ದಿನಾ ಬೀಯರ್ ಬೇಕಂತಾಳೆ ಹೆಂಡ್ತಿ, ಸದ್ಯ ನಿನ್ ರಕ್ತ ಕೇಳ್ತಿಲ್ಲವಲ್ಲ ಅನ್ನೋದಾ ಅತ್ತೆ?

By Suvarna News  |  First Published Sep 7, 2023, 1:31 PM IST

ಕುಡಿತ ಮನೆ ಹಾಳು ಮಾಡುತ್ತೆ. ಅದ್ರಲ್ಲೂ ಮನೆ ಹೆಂಗಸು ಈ ಚಟಕ್ಕೆ ಬಿದ್ರೆ ಕುಟುಂಬ ಬೀದಿಗೆ ಬರೋದು ನಿಶ್ಚಿತ. ಕೈನಲ್ಲಿ ಕಾಸಿಲ್ಲದೆ, ಪತ್ನಿ ಹೊಡೆತ ತಾಳಲಾರದೆ ವ್ಯಕ್ತಿಯೊಬ್ಬ ಪೊಲೀಸ್ ಮೊರೆ ಹೋಗಿದ್ದಾನೆ. ಅದರ ವಿವರ ಇಲ್ಲಿದೆ.
 


ಗಂಡ – ಹೆಂಡತಿ ಜಗಳ ಸಾಮಾನ್ಯ. ಸಣ್ಣಪುಟ್ಟ ಗಲಾಟೆ ಆಗಾಗ ನಡೆದ್ರೆ ಇಬ್ಬರ ಮಧ್ಯೆ ಬಾಂಧವ್ಯ ಹೆಚ್ಚಾಗುತ್ತದೆ ಎನ್ನುವ ಮಾತಿದೆ. ಆದ್ರೆ ಜಗಳ ಅತಿಯಾದ್ರೆ ವಿಚ್ಛೇದನ ಪಡೆಯುವ ಸ್ಥಿತಿ ನಿರ್ಮಾಣವಾಗುತ್ತದೆ. ಪತಿ ಕುಡಿತದ ಚಟಕ್ಕೆ ಬಿದ್ದಿದ್ದಾನೆ, ಇದ್ರಿಂದ ಮನೆ ಪರಿಸ್ಥಿತಿ ಹದಗೆಟ್ಟಿದೆ ಎನ್ನುವ ನೋವಿನ ಮಾತುಗಳನ್ನು ಮಹಿಳೆಯರು ಆಡ್ತಿರುತ್ತಾರೆ. ಕೆಲ ಪುರುಷರು ಕುಡಿತಕ್ಕೆ ಮನೆ, ಬಂಗಾರ ಎಲ್ಲವನ್ನೂ ಮಾರಿದ್ರೆ ಮತ್ತೆ ಕೆಲವರು ಕುಡಿದು ಬಂದ ಪತ್ನಿಗೆ ಮನ ಬಂದಂತೆ ಥಳಿಸುತ್ತಾರೆ. ಕುಡಿತ ಸಂಸಾರವನ್ನು ಬೀದಿಗೆ ತರುತ್ತದೆ ಎನ್ನುವ ಕಾರಣಕ್ಕೆ ಅನೇಕ ಜಾಗೃತಿ ಕಾರ್ಯಕ್ರಮಗಳು ಹಳ್ಳಿ ಹಳ್ಳಿಯಲ್ಲಿ ನಡೆಯುತ್ತವೆ. ಈಗಿನ ದಿನಗಳಲ್ಲಿ ಪುರುಷರ ಸಮಾನವಾಗಿ ಮಹಿಳೆಯರು ಮದ್ಯಪಾನ ಮಾಡ್ತಿದ್ದಾರೆ. ನಗರ ಪ್ರದೇಶದಲ್ಲಿ ಪಾರ್ಟಿ ಹೆಸರಿನಲ್ಲಿ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಸುದ್ದಿಯೊಂದು ಹೊರಬಿದ್ದಿದೆ. ಇಲ್ಲಿ ಪತಿ ಕುಡಿತಕ್ಕೆ ಪತ್ನಿ ಬೇಸತ್ತಿಲ್ಲ, ಪತ್ನಿ ಜಗಳಕ್ಕೆ ಪತಿ ಬೇಸತ್ತಿದ್ದಾನೆ. ಆತ ತನ್ನ ನೋವನ್ನು ತೋಡಿಕೊಂಡಿದ್ದಲ್ಲದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಅಷ್ಟಕ್ಕೂ ಪತ್ನಿ ಪತಿಗೆ ನೀಡ್ತಿರುವ ಕಿರಕುಳವೇನು ಎಂಬುದನ್ನು ನಾವಿಂದು ಹೇಳ್ತೇವೆ.

ಪ್ರತಿ ರಾತ್ರಿ (Night) ಬಿಯರ್ ಕೇಳ್ತಾಳೆ ಪತ್ನಿ : ಘಟನೆ ಉತ್ತರ ಪ್ರದೇಶದ ಮೈನ್‌ಪುರಿ (Mainpuri) ಯಲ್ಲಿ ನಡೆದಿದೆ. ಬಂಜಾರ ಸಮುದಾಯದ ವ್ಯಕ್ತಿ ತನ್ನ ಪತ್ನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪತ್ನಿ ಪ್ರತಿ ದಿನ ಬಿಯರ್ (Beer) ಕೇಳ್ತಾಳೆಂದು ವ್ಯಕ್ತಿ ಹೇಳಿದ್ದಾನೆ. ಮದುವೆಯಾದ ಒಂದು ದಿನ ರಾತ್ರಿ ಬಿಯರ್ ತಂದುಕೊಡುವಂತೆ ಪತ್ನಿ ಕೇಳಿದ್ದಳು. ಇದಕ್ಕೆ ಪತಿ ಒಪ್ಪಿದ್ದ. ಪತ್ನಿಗೆ ಇಷ್ಟವೆಂದು ಬಿಯರ್ ತಂದುಕೊಟ್ಟಿದ್ದ. ಆದ್ರೆ ಅಲ್ಲಿಂದ ಪ್ರತಿ ದಿನದ ಚಿತ್ರಣವೇ ಬದಲಾಯ್ತು. ಪತ್ನಿ ಪ್ರತಿ ದಿನ ಬಿಯರ್ ಕೇಳ್ತಿದ್ದಾಳೆ. ಪತ್ನಿ ಈ ಚಟದಿಂದ ಪತಿ ಬಡವಾಗಿದ್ದಾನೆ. ಕೈನಲ್ಲಿ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅಗತ್ಯ ವಸ್ತುಗಳ ಖರೀದಿ ಕಷ್ಟವಾಗಿದೆ. ಪತ್ನಿ ಬಿಯರ್ ಗೆ ಖರ್ಚು ಮಾಡ್ತಿರುವ ಹಣ ನೋಡಿ ಕಂಗಾಲಾದ ಪತಿ, ಬಿಯರ್ ತಂದುಕೊಡಲು ನಿರಾಕರಿಸಿದ್ದಾನೆ. ಆದ್ರೆ ಪತ್ನಿ ಅದಕ್ಕೆ ಒಪ್ಪುತ್ತಿಲ್ಲ.

Tap to resize

Latest Videos

ಮದ್ವೆಗೆ ರೆಡಿಯಾಗಿದ್ದಾರೆ ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ: ಆದ್ರೆ... ನಟಿ ಹೇಳಿದ್ದೇನು?

ಪತಿಗೆ ಬೀಳುತ್ತೆ ಒದೆ : ಪತಿ ಒಂದು ದಿನ ಬಿಯರ್ ತಂದುಕೊಟ್ಟಿಲ್ಲವೆಂದ್ರೂ ಪತಿಗೆ ಒದೆ ಬೀಳುತ್ತೆ. ಕೋಪಗೊಳ್ಳುವ ಪತ್ನಿ ಮನೆಯನ್ನು ರಣರಂಗ ಮಾಡ್ತಾಳೆ. ಕಂಡ ಕಂಡ ವಸ್ತುವಿನಲ್ಲಿ ಪತಿಗೆ ಹೊಡೆಯುತ್ತಾಳೆ. ಕೊಡಲಿಯಿಂದ ಒಂದೆರಡು ಬಾರಿ ಹಾಗೂ ಕಬ್ಬಿಣದ ರಾಡ್ ನಿಂದ ಒಂದೆರಡು ಬಾರಿ ಹಲ್ಲೆ ನಡೆಸಿದ್ದಾಳೆ ಪತ್ನಿ.

ದಬ್ಬಿಬ್ಬಾಗಿಸಿದೆ ಪತ್ನಿ ಅಮ್ಮನ ಉತ್ತರ : ಪತ್ನಿ ಕುಡಿತದ ಚಟದಿಂದ ಬೇಸತ್ತ ಪತಿ, ಆಕೆ ಕುಟುಂಬಸ್ಥರಿಗೆ ದೂರು ನೀಡಿದ್ದಾನೆ. ಆದ್ರೆ ಕುಟುಂಬಸ್ಥರ ಕಡೆಯಿಂದ ಬಂದ ಉತ್ತರ ಆತನನ್ನು ತಬ್ಬಿಬ್ಬಾಗಿಸಿದೆ. ಪತ್ನಿಗೆ ಮದ್ಯ ತಂದುಕೊಡಲು ಆಗಲ್ಲ ಅಂದ್ರೆ ನೀನ್ಯಾಕೆ ಮದುವೆಯಾದೆ ಎಂದು ಪತ್ನಿಯ ಅಮ್ಮ ಪ್ರಶ್ನೆ ಮಾಡಿದ್ದಾಳಂತೆ. ಆಕೆ ಮದ್ಯಪಾನ ಮಾಡ್ತಿದ್ದಾಳೆಯೇ ವಿನಃ ರಕ್ತವನ್ನು ಕುಡಿಯುತ್ತಿಲ್ಲವಲ್ಲ ಎಂದು ಅತ್ತೆ ಧಮಕಿ ಹಾಕಿದ್ದಾಳಂತೆ. ಇದ್ರಿಂದ ಪತಿ ಮತ್ತಷ್ಟು ಬೇಸರಗೊಂಡಿದ್ದಾನೆ.

ದಾಂಪತ್ಯದಲ್ಲಿ ಹೀಗಾಗುತ್ತಿದೆ ಎಂದಾಗ ಎಚ್ಚೆತ್ತುಕೊಳ್ಳಿ, ಎಲ್ಲವೂ ಸರಿ ಇಲ್ಲದಾಗ ಸರಿ ಮಾಡ್ಕೊಳ್ಳಿ!

ಪೊಲೀಸ್ ಠಾಣೆಯಲ್ಲಿ ರಕ್ಷಣೆಕೋರಿದ ಪತಿ : ಪೊಲೀಸ್ ಠಾಣೆಯಲ್ಲಿ ಪತಿ ರಕ್ಷಣೆ ಕೋರಿದ್ದಾನೆ. ಪತ್ನಿ ನನ್ನ ಮೇಲೆ ಹಲ್ಲೆ ನಡೆಸುವ ಕಾರಣ ನನ್ನ ಮನೆ ಮುಂದೆ ಒಬ್ಬ ಪೊಲೀಸರನ್ನು ನೇಮಿಸಬೇಕು. ಇಲ್ಲವೆ ಪತ್ನಿಯ ಮದ್ಯ ಚಟವನ್ನು ಬಿಡಿಸಬೇಕು ಎಂದು ಪೊಲೀಸರಿಗೆ ಪತಿ ಮನವಿ ಸಲ್ಲಿಸಿದ್ದಾನೆ. 
 

click me!