ಪಾಲಕರ ಆಸ್ತಿಯಲ್ಲಿ ಪಾಲು ಎಂದಾಗ ಮಕ್ಕಳು ಓಡೋಡಿ ಬರ್ತಾರೆ. ಅದೇ ಪಾಲಕರನ್ನು ನೋಡಿಕೊಳ್ಳೋ ವಿಷ್ಯದಲ್ಲಿ ಮಕ್ಕಳು ಹಿಂದೇಟು ಹಾಕೋದೇ ಹೆಚ್ಚು. ಈ ಮಗಳು ಅಮ್ಮನ ಆಸ್ತಿ ಕಬಳಿಸಿ ಮೋಸ ಮಾಡುವ ಪ್ರಯತ್ನ ನಡೆಸಿದ್ದಳು. ಕೋರ್ಟ್ ಅಮ್ಮನ ಪರ ಬ್ಯಾಟ್ ಬೀಸಿದೆ.
ಬಾಲ್ಯದಲ್ಲಿ ಪಾಲಕರು ಮಕ್ಕಳನ್ನು ನೋಡಿಕೊಂಡ್ರೆ ವೃದ್ಧಾಪ್ಯದಲ್ಲಿ ಮಕ್ಕಳು ಪಾಲಕರನ್ನು ನೋಡಿಕೊಳ್ಬೇಕು. ಆದ್ರೆ ಈಗಿನ ದಿನಗಳಲ್ಲಿ ಮಕ್ಕಳು ಸ್ವಾರ್ಥಿಗಳಾಗ್ತಿದ್ದಾರೆ. ಪಾಲಕರನ್ನು ವೃದ್ಧಾಪ್ಯದಲ್ಲಿ ಪ್ರೀತಿಯಿಂದ ನೋಡಿಕೊಳ್ಳುವ ಮಕ್ಕಳ ಸಂಖ್ಯೆ ಬಹಳ ಕಡಿಮೆ. ಪಾಲಕರ ಬಳಿ ಹಣವಿದೆ ಎಂದಾಗ ಆ ಹಣ, ಆಸ್ತಿ ಪಡೆಯಲು ಮಕ್ಕಳು ಬರ್ತಾರೆಯೇ ವಿನಃ ಪಾಲಕರ ಆರೋಗ್ಯ, ಆಹಾರ, ಆರೈಕೆಯಿಂದ ತಪ್ಪಿಸಿಕೊಳ್ತಾರೆ. ಕೈಲಾಗದ ಅಪ್ಪ – ಅಮ್ಮನ ಮೇಲೆ ಹಲ್ಲೆ ನಡೆಸಿ, ಅವರನ್ನು ಮನೆಯಿಂದ ಹೊರಹಾಕಿದ ಅನೇಕ ಮಕ್ಕಳಿದ್ದಾರೆ. ವಿದೇಶಕ್ಕೆ ಹೋಗ್ಬೇಕೆನ್ನುವ ಕಾರಣಕ್ಕೆ ಪಾಲಕರನ್ನು ವೃದ್ಧಾಶ್ರಮಕ್ಕೆ ಬಿಟ್ಟು ಹೋಗುವ ಮಕ್ಕಳ ಸಂಖ್ಯೆ ಕೂಡ ಕಡಿಮೆ ಏನಿಲ್ಲ. ಈ ತಾಯಿಗೂ ಮಗಳಿಂದ ಮೋಸವಾಗಿದೆ.
ಈ ಮಹಿಳೆ ಮಗಳು ತನ್ನನ್ನು ಪ್ರೀತಿ (Love) ಯಿಂದ ನೋಡಿಕೊಳ್ತಾಳೆ ಎಂಬ ಕನಸು ಕಂಡಿದ್ದಳು. ಅದೇ ಕಾರಣಕ್ಕೆ ಎಲ್ಲ ಉಳಿತಾಯ (Savings) ವನ್ನು ಮಗಳ ಕೈಗೆ ನೀಡಿದ್ಲು. ಆದ್ರೆ ಅಲ್ಲಿ ಆಗಿದ್ದೇ ಬೇರೆ. ಅಮ್ಮನ ಆಸ್ತಿಯನ್ನು ನುಂಗಿ ನೀರು ಕುಡಿದ ಮಗಳು, ಕೈ ಖಾಲಿ ಆಗ್ತಿದ್ದಂತೆ ಅಮ್ಮನಿಗೆ ಹೊಡೆದು ಮನೆಯಿಂದ ಹೊರ ಹಾಕಿದ್ದಾಳೆ. ಮಗಳ ವಿರುದ್ಧ ಕೋರ್ಟ್ (Court) ಮೆಟ್ಟಿಲೇರಿದ ತಾಯಿಗೆ ಕೊನೆಗೂ ನ್ಯಾಯ ಸಿಕ್ಕಿದೆ.
undefined
ಪಾಸಿಟಿವ್ ವೈಬ್ಸ್ ಬೇಕಾ? ಡ್ರೈವ್ ಮಾಡುತ್ತಾ ಕಾರಲ್ಲೇ ಮೆಹಫಿಲ್ ನಡೆಸಿದ ಅಪ್ಪ ಮಗಳ ಈ ವಿಡಿಯೋ ನೋಡಿ
ಏನಿದು ಪ್ರಕರಣ (Case) ? : ತಾಯಿ ಹೆಸರು ಕೌಶಲ್ಯ. ಆಕೆಗೆ 77 ವರ್ಷ ವಯಸ್ಸು. ಬಸ್ (Bus) ಚಾಲಕನಾಗಿದ್ದ ಪತಿ 20೦1ರಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೊಂದು ಮಗಳಿದ್ದು, ಹೆಸರು ರಾಜ್ ಕನ್ವರ್. ಆಕೆಗೆ ಮದುವೆ ಆಗಿದೆ. ಹಾಗಾಗಿ ಭಿಂಡ್ ನಲ್ಲಿ ಕೌಶಲ್ಯ ಒಬ್ಬರೇ ವಾಸವಾಗಿದ್ದರು. 2003ರಲ್ಲಿ ಮನೆ ನೋಡಿಕೊಳ್ಳೋದು ಕಷ್ಟವಾಗುವ ಕಾರಣ, ಭಿಂಡ್ ನಲ್ಲಿರುವ ಮನೆ ಮಾರಿ ಇಂಧೋರ್ ಗೆ ಬರುವಂತೆ ಮಗಳು – ಅಳಿಯ ಹೇಳಿದ್ದರು. ಮನೆ ಹಣವನ್ನು ಖಾತೆಗೆ ಜಮಾ ಮಾಡುವುದಾಗಿ ಭರವಸೆ ನೀಡಿದ್ದರು. ಮಗಳ ಮಾತು ಕೇಳಿ ತಲೆ ಅಲ್ಲಾಡಿಸಿದ್ದ ಕೌಶಲ್ಯ, ಮನೆ ಮಾರಾಟ ಮಾಡಿದ್ದರು. ನಂತ್ರ ಮಗಳ ಜೊತೆ ಇಂದೋರ್ ಗೆ ಬಂದ ಕೌಶಲ್ಯ, ಅಲ್ಲಿ ವಾಸ ಶುರು ಮಾಡಿದ್ದರು. ಮಗಳ ಮಾತಿನಂತೆ ಕೌಶಲ್ಯ, ಪತಿಯ ಪಿಎಫ್ ಹಣವನ್ನು ಕೂಡ ತಿಂಗಳು ತಿಂಗಳು ವಿತ್ ಡ್ರಾ ಮಾಡ್ತಿದ್ದರು. ಮನೆ ಮಾರಿದ ಹಣ ಹಾಗೂ ಪಿಎಫ್ ಹಣ ಎರಡೂ ಖಾಲಿಯಾದ ನಂತ್ರ ಕೌಶಲ್ಯ ಮಗಳ ವರ್ತನೆ ಬದಲಾಗಿತ್ತು.
ತಾಯಿಗೆ ಕೆಟ್ಟ ಶಬ್ಧಗಳಿಂದ ನಿಂದಿಸುತ್ತಿದ್ದ ರಾಜ್ ಕನ್ವರ್, ಮನೆ ಕೆಲಸ ಮಾಡಿಸಲು ಶುರು ಮಾಡಿದ್ದಳು. ಕೊರೊನಾ ಸಮಯದಲ್ಲಿ ಮಗಳು, ಕೌಶಲ್ಯ ಅವರನ್ನು ಮನೆಯಿಂದ ಹೊರಗೆ ಹಾಕಿದ್ದರು. ಮಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದ ಕೌಶಲ್ಯಗೆ ಜೀವನ ನಿರ್ವಹಣೆ ಕಷ್ಟವಾಗಿತ್ತು. 2011ರಲ್ಲಿ ಕೌಶಲ್ಯ ಮಗಳ ವಿರುದ್ಧ ಕೋರ್ಟ್ ಮೊರೆ ಹೋದ್ರು. ಜೀವನಾಂಶ ನೀಡುವಂತೆ ಅರ್ಜಿ ಸಲ್ಲಿಸಿದ್ದರು.
ಅಕೌಂಟಲ್ಲಿ ಕೇವಲ 500 ರೂ. ಇದ್ರೂ ಒಂದೇ ವರ್ಷದಲ್ಲಿ 11 ಲಕ್ಷ ಸಾಲ ತೀರಿಸಿದ ದಂಪತಿ!
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಕೊನೆಗೂ ಕೌಶಲ್ಯ ಪರ ತೀರ್ಪು ನೀಡಿದೆ. ಕೌಶಲ್ಯ ಮಗಳು ರಾಜ್ ಕನ್ವರ್ ಪತಿ ಟ್ರಾನ್ಸ್ ಪೋರ್ಟರ್ ಕೆಲಸ ಮಾಡ್ತಾನೆ. ಆತನಿಗೆ ಕೌಶಲ್ಯ ಸಾಕುವಷ್ಟು ಹಣ ಬರುತ್ತದೆ ಎಂದು ಕೋರ್ಟ್ ಹೇಳಿದೆ. ಪಾಲಕರ ಆಸ್ತಿಯನ್ನು ಪಡೆಯುವ ಹಕ್ಕು ಮಗಳಿಗಿದೆ ಅಂದ್ಮೇಲೆ, ಕೊನೆ ಉಸಿರಿರುವವರೆಗೂ ಪಾಲಕರನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡ ಮಗಳಿಗಿದೆ. ಹಾಗಾಗಿ ರಾಜ್ ಕನ್ವರ್, ತಾಯಿಗೆ ಜೀವನಾಂಶ ನೀಡಬೇಕು ಎಂದು ಕೋರ್ಟ್ ತೀರ್ಪು ನೀಡಿದೆ. ರಾಜ್ ಕನ್ವರ್, ಪ್ರತಿ ತಿಂಗಳು ತನ್ನ ಅಮ್ಮನಿಗೆ 3 ಸಾವಿರ ರೂಪಾಯಿ ನೀಡ್ಬೇಕೆಂದು ಕೋರ್ಟ್ ಆದೇಶ ನೀಡಿದೆ.