ಮದುವೆ ಎನ್ನುವುದು ಎರಡು ಚಕ್ರದ ವಾಹನವಿದ್ದಂತೆ. ಒಂದು ಚಕ್ರ ಹಾಳಾದ್ರೂ ದಾಂಪತ್ಯ ಮುಂದೆ ಸಾಗೋದಿಲ್ಲ. ಹೇಳಲಾಗದ, ನುಂಗಲಾಗದ ತುತ್ತಾಗಿ ಹಿಂಸೆ ನೀಡುತ್ತದೆ. ಅದ್ರಿಂದ ಹೊರಗೆ ಬರುವವರೆಗೆ ನೆಮ್ಮದಿ ಇರೋದಿಲ್ಲ.
ಮದುವೆ ಅದ್ಮೇಲೆ ಅಲ್ಲಿ ರಾಜಿ ಇರ್ಲೇಬೇಕು. ಪರಸ್ಪರ ಹೊಂದಾಣಿಕೆ, ಗೌರವ, ನಂಬಿಕೆ ಇದ್ದಲ್ಲಿ ಮಾತ್ರ ಜೀವನ ಸುಖಮಯವಾಗಿ ಸಾಗುತ್ತದೆ. ದಾಂಪತ್ಯದಲ್ಲಿ ಇಬ್ಬರೂ ಹೊಂದಾಣಿಕೆ ಮಾಡಿಕೊಳ್ಳೋದು ಮುಖ್ಯವಾಗುತ್ತದೆ. ಹೊಂದಾಣಿಕೆ, ರಾಜಿ ಎಲ್ಲವೂ ಒಂದೇ ಕಡೆಯಿಂದ ಬಂದ್ರೆ ಅದು ಮುಂದೆ ಸಮಸ್ಯೆಯಾಗಲು ಶುರುವಾಗುತ್ತದೆ. ಇದ್ರಿಂದ ಮದುವೆ ಮುರಿದು ಬೀಳದೇ ಇರಬಹುದು. ಆದ್ರೆ ದಾಂಪತ್ಯ ಉಸಿರುಗಟ್ಟಿದಂತಾಗುತ್ತದೆ. ವ್ಯಕ್ತಿ ನೋವಿನಲ್ಲಿ ದಿನ ಕಳೆಯುವ ಸ್ಥಿತಿ ನಿರ್ಮಾಣವಾಗುತ್ತದೆ. ಆ ನೋವು, ದುಃಖ, ಯಾತನೆ ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಕೆಲ ವ್ಯಕ್ತಿಗಳು ತಮ್ಮ ದಾಂಪತ್ಯ ವಿಫಲವಾಗಲು ಕಾರಣವೇನು ಎಂಬುದನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ಅವನ ನಿಂದನೆಗೆ ಬೇಸತ್ತು ದೂರವಾದೆ : ಅವನ ಹೆಂಡತಿ (Wife) ಯಾಗಿ, ಮೂರು ಮಕ್ಕಳ ತಾಯಿಯಾಗಿ ಆತನನ್ನು 7 ವರ್ಷ ಸಹಿಸಿಕೊಂಡೆ ಎನ್ನುತ್ತಾಳೆ ಈ ಮಹಿಳೆ. ಕೋಪಿಷ್ಠನಾಗಿದ್ದ ಪತಿ, ಮದುವೆ (Marriage) ಯಾದ್ಮೆಲೆ ಮತ್ತಷ್ಟು ಬದಲಾಗಿದ್ದ. ನನ್ನ ಹಾಗೂ ಆತನ ಮಧ್ಯೆ ಪ್ರೀತಿ (Love) ಸಂಪೂರ್ಣ ಸತ್ತುಹೋಗಿತ್ತು. ಏನು ಮಾಡ್ತಿದ್ದೇನೆ, ಏನು ಮಾತನಾಡ್ತಿದ್ದೇನೆ ಎನ್ನುವ ಬಗ್ಗೆ ಆತನಿಗೆ ನಿಯಂತ್ರಣವೇ ಇರಲಿಲ್ಲ. ಮುಂದೆ ಸುಧಾರಿಸುತ್ತಾನೆಂದು ಆತನ ಜೊತೆ ಹೊಂದಿಕೊಂಡು ಹೋಗುವ ಪ್ರಯತ್ನ ನಡೆಸಿದ್ದೆ. ಮೂರು ಮಕ್ಕಳಾದ್ರೂ ಆತನ ಸ್ವಭಾವ ಮಾತ್ರ ಬದಲಾಗಲಿಲ್ಲ. ಎಲ್ಲರ ಮುಂದೆ, ಮಕ್ಕಳ ಮುಂದೆ ನನಗೆ ಕೆಟ್ಟದಾಗಿ ಬೈಯ್ಯುತ್ತಿದ್ದ, ನಿಂದನೆ ಮಾಡ್ತಿದ್ದ. ಹೆತ್ತವರ ಮುಂದೆಯೂ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ ಆತನಿಗೆ, ಆತನ ಪಾಲಕರು ಬುದ್ದಿ ಹೇಳುವ ಪ್ರಯತ್ನ ನಡೆಸಿದ್ದರು. ಕೊನೆಗೂ ಆತ ಬದಲಾಗುವ ಲಕ್ಷಣ ಕಾಣಲಿಲ್ಲ. ಹಾಗಾಗಿ ನಾನು ಅವನಿಂದ ದೂರವಾದೆ. ಈಗ ನೆಮ್ಮದಿಯಾಗಿದ್ದೇನೆಂದು ಮಹಿಳೆ ಹೇಳಿದ್ದಾಳೆ.
ಬೋಲ್ಡ್ ಆಗಿ ತಂದೆಗೇ ಲಿಪ್‌ಲಾಕ್ ಮಾಡಿದ್ದ ಬಾಲಿವುಡ್ ನಟಿ; ಇದು ಕಾಮನ್, ತಪ್ಪೇನು ಅಂತಿದ್ದಾಳೆ!
ವಿವಾಹೇತರ ಸಂಬಂಧ ಹೊಂದಿದ್ದಲ್ಲದೆ ಧಮಕಿ ಹಾಕ್ತಿದ್ದ : ನನ್ನ ಮಗಳು ಹಾಗೂ ನನ್ನನ್ನು ನಿರ್ಲಕ್ಷ್ಯ ಮಾಡಿ ವಿವಾಹೇತರ ಸಂಬಂಧ ಹೊಂದುವ ಮೊದಲು ನಮ್ಮ ಸಂಸಾರ ಚೆನ್ನಾಗಿಯೇ ಇತ್ತು ಎನ್ನುತ್ತಾಳೆ ಈ ಮಹಿಳೆ. ಪತಿಯ ವಿವಾಹೇತರ ಸಂಬಂಧದ ಗುಟ್ಟು ರಟ್ಟಾದ್ಮೇಲೆ ಕ್ಷಮೆ ಕೇಳಿ, ಇನ್ನು ಈ ಕೆಲಸ ಮಾಡೋದಿಲ್ಲವೆಂದು ಭರವಸೆ ನೀಡಿದ್ದ. ಆದ್ರೆ ಭರವಸೆ ಪೊಳ್ಳಾಯ್ತು. ಮತ್ತೆ ಸಂಬಂಧ ಬೆಳೆಸಿದ್ದ. ಎರಡು, ಮೂರು ಬಾರಿ ಸಂಬಂಧ ಬೆಳೆಸಿದ ನಂತ್ರ ಧೈರ್ಯ ತಂದುಕೊಂಡ ಪತಿ, ಒಂದೇ ಮನೆಯಲ್ಲಿ ವಾಸಿಸುವ ಕಾರಣ ಹಣ ನೀಡುವಂತೆ ನನಗೆ ಧಮಕಿ ಹಾಕ್ತಿದ್ದ. ನಾನು ದೌರ್ಜನ್ಯವೆಸಗಿದ್ದೇನೆಂದು ಆರೋಪ ಮಾಡ್ತಿದ್ದ. ಆದ್ರೆ ಕೊನೆಗೂ ಆತನ ಪಂಜರದಿಂದ ಹೊರಗೆ ಬಂದು ನೆಮ್ಮದಿ ಕಂಡಿದ್ದೇನೆ ಎನ್ನುತ್ತಾಳೆ ಇವಳು.
ಸಲಿಂಗಕಾಮಿ ಪತಿ ನಂಬಿ ಮೋಸ ಹೋದೆ : ನನ್ನ ಪತಿ ಸಲಿಂಗಕಾಮಿ ಎಂಬುದು ಮದುವೆ ನಂತ್ರ ನನಗೆ ಗೊತ್ತಾಯ್ತು. ಆದ್ರೆ ಆತನ ಪ್ರೀತಿಯಲ್ಲಿ ಬಿದ್ದಿದ್ದ ನಾನು ಅದನ್ನು ಒಪ್ಪಿಕೊಂಡಿದ್ದೆ. ಪ್ರೀತಿ ನನ್ನನ್ನು ಕುರುಡನನ್ನಾಗಿಸಿತ್ತು. ಕೆಲವೊಂದು ವಿಷ್ಯ ಎಂದಿಗೂ ಬದಲಾಗೋದಿಲ್ಲ ಎನ್ನುವ ಸತ್ಯವನ್ನು ನಾನು ಅರಿಯಬೇಕಾಗಿತ್ತು. ಯಾವಾಗ ನನ್ನ ಪತಿ ಬೇರೆ ಪುರುಷರ ಜೊತೆ ಸಂಬಂಧ ಬೆಳೆಸಲು ಶುರು ಮಾಡಿದ್ನೋ ಆಗ ಜೀವನ ಮತ್ತಷ್ಟು ಕಠಿಣವಾಯ್ತು. ನನ್ನ ಸಮಯವನ್ನು ಆತನಿಗೆ ಮೀಸಲಿಟ್ಟು ನನ್ನ ಜೀವನ ಹಾಳು ಮಾಡಿಕೊಂಡೆ ಎನ್ನುತ್ತಾಳೆ ಇನ್ನೊಬ್ಬಳು.
ಇಬ್ಬರು ಪತ್ನಿಯರನ್ನ ಒಟ್ಟಿಗೆ ಗರ್ಭಿಣಿ ಮಾಡಿ ಸುದ್ದಿಯಾಗಿದ್ದ ಅರ್ಮಾನ್ ಮಲಿಕ್ ಹೆಂಡತಿ ಮತ್ತೊಮ್ಮೆ ಗರ್ಭಿಣಿ!
ಆತನನ್ನು ಖುಷಿಪಡಿಸಲು ಹೋಗಿ ನಾನು ಮೂರ್ಖಳಾದೆ : ಪತಿ ಏನು ಬಯಸುತ್ತಿದ್ದಾನೆ ಎಂಬುದನ್ನು ತಿಳಿದುಕೊಂಡು ಸದಾ ಆತನನ್ನು ಖುಷಿಪಡಿಸಲು ನಾನು ಪ್ರಯತ್ನಿಸಿದೆ ಎನ್ನುತ್ತಾಳೆ ಮಹಿಳೆ. ಆದ್ರೆ ಐದು ವರ್ಷಗಳ ನಂತ್ರ ನಾನು ಮೂರ್ಖಳು ಎಂಬ ಸತ್ಯಗೊತ್ತಾಯ್ತು. ಸ್ವಾರ್ಥ ವ್ಯಕ್ತಿಯನ್ನು ಮೆಚ್ಚಿಸುವ ಪ್ರಯತ್ನ ನಾನು ಮಾಡಿದ್ದೆ. ಬಟ್ಟೆಯಿಂದ ಹಿಡಿದು ಸೆಂಟ್ ವರೆಗೆ ಎಲ್ಲವನ್ನೂ ಆತನಿಗೆ ಇಷ್ಟವಾಗಿದ್ದನ್ನು ಬಳಸಿದ್ದೆ. ಮದುವೆ ಉಳಿಸಿಕೊಳ್ಳಲು ನಾನು ಈ ಎಲ್ಲ ಪ್ರಯತ್ನ ನಡೆಸುತ್ತಿದ್ದರೂ ಇದು ವರ್ಕ್ ಔಟ್ ಆಗಲು ಸಾಧ್ಯವಿಲ್ಲವೆಂಬ ಸತ್ಯ ನನಗೆ ಗೊತ್ತಿತ್ತು ಎನ್ನುತ್ತಾಳೆ ಈಕೆ.