ಯಾವುದೇ ಒಂದು ಸಂಬಂಧದಿಂದ ಹೊರಗೆ ಬರುವುದು ಸುಲಭವಲ್ಲ. ಅದ್ರಲ್ಲೂ ಸದಾ ತಮ್ಮ ಬಗ್ಗೆ ಆಲೋಚನೆ ಮಾಡುವ, ನಕಾರಾತ್ಮಕ ಆಲೋಚನೆ ಹೊಂದಿರುವ ಹುಡುಗಿಯರಿಂದ ಬಿಡಿಸಿಕೊಳ್ಳೋದು ಕಷ್ಟದ ಕೆಲಸ. ಒಂದ್ವೇಳೆ ಬಿಡುಗಡೆ ಸಿಕ್ಕರೆ ನಿಮ್ಮ ಜೀವನದಿಂದ ಶನಿ ಹೋದಂತೆ.
ನಕರಾತ್ಮಕ ಜನರ ಜೊತೆ ವಾಸಿಸೋದು ಅಷ್ಟು ಸುಲಭದ ಮಾತಲ್ಲ. ಅದ್ರಲ್ಲೂ ಜೀವನ ಪರ್ಯಂತ ಅವರ ಜೊತೆ ಬಾಳ್ವೆ ಮಾಡ್ಬೇಕೆಂದ್ರೆ ನಿಮ್ಮ ಬಳಿ ಎಷ್ಟು ತಾಳ್ಮೆ ಇದ್ರೂ ಸಾಲೋದಿಲ್ಲ. ಪ್ರೀತಿಸಿದ ವ್ಯಕ್ತಿಗಳೆಲ್ಲ ನಿಮಗೆ ಹೊಂದಿಕೊಂಡು ಹೋಗ್ತಾರೆ ಎನ್ನಲು ಸಾಧ್ಯವಿಲ್ಲ. ಹಾಗೆ ಕಷ್ಟವಾದ್ರೂ ಪ್ರೀತಿಸಿದ ವ್ಯಕ್ತಿ ಜೊತೆಯೇ ಜೀವನ ನಡೆಸಬೇಕೆಂದೇನೂ ಇಲ್ಲ. ಉಸಿರುಗಟ್ಟಿಸುವ ವಾತಾವರಣವಿದ್ದಾಗ ಆ ಸಂಬಂಧದಿಂದ ಹೊರಗೆ ಬಂದ್ರೆ ನಿಮಗೆ ನೆಮ್ಮದೆ. ಸಾಮಾನ್ಯವಾಗಿ ಕೆಲ ಹುಡುಗಿಯರು ಅತಿಯಾಗಿ ಆಡ್ತಾರೆ. ಅವರ ಕಿರಿಕಿರಿಗೆ ಸಂಗಾತಿ ಬೇಸತ್ತು ಹೋಗಿರ್ತಾರೆ. ಸದಾ ತನ್ನ ಬಗ್ಗೆ ಆಲೋಚನೆ ಮಾಡುವ ಆ ಹುಡುಗಿಯರು ಸಂಗಾತಿ ಬಗ್ಗೆ ಕಾಳಜಿ ಹೊಂದಿರೋದಿಲ್ಲ. ಸುತ್ತಮುತ್ತ ನಕಾರಾತ್ಮಕ ಪ್ರಭಾವ ಬೀರುವ ಈ ಹುಡುಗಿಯರ ಸಹವಾಸ ಬೇಡ ಎನ್ನಿಸುತ್ತದೆ. ಆ ಸಂದರ್ಭದಲ್ಲಿ ಹುಡುಗರಾದವರು ದೃಢ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಇಲ್ಲವೆಂದ್ರೆ ಮುಂದೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ವಿಷಕಾರಿ ಹುಡುಗಿಯರ ಸಂಬಂಧ ಬಿಡಿಸಿಕೊಂಡ್ರೆ ಸಾಕಷ್ಟು ಲಾಭವಿದೆ. ನಾವಿಂದು ಟಾಕ್ಸಿನ್ ಹುಡುಗಿಯರಿಂದ ಬಿಡುಗಡೆ ಸಿಕ್ಕಾಗ ನಿಮಗಾಗುವ ಅನುಭವ ಏನು ಅನ್ನೋದನ್ನು ಹೇಳ್ತೇವೆ. ಆದ್ರೆ ಇವರಿಂದ ದೂರವಾಗುವುದು ಸುಲಭವಲ್ಲ.
ನಾಟಕ (Drama) ಮಾಡೋದು ನಿಲ್ಲುತ್ತೆ : ಟಾಕ್ಸಿನ್ (Toxin) ಹುಡುಗಿಯರ ಜೊತೆ ಸಂಬಂಧ ನಾಟಕದ ಮೇಲೆ ನಿಂತಿರುತ್ತದೆ. ಹುಡುಗಿಯರು ಸದಾ ನಾಟಕದಲ್ಲಿಯೇ ನಿಮ್ಮನ್ನು ಕಟ್ಟಿ ಹಾಕಿರ್ತಾರೆ. ನೀವು ಯಾವುದೇ ಸಲಹೆ ನೀಡಿದ್ರೂ ಅದನ್ನು ಸ್ವೀಕರಿಸುವುದಿಲ್ಲ. ತಪ್ಪು ಮಾಡಿದ ಮೇಲೆ ಅಳುವ (Crying) ನಾಟಕವಾಡುವ ಹುಡುಗಿಯರು ನಂತ್ರ ನಿಮ್ಮನ್ನೇ ದೂಷಿಸ್ತಾರೆ. ಅವರಿಂದ ದೂರವಾಗ್ತಿದ್ದಂತೆ ಈ ಎಲ್ಲ ನಾಟಕ ಬಂದ್ ಆಗುತ್ತದೆ. ಆಕೆ ಮುಂದೆ ಅನಿವಾರ್ಯ ಕಾರಣಕ್ಕೆ ನೀವು ಆಡ್ತಿದ್ದ ನಾಟಕ ಕೂಡ ಕೊನೆಗೊಳ್ಳುತ್ತದೆ. ನಿಮ್ಮ ಸುತ್ತ ಶಾಂತತೆ ಮನೆ ಮಾಡುತ್ತದೆ. ಪ್ರಶಾಂತ ಜೀವನವನ್ನು ನೀವು ನಡೆಸಬಹುದಾಗಿದೆ.
ಜೀವನಕ್ಕೆ ಸಿಗುತ್ತದೆ ಅತ್ಯಧಿಕ ಆನಂದ (Happiness): ವ್ಯಕ್ತಿಯು ವಿಷಕಾರಿ ಜನರಿಂದ ಮುಕ್ತನಾದರೆ ಅವನ ಜೀವನದಲ್ಲಿ ಆನಂದ ಪ್ರಾಪ್ತಿಯಾಗುತ್ತದೆ. ಆಶಾವಾದದ ಜೀವನವನ್ನು ಆತ ನಡೆಸಬಹುದಾಗಿದೆ. ನಾಟಕದ ಜನರಿಂದ ದೂರವಾದ್ಮೇಲೆ ನಿಮ್ಮ ಭಾವನೆ ಹಾಗೂ ನಿಮ್ಮ ಆಸೆಗಳಿಗೆ ಮಹತ್ವ ಸಿಗುತ್ತದೆ. ತೃಪ್ತಿಕರ ಜೀವನ ನಡೆಸಲು ನೆರವಾಗುತ್ತದೆ. ಸಂತೋಷವನ್ನು ನೀವು ಎಲ್ಲ ಕಡೆ ಪಡೆಯಬಹುದು ಹಾಗೆ ಸಂತೋಷಕ್ಕಾಗಿ ನಿಮಗೆ ಇಷ್ಟವಾದ ಕೆಲಸವನ್ನು ಮಾಡುವ ಅವಕಾಶ ನಿಮಗೆ ಸಿಗುತ್ತದೆ.
ಮೊದಲಿಗಿಂತ ನೀವು ಉತ್ತಮರಾಗ್ತೀರಿ : ಟಾಕ್ಸಿನ್ ಗರ್ಲ್ ಫ್ರೆಂಡ್ ನಿಮ್ಮ ಬೆಳವಣಿಗೆ ಮೇಲೂ ಪ್ರಭಾವ ಬೀರಿರುತ್ತಾಳೆ. ಆಕೆ ಬಂಧನದಲ್ಲಿರುವಾಗ ನಿಮ್ಮ ಬೆಳವಣಿಗೆ ಮಿತಿಯಲ್ಲಿರುತ್ತದೆ. ಆದ್ರೆ ಈ ಸಂಬಂಧದಿಂದ ಹೊರ ಬರ್ತಿದ್ದಂತೆ ಸ್ವಾತಂತ್ರ್ಯ ನಿಮಗೆ ಮರಳಿ ಸಿಕ್ಕ ಅನುಭವವಾಗುತ್ತದೆ. ಆಕಾಶದಲ್ಲಿ ಸ್ವಚ್ಛಂದವಾಗಿ ನೀವು ಹಾರಬಹುದಾಗಿದೆ. ನಿಮ್ಮಲ್ಲಿ ಆತ್ಮವಿಶ್ವಾಸ (Confidence) ಹಾಗೂ ಸಕಾರಾತ್ಮಕ ಭಾವನೆ ಬೆಳೆಯುತ್ತದೆ. ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ (health) ಏನು ಬೇಕು ಎಂಬುದನ್ನು ಅರಿತುಕೊಂಡು ನೀವು ಅದರಂತೆ ನಡೆಯಲು ಶುರು ಮಾಡ್ತೀರಿ. ನಿಮ್ಮ ಕಲಿಕೆಗೆ, ಯಶಸ್ವಿ ಜೀವನಕ್ಕೆ ಮಹತ್ವ ನೀಡಲು ಮುಂದಾಗ್ತೀರಿ.
ಪತಿ ತೊಡೆ ಮೇಲೆ ಕೂತು ನಾದಿನಿ ಮಾಡುತ್ತಿದ್ದ ಕೆಲಸ ನೋಡಿದ ಪತ್ನಿ ನಿದ್ರೆ ಹಾಳಾಗಿದೆ!
ಸರಿ – ತಪ್ಪಿನ ಅರಿವು : ಟಾಕ್ಸಿನ್ ಸಂಬಂಧದಲ್ಲಿದ್ದಾಗ ನಿಮ್ಮ ಆಲೋಚನಾ ಶಕ್ತಿಗೆ ಕಡಿವಾಣ ಹಾಕಿರ್ತೀರಿ. ಹಾಗಾಗಿ ಗರ್ಲ್ ಫ್ರೆಂಡ್ ಹೇಳಿದ್ದಕ್ಕೆ ಮಾತ್ರ ತಲೆ ಆಡಿಸ್ತಿರುತ್ತೀರಿ. ಅದೇ ಸಂಬಂಧದಿಂದ ಹೊರ ಬಂದ್ಮೇಲೆ ನಿಮಗೆ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ನಿಮಗೆ ಒಳಿತು ಎನ್ನುವ ವಿಷ್ಯ ಹಾಗೂ ಜನರನ್ನು ಮಾತ್ರ ನೀವು ನಿಮ್ಮ ಬಳಿ ಬಿಟ್ಟುಕೊಳ್ತೀರಿ. ವಿಷ ಎನ್ನಿಸುವ ಸಂಗತಿಯನ್ನು ಮುಲಾಜಿಲ್ಲದೆ ತಿರಸ್ಕರಿಸಲು ಮುಂದಾಗ್ತೀರಿ.
Sexual Wellness: ವಯಾಗ್ರ ಜೊತೆ ನಿಂಬೆ ರಸ ಸೇರಿಸಿದ್ರೆ ಲೈಂಗಿಕ ಕ್ರಿಯೆಯಲ್ಲಿ ಸ್ವರ್ಗ ಸುಖ
ಮತ್ತೆ ಸ್ನೇಹಿತರ ಗುಂಪು : ಟಾಕ್ಸಿನ್ ಗರ್ಲ್ ಫ್ರೆಂಡ್ ಜೊತೆಗಿದ್ದಾಗ ಸ್ನೇಹಿತರು, ಕುಟುಂಬಸ್ಥರು ದೂರವಾಗೋದು ಸಹಜ. ಅದೇ ಆ ಸಂಬಂಧದಿಂದ ಹೊರ ಬರ್ತಿದ್ದಂತೆ ನೀವು ಮತ್ತೆ ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆ ಬೆರೆಯಲು ಶುರು ಮಾಡ್ತೀರಿ.