ಜತೆಗಿದ್ದೂ ನಿಮ್ಮ ಯಶಸ್ಸನ್ನು ಸಹಿಸದ ಮಂದಿ ಹೇಗೆಲ್ಲ ವರ್ತಿಸುತ್ತಾರೆ! ಬೆನ್ನಿಗೆ ಚೂರಿಗೆ ಹಾಕೋರು ಇವರು!

By Suvarna News  |  First Published Sep 11, 2023, 5:49 PM IST

ಜತೆಗಿದ್ದರೂ ವೈರಿಗಳಂತೆ ವರ್ತಿಸುವ ಸ್ನೇಹಿತರಿರುತ್ತಾರೆ, ಸಹೋದ್ಯೋಗಿಗಳಿರುತ್ತಾರೆ. ಅವರಲ್ಲಿ ನಿಮ್ಮ ಬಗ್ಗೆ ಆಳದಲ್ಲಿ ಅತಿಯಾದ ಹೊಟ್ಟೆಕಿಚ್ಚಿರುತ್ತದೆ, ಹೀಗಾಗಿ ನಿಮ್ಮ ಯಶಸ್ಸನ್ನು ಸಹಿಸಿಕೊಳ್ಳುವುದು ಅವರಿಗೆ ಸಾಧ್ಯವಾಗುವುದಿಲ್ಲ. ಅಂಥವರು ನಿಜವಾಗಿಯೂ ನಮ್ಮ ವೈರಿಗಳೇ ಆಗಿರುತ್ತಾರೆ. ಅವರು ಇನ್ನೂ ಹಲವು ಗುಣಲಕ್ಷಣಗಳನ್ನು ಆಗಾಗ ಪ್ರದರ್ಶಿಸಬಹುದು.
 


ತಾನು ಹೆಚ್ಚು ಅಂಕ ಪಡೆದಾಗ ನಿಮ್ಮೊಂದಿಗೆ ಹೆಚ್ಚು ಸ್ನೇಹಪರಳಾಗಿ, ಖುಷಿಯಾಗಿದ್ದುಕೊಂಡು, ನೀವು ಹೆಚ್ಚು ಅಂಕ ಗಳಿಸಿದ ಸಮಯದಲ್ಲಿ ನಿಮ್ಮಿಂದ ದೂರದೂರವೇ ಇರುತ್ತಿದ್ದ ಬಾಲ್ಯಕಾಲದ ಗೆಳತಿ ನೆನಪಿನಲ್ಲಿ ಇರಬೇಕಲ್ಲವೇ? ಅವಳಂತೆಯೇ, ಈಗಲೂ ಕೆಲವು ಜನರಿರುತ್ತಾರೆ. ನಿಮ್ಮ ಗೆಳತಿಯಾದರೂ  ನಿಮ್ಮ ಯಶಸ್ಸನ್ನು ಕಂಡು ಹೊಟ್ಟೆಕಿಚ್ಚು ಪಟ್ಟಿದ್ದು ಬಾಲ್ಯದಲ್ಲಾಯಿತು. ಆದರೆ, ಬೆಳೆದು ವಯಸ್ಕರಾದ ಬಳಿಕವೂ ಸ್ನೇಹಿತರ ಯಶಸ್ಸನ್ನು ಸಹಿಸದ ಗುಣ ಕೆಲವರಲ್ಲಿರುತ್ತದೆ. ಅಂಥವರು ನಿಮ್ಮ ಸ್ನೇಹಬಳಗದಲ್ಲೂ ಇರಬಹುದು. ಅವರು ಮೇಲ್ನೋಟಕ್ಕೆ ನಿಮ್ಮ ಸ್ನೇಹಿತರಾಗಿದ್ದರೂ ಒಳಗಿನಿಂದ ವೈರಿಗಳೇ ಆಗಿರುತ್ತಾರೆ. ಅವರು ನಿಮಗೆ ಗೊತ್ತಾಗುವಂತೆ ಹೊಟ್ಟೆಕಿಚ್ಚು ಪಡುವುದಿಲ್ಲ. ಆದರೆ, ನಿಮ್ಮ ಯಶಸ್ಸನ್ನು ಸಹಿಸಿಕೊಳ್ಳುವುದು ಅವರಿಗೆ ಸಾಧ್ಯವಾಗುವುದಿಲ್ಲ. ಅವರು ನಿಮ್ಮ ಯಶಸ್ಸಿಗೆ ಕೊಡುಗೆ ನೀಡುವುದಿರಲಿ, ಯಶಸ್ಸು ಗಳಿಸಿದರೆ ನಿಮ್ಮನ್ನು ವೈರಿಗಳಂತೆ ಕಾಣುತ್ತಾರೆ. ವೈರಿಗಳೆಂದರೆ, ಯಾವಾಗಲೂ ಮೇಲ್ನೋಟಕ್ಕೆ ಗೊತ್ತಾಗಬೇಕೆಂದಿಲ್ಲ. ಜತೆಯಲ್ಲಿದ್ದುಕೊಂಡೇ ನಿಮ್ಮ ಯಶಸ್ಸನ್ನು ಸಹಿಸದಿರುವ ಮನೋಭಾವವೂ ವೈರಿಗಳದ್ದೇ ಆಗಿರುತ್ತದೆ. ಅಂಥವರು ಕೆಲವು ಗುಣಲಕ್ಷಣಗಳನ್ನು ವ್ಯಕ್ತಪಡಿಸುತ್ತಾರೆ. ಗುರುತಿಸಿಕೊಂಡು ಹುಷಾರಾಗಿರಿ.

•    ಅವರ ಯಶಸ್ಸಿನಲ್ಲಿ (Success) ಮಾತ್ರ ನಿಮ್ಮ ಸ್ನೇಹ (Friendship)
ಕಚೇರಿಯಲ್ಲಾಗಲೀ, ಸ್ನೇಹ ಬಳಗದಲ್ಲಾಗಲೀ ಕೆಲವು ಜನರಿರುತ್ತಾರೆ. ಅವರು ತಾವು ಖುಷಿ (Happy) ಯಾಗಿದ್ದಾಗ ಅಥವಾ ಯಶಸ್ಸು ಪಡೆದ ಸಮಯದಲ್ಲಿ ಮಾತ್ರ ನಿಮ್ಮೊಂದಿಗೆ ಚೆನ್ನಾಗಿರುತ್ತಾರೆ. ಅಂತಹ ಸಮಯದಲ್ಲಿ ಅವರಷ್ಟು ಉದಾರತೆ (Generous) ಯಾರಲ್ಲೂ ಇರುವುದಿಲ್ಲ. ಆದರೆ, ಒಂದೊಮ್ಮೆ ನೀವು ಯಶಸ್ಸು ಪಡೆದಿರೋ ಅವರು ನಿಮ್ಮಿಂದ ಇದ್ದಕ್ಕಿದ್ದ ಹಾಗೆ ದೂರವಾಗಬಿಡುತ್ತಾರೆ. ಎಲ್ಲಿ ಹೋದರೆಂದೇ ತಿಳಿಯುವುದಿಲ್ಲ. ನಿಮ್ಮನ್ನು ವೈರಿಗಳಂತೆ (Envy) ಕಾಣುತ್ತಾರೆ. ಅಸಲಿಗೆ, ನಿಮ್ಮನ್ನು ಸದಾಕಾಲ ಕೆಳಮಟ್ಟದಲ್ಲಿ (Lesser) ಕಂಡಾಗ ಮಾತ್ರ ಅವರು ಖುಷಿಯಾಗಿರುತ್ತಾರೆ. 

Tap to resize

Latest Videos

Relationship Tips: ಅಪ್ಪಿತಪ್ಪಿಯೂ ಪತ್ನಿಗೆ ಈ ವಸ್ತುಗಳನ್ನು ಗಿಫ್ಟ್ ಕೊಡಲೇಬೇಡಿ!

•    ನಿಮ್ಮೊಂದಿಗೆ ಸ್ಪರ್ಧೆ (Compete)
ಕೆಲ ಸ್ನೇಹಿತರನ್ನು ನೋಡಿ, ನಿಮ್ಮೊಂದಿಗೆ ಸ್ಪರ್ಧೆಗೆ ಬಿದ್ದವರಂತೆ ಮಾಡುತ್ತಾರೆ. ಸದಾಕಾಲ ಅವರು ಆ ಮೂಡಿನಲ್ಲೇ ಇರುತ್ತಾರೆ. ಆರೋಗ್ಯಕರ (Healthy) ಸ್ಪರ್ಧೆ ಇದ್ದರೆ ಪರಸ್ಪರ ಉತ್ತೇಜನವೂ ಇರುತ್ತದೆ. ಇದು ವ್ಯಕ್ತಿತ್ವ ವಿಕಾಸಕ್ಕೆ (Personality Development) ಉತ್ತಮ. ಆದರೆ, ನೀವು ಮಾಡಿದ್ದೆಲ್ಲವನ್ನೂ ತಾನೂ ಮಾಡಬೇಕು ಅಥವಾ ನಿಮಗಿಂತ ಹೆಚ್ಚಿನದನ್ನು ಮಾಡಬೇಕು ಎನ್ನುವ ಕೆಟ್ಟ ಪ್ರಯತ್ನ ಸರಿಯಲ್ಲ. ಇಲ್ಲಿ ಸೌಹಾರ್ದತೆ ಇರುವುದಿಲ್ಲ. 

•    ನಿಮ್ಮ ಹಾದಿಯಲ್ಲೇ (Path) ಸಾಗುವ ಯತ್ನ
ಯಾರನ್ನಾದರೂ ಅನುಸರಿಸುತ್ತಾರೆ ಎಂದರೆ ಅಲ್ಲಿ ಒಂದೋ ಸ್ಫೂರ್ತಿ ಇರಬೇಕು ಇಲ್ಲವೇ ಸ್ಪರ್ಧೆ (Competition) ಇರಬೇಕು. ಸ್ಪರ್ಧೆ ಇರುವಾಗ ಸಹಜವಾಗಿ ಹೊಟ್ಟೆಕಿಚ್ಚೂ ಇರುತ್ತದೆ. ನಿಮ್ಮ ಸ್ನೇಹಿತರು ಯಾರಾದರೂ ನಿಮ್ಮನ್ನು ಅನುಸರಿಸುವಂತೆ ಕಂಡುಬಂದರೆ ಅವರು ನಿಮ್ಮ ಬಗ್ಗೆ ಸಾಕಷ್ಟು ಈರ್ಷ್ಯೆ ಹೊಂದಿದ್ದಾರೆ ಎಂದರ್ಥ. ನಿಮ್ಮ ಯಶಸ್ಸಿನ ಮಾರ್ಗವನ್ನು ಅನುಸರಿಸಲು ಹೊರಡುವುದು ವೈರತನದ ಭಾವ ಹೆಚ್ಚಿಸುತ್ತದೆ.

•    ನಿಮ್ಮ ಸಾಧನೆ ಏನೂ ಅಲ್ಲ
ಕೆಲವರು ನಿಮ್ಮ ಸಾಧನೆಯನ್ನು ಮೆಚ್ಚಿಕೊಳ್ಳುವ ಮಾತಿರಲಿ, ಅದನ್ನು ಕಡೆಗಣಿಸುತ್ತಾರೆ. ಚಿಕ್ಕ ಯಶಸ್ಸಾಗಲಿ, ದೊಡ್ಡದೇ ಆಗಲಿ. ನೀವು ಯಶಸ್ಸು ಗಳಿಸಿದ್ದೀರಿ ಎನ್ನುವುದನ್ನು ಮುಕ್ತ ಮನದಿಂದ (Open Mind) ಒಪ್ಪಿಕೊಳ್ಳುವುದಿಲ್ಲ. ನಿಮ್ಮ ಸಾಧನೆಯನ್ನು ಹೇಗಾದರೂ ಅವಮಾನಿಸುವಂತೆ, ಕಡೆಗಣಿಸುವಂತೆ ವರ್ತಿಸುತ್ತಾರೆ. ಈ ಧೋರಣೆಯಂತೂ ಹೊಟ್ಟೆಕಿಚ್ಚು, ವೈರತ್ವದ ಭಾವನೆಯನ್ನು ಚೆನ್ನಾಗಿ ತೋರ್ಪಡಿಸುತ್ತದೆ. 

ಚಾಣಕ್ಯ ಹೇಳ್ತಾನೆ ಕೇಳಿ, ಗಂಡ ತನ್ನ ಹೆಂಡ್ತಿಯಿಂದ ಈ ನಾಲ್ಕು ವಿಷ್ಯ ಮುಚ್ಚಿಟ್ರೇನೆ ಉತ್ತಮ!

•    ನಿಮ್ಮ ಬಗ್ಗೆ ನೆಗೆಟಿವ್ (Negative) ಹೇಳಿಕೆ
ಎಲ್ಲರೂ ನಿಮ್ಮನ್ನು ಗೌರವಿಸುತ್ತಿದ್ದರೂ ಅವರು ಮಾತ್ರ ನಿಮ್ಮ ಬಗ್ಗೆ ನೆಗೆಟಿವ್ ಕಮೆಂಟ್ ಮಾಡುತ್ತಲೇ ಇರುತ್ತಾರೆ. ನಿಮ್ಮ ಸ್ನೇಹಿತರಾಗಿದ್ದುಕೊಂಡು, ನಿಮ್ಮ ಶಕ್ತಿ-ಸಾಮರ್ಥ್ಯದ ಬಗ್ಗೆ ಅರಿವು ಹೊಂದಿರುವುದರಿಂದ ನಿಮ್ಮ ದೌರ್ಬಲ್ಯಗಳ (Weakness) ಬಗ್ಗೆ ಹೇಳುತ್ತಾರೆ. ಟೀಕೆ ಮಾಡುತ್ತಾರೆ. ಈ ಮೂಲಕ ನಿಮ್ಮನ್ನು ನಿಯಂತ್ರಿಸುವ ಕೆಟ್ಟ ಬುದ್ಧಿ ತೋರುತ್ತಾರೆ. ಯಾರಾದರೂ ನಿಮ್ಮನ್ನು ಕಾರಣವಿಲ್ಲದೆ ಅತಿಯಾಗಿ ಟೀಕೆ (Criticise) ಮಾಡುತ್ತಿದ್ದರೆ, ಅವರಿಗೆ ನಿಮ್ಮ ಯಶಸ್ಸನ್ನು ಸಹಿಸಿಕೊಳ್ಳುವುದು ಅಸಾಧ್ಯವಾಗಿದೆ ಎಂದೇ ಅರ್ಥ.

click me!