ಸಂಗಾತಿಯ ಜೊತೆ ಲೈಂಗಿಕ ಕ್ರಿಯೆ ಮಾಡಿದ ನಂತರ ಮಹಿಳೆಯರು ಇವಿಷ್ಟನ್ನು ಮಾಡಲೇಬೇಕು

By Suvarna News  |  First Published May 1, 2022, 3:47 PM IST

ದಂಪತಿಗಳು (Couple) ಲೈಂಗಿಕ ಕ್ರಿಯೆ (Sex)ಯಲ್ಲೇನೋ ಉತ್ಸಾಹದಿಂದ ಭಾಗವಹಿಸುತ್ತಾರೆ. ಆದರೆ ಲೈಂಗಿಕ ಕ್ರಿಯೆ ಮುಗಿದ ಬಳಿಕ ಸುಸ್ತಾಯ್ತು ಎಂಬ ಕಾರಣಕ್ಕೆ ಮಲಗಿ ಬಿಡುತ್ತಾರೆ. ಆದರೆ ಹೀಗೆ ಮಾಡಲೇಬಾರದು. ಸಂಗಾತಿಯ ಜೊತೆ ಲೈಂಗಿಕ ಕ್ರಿಯೆ ಮಾಡಿದ ನಂತರ ಮಹಿಳೆಯರು (Women) ಇವಿಷ್ಟನ್ನು ಮಾಡದಿದ್ದರೆ ಆರೋಗ್ಯಕ್ಕೇ (Health) ಅಪಾಯ.


ಸಂಗಾತಿ (Couple)ಗಳಿಬ್ಬರು ಲೈಂಗಿಕ ಕ್ರಿಯೆ (Sex)ಯಲ್ಲಿ ಭಾಗವಹಿಸುವ ಮುನ್ನ ತುಂಬಾ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ. ಮೊದಲಿಗೆ ಏನು ಮಾಡಬೇಕು, ಯಾವ ರೀತಿಯಲ್ಲಿ ಸಂಗಾತಿಯನ್ನು ತೃಪ್ತಿ ಪಡಿಸಬೇಕು ಮೊದಲಾದ ವಿಷಯಗಳನ್ನು ಪ್ಲಾನ್ ಮಾಡಿರುತ್ತಾರೆ. ಲೈಂಗಿಕ ಕ್ರಿಯೆಯಲ್ಲೂ ಉತ್ಸಾಹದಿಂದ ಭಾಗವಹಿಸುತ್ತಾರೆ. ಆದರೆ ಲೈಂಗಿಕ ಕ್ರಿಯೆ ಮುಗಿದ ಬಳಿಕ ಸುಸ್ತಾಯ್ತು ಎಂಬ ಕಾರಣಕ್ಕೆ ಮಲಗಿ ಬಿಡುತ್ತಾರೆ. ಆದರೆ ಹೀಗೆ ಮಾಡಲೇಬಾರದು. ಸೆಕ್ಸ್‌ಗೆ ಮೊದಲು ಸಿದ್ಧವಾಗುವುದು ಎಷ್ಟು ಮುಖ್ಯವೋ ಸೆಕ್ಸ್ ಆದ ಬಳಿಕ ಕೆಲವೊಂದು ಕೆಲಸ ಮಾಡುವುದು ತುಂಬಾ ಮುಖ್ಯವಾಗುತ್ತದೆ.

ಸಂಗಾತಿಗಳಿಬ್ಬರು ಲೈಂಗಿಕ ಪ್ರಕ್ರಿಯೆ ನಡೆಸುವ ಸಂದರ್ಭದಲ್ಲಿ ಪ್ರಪಂಚವನ್ನೇ ಮರೆಯುತ್ತಾರೆ. ಲೈಂಗಿಕ ತೃಪ್ತಿ ಕಂಡು ಕೊಳ್ಳುವುದಷ್ಟೇ ಇಬ್ಬರ ಗುರಿಯಾಗಿರುತ್ತದೆ. ಆದರೆ ಆನಂತರದಲ್ಲಿ ತಮ್ಮ ಬಗ್ಗೆ ತಾವು ಆಲೋಚನೆ ಮಾಡಿಕೊಳ್ಳುವುದು ಒಳ್ಳೆಯದು. ಅದರಲ್ಲೂ ಮಹಿಳೆಯರು ಸಂಗಾತಿಯ ಜೊತೆ ಲೈಂಗಿಕ ಕ್ರಿಯೆ ಮಾಡಿದ ನಂತರ ಇವಿಷ್ಟನ್ನು ಮಾಡದಿದ್ದರೆ ಆರೋಗ್ಯಕ್ಕೇ(Health) ಅಪಾಯ.

Tap to resize

Latest Videos

Divorce Tricks: ನಿಮ್ಮಿಂದ ದೂರವಾಗೋಕೆ ಸಂಗಾತಿ ಈ ತಂತ್ರ ಅನುಸರಿಸ್ತಾ ಇರ್ಬೋದು

ಯೋನಿಯ ಭಾಗವನ್ನು ಸ್ವಚ್ಛಗೊಳಿಸಿ: ಲೈಂಗಿಕ ಪ್ರಕ್ರಿಯೆ ಸಂಪೂರ್ಣವಾದ ಮಹಿಳೆಯರ ಯೋನಿಯ ಭಾಗ ಸಂಗಾತಿಯ ವೀರ್ಯ ಹಾಗೂ ಬೆವರಿನಿಂದ ಆವೃತವಾಗಿರುತ್ತದೆ. ಇದರಿಂದ ಬ್ಯಾಕ್ಟೀರಿಯಗಳ ಸೋಂಕು ತಗಲುವ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿ ಸಾಧ್ಯವಾದಷ್ಟು ಒಂದು ಒಣ ಬಟ್ಟೆಯಿಂದ ಯೋನಿಯ ಭಾಗವನ್ನು ಸ್ವಚ್ಛ ಪಡಿಸಿಕೊಳ್ಳಿ. ಸಾಧ್ಯವಾದಷ್ಟು ತೇವಾಂಶ ರಹಿತವಾಗಿ ಒಣಗುವ ಹಾಗೆ ನೋಡಿಕೊಳ್ಳಿ. ಇದರಿಂದ ಲೈಂಗಿಕವಾಗಿ ಹರಡಬಹುದಾದ ಬಹುತೇಕ ಕಾಯಿಲೆಗಳನ್ನು ಹಾಗೂ ಬ್ಯಾಕ್ಟೀರಿಯಾ ಜೊತೆಗೆ ಫಂಗಲ್ ಸೋಂಕುಗಳನ್ನು ನಿವಾರಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದು: ಲೈಂಗಿಕ ಪ್ರಕ್ರಿಯೆ ಮುಗಿದ ಬಳಿಕ ಮೂತ್ರ (Urine) ವಿಸರ್ಜನೆ ಮಾಡುವುದು ಒಳ್ಳೆಯ ಲಕ್ಷಣ ಎಂದು ಹೇಳಬಹುದು. ಸಾಕಷ್ಟು ಮಹಿಳೆಯರು ಮೂತ್ರ ವಿಸರ್ಜನೆ ಮಾಡಲು ಮುಂದಾಗುತ್ತಾರೆ. ವೈಜ್ಞಾನಿಕವಾಗಿ ಈ ಸಂದರ್ಭದಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಪುರುಷರ ಶಿಶ್ನದ ಭಾಗದ ಬ್ಯಾಕ್ಟೀರಿಯಗಳು ಒಂದು ವೇಳೆ ಯೋನಿಯ ಒಳಭಾಗಕ್ಕೆ ತಲುಪಿದ್ದರೆ, ಅವುಗಳು ಸ್ವಚ್ಛವಾಗಿ ಸಂಪೂರ್ಣವಾಗಿ ಹೊರಗೆ ಬರುವಂತೆ ಆಗುತ್ತದೆ.

​ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು: ಮಹಿಳೆಯರು ಲೈಂಗಿಕ ಪ್ರಕ್ರಿಯೆ ಮುಗಿದ ಬಳಿಕ ಉಗುರು ಬೆಚ್ಚಗಿನ ನೀರಿನೊಂದಿಗೆ ಸ್ನಾನ ಮಾಡುವ ಅಭ್ಯಾಸ ಇಟ್ಟುಕೊಂಡರೆ ತುಂಬಾ ಒಳ್ಳೆಯದು. ಇದು ಯೋನಿಯ ಭಾಗದ ಸ್ವಚ್ಛತೆಗೆ ಅನುಕೂಲ ಮಾಡಿಕೊಡುವುದು ಮಾತ್ರವಲ್ಲದೆ ನಿಮ್ಮ ದೇಹದ ತಾಪಮಾನವನ್ನು ಕೂಡ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ಸಹಾಯವಾಗುತ್ತದೆ. ಜೊತೆಗೆ ಲೈಂಗಿಕ ಪ್ರಕ್ರಿಯೆ ಮುಗಿದ ಬಳಿಕ ಸ್ನಾನ ಮಾಡುವುದರಿಂದ ದೇಹಕ್ಕೆ ಹಾಗೂ ಮನಸ್ಸಿಗೆ ಆರಾಮದಾಯಕ ಅನುಭವ ಉಂಟಾಗುತ್ತದೆ.

Marriage Life : ದಾಂಪತ್ಯ ಹಾಳ್ಮಾಡುತ್ತೆ ಈ ಕೆಟ್ಟ ಅಭ್ಯಾಸ

ಸಡಿಲವಾದ ಬಟ್ಟೆಯನ್ನು ಧರಿಸಿ: ಮಹಿಳೆಯರು ತಮ್ಮ ಯೋನಿಯ ಭಾಗಕ್ಕೆ ಯಾವುದೇ ಕಾರಣಕ್ಕೂ ಅತಿ ಹೆಚ್ಚು ಒತ್ತಡವನ್ನು ಉಂಟು ಮಾಡುವ ಬಟ್ಟೆಗಳನ್ನು ಧರಿಸಬಾರದು.ಸಾಧಾರಣ ಕಾಟನ್ ಮತ್ತು ಸ್ವಲ್ಪ ಸಡಿಲವಾದ ಬಟ್ಟೆಗಳನ್ನು ಧರಿಸಬೇಕು. ಇದರಿಂದ ಎದುರಾಗಬಹುದಾದ ಸೋಂಕಿನ ತೊಂದರೆಗಳಿಂದ ಪಾರಾಗಬಹುದು. ರಾತ್ರಿ ಮಲಗುವ ಸಂದರ್ಭದಲ್ಲಿ ಕೂಡ ಇದನ್ನು ಪಾಲಿಸುವುದು ಒಳ್ಳೆಯದು.

ಹೆಚ್ಚು ನೀರನ್ನು ಕುಡಿಯುವುದು ಒಳ್ಳೆಯದು: ದೇಹಕ್ಕೆ ಯಾವುದೇ ಕಾರಣಕ್ಕೂ ನಿರ್ಜಲೀಕರಣ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. ಲೈಂಗಿಕ ಪ್ರಕ್ರಿಯೆಯ ಸಂದರ್ಭದಲ್ಲಿ ಮಹಿಳೆಯರ ಹಾಗೂ ಪುರುಷರು ದೇಹದಿಂದ ಸಾಕಷ್ಟು ಬೆವರು ಹರಿದು ಹೋಗಿರುತ್ತದೆ. ಹೀಗಾಗಿ ನೀರಿನ ಸೇವನೆಯನ್ನು ಮಾಡುವುದರಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ಯೋನಿಯ ಭಾಗದ ಸಾಕಷ್ಟು ತೊಂದರೆಗಳು ಸಹ ಇದರಿಂದ ಪರಿಹಾರವಾಗುತ್ತದೆ.
​ಆಹಾರಕ್ರಮ ಸರಿ ಇರಬೇಕು

ಸಮರ್ಪಕ ಆಹಾರ ಪದ್ಧತಿ: ಸಾಕಷ್ಟು ಮಹಿಳೆಯರು ತಮ್ಮ ಆಹಾರ ಪದ್ಧತಿಯ ಬಗ್ಗೆ ನಿರ್ಲಕ್ಷತೆ ವಹಿಸುತ್ತಾರೆ. ಹೊರಗಿನ ಜಂಕ್ ಫುಡ್ ಸೇವನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಬೆಳವಣಿಗೆ ಉಂಟಾಗಬೇಕು ಎಂದರೆ, ದೇಹದಲ್ಲಿ ಪಿಹೆಚ್ ಮಟ್ಟ ವಿಶೇಷವಾಗಿ ಯೋನಿಯ ಭಾಗದಲ್ಲಿ ಸಮತೋಲನದಿಂದ ಕೂಡಿರಬೇಕು ಜೊತೆಗೆ ಯೋನಿಯ ಭಾಗದಲ್ಲಿ ಯಾವುದೇ ಈಸ್ಟ್ ಸೋಂಕು ಉಂಟಾಗಬಾರದು. ಹೀಗಾಗಿ ಆರೋಗ್ಯಕರವಾಗಿ ತಿನ್ನುವುದು ಹೆಚ್ಚು ಮುಖ್ಯ

click me!