Asianet Suvarna News Asianet Suvarna News

ಬೋಲ್ಡ್ ಆಗಿ ತಂದೆಗೇ ಲಿಪ್‌ಲಾಕ್‌ ಮಾಡಿದ್ದ ಬಾಲಿವುಡ್ ನಟಿ; ಇದು ಕಾಮನ್‌, ತಪ್ಪೇನು ಅಂತಿದ್ದಾಳೆ!

ಬೋಲ್ಡ್‌ ಸೀನ್‌, ಲಿಪ್‌ಲಾಕ್‌, ನ್ಯೂಡ್ ಫೋಟೋಸ್, ಕಿಸ್ಸಿಂಗ್‌ ಸೀನ್‌, ರೋಮ್ಯಾನ್ಸ್ ಇದ್ಯಾವುದೂ ಬಾಲಿವುಡ್‌ನಲ್ಲಿ ಹೊಸ ವಿಚಾರವಲ್ಲ. ಆದ್ರೆ ವರ್ಷಗಳ ಹಿಂದೆ ನಿರ್ಮಾಪಕ ಮಹೇಶ್ ಭಟ್‌ ಹಾಗೂ ಅವರ ಮಗಳು ನಟಿ ಪೂಜಾ ಭಟ್‌ ಲಿಪ್‌ಲಾಕ್ ಮಾಡ್ಕೊಂಡಿರೋ ಫೋಟೋ ಸಖತ್‌ ವೈರಲ್ ಆಗಿತ್ತು. ಸದ್ಯ ಈ ಫೋಟೋದ ಬಗ್ಗೆ ಪೂಜಾ ಭಟ್ ಮೌನ ಮುರಿದಿದ್ದಾರೆ. ಅಪ್ಪನ ಜೊತೆ ಲಿಪ್‌ಲಾಕ್ ಮಾಡಿರೋದಕ್ಕೆ ಸ್ಪಷ್ಟನೆ ನೀಡಿದ್ದಾರೆ

Pooja Bhatt talks about her viral kissing picture with father Mahesh Bhatt Vin
Author
First Published Sep 12, 2023, 3:23 PM IST

ಬಾಲಿವುಡ್ ಸಿನಿಮಾರಂಗದಲ್ಲಿ ಒಂದು ಕಾಲದಲ್ಲಿ ಸಖತ್‌ ಹಾಟ್‌ ಮತ್ತು ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದ ನಟಿ ಪೂಜಾ ಭಟ್‌. ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ತಮ್ಮ ಗ್ಲಾಮರಸ್ ಲುಕ್‌ನಿಂದಲೇ ಪಡ್ಡೆ ಹುಡುಗರ ನಿದ್ದೆ ಕದ್ದ ಚೆಲುವೆ. 80ರ ದಶಕದಲ್ಲಿ ಬಾಲಿವುಡ್‌ ನಲ್ಲಿ ಬಿಕಿನಿ ಧರಿಸಿ ಮೈ ಮಾಟ ತೋರಿಸಿದ್ದ ಪೂಜಾ ಭಟ್, ನಿರ್ದೇಶಕ ಮಹೇಶ್‌ ಭಟ್‌ ಅವರ ಮಗಳು. ಈಗ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಆಲಿಯಾ ಭಟ್‌ ತಂಗಿ. ಪೂಜಾ ಭಟ್ ಅವರಿಗೆ 1989ರಲ್ಲಿ ಬಂದ 'ಡ್ಯಾಡಿ' 1991ರಲ್ಲಿ ತೆರೆಕಂಡ 'ದಿಲ್ ಹೈ ಕಿ ಮಾಂತಾ ನಹೀನ್' ಮತ್ತು 'ಸಡಕ್' ಸಿನಿಮಾಗಳ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು. ಈ ಎರಡೂ ಸಿನಿಮಾಗಳನ್ನು ಅವರ ತಂದೆಯೇ ನಿರ್ದೇಶನ ಮಾಡಿದ್ದರು. 

ಸಿನಿಮಾರಂಗದಲ್ಲಿ ಪೂಜಾ ಭಟ್‌ ಮಿಂಚುತ್ತಿದ್ದ ಸಮಯದಲ್ಲಿ ಅವರ ಒಂದು ಫೋಟೋ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಅದುವೇ ತಂದೆ ಮಹೇಶ್ ಬಟ್ ಜೊತೆ ಲಿಪ್‌ಲಾಕ್ ಮಾಡಿದ್ದ ಫೋಟೋ. ಇದು ಪ್ರಕಟವಾದದ್ದು ಸ್ಟಾರ್ಡಸ್ಟ್ ಮ್ಯಾಗಜಿನ್‌ನಲ್ಲಿ. ತಂದೆ-ಮಗಳಾಗಿರುವ ಪೂಜಾ ಭಟ್‌ (Pooja Bhatt)–ಮಹೇಶ್‌ ಭಟ್‌ ಪರಸ್ಪರ ಚುಂಬಿಸುವ (Kissing) ಫೋಟೋವನ್ನು ಮ್ಯಾಗ್‌ ಜಿನ್‌ ಗಾಗಿ ಶೂಟ್‌ ಮಾಡಲಾಗಿತ್ತು. ತಂದೆ ಮಹೇಶ್‌ ಭಟ್ ಮಡಿಲಿನ ಮೇಲೆ ಕೂತುಕೊಂಡು ಪೂಜಾ ಭಟ್‌ ಲಿಪ್‌ ಲಾಕ್‌ ಮಾಡಿರುವ ಫೋಟೋ ಮ್ಯಾಗಜಿನ್‌ ಮುಖಪುಟದಲ್ಲಿ ಹಾಕಲಾಗಿತ್ತು

ಆತ್ಮತೃಪ್ತಿಗಾಗಿ ಪುತ್ರಿ ಪೂಜಾ ದೇಹವನ್ನೇ ಬಳಸಿಕೊಂಡ್ರಾ ಮಹೇಶ್​ ಭಟ್​? ನಟಿ ಹೇಳಿದ್ದೇನು?

'ಮಗಳಲ್ಲದಿದ್ದರೆ ನಾನು ಅವಳನ್ನು ಮದುವೆಯಾಗುತ್ತಿದ್ದೆ' ಎಂದಿದ್ದ ಮಹೇಶ್ ಭಟ್‌
ಬಾಲಿವುಡ್‌ನಲ್ಲಿ ಕಿಸ್ಸಿಂಗ್‌, ಲಿಪ್‌ಲಾಕ್ ಎಲ್ಲವೂ ಆಗ ಸಾಮಾನ್ಯವಾಗಿದ್ದರೂ, ತಂದೆ-ಮಗಳು ಲಿಪ್‌ಲಾಕ್ ಮಾಡಿದ ವಿಚಾರ ಮಾತ್ರ ಎಲ್ಲೆಡೆ ವೈರಲ್ ಆಯಿತು. ಫೋಟೋಗೆ ಅನೇಕರಿಂದ ವಿರೋಧ ಸಹ ವ್ಯಕ್ತವಾಗಿತ್ತು. ತಂದೆ-ಮಗಳ ಅಶ್ಲೀಲ ವರ್ತನೆಯ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ನಿರ್ದೇಶಕ ಮಹೇಶ್‌ ಭಟ್‌ ಪ್ರತಿಕಾಗೋಷ್ಠಿ ನಡೆಸಿ ಇದಕ್ಕೆ ಸ್ಪಷ್ಟನೆ ನೀಡಲು ಮುಂದಾಗಿ, 'ಪೂಜಾ ನನ್ನ ಮಗಳಲ್ಲದಿದ್ದರೆ ನಾನು ಅವಳನ್ನು ಮದುವೆಯಾಗುತ್ತಿದ್ದೆ' ಎಂದು ಹೇಳಿದ್ದು ವಿವಾದವನ್ನು ಮತ್ತಷ್ಟು ಹೆಚ್ಚಿಸಿತ್ತು. 

ಇದೀಗ ಮಹೇಶ್​ ಭಟ್​ ಅವರ ಮಗಳು ಪೂಜಾ ಅವರಿಗೆ ಇದೇ ಪ್ರಶ್ನೆಯನ್ನು ಕೇಳಿ ಆ ವಿಷಯವನ್ನು ಕೆದಕಲಾಗಿದೆ. 1990ರಲ್ಲಿ ಈ ಕಿಸ್‌ ವಿವಾದ ನಡೆದಿತ್ತು. ಈ ಬಗ್ಗೆ ನಟಿ ಪೂಜಾ ಭಟ್‌ ಸಂದರ್ಶನವೊಂದರಲ್ಲಿ ಮತ್ತೆ ಮಾತನಾಡಿದ್ದಾರೆ. ತಂದೆಯೊಂದಿಗೆ ಲಿಪ್‌ ಲಾಕ್‌ ಮಾಡಿ ನೀವು ಪಶ್ಚಾತ್ತಾಪ ಪಟ್ಟಿದ್ದೀರಾ ಎಂದು ಸಂದರ್ಶನದಲ್ಲಿ ಕೇಳಲಾಗಿದೆ. ಇದಕ್ಕೆ ಪೂಜಾ ಭಟ್ ಉತ್ತರಿಸಿದ್ದಾರೆ.

ಪೂಜಾ ಭಟ್‌, ಮನೀಶ್‌ ಮಖಿಜಾ : ಪ್ರೀತಿಸಿ ಮದುವೆಯಾಗಿ ಬೇರೆಯಾಗಿದ್ದೇಕೆ

ತಂದೆಗೆ ಕಿಸ್ ಮಾಡಿದ್ದ ಸಾಮಾನ್ಯ ವಿಚಾರ, ಇದರಲ್ಲಿ ತಪ್ಪಿಲ್ಲ ಎಂದ ಪೂಜಾ ಭಟ್‌
'ತಂದೆಗೆ ಕಿಸ್ ಮಾಡಿರೋ ವಿಚಾರ ನನ್ನ ಪಾಲಿಗೆ ತುಂಬಾ ಸಾಮಾನ್ಯವಾಗಿದೆ. ಇದರಲ್ಲಿ ತಪ್ಪೇ ಇಲ್ಲ. ಈ ಪ್ರಕರಣವನ್ನು ಎಲ್ಲರೂ ತಪ್ಪಾಗಿ ತಿಳಿದುಕೊಳ್ಳಬಹುದು. ನನಗೆ ಈಗಲೂ ನೆನಪಿದೆ ಆಗ ಶಾರುಖ್‌ ಖಾನ್‌ ಅವರು ನನಗೆ ಹೇಳಿದ್ದರು. ನಿಮ್ಮ ಮಕ್ಕಳು ಸಣ್ಣದಿರುವಾಗ ನೀವು ಹೆಣ್ಣು ಮಕ್ಕಳನ್ನು ಹೊಂದಿರುವಾಗ ಮಗು ತುಂಬಾ ಬಾರಿ ಅಪ್ಪ- ಅಮ್ಮ ನನಗೊಂದು ಕಿಸ್‌ ಕೊಡಿ ಎಂದು ಹೇಳುತ್ತದೆ. ಆಗ ತಂದೆ - ತಾಯಿ ಈ ರೀತಿ ಮಾಡುತ್ತಾರೆ ಎಂದಿದ್ದರು. ನಾನು ಈಗಲೂ ನನ್ನ ತಂದೆಗೆ 10 ಪೌಂಡ್‌ ನ ಸಣ್ಣ ಮಗುವೇ ಆಗಿದ್ದೇನೆ. ನನಗೆ ಅವರು ಜೀವನವಿಡೀ ಹೀಗೆಯೇ ಇರುತ್ತಾರೆ; ಎಂದು ಹೇಳಿದ್ದಾರೆ.

'ಅದು ಸಂಪೂರ್ಣವಾಗಿ ಮುಗ್ಧವಾಗಿದ್ದ ಕ್ಷಣವಾಗಿತ್ತು. ಆದರೆ ಅದು ಒಬ್ಬೊಬ್ಬರ ಪಾಲಿಗೆ ಒಂದೊಂದು ರೀತಿಯಾಗಿದೆ. ನಾನಿಲ್ಲಿ ಅದನ್ನು ನಿವಾರಣೆ ಮಾಡಲು ಕೂತಿಲ್ಲ. ಜನ ಒಂದು ತಂದೆ - ಮಗಳ ಸಂಬಂಧವನ್ನು ಬೇರೆ ದೃಷ್ಟಿಯನ್ನು ನೋಡುತ್ತಾರೋ ಅವರು ಬೇರೇನನ್ನೂ ಮಾಡಬಲ್ಲರು ಎಂಬುದನ್ನಷ್ಟೇ ಹೇಳಬಲ್ಲೆ. ಇದೆಲ್ಲ ಹೇಳಿ ನಾವು ಕೌಟುಂಬಿಕ ಮೌಲ್ಯಗಳ ಬಗ್ಗೆ ಮಾತನಾಡುತ್ತೇವೆ. ಇದೊಂದು ರೀತಿಯ ತಮಾಷೆಯ ವಿಚಾರ' ಎಂದು ಪೂಜಾ ಭಟ್ ತಿಳಿಸಿದ್ದಾರೆ.

Follow Us:
Download App:
  • android
  • ios