ಹಣ ನೋಡಿಯೇ ಬಿದ್ದಿದ್ದು, ಮುದುಕನನ್ನು ಪ್ರೀತಿಸಿದ ಮಾಡೆಲ್ ಧೈರ್ಯವಾಗಿ ಬಿಚ್ಚಿಟ್ಟ ಸತ್ಯ!

By Roopa Hegde  |  First Published May 22, 2024, 3:14 PM IST

ಪ್ರೀತಿಸಿ ಮದುವೆ ಆಗೋರು ಒಂದಿಷ್ಟು ಮಂದಿಯಾದ್ರೆ ಮದುವೆ ಆದ್ಮೇಲೆ ಪ್ರೀತಿಸೋರು ಇನ್ನೊಂದಿಷ್ಟು ಮಂದಿ. ವ್ಯಕ್ತಿ, ವ್ಯಕ್ತಿತ್ವ ನೋಡಿ ಕೆಲವರು ಪ್ರೀತಿ ಮಾಡಿದ್ರೆ ಮತ್ತೊಂದಿಷ್ಟು ಮಂದಿ ಹಣ ನೋಡಿ ಹಿಂದೆ ಬೀಳ್ತಾರೆ. ಅದನ್ನು ಎಲ್ಲರ ಮುಂದೆ ಹೇಳೋ ಧೈರ್ಯ ಮಾತ್ರ ಮಾಡೋದಿಲ್ಲ.
 


ಸಂಗಾತಿ ಮಧ್ಯೆ ವಯಸ್ಸಿನ ಅಂತರ ಹೆಚ್ಚಿದ್ದಾಗ ಜನರು ಅದನ್ನು ಗಾಸಿಪ್ ಮಾಡ್ತಾರೆ. ಹುಡುಗ ಶ್ರೀಮಂತ, ಹಾಗಾಗಿ ಹುಡುಗಿ ಆತನ ಹಿಂದೆ ಬಿದ್ದಿದ್ದಾಳೆ ಅಂತ ಮಾತಾಡಿಕೊಳ್ತಾರೆ. ಕೆಲ ಹುಡುಗ ಅಥವಾ ಹುಡುಗಿ, ಪ್ರೀತಿಗಿಂತ ಶ್ರೀಮಂತಿಕೆಗೆ ಆದ್ಯತೆ ನೀಡೋದಿದೆ. ಶ್ರೀಮಂತ ಸಂಗಾತಿ ಹುಡುಕಿ ಮದುವೆ ಆದ್ರೆ ಜೀವನ ಸೆಟಲ್ ಎಂದುಕೊಳ್ಳುವ ಅನೇಕ ಹುಡುಗ – ಹುಡುಗಿ ಇದ್ದಾರೆ.  ಹಾಗಂತ, ಯಾರೂ ಈ ಸತ್ಯವನ್ನು ಒಪ್ಪಿಕೊಳ್ಳುವ ಸಾಹಸಕ್ಕೆ ಹೋಗೋದಿಲ್ಲ. ಹಣಕ್ಕಾಗಿ ನಿನ್ನನ್ನು ಪ್ರೀತಿಸುವ ನಾಟಕ ಆಡಿದ್ದೆ ಅಂತ ಯಾರೂ ತನ್ನ ಸಂಗಾತಿ ಮುಂದೆ ಹೇಳೋದಿಲ್ಲ. ಇಂಥ ವಿಷ್ಯವನ್ನು ಹೇಳೋಕೆ ಧೈರ್ಯಬೇಕು. ಅದನ್ನು ಈ ಮಾಜಿ ಮಾಡೆಲ್ ಮಾಡಿದ್ದಾಳೆ. ಶ್ರೀಮಂತ ಎನ್ನುವ ಕಾರಣಕ್ಕೆ ಆತನ ಹಿಂದೆ ಬಿದ್ದಿದ್ದ ಮಾಡೆಲ್, ಮದುವೆ ಕೂಡ ಮಾಡಿಕೊಂಡಿದ್ದಾಳೆ. ಆದ್ರೀಗ ಶ್ರೀಮಂತ ಪತಿ ಮೇಲೆ ನಿಜವಾಗ್ಲೂ ಪ್ರೀತಿ ಹುಟ್ಟಿದೆ. ಜನ ಎಷ್ಟೇ ಕಾಲೆಳೆದ್ರೂ ತಲೆಕೆಡಿಸಿಕೊಳ್ಳೋದಿಲ್ಲ, ನನಗೆ ಪತಿಯೇ ಮುಖ್ಯ ಎನ್ನುತ್ತಿದ್ದಾಳೆ ಮಾಡೆಲ್.

ನಾವು ಹೇಳ್ತಿರೋದು ಮಾಜಿ ಮಾಡೆಲ್ (Model) ಕಾರ್ಲಾ ಬೆಲ್ಲುಸಿ ಬಗ್ಗೆ. 42 ವರ್ಷದ ಕಾರ್ಲಾ ಬ್ರಿಟನ್ (Britain) ನಿವಾಸಿ. ಆಕೆಯನ್ನು ಬ್ರಿಟನ್ ನ ದ್ವೇಷಿಸುವ ಮಹಿಳೆ ಎಂದೇ ಕರೆಯಲಾಗುತ್ತದೆ. ಇದಕ್ಕೆ ಅನೇಕ ಕಾರಣ ಇದೆ. ಕಾರ್ಲಾ ಬೆಲ್ಲುಸಿ, ನಾನಾ ಕಾರಣಕ್ಕೆ ಸುದ್ದಿಗೆ ಬರ್ತಿರುತ್ತಾಳೆ. ಈ ಹಿಂದೆ ಕಾರ್ಲಾ ಬೆಲ್ಲುಸಿ ಖಿನ್ನತೆ (Depression) ಗೆ ಒಳಗಾಗಿರುವ ನಾಟಕವಾಡಿ ಕೆಲಸ ಗಿಟ್ಟಿಸಿಕೊಂಡಿದ್ದಳು. ಮೂಗಿನ ಶಸ್ತ್ರಚಿಕಿತ್ಸೆಗೆ (Nose Surgery) ಒಳಗಾಗಿದ್ದ ಕಾರ್ಲಾ ಬೆಲ್ಲುಸಿ, ಅದಕ್ಕೆ ಬಂದ ಖರ್ಚು ನೋಡಿ ದಂಗಾಗಿದ್ದಳು. ಮೂಗಿನ ಶಸ್ತ್ರಚಿಕಿತ್ಸೆ ಬಿಲ್ 7 ಲಕ್ಷ 41 ಸಾವಿರ ಬಂದಿತ್ತು. ಈ ಖರ್ಚಿನಿಂದ ತಪ್ಪಿಸಿಕೊಳ್ಳಲು, ಕಾರ್ಲಾ ಶಸ್ತ್ರಚಿಕಿತ್ಸೆ ಮಾಡಿದ್ದ ಸರ್ಜನ್ ಫ್ಲರ್ಟ್ ಮಾಡಲು ಶುರು ಮಾಡಿದ್ದಳು.

Tap to resize

Latest Videos

ಪಾಸಿಟಿವ್ ವೈಬ್ಸ್ ಬೇಕಾ? ಡ್ರೈವ್ ಮಾಡುತ್ತಾ ಕಾರಲ್ಲೇ ಮೆಹಫಿಲ್ ನಡೆಸಿದ ಅಪ್ಪ ಮಗಳ ಈ ವಿಡಿಯೋ ನೋಡಿ

ಇಷ್ಟೇ ಅಲ್ಲ, 2023ರಲ್ಲಿ ಕಾರ್ಲಾ ಬೆಲ್ಲುಸಿ ಪ್ರೇಮಿಗಳ ದಿನದಂದು ಬಟ್ಟೆ ಹಾಕಿಕೊಳ್ಳದೆ ಇಡೀ ದಿನ ಮನೆಯಲ್ಲಿರ್ತೇನೆ, ಪತಿಗೆ ವಿಶೇಷ ಅಡುಗೆ ಮಾಡ್ತೇನೆ ಎಂಬ ಪೋಸ್ಟ್ ಹಾಕಿದ್ದಳು. ಈ ದಿನ ನಾಲ್ಕು ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸೋದಾಗಿಯೂ ಕಾರ್ಲಾ ಬೆಲ್ಲುಸಿ ಹೇಳಿದ್ದಳು.

ಈಗ ಪತಿಯ ಪ್ರೀತಿ ವಿಷ್ಯಕ್ಕೆ ಕಾರ್ಲಾ ಬೆಲ್ಲುಸಿ ಸುದ್ದಿಯಲ್ಲಿದ್ದಾಳೆ. ಕಾರ್ಲಾ ಬೆಲ್ಲುಸಿಗಿಂತ ಆಕೆ ಪತಿ ಜಿಯೋವಾನಿ 13 ವರ್ಷ ದೊಡ್ಡವನು. ಕಾರ್ಲಾ, ಜಿಯೋವಾನಿ ಪ್ರೀತಿ ಮಾಡ್ತಿದ್ದಾಳೆ ಎಂಬುದು ಗೊತ್ತಾದಾಗ ಜನರು ಟ್ರೋಲ್ (Troll) ಮಾಡಿದ್ದರು. ಮುದುಕನನ್ನು ಕಾರ್ಲಾ ಪ್ರೀತಿ ಮಾಡ್ತಿದ್ದಾಳೆ ಎಂದಿದ್ದರು. ಗ್ಲಾಮರ್ ಶೂಟಿಂಗ್ ಸಮಯದಲ್ಲಿ ಸ್ಟುಡಿಯೋದಲ್ಲಿ ಭೇಟಿಯಾಗಿದ್ದ ಇಬ್ಬರೂ ಮದುವೆಯಾಗಿದ್ದಾರೆ. ಆರಂಭದಲ್ಲಿ ಸಾಕಷ್ಟು ಹಣ ಖರ್ಚು ಮಾಡಿದ್ದ ಕಾರ್ಲಾ, ಪತಿಗಿಂತ ಪತಿಯ ಬಳಿ ಇದ್ದ ಹಣ ಆಕರ್ಷಿಸಿತ್ತು ಎಂದು ಧೈರ್ಯವಾಗಿ ಹೇಳಿದ್ದಾಳೆ.

 

ನಾನು ಮೊದಲು ಜಿಯೋವಾನಿಯನ್ನು ಹಣ ನೋಡಿ ಪ್ರೀತಿಸಿದ್ದೆ. ತಮಾಷೆಯಾಗಿಯೇ ಇಬ್ಬರ ಮದುವೆ ನಡೆದಿತ್ತು. ಮದುವೆ ನಂತ್ರ ನಿಜವಾಗ್ಲೂ ಜಿಯೊ ಪ್ರೀತಿಗೆ ಬಿದ್ದಿದ್ದೆನೆ. ಆತನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದೇನೆ ಎನ್ನುತ್ತಾಳೆ ಕಾರ್ಲಾ. 

ಪತಿಗೆ ಮೋಸ ಮಾಡುವ ಪತ್ನಿಗೆ ಚೀನಾದಲ್ಲಿ ಈ ಘೋರ ಶಿಕ್ಷೆ ಕೊಡ್ತಿದ್ರು!

ಕಾರ್ಲಾ ಹಾಗೂ ಜಿಯೊ ಸಂಬಂಧದ ಬಗ್ಗೆ ಕೇಳಿದ್ದ ಸ್ನೇಹಿತರು, ಕಾರ್ಲಾಳನ್ನು ವಿರೋಧಿಸಿದ್ದರಂತೆ. ಸ್ವಾರ್ಥಿ ಮತ್ತು ದುಷ್ಟ ಎಂದು ಕರೆದಿದ್ದರಂತೆ. ಆದ್ರೆ ನಾನು ಜಿಯೋ ಮತ್ತು ಮಕ್ಕಳ ಜೊತೆ ಖುಷಿಯಾಗಿದ್ದೇನೆ. ನನ್ನ ಅನೇಕ ಸ್ನೇಹಿತರು ಈಗ್ಲೂ ಸಿಂಗಲ್ ಆಗಿದ್ದು, ಗಂಡನಿಗೆ ಏನೂ ಮಾಡಿಲ್ಲ ಎಂದು ಕಾರ್ಲಾ ಹೇಳಿದ್ದಾಳೆ. ಟ್ರೋಲರ್ಸ್ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡ್ತಿರುತ್ತಾರೆ. ಆದ್ರೆ ನಾನು ತಲೆಕೆಡಿಸಿಕೊಳ್ಳೋದಿಲ್ಲ ಎನ್ನುತ್ತಾಳೆ ಕಾರ್ಲಾ.  
 

click me!