Latest Videos

ಅಪ್ಪ-ಮಗಳಂತಿರೋ ಜೋಡಿ: ಪತಿಗೆ ಐ ಲವ್‌ ಯು ಜಾನು ಎಂದಿದ್ದೇ ತಪ್ಪಾಯ್ತು..ನೆಟ್ಟಿಗರ ಕಣ್ಣೇಕೆ ಕೆಂಪಾಯ್ತು?

By Roopa HegdeFirst Published May 22, 2024, 5:05 PM IST
Highlights

ನೆಟ್ಟಿಗರು ಯಾವಾಗ ಹೆಂಗಿರ್ತಾರೆ ಹೇಳೋದು ಕಷ್ಟ. ಪತಿ ಜೊತೆ ವಿಡಿಯೋ ಹಾಕಿದ್ರೂ ಕೆಲವರಿಗೆ ಸಹಿಸೋಕೆ ಸಾಧ್ಯವಾಗಲ್ಲ. ಈ ಮಹಿಳೆ ಪತಿ ಜೊತೆ ವಿಡಿಯೋ ಮಾಡಿ, ಐ ಲವ್ ಯು ಎಂದಿದ್ದೇ ತಡ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ. 
 

ಸಾಮಾಜಿಕ ಜಾಲತಾಣದಲ್ಲಿ ಮನರಂಜನೆಗೆ ಬರವಿಲ್ಲ. ದಿನಕ್ಕೆ ಲಕ್ಷಾಂತರ ವಿಡಿಯೋ ಪೋಸ್ಟ್ ಆಗ್ತಿರುತ್ತದೆ. ಅದ್ರಲ್ಲಿ ಕೆಲವೊಂದು ವಿಡಿಯೋಗಳು ವಿಚಿತ್ರ ಕಾರಣಗಳಿಗೆ ವೈರಲ್ ಆಗ್ತಿರುತ್ತವೆ. ಅತಿ ತಾಳ್ಮೆಯಿಂದ ಸುಂದರ ವಿಡಿಯೋಗಳನ್ನು ಮಾಡಿದವರಿಗೆ ಲೈಕ್ಸ್, ಸಬ್ಸ್ಕ್ರೈಬರ್ ಸಿಗೋದೆ ಕಷ್ಟ. ಅದೇ ಚಿತ್ರವಿಚಿತ್ರವಾಗಿ ಕುಣಿದ ಜನರ ಅಕೌಂಟ್ ಗೆ ಲಕ್ಷಾಂತರ ಮಂದಿ ಫಾಲೋವರ್ಸ್ ಇರ್ತಾರೆ. ಜನರ ಮನಸ್ಥಿತಿ ಅರಿಯೋದು ಕಷ್ಟ. ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಹೆಚ್ಚಿನ ನಿಯಮವಿರದ ಕಾರಣ ಜನರು ತಮ್ಮ ಅಭಿಪ್ರಾಯವನ್ನು ರಾಜಾರೋಷವಾಗಿ ಹೇಳ್ತಾರೆ. ಈ ಮಹಿಳೆ ವಿಡಿಯೋಕ್ಕೂ ಈಗ ಸಾಕಷ್ಟು ಕಮೆಂಟ್ ಬಂದಿದೆ. 

ಪಾಪದ ಹೆಂಗಸು ತನ್ನ ಗಂಡನ ಜೊತೆ ಒಂದು ವಿಡಿಯೋ (Video) ಮಾಡಿದ್ದಾಳೆ. ಆದ್ರೆ ಈ ವಿಡಿಯೋ ಅನೇಕರ ಕಣ್ಣು ಕೆಂಪು ಮಾಡಿದೆ. ಅದಕ್ಕೆ ಕಾರಣ ಸಿಂಪಲ್. ಗಂಡನ ಮುಖ ನೋಡಿದ ಜನರಿಗೆ ಯಾಕೋ ಅವರಿಬ್ಬರು ಪತಿ – ಪತ್ನಿ ಅಲ್ಲ ಎನ್ನುವ ಅನುಮಾನ ಬಂದಿದೆ. ಇಂಥ ವ್ಯಕ್ತಿಗೆ ಇಂಥ ಹೆಂಡತಿಯಾ ಎಂಬ ಪ್ರಶ್ನೆ ಅವರು ಮಾಡಿದ್ದಾರೆ. ವಿಡಿಯೋದಲ್ಲಿ ಅವರ ಆಕ್ಟಿಂಗ್ (acting)ನೋಡುವ ಬದಲು ನೆಟ್ಟಿಗರು ಸೌಂದರ್ಯ, ವಯಸ್ಸಿಗೆ ಮಹತ್ವ ನೀಡಿದಂತಿದೆ. 

ಹಣ ನೋಡಿಯೇ ಬಿದ್ದಿದ್ದು, ಮುದುಕನನ್ನು ಪ್ರೀತಿಸಿದ ಮಾಡೆಲ್ ಧೈರ್ಯವಾಗಿ ಬಿಚ್ಚಿಟ್ಟ ಸತ್ಯ!

ಸುಜಾತಾ ಮಿಶ್ರಾ ಹೆಸರಿನ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ (Post) ಮಾಡಲಾಗಿದೆ. ಈ ವಿಡಿಯೋದಲ್ಲಿ ಸುಜಾತ ಕಾಣಿಸಿಕೊಂಡಿದ್ದಾರೆ. ಹಿಂದಿಯ ಹಳೆ ಹಾಡು, ತೇರೆ ಮೇರೆ ಪ್ಯಾರ್ ಮೇ ಕಿತ್ನಾ ದಮ್ ಹೈ ಹಾಡು ಪ್ಲೇ ಆಗ್ತಿದೆ. ಅದಕ್ಕೆ ಸುಜಾತಾ ಹಾಗೂ ಅವರ ಪತಿ ಇಬ್ಬರು ಆಕ್ಟಿಂಗ್ ಮಾಡ್ತಿದ್ದಾರೆ. ಈ ವಿಡಿಯೋ ಹಾಕಿದ ಸುಜಾತ, ಐ ಲವ್ ಯು ಜಾನು ಅಂತ ಶೀರ್ಷಿಕೆ ಹಾಕಿದ್ದಾರೆ.

ಸುಜಾತಾ ಈ ವಿಡಿಯೋ ವೈರಲ್ ಆಗಿದೆ. ಈವರೆಗೆ 14 ಲಕ್ಷಕ್ಕೂ ಹೆಚ್ಚು ಬಾರಿ ಈ ಇನ್ಸ್ಟಾ ವಿಡಿಯೋ ವೀಕ್ಷಿಸಲಾಗಿದೆ. 30 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಹಾಗೆಯೇ ನೂರಾರು ಮಂದಿ ಕಮೆಂಟ್ ಹಾಕಿದ್ದಾರೆ. ಈ ವಿಡಿಯೋ ನೋಡಿದ ಜನರು, ಸುಜಾತ ಹಾಗೂ ಆಕೆ ಪತಿ ಅಪ್ಪ – ಮಗಳಂತೆ ಕಾಣ್ತಾರೆ ಎಂದು ಕಾಲೆಳೆದಿದ್ದಾರೆ. ಅನೇಕರು ಸುಜಾತಾ ಪೋಸ್ಟ್ ಮೆಚ್ಚುವ ಬದಲು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಪಿಂಚಣಿ ಪಡೆಯುವ ಸಮಯದಲ್ಲಿ ಅಂಕಲ್ ಟೆನ್ಷನ್ ನೀಡ್ತಿದ್ದಾರೆಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ವಿಡಿಯೋ ನೋಡಿದ ಮೇಲೆ ಕಲ್ಲುಪ್ಪು ತಿಂದು ಸಾಯ್ಬೇಕು ಅನ್ನಿಸ್ತಿದೆ ಎಂದು ಬರೆದಿದ್ದಾರೆ. ಇನ್ನೇನು ತೋರಿಸ್ತಿಯಾ ತಂಗಿ ಅಂತ ಮತ್ತೊಬ್ಬರು ಕಾಲೆಳೆಯುವ ಪ್ರಯತ್ನ ನಡೆಸಿದ್ದಾರೆ. ಮತ್ತೆ ಕೆಲವರು ಜೋಡಿ ಮುದ್ದಾಗಿದ್ದು, ಹೀಗೆ ಸದಾ ಪ್ರೀತಿಯಿಂದ ಇರಿ ಎಂದು ಆಶಿಸಿದ್ದಾರೆ.

ಸುಜಾತಾಗಿಂತ ಅವರ ಪತಿ ವಯಸ್ಸು ಹೆಚ್ಚಾಗಿದೆ ಎಂಬುದೇ ಈ ವಿಡಿಯೋ ವೈರಲ್ ಆಗಲು ಮುಖ್ಯ ಕಾರಣ. ಆದ್ರೆ ನೆಟ್ಟಿಗರು ಅಂದ್ಕೊಂಡಂತೆ ಸುಜಾತಾ ತುಂಬಾ ಚಿಕ್ಕ ವಯಸ್ಸಿನವರೇನೂ ಅಲ್ಲ. ಅವರು ಚಿಕ್ಕ ವಯಸ್ಸಿನಂತೆ ಕಾಣ್ತಾರೆ ಅಷ್ಟೆ. ಸುಜಾತಾ ಇನ್ಸ್ಟಾಗ್ರಾಮ್ ಹಾಗೂ ಯುಟ್ಯೂಬ್ ನಲ್ಲಿ ಸಕ್ರಿಯವಾಗಿದ್ದಾರೆ.

ತಂದೆಯನ್ನು ದತ್ತು ಪಡೆಯಲು ನಿರ್ಧರಿಸಿದ್ದ ರಜನಿಕಾಂತ್; ಅದೃಷ್ಟವಂತ ಆ ವ್ಯಕ್ತಿ ಯಾರು?

ಇನ್ಸ್ಟಾಗ್ರಾಮ್ ನಲ್ಲಿ ಪತಿ ಜೊತೆ ಅನೇಕ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ಯುಟ್ಯೂಬ್ ನಲ್ಲಿ ಕೂಡ ದಂಪತಿಯ ಅನೇಕ ವಿಡಿಯೋಗಳನ್ನು ನೀವು ನೋಡ್ಬಹುದು. ಕೆಲ ದಿನಗಳ ಹಿಂದಷ್ಟೆ ಈ ಜೋಡಿಯ ಚಾನೆಲ್ 100 ಕೆ ಫಾಲೋವರ್ಸ್ ಪಡೆದಿದೆ.  ಸುಜಾತಾ ಬ್ಲಾಗ್ ಮಾಡಿದ್ದು, ನಿತ್ಯದ ಅನೇಕ ವಿಷ್ಯಗಳನ್ನು ನೆಟ್ಟಿಗರ ಮುಂದೆ ಹಂಚಿಕೊಳ್ತಿರುತ್ತಾರೆ. 

click me!