಉದ್ಯಮಿಯಿಂದ ಆಫರ್, ತಿಂಗಳಿಗೆ 25 ಲಕ್ಷ ಸಂಬಳ !

ಸಾರಾಂಶ

ಉದ್ಯಮಿಗೆ ಹೆಂಡತಿ ಆದ್ರೆ ಒಂದು ತಿಂಗಳಿಗೆ 25 ಲಕ್ಷ ಸಂಬಳ ಅನ್ನೋದು ಆಫರ್‌. ಇದೇನು ಜಾಬ್ ಅಥವಾ ಮದುವೆ ಅಂತ ಕನ್‌ಫ್ಯೂಸ್ ಆಗ್ಬೇಡಿ. ಉದ್ಯಮಿ ಕೊಟ್ಟಿರೋ ಆಫರ್ ಹಾಗಿದೆ. ಪೇಯ್ಡ್ ವೈಫ್ ಆಗಿರಲು ನಟಿ ನೀತು ಚಂದ್ರಗೆ ಆಫರ್ ನೀಡಲಾಗಿತ್ತಂತೆ

ಚಿತ್ರರಂಗವೆಂದರೆ ಥಳುಕು-ಬಳುಕಿನ ಲೋಕ. ಅಲ್ಲಿ ಸರಿ-ತಪ್ಪುಗಳ ಹಂಗಿಲ್ಲ. ಮೇಕಪ್ ಹಚ್ಚಿಯೂ, ಹಚ್ಚದೆಯೂ ಅಭಿನಯಿಸುವ ಗುಂಗು. ಅವಕಾಶವನ್ನು ಹುಡುಕಿಕೊಂಡು ಬಂದವರು, ಹಲವು ಸಿನಿಮಾಗಳಲ್ಲಿ ನಟಿಸಿ ಹೆಸರು ಪಡೆದವರೂ ಇಲ್ಲಿ ನರಕ ಅನುಭವಿಸುತ್ತಾರೆ. ಚಿತ್ರರಂಗದಲ್ಲಿ ಅವಕಾಶ ಪಡೆಯಲು ನಟೀಮಣಿಯರು ಅನಿವಾರ್ಯವಾಗಿ ಮಂಚಕ್ಕೆ ಏರಬೇಕಾಗಿ ಬರುವ ಇತ್ತೀಚಿಗೆ ಹಲವು ನಟಿಯರು ಅಳಲು ತೋಡಿಕೊಂಡಿದ್ದರು. ಹಾಗೆಯೇ ತೆಲುಗು ನಟಿ ನೀತು ಚಂದ್ರ ಅವರು ತಮಗೆ ಬಂದ ಒಂದು ಅಫರ್​ ಕುರಿತ ವಿಷಯವನ್ನು ರಿವೀಲ್ ಮಾಡಿದ್ದಾರೆ. ನೀತು ಅವರಿಗೆ ಉದ್ಯಮಿಯೊಬ್ಬರು ತಮಗೆ ಹೆಂಡತಿಯಾಗಿ ಇದ್ದಲ್ಲಿ ತಿಂಗಳಿಗೆ 25 ಲಕ್ಷ ಸಂಬಳ ನೀಡುವುದಾಗಿ ಆಫರ್ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ.

ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಗೋದಾವರಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡ ನಟಿ ನೀತು ಚಂದ್ರ ತಮ್ಮ ಬ್ಯೂಟಿ ಹಾಗೂ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.  ‘ಗೋದಾವರಿ’ ಚಿತ್ರದ ಮೂಲಕ ಖ್ಯಾತಿ ಪಡೆದ ನಾಯಕಿ ನೀತು ಚಂದ್ರ. ಆ ಚಿತ್ರದ ನಂತರ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಕೆಲ ವರ್ಷಗಳಿಂದ ಅವರಿಗೆ ಸಿನಿಮಾಗಳ ಆಫರ್​ ಬರುತ್ತಿರುವುದು ಕಡಿಮೆ ಆಗುತ್ತಿದೆ. ಇತ್ತೀಚಿಗೆ ಆಫರ್ ಗಳಿಲ್ಲದೆ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಇಂತಹ ಸಮಯದಲ್ಲಿ ತಮಗೆ ಬಂದ ಆಫರ್ ವೊಂದರ ಬಗ್ಗೆ ರಿವೀಲ್ ಮಾಡಿದ್ದಾರೆ ಈ ನಟಿ.  ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ತಮಗೆ ಕೊಟ್ಟ ಆಫರ್ ಬಗ್ಗೆ ನೀತು ಚಂದ್ರ ರಿವಿಲ್ ಮಾಡಿದ್ದಾರೆ.

ಮದುವೆಯ ಎಕ್ಸ್‌ಕ್ಲೂಸಿವ್‌ ಫೋಟೋ ಶೇರ್‌ ಮಾಡಿದ ವಿಘ್ನೇಶ್‌, 25 ಕೋಟಿ ಡೀಲ್‌ಗೆ ನೆಟ್‌ಫ್ಲಿಕ್ಸ್ ಗುಡ್‌ಬೈ!

ಇತ್ತೀಚೆಗೆ ಬಾಲಿವುಡ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ನಟಿ, ಅನೇಕ ಸ್ವಾರಸ್ಯಕರವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನೀತು ಅವರಿಗೆ ದೊಡ್ಡ ಉದ್ಯಮಿಯೊಬ್ಬರ ಹೆಂಡತಿಯಾಗಿರಲು ಆಫರ್​ ಬಂದಿತ್ತಂತೆ. ಹೌದು, ಖ್ಯಾತ ಉದ್ಯಮಿಯೊಬ್ಬರು ಪ್ರತಿ ತಿಂಗಳು 25 ಲಕ್ಷ ಸಂಬಳ ನೀಡುತ್ತೇನೆ. ನನ್ನ ಹೆಂಡತಿಯಾಗಿರು ಎಂದು ನೀತು ಅವರಿಗೆ ಆಫರ್​ ನೀಡಿದ್ದರಂತೆ. ಆದರೆ ನೀತು ಅವರು ಉದ್ಯಮಿ ಅವರ ಆಫರ್ ತಿರಸ್ಕರಿಸಿದ್ದಾಗಿ ಹೇಳಿಕೊಂಡಿದ್ದಾರೆ.  ಆದ್ರೆ ಆ ಉದ್ಯಮಿ ಯಾರು ಅಂತ ಮಾತ್ರ ಅವರು ಹೇಳಿಲ್ಲ. 

ಬಾಲಿವುಡ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ನಟಿ, ಅನೇಕ ಸ್ವಾರಸ್ಯಕರವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನೀತು ಅವರಿಗೆ ದೊಡ್ಡ ಉದ್ಯಮಿಯೊಬ್ಬರ ಹೆಂಡತಿಯಾಗಿರಲು ಆಫರ್​ ಬಂದಿತ್ತಂತೆ. ಹೌದು, ಖ್ಯಾತ ಉದ್ಯಮಿಯೊಬ್ಬರು ಪ್ರತಿ ತಿಂಗಳು 25 ಲಕ್ಷ ಸಂಬಳ ನೀಡುತ್ತೇನೆ. ನನ್ನ ಹೆಂಡತಿಯಾಗಿರು ಎಂದು ನೀತು ಅವರಿಗೆ ಆಫರ್​ ನೀಡಿದ್ದರಂತೆ.

ತಾನು ರಾಷ್ಟ್ರಪ್ರಶಸ್ತಿ ಪಡೆದ 13 ಸ್ಟಾರ್ ನಟರ ಜೊತೆ ನಟಿಸಿದ್ದೇನೆ ಎಂದು ನೀತು ಚಂದ್ರ ಹೇಳಿದ್ದಾರೆ. ಸದ್ಯ ನೀತು ‘ನೆವರ್ ಬ್ಯಾಕ್ ಡೌನ್: ರಿವೋಲ್ಟ್ ಚಿತ್ರ ಮೂಲಕ ಹಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾರೆ.

ನೀತು ಚಂದ್ರ ಕನ್ನಡಿಗರಿಗೂ ಚಿರಪರಿಚಿತರು. ನೀತು ಚಂದ್ರ ಅವರ ವೃತ್ತಿಜೀವನದ ವಿಷಯಕ್ಕೆ ಬಂದರೆ, ಅವರು ಮೊದಲು ಮಂಚು ವಿಷ್ಣು ನಾಯಕರಾಗಿದ್ದ ‘ವಿಷ್ಣು‘ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಕನ್ನಡದಲ್ಲಿ ಪುನೀತ್ ಅಭಿನಯದ ಪವರ್ ಚಿತ್ರದ ವೈವೈ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ರು. ಅದಷ್ಟೇ ಅಲ್ಲದೆ ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿನಲ್ಲಿಯೂ ಅಭಿನಯಿಸಿದ್ರು. ಈ ಚಿತ್ರದ ನಂತರ, ಅವರು 2005 ರಲ್ಲಿ ಬಿಡುಗಡೆಯಾದ ಹಿಂದಿ ಚಿತ್ರ ಗರಂ ಮಸಾಲಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಆ ಸಿನಿಮಾದಲ್ಲಿ ಗಗನಸಖಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಟ್ರಾಫಿಕ್ ಸಿಗ್ನಲ್, 123, ಓಯ್ ಲಕ್ಕಿ ಲಕ್ಕಿ ಓಯ್, ಅಪಾರ್ಟ್ ಮೆಂಟ್, 13ಬಿ ಚಿತ್ರಗಳಲ್ಲಿ ನಟಿಸಿದ್ದರು. ಕಚ್ ಲವ್ ಜೈಸಾ ಚಿತ್ರದಲ್ಲಿ ನೀತು ಚಂದ್ರ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು.

ಮಲ ಮಗಳೊಂದಿಗೇ ಸಂಬಂಧ: ಎಲಾನ್ ಮಸ್ಕ್‌ ತಂದೆಗಿದ್ದರು ಸೀಕ್ರೆಟ್ ಮಕ್ಕಳು!

ನೀತು ಚಂದ್ರ 2005 ರಲ್ಲಿ ಅಕ್ಷಯ್ ಕುಮಾರ್ ಮತ್ತು ಜಾನ್ ಅಬ್ರಹಾಂ ಅಭಿನಯದ ಗರಂ ಮಸಾಲಾ ಚಿತ್ರದ ಮೂಲಕ ಹಿಂದಿ ಚಿತ್ರರಂಗವನ್ನು ಪ್ರವೇಶಿಸಿದರು. ಅದರ ನಂತರ ಅವರು ಅನೇಕ ಚಿತ್ರಗಳಲ್ಲಿ ನಟಿಸಿದರು. ಇದಲ್ಲದೆ ಅವರು ತಮ್ಮದೇ ಆದ ನಿರ್ಮಾಣ ಕಂಪನಿ ಚಂಪಾರಣ್ ಟಾಕೀಸ್ ಅನ್ನು ಆರಂಭಿಸಿದ್ದರು. ಇದಲ್ಲದೇ ಅವರ ಚಿತ್ರಗಳಾದ ಓಯ್ ಲಕ್ಕಿ! ಲಕ್ಕಿ ಓಯ್! ಮತ್ತು ಮಿಥಿಲಾ ಮಖನ್ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಕ್ಯಾಂಡಿನೇವಿಯನ್ ವಿಧಾನ: ಸಂಗಾತಿಗಳು ಒಟ್ಟಿಗೆ ಉತ್ತಮವಾಗಿ ನಿದ್ರಿಸಲು ಸೂಕ್ತ!
ಚಳಿಗಾಲದಲ್ಲಿ ಹೆಂಡ್ತಿ ಕಾಲು ಕೋಲ್ಡ್​ ಆಗಿದ್ರೆ ಗಂಡನ ಕಾಲು ಬೆಚ್ಚಗಿರೋದು ಯಾಕೆ? ಕಾರಣ ಇಲ್ಲಿದೆ