ಚಿಕ್ಕಪ್ಪನಿಂದಲೇ ನಾಲ್ಕು ವರ್ಷ ಅತ್ಯಾಚಾರಕ್ಕೊಳಗಾಗಿದ್ದರಂತೆ ಬಿಗ್‌ಬಾಸ್ ಸ್ಪರ್ಧಿ

By Suvarna News  |  First Published Sep 7, 2022, 2:30 PM IST

ಚಿತ್ರರಂಗವೆಂಬ ರಂಗು ರಂಗಿನ ದುನಿಯಾ ನಾವಂದುಕೊಂಡಷ್ಟು ಸರಳವಾಗಿಲ್ಲ. ಇಲ್ಲಿ ಎಲ್ಲವೂ ಭಯಾನಕ. ಎಲ್ಲರದ್ದೂ ಮುಖವಾಡಗಳ ಹಿಂದಿನ ಬದುಕು. ಹಿಂದಿ ಆವೃತ್ತಿಯ ಮಾಜಿ ಬಿಗ್ ಬಾಸ್ ಸ್ಪರ್ಧಿ ರೋಹಿತ್ ವರ್ಮಾ ಬಾಲಿವುಡ್‌, ತನ್ನ ಜೀವನದಲ್ಲಾಗಿರುವ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. 


ಬಿಗ್‌ಬಾಸ್ ಮನೆಯಲ್ಲಿ ಮುಖವಾಡಗಳು ಕಳಚಿ ಬೀಳುತ್ತವೆ. ಅಸಲಿ ಬದುಕಿನ ದುಃಖದ ಕ್ಷಣಗಳು ಬಯಲಾಗುತ್ತವೆ. ಹಾಗೆಯೇ ಹಿಂದಿಯ ಮಾಜಿ ಬಿಗ್‌ ಬಾಸ್ ಸ್ಪರ್ಧಿ ತಮ್ಮ ಜೀವನದ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಮುಂಬೈನಲ್ಲಿ ತನ್ನ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ ರೋಹಿತ್ ವರ್ಮಾ, ನಾನು ವೇಶ್ಯೆಯಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು. ಪುರುಷರು ಹೆಚ್ಚಾಗಿ ಅದರ ಬಗ್ಗೆ ಮಾತನಾಡುವುದಿಲ್ಲ, ಆದರೆ ಅವರಲ್ಲಿ ಹೆಚ್ಚಿನವರು ಕೆಲವು ಸಮಯದಲ್ಲಿ ಲೈಂಗಿಕ ದೌರ್ಜನ್ಯವನ್ನು ಎದುರಿಸಿದ್ದಾರೆ ಎಂದು ಹೇಳಿದರು. ಮಾಜಿ ಬಿಗ್ ಬಾಸ್ ಸ್ಪರ್ಧಿ ಮತ್ತು ಫ್ಯಾಷನ್ ಡಿಸೈನರ್ ರೋಹಿತ್ ವರ್ಮಾ, ಎಂಟು ವರ್ಷವಿದ್ದಾಗ ಕುಟುಂಬದ ಸಂಬಂಧಿಯೊಬ್ಬರು ಅತ್ಯಾಚಾರವೆಸಗಿದ್ದರು ಎಂದು ಇತ್ತೀಚೆಗೆ ಬಹಿರಂಗಪಡಿಸಿದರು. ಅಷ್ಟೇ ಅಲ್ಲ, ತಮ್ಮ ಮಾತುಕತೆಯಲ್ಲಿ ತಾನು ವೇಶ್ಯೆಯಾಗಿ ಕೆಲಸ ಮಾಡುತ್ತಿದ್ದ ಬಗ್ಗೆಯೂ ಹಂಚಿಕೊಂಡಿದ್ದಾರೆ.

ಸ್ವಂತ ಚಿಕ್ಕಪ್ಪನೇ ನಾಲ್ಕು ವರ್ಷ ಅತ್ಯಾಚಾರವೆಸಗಿದ-ರೋಹಿತ್‌ ವರ್ಮಾ
ಬಿಗ್ ಬಾಸ್ 3ರ ಭಾಗವಾಗಿದ್ದ ರೋಹಿತ್ ವರ್ಮಾ ಅವರು ಸಿದ್ಧಾರ್ಥ್ ಕಾನನ್ ಅವರೊಂದಿಗಿನ ಸಂಭಾಷಣೆಯಲ್ಲಿ ಈ ಎಲ್ಲಾ ಮಾತುಗಳನ್ನು ಹೇಳಿದ್ದಾರೆ. 'ನನ್ನದು ತುಂಬಾ ಒಳ್ಳೆ ಮನೆತನ, ಆದರೆ ನನ್ನ ಕುಟುಂಬದವರು ತುಂಬಾ ಹಳೆಯ ವಿಚಾರಗಳನ್ನು ನಂಬುತ್ತಾರೆ. ನಾನು ಒಳ್ಳೆಯ ಕುಟುಂಬದಲ್ಲಿ ಹುಟ್ಟಿದ್ದರೂ, ನನ್ನ ಚಿಕ್ಕಪ್ಪನಿಂದ ನನ್ನ ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ನನ್ನ ಸ್ವಂತದವರಿಂದಲೇ ನಾನು ಅತ್ಯಾಚಾರ (Rape)ಕ್ಕೊಳಗಾಗಿದ್ದೇನೆ. ಎಂಟನೇ ವಯಸ್ಸಿನಲ್ಲಿ ಚಿಕ್ಕಪ್ಪ ನನಗೆ ಸೀರೆ ಉಡುವಂತೆ ಮಾಡುತ್ತಿದ್ದರು, ಮೈಮೇಲೆ ಬಿಸಿ ಮೇಣವನ್ನು ಹಚ್ಚಿ ಹೀನಾಯವಾಗಿ ದೌರ್ಜನ್ಯ ಎಸಗುತ್ತಿದ್ದರು.ಇದೆಲ್ಲಾ ಮೂರ್ನಾಲ್ಕು ವರ್ಷಗಳ ಕಾಲ ನಡೆಯಿತು.ಭಯದಿಂದ ನಾನು ಈ ಬಗ್ಗೆ ನನ್ನ ತಂದೆ-ತಾಯಿಗೆ ಹೇಳಲೇ ಇಲ್ಲ' ಎಂದು ಬೇಸರ ತೋಡಿಕೊಂಡರು.

Tap to resize

Latest Videos

Bigg boss OTT: ಎರಡ್ಮೂರು ಲವ್ವು, ಮದ್ವೆ, ಬ್ರೇಕಪ್ಪು, ಡಿವೋರ್ಸು, ಇದೊಂಥರ ಹುಚ್ಚರ ಸಂತೆ!

ಬಾಲಿವುಡ್‌ನಲ್ಲಿ ಎಲ್ಲರೂ ಸಲಿಂಗಕಾಮಿಗಳು
ಮುಂಬೈನಲ್ಲಿ ತನ್ನ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ ರೋಹಿತ್ ವರ್ಮಾ, ನಾನು ವೇಶ್ಯೆಯಾಗಿ (Prostitute) ಕೆಲಸ ಮಾಡಿದ್ದೇನೆ ಎಂದು ಹೇಳಿದರುಇದಲ್ಲದೆ, ಬಾಲಿವುಡ್‌ನಲ್ಲಿ ಎಲ್ಲರೂ ಸಲಿಂಗಕಾಮಿಗಳು ಅಥವಾ ದ್ವಿಲಿಂಗಿಗಳು ಎಂದರು. ರೋಹಿತ್ ವರ್ಮಾ ಅವರು ಯಶಸ್ಸನ್ನು ಸಾಧಿಸಿದ ನಂತರ ಅವರನ್ನು ತೊರೆದ ನಟನೊಂದಿಗೆ ಒಮ್ಮೆ ಸಂಬಂಧ (Relationship)ದಲ್ಲಿದ್ದರು ಎಂದು ಬಹಿರಂಗಪಡಿಸಿದರು. ಇದರ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡುವುದಿಲ್ಲ ಎಂದು ಏಕ್ ಹಜಾರೋನ್ ಮೇ ಮೇರಿ ಬೆಹನಾ ಹೈ ನಟ ಹೇಳಿದ್ದಾರೆ.

ಇದರ ಬಗ್ಗೆ ಕೆಲವರು ಬಹಿರಂಗವಾಗಿ ಮಾತನಾಡುತ್ತಾರೆ, ಕೆಲವರು ಮಾತನಾಡಲು ಸಾಧ್ಯವಿಲ್ಲ. ನಾನು ನಟ (Actor)ನೊಂದಿಗೆ ಸಂಬಂಧ ಹೊಂದಿದ್ದೇನೆ, ನಾನು ಅದನ್ನು ನಿರಾಕರಿಸುವುದಿಲ್ಲ. ಕೆಲವರು ಅದನ್ನು ರಹಸ್ಯವಾಗಿ (Secret) ಮಾಡುತ್ತಾರೆ. ಆದರೆ, ನಾನು ಬಹಿರಂಗವಾಗಿ ಮಾತನಾಡಿದ್ದಕ್ಕಾಗಿ ನನಗೆ ತೊಂದರೆಯಾಗುತ್ತಿದೆ ಎಂದರು.

ಶಮಿತಾ ಶೆಟ್ಟಿ ಜೊತೆ ಬ್ರೇಕಪ್‌ ಬಗ್ಗೆ ಟ್ರೋಲ್‌ಗಳಿಗೆ ಉತ್ತರ ಕೊಟ್ಟ ರಾಕೇಶ್‌ ಬಾಪಟ್‌

ದುಡ್ಡಿಲ್ಲದೆ ವೇಶ್ಯಾವಾಟಿಕೆ ಮಾಡಿದೆ
ನನಗೆ ಮುಂಬೈನಲ್ಲಿ ಹಣ ಬೇಕಿತ್ತು. ಆ ಸಮಯದಲ್ಲಿ ನನ್ನ ಅಗತ್ಯಗಳನ್ನು ಪೂರೈಸಲು ನಾನು ಹುಡುಗಿಯರ ಬಟ್ಟೆಗಳನ್ನು (Girls cloth) ಧರಿಸಿ ತಾಜ್‌ನಲ್ಲಿ ತಿರುಗುತ್ತಿದ್ದೆ. ಜನರು ನನ್ನನ್ನು ಒಂದು ಅಥವಾ ಎರಡು ಬಾರಿ ಕರೆದೊಯ್ದರು ಮತ್ತು ನಾನು ಇಲ್ಲಿಂದ ಬಂದ ಹಣದಿಂದ ನಾನು ಡಿಸೈನಿಂಗ್ ವಸ್ತುಗಳನ್ನು ಖರೀದಿಸಿದೆ ಎಂದು ರೋಹಿತ್ ವರ್ಮಾ ಮನಬಿಚ್ಚಿ ಮಾತನಾಡಿದ್ದಾರೆ. ರೋಹಿತ್‌ ವರ್ಮಾ ಮಾತಿನ ಮೂಲಕ ಯಾರ ಜೀವನವೂ ಅಂದುಕೊಂಡಂತೆ ಇರುವುದಿಲ್ಲ ಎಂಬುದು ಗೊತ್ತಾಗುತ್ತದೆ.

click me!