ಮಹಿಳೆಯರ ಮನಸ್ಸು ಕದಿಯೋದು ಅಷ್ಟು ಸುಲಭವಲ್ಲ. ಎಲ್ಲ ವ್ಯಕ್ತಿಗಳನ್ನು ಮಹಿಳೆಯರು ಇಷ್ಟಪಡೋದಿಲ್ಲ. ಪುರುಷರ ಕೆಲ ಸ್ವಭಾವ ಅವರಿಗೆ ಇಷ್ಟವಾಗೋದಿಲ್ಲ. ಹುಡುಗ್ರ ಯಾವ ಹವ್ಯಾಸ ಮಹಿಳೆಯರಿಗೆ ಹಿಡಿಸೋದಿಲ್ಲ ಎನ್ನೋದನ್ನು ನಾವು ಹೇಳ್ತೇವೆ.
ಪ್ರೀತಿಸುವ ವ್ಯಕ್ತಿ ಹೇಗಿದ್ದಾರೋ ಹಾಗೆ ಅವರನ್ನು ಸ್ವೀಕಾರ ಮಾಡುವುದು ಬಹಳ ಮುಖ್ಯ. ಸಂಗಾತಿಯ ಎಲ್ಲ ಅಭ್ಯಾಸಗಳು ಇನ್ನೊಬ್ಬ ಸಂಗಾತಿಗೆ ಇಷ್ಟವಾಗ್ಬೇಕು ಎಂದೇನಿಲ್ಲ. ಹಾಗೆಯೇ ಅವರ ಅಭ್ಯಾಸ ತೊಂದರೆ ಎಂದು ಭಾವಿಸಬೇಕಾಗಿಲ್ಲ. ಪ್ರತಿಯೊಬ್ಬರ ಆಸೆ, ಹವ್ಯಾಸ, ಹುಟ್ಟಿ ಬೆಳೆದ ಪರಿಸರದಲ್ಲಿ ಬದಲಾವಣೆಯಿರುತ್ತದೆ. ಹಾಗಾಗಿ ಇಬ್ಬರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಅವರ ಸ್ವಭಾವಕ್ಕೆ ತಕ್ಕಂತೆ ಅವರನ್ನು ಸ್ವೀಕಾರ ಮಾಡುವುದು ಮುಖ್ಯವಾಗುತ್ತದೆ. ಆದ್ರೆ ಅನೇಕ ಬಾರಿ ಸಂಗಾತಿಯ ಕೆಲ ಅಭ್ಯಾಸಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಅವರ ಸ್ವಭಾವ ಕಿರಿಕಿರಿ ಎನ್ನಿಸಲು ಶುರುವಾಗುತ್ತದೆ. ಆಗ ಅವರ ಜೊತೆ ವಾಸ ಮುಂದುವರೆಸುವುದು ಶಿಕ್ಷೆಯಂತಾಗುತ್ತದೆ. ಇಂಥ ಸಂದರ್ಭದಲ್ಲಿ ಸಂಬಂಧ ಉಳಿಸಿಕೊಳ್ಳಲು, ಅಭ್ಯಾಸ, ಹವ್ಯಾಸದಲ್ಲಿ ಬದಲಾವಣೆ ಮಾಡುವುದು ಅನಿವಾರ್ಯವಾಗುತ್ತದೆ. ಇಂದು ನಾವು ಮಹಿಳೆಯರು ಪುರುಷರ ಯಾವ ಹವ್ಯಾಸ ಇಷ್ಟಪಡೋದಿಲ್ಲ ಎಂಬುದನ್ನು ಹೇಳ್ತೇವೆ. ನಿಮಗೂ ಈ ಹವ್ಯಾಸವಿದ್ರೆ ನಿಮ್ಮ ಸಂಗಾತಿಗಾಗಿ ಇಂದೇ ಅದನ್ನು ಬಿಟ್ಬಿಡಿ.
ಮಹಿಳೆ (Woman) ಯರಿಗೆ ಇಷ್ಟವಾಗಲ್ಲ ಪುರುಷ (Male) ರ ಈ ಸ್ವಭಾವ :
ಮಹಿಳೆಯರಿಗೆ ಸ್ಪಂದಿಸದ ಸಂಗಾತಿ : ಮಹಿಳೆಯರು ಪ್ರೀತಿ (Love ) ಬಯಸ್ತಾರೆ. ಅದ್ರ ಜೊತೆ ತಮ್ಮ ಭಾವನೆಗೆ ಬೆಲೆ ಕೊಡುವ ವ್ಯಕ್ತಿಯನ್ನು ಇಷ್ಟಪಡ್ತಾರೆ. ಆದ್ರೆ ಮಹಿಳೆಯರಿಗೆ ಸ್ಪಂದಿಸದ ವ್ಯಕ್ತಿ ಅವರಿಗೆ ಇಷ್ಟವಾಗುವುದಿಲ್ಲ. ಅನೇಕ ಬಾರಿ ಪುರುಷರು ಪ್ರಾಬಲ್ಯ ಮೆರೆಯಲು ಪ್ರಯತ್ನ ನಡೆಸ್ತಾರೆ. ಯಾವುದೇ ಕೆಲಸವಿರಲಿ, ಮಹಿಳೆಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿವುದಿಲ್ಲ. ಅವರನ್ನು ಗದರಿಸ್ತಾರೆ. ಅಂಥ ಪುರುಷರನ್ನು ಮಹಿಳೆಯರು ದೂರ ಇಡುತ್ತಾರೆ. ಇಂಥ ಸ್ವಭಾವದ ಪತಿ ಜೊತೆ ಸಂಬಂಧ ಚೆನ್ನಾಗಿರಲು ಸಾಧ್ಯವಿಲ್ಲ.
ಕೊಳಕಿನ ಪುರುಷ : ಅನೇಕ ಪುರುಷರು ಎಲ್ಲದಕ್ಕೂ ಇತರರ ಮೇಲೆ ಅವಲಂಬಿತರಾಗಿರುತ್ತಾರೆ. ಅವರಿಗೆ ಸ್ವಚ್ಛತೆಯ ಬಗ್ಗೆ ಆಸಕ್ತಿ ಇರುವುದಿಲ್ಲ. ಸದಾ ಕೊಳಕಿನಲ್ಲಿರ್ತಾರೆ. ಅವರಿಗೆ ತಮ್ಮ ಹಾಗೂ ಸುತ್ತಮುತ್ತಲಿನ ಸ್ವಚ್ಛತೆ (Clean) ಬಗ್ಗೆ ಆಸಕ್ತಿ ಇರೋದಿಲ್ಲ. ಕೊಳಕಾದ ಬಟ್ಟೆ (Clothes) ಧರಿಸುವ ಜೊತೆಗೆ ಮನೆ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿಟ್ಟುಕೊಂಡಿರ್ತಾರೆ. ಮಹಿಳೆಯರು ಅಂತಹ ಪುರುಷರನ್ನು ಇಷ್ಟಪಡುವುದಿಲ್ಲ. ಸ್ವಚ್ಛತೆ ವಿಷ್ಯಕ್ಕೆ ಪುರುಷರ ಜೊತೆ ಅವರು ಆಗಾಗ್ಗೆ ಜಗಳವಾಡುತ್ತಾರೆ. ಇದೇ ಜಗಳ ಸಂಬಂಧ ಮುರಿಯಲು ಕಾರಣವಾಗುತ್ತದೆ.
ಫ್ಲರ್ಟ್ (Flirt) ಮಾಡುವು ಹುಡುಗ್ರು : ಸಂಬಂಧದಲ್ಲಿದ್ದರೂ ಇತರ ಹುಡುಗಿಯರೊಂದಿಗೆ ಫ್ಲರ್ಟ್ ಮಾಡುವ ಅವಕಾಶ ಸಿಗ್ತಿದ್ದಂತೆ ಓಡುವ ಹುಡುಗರನ್ನು ಮಹಿಳೆಯರು ಇಷ್ಟಪಡುವುದಿಲ್ಲ. ಸಂಬಂಧದಲ್ಲಿ ಹುಡುಗ್ರು ಗಂಭೀರವಾಗಿಲ್ಲವೆಂದು ಅವರು ಭಾವಿಸ್ತಾರೆ. ಸಂಗಾತಿ ಮೇಲೆ ಸಂಶಯಪಡಲು ಮಹಿಳೆಯರು ಶುರು ಮಾಡ್ತಾರೆ. ಪುರುಷರ ಫ್ಲರ್ಟಿಂಗ್ ಅಭ್ಯಾಸ ಮಹಿಳೆಯರಲ್ಲಿ ಅಭದ್ರತೆಯ ಭಾವನೆ ಮೂಡಿಸುತ್ತದೆ.
ಇದನ್ನೂ ಓದಿ: Sexual Health: ಸಂಗಾತಿ ಜೊತೆ ಸಂಭೋಗದ ವೇಳೆ ಶಿಶ್ನ ಮುರಿತ, ವಿಚಿತ್ರ ನಡೆಯಲು ಇದೇ ಕಾರಣ
ಸಂಗಾತಿ ಸ್ನೇಹಿತರ ಜೊತೆ ವರ್ತನೆ : ಕೆಲವು ಪುರುಷರು ತಮ್ಮ ಹೆಂಡತಿ ಅಥವಾ ಸ್ನೇಹಿತೆಯ ಸ್ನೇಹಿತರ ಜೊತೆ ಆರಾಮದಾಯಕವಾಗಿರಲುವುದಿಲ್ಲ. ಅವರ ಜೊತೆ ಹೆಚ್ಚು ಬೆರೆಯುವುದಿಲ್ಲ. ಸಂಗಾತಿ ಸ್ನೇಹಿತರನ್ನು ಮಾತನಾಡಿಸುವುದಿಲ್ಲ. ಆದ್ರೆ ಅವರ ಈ ನಡವಳಿಕೆಯು ಅವರ ಸಂಗಾತಿ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಅವರಿಗೆ ತಿಳಿಯೋದಿಲ್ಲ. ಸ್ನೇಹಿತರನ್ನು ನಿರ್ಲಕ್ಷ್ಯ ಮಾಡುವ ಸಂಗಾತಿ ಮಹಿಳೆಯರಿಗೆ ಇಷ್ಟವಾಗುವುದಿಲ್ಲ. ಅವರು ಸಂಗಾತಿ ಈ ವರ್ತನೆಯನ್ನು ದ್ವೇಷಿಸ್ತಾರೆ.
ಇದನ್ನೂ ಓದಿ: ಸಂಗಾತಿಯೊಂದಿಗೆ ಮಲಗುವುದರಿಂದ ಆರೋಗ್ಯಕ್ಕಿದೆ ಹಲವು ಲಾಭ!
ಸುಳ್ಳು ಹೇಳುವ ಸಂಗಾತಿ : ಕೆಲವು ಪುರುಷರು ಮಾತಾಡಿದ್ರೆ ಸುಳ್ಳು. ಸಣ್ಣ ಸಣ್ಣ ವಿಷ್ಯಕ್ಕೂ ಸಂಗಾತಿ ಮುಂದೆ ಸುಳ್ಳು ಹೇಳ್ತಾರೆ. ಇದ್ರಿಂದ ಸಂಗಾತಿಯ ನಂಬಿಕೆಗೆ ಧಕ್ಕೆಯುಂಟಾಗುತ್ತದೆ. ಇಬ್ಬರ ಮಧ್ಯೆ ಪಾರದರ್ಶಕತೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಸದಾ ಸುಳ್ಳು ಹೇಳುವ ವ್ಯಕ್ತಿಯನ್ನು ಮಹಿಳೆಯರು ಇಷ್ಟಪಡುವುದಿಲ್ಲ. ಆತನ ಪ್ರತಿ ಮಾತನ್ನು ಸಂಶಯದಿಂದ ನೋಡಲು ಶುರು ಮಾಡ್ತಾರೆ.