ವರ್ಕ್ ಫ್ರಂ ಹೋಮ್ ಜೊತೆ ಸಾಕು ಪ್ರಾಣಿ ಆರೈಕೆ ಹೀಗಿರಲಿ

By Suvarna NewsFirst Published Jul 20, 2022, 3:47 PM IST
Highlights

ಮನೆಯಲ್ಲಿ ಪ್ರಾಣಿಗಳನ್ನು ಸಾಕಿದ್ರೆ ಸಾಲದು, ಅವುಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಮುಖ್ಯ. ಸಾಕು ಪ್ರಾಣಿಗಳು ಮನೆಯಲ್ಲಿವೆ ಎಂದ್ರೆ ಕೆಲ ಕೆಲಸವನ್ನು ಅಗತ್ಯವಾಗಿ ಮಾಡ್ಬೇಕು. ಅವುಗಳಿಗೂ ಸಮಯ ನೀಡ್ಬೇಕು.
 

ಚಾರ್ಲಿ 777 ಚಿತ್ರದ ನಂತ್ರ ಸಾಕು ಪ್ರಾಣಿಗಳ ಮೇಲಿನ ಪ್ರೀತಿ ಸ್ವಲ್ಪ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೀವು ಸಾಕು ಪ್ರಾಣಿಗಳ ಜೊತೆಗಿರುವ ಫೋಟೋಗಳನ್ನು ನೋಡ್ಬಹುದು. ಅನೇಕರು ಸಿನಿಮಾ ವೀಕ್ಷಣೆ ಮಾಡಿದ ನಂತ್ರ ನಾಯಿಯನ್ನು ಮನೆಗೆ ತಂದಿದ್ದಾರೆ. ಪ್ರಾಣಿಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ ಎಂದ್ರೆ ತಪ್ಪಾಗಲಾರದು. ಮನೆಯಲ್ಲಿ ಒಂದು ಮಗುವಿದ್ದಂತೆ ಸಾಕು ಪ್ರಾಣಿಯಿದ್ರೆ. ಅವುಗಳು ನೀಡುವ ಪ್ರೀತಿ ಅಪಾರ. ಹಾಗೆಯೇ ಸಾಕು ಪ್ರಾಣಿಗಳು ಮಾಲೀಕರನ್ನು ಎಂದೂ ಬಿಟ್ಟುಕೊಡುವುದಿಲ್ಲ. ಮನೆಯಲ್ಲಿ ಪ್ರಾಣಿಗಳಿದ್ರೆ ಒತ್ತಡ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳ್ತಾರೆ. ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವ ಕೆಲಸವನ್ನೂ ಸಾಕು ಪ್ರಾಣಿಗಳು ಮಾಡ್ತವೆ ಎಂದು ಇತ್ತೀಚಿಗೆ ನಡೆದ ಸಂಶೋಧನೆಯೊಂದು ಹೇಳಿತ್ತು. ಪ್ರಾಣಿಗಳನ್ನು ಮನೆಯಲ್ಲಿ ಸಾಕೋದು ದೊಡ್ಡ ವಿಷ್ಯವಲ್ಲ. ಆದ್ರೆ ಅವರ ಆರೈಕೆ ಮಾಡುವುದು ಹಾಗೆ ಅವು ಭೂಮಿ ಮೇಲೆ ಇರುವವರೆಗೂ ಅದನ್ನು ಸರಿಯಾಗಿ ನೋಡಿಕೊಳ್ಳುವುದು ಮುಖ್ಯ. ಕೆಲವರು ಸ್ವಲ್ಪ ದಿನ ಪ್ರಾಣಿಗಳನ್ನು ಸಾಕಿ ನಂತ್ರ ಬೀದಿಗೆ ಬಿಡ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ. ಅದೇನೇ ಇರಲಿ, ಮನೆಯಲ್ಲಿ ಪ್ರಾಣಿಗಳನ್ನು ಸಾಕಿದ್ದು, ನೀವು ವರ್ಕ್ ಫ್ರಂ ಹೋಮ್ ಮಾಡ್ತಿದ್ದೀರಿ ಎಂದಾದ್ರೆ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.ವರ್ಕ್ ಫ್ರಂ ಹೋಮ್ (Work From Home ) ಶುರುವಾದಾಗಿನಿಂದ ಕೆಲವರು ನಾಯಿ (Dog), ಬೆಕ್ಕು (Cat) ಸೇರಿದಂತೆ ತಮಗಿಷ್ಟದ ಪ್ರಾಣಿ ಸಾಕಲು ಶುರು ಮಾಡಿದ್ದಾರೆ. ಅಂಥವರಿಗೆ ಕೆಲ ಟಿಪ್ಸ್ (Tips) ಇಲ್ಲಿದೆ.

ಸಾಕು ಪ್ರಾಣಿಯನ್ನು ಬ್ಯುಸಿಯಾಗಿಡಿ : ನೀವು ಕೋಣೆಯಲ್ಲಿ ಕುಳಿತು ಕೆಲಸ ಮಾಡ್ತಿದ್ದೀರಿ ಎಂದಾದ್ರೆ ನಿಮ್ಮ ಪ್ರಾಣಿಗಳನ್ನೂ ನೀವು ಬ್ಯುಸಿಯಾಗಿಡಬೇಕು. ಇಲ್ಲವೆಂದ್ರೆ ಅವು ನಿಮ್ಮ ಕೆಲಸಕ್ಕೆ ಅಡ್ಡಿ ಮಾಡಬಹುದು. ಅವು ಬ್ಯುಸಿಯಾಗಿದ್ರೆ ನಿಮ್ಮ ಕೆಲಸಕ್ಕೆ ತೊಂದರೆ ನೀಡುವುದಿಲ್ಲ. ಕೆಲ ಪೆಟ್ಸ್ ಲ್ಯಾಪ್ ಟಾಪ್ ಮೇಲೆ ಬಂದು ಕುಳಿತುಕೊಳ್ತವೆ. ಮೀಟಿಂಗ್ ಸಂದರ್ಭದಲ್ಲಿ ಇದರಿಂದ ನಿಮಗೆ ತೊಂದರೆಯಾಗುತ್ತದೆ ಎಂಬುದು ನೆನಪಿರಲಿ.

ಪಾರ್ಕ್ ನಲ್ಲಿ ಸುತ್ತಾಡಿ : ಮನುಷ್ಯರಂತೆ ಪ್ರಾಣಿಗಳಿಗೆ ಕೂಡ ಹೊರಗಿನ ಗಾಳಿಯ ಅವಶ್ಯಕತೆಯಿರುತ್ತದೆ. ಇಡೀ ದಿನ ಕೋಣೆಯಲ್ಲಿ ಬಂಧಿಯಾಗಿರುವುದನ್ನು ಅವು ಇಷ್ಟಪಡುವುದಿಲ್ಲ. ಹಾಗಾಗಿ ಪ್ರಾಣಿಗಳನ್ನು ನೀವ ವಾಕ್ ಗೆ ಕರೆದುಕೊಂಡು ಹೋಗಿ. 10 ನಿಮಿಷಗಳ ಕಾಲ ಪಾರ್ಕ್ ನಲ್ಲಿ ನೀವು ವಾಕ್ ಮಾಡ್ಬಹುದು. 

Pet Care : ಚಳಿಗಾಲದಲ್ಲಿ ನಿಮ್ಮ ಮುದ್ದಾದ ಪ್ರಾಣಿಗಳ ಆರೈಕೆ ಹೀಗಿರಲಿ

ಒಳಾಂಗಣ ಕ್ರೀಡೆ : ಮಕ್ಕಳಂತೆ ಮನೆಯಲ್ಲಿ ಪ್ರಾಣಿಗಳಿದ್ದರೆ ನೀವು ಒಂದಿಷ್ಟು ಆಟಿಕೆಗಳನ್ನು ತರಲೇಬೇಕು. ನಾಯಿ ಹಾಗೂ ಬೆಕ್ಕು ಮರಿಯಾಗಿದ್ದರೆ ಆಟವಾಡಲು ಅವು ಹೆಚ್ಚು ಇಷ್ಟಪಡ್ತವೆ. ಇದು ಅವುಗಳಿಗೆ ದೈಹಿಕ ವ್ಯಾಯಾಮ ನೀಡಿದಂತಾಗುತ್ತದೆ. ಅವರನ್ನು ಬ್ಯುಸಿಯಾಗಿಡಲು ನೀವು ಆಟಿಕೆಗಳನ್ನು ನೀಡಬಹುದು. ಅದ್ರ ಜೊತೆ ಆಡಲು ಅವುಗಳಿಗೆ ಕಲಿಸಬಹುದು. ಬಾಲ್, ಬಲೂನ್ ಸಿಕ್ಕಿದ್ರೆ ಅವು ಇಷ್ಟಪಟ್ಟು ಆಟ ಆಡುತ್ವೆ.

ಸಮಯ ಪಾಲನೆ : ನಿಮಗೆ ಹಾಗೂ ನಿಮ್ಮ ಸಾಕು ಪ್ರಾಣಿಗಳಿಗೆ ಸಮಯ ಪಾಲನೆ ಮುಖ್ಯ. ಪ್ರತಿ ದಿನ ಒಂದೇ ಸಮಯದಲ್ಲಿ ನೀವು ಅವರಿಗೆ ಸಮಯ ನೀಡಿದ್ರೆ ಅವು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತವೆ. ಆ ಸಮಯ ಬಿಟ್ಟು ಬೇರೆ ಸಮಯದಲ್ಲಿ ನಿಮಗೆ ತೊಂದರೆ ನೀಡಲು ಬರೋದಿಲ್ಲ. 

ಮಾತು ಮುಖ್ಯ : ನಿಮ್ಮ ಮಾತನ್ನು, ನಿಮ್ಮ ಪ್ರೀತಿಯನ್ನು ಸಾಕು ಪ್ರಾಣಿಗಳು ಅರ್ಥ ಮಾಡಿಕೊಳ್ಳುತ್ತವೆ. ಸದಾ ಲವಲವಿಕೆಯಲ್ಲಿರುವ ಪೆಟ್, ಸುಮ್ಮನಿದ್ದರೆ ಅಥವಾ ಕಿರಿಕಿರಿ ಅನುಭವಿಸುತ್ತಿದ್ದರೆ ಅದರ ಜೊತೆ ಮಾತನಾಡಿ.

Pet Care: ಶ್ವಾನದ ಆರೈಕೆಗೆ ಅಶ್ವಗಂಧ, ಬೇವು ಪ್ರಯೋಜನಕಾರಿ

ಆಹಾರ : ನೀವು ಯಾವಾಗ ಆಹಾರ ಸೇವನೆ ಮಾಡ್ತೀರೋ ಅದೇ ಸಮಯಕ್ಕೆ ನಿಮ್ಮ ಪೆಟ್ ಗೂ ಆಹಾರ ನೀಡಿ. ಆಗ ನೀವಿಬ್ಬರೂ ಒಂದಿಷ್ಟು ಸಮಯ ಒಟ್ಟಿಗೆ ಕಳೆಯಬಹುದು.

click me!